https://youtu.be/vlYqxq-O_4s
#ಚಳಿಗಾಲದಲ್ಲಿ_ನಮ್ಮ_ಉಸಿರು_ಹೊಗೆಯಂತೆ_ಹೊರಬರುವುದು_ಏಕೆ?
#ಬಾಲ್ಯದಲ್ಲಿ_ಈ_ಪ್ರಶ್ನೆಗೆ_ಸ್ಪಷ್ಟ_ಉತ್ತರ_ಸಿಕ್ಕಲೇ_ಇಲ್ಲ
#ನನ್ನ_ಶಂಭೂರಾಮನ_ಉಸಿರಾಟದಲ್ಲಿ_ಈ_ಪ್ರಕ್ರಿಯೆಯ_ವಿಡಿಯೋ_ನೋಡಿ.
#ನಾಯಿಗಳು_ಬೆವರುವುದಿಲ್ಲ_ದೇಹದ_ಉಷ್ಣಾಂಶ_ಡಾಗ್_ಬ್ರೀಥಿಂಗ್_ಮೂಲಕ_ತಂಪಾಗಿಸುವ_ಕ್ರಿಯೆ.
ಮೊನ್ನೆ ಏಪ್ರಿಲ್ 30ನೇ ತಾರೀಖು ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರು ಗಂಟೆ ವರೆಗೆ ನಮ್ಮ ಊರಲ್ಲಿ ಈ ವರ್ಷದ ಎರಡನೆ ಮಳೆ ಆಗಿತ್ತು.
ಪ್ರತಿನಿತ್ಯದ ನನ್ನ ಮತ್ತು ಶಂಭೂರಾಮನ ವಾಕಿಂಗ್ ಮಳೆಯಿಂದ ಸ್ವಲ್ಪ ವಿಳಂಭವಾಗಿತ್ತು, ಒಂದು ಗಂಟೆಯ ವಾಕಿಂಗ್ ನಂತರ ಆಯಾಸ ಪರಿಹಾರವಾಗಿ ಶಂಭೂರಾಮ ನನ್ನ ಆಫೀಸಿನ ಹಿಂಬಾಗದ ಬಾಗಿಲಿನ ಮೆಟ್ಟಲಿನ ಮೇಲೆ ಕುಳಿತುಕೊಂಡು ತನ್ನ ನಾಲಿಗೆ ಹೊರ ಹಾಕಿ ಡಾಗ್ ಬ್ರೀಥಿಂಗ್ ನಲ್ಲಿ ತೊಡಗಿದ್ದ ಆಗ ವಾತಾವರಣದಲ್ಲಿ 23 ಡಿಗ್ರಿ ಉಷ್ಣಾಂಶ ಮತ್ತು 86% ತೇವಾಂಶ ಹಾಗೂ ಮಳೆಯ ಸಂಭವ 70% ನನ್ನ ಸೆಲ್ ಫೋನ್ ನ ಆಕ್ಯೂ ವೆದರ್ ಸೂಚಿಸುತ್ತಿತ್ತು.
ಆಗ ಶಂಭೂ ಹೊರ ಹಾಕುವ ಉಸಿರು ಹೊಗೆಯಂತೆ ವಾತಾವರಣದಲ್ಲಿ ಕರಗುತ್ತಿತ್ತು ಅದರ ವಿಡಿಯೋ ಇಲ್ಲಿದೆ ಬಾಲ್ಯದಲ್ಲಿ ಚಳಿಗಾಲದ ಶನಿವಾರ ಬೆಳ್ಳಂ ಬೆಳಗೆ ಮಾರ್ನಿಂಗ್ ಕ್ಲಾಸ್ ನಲ್ಲಿ ನಮಗೆ ಇದೇ ಆಟ ಅಗುತ್ತಿತ್ತು ಆದರೆ ಇದಕ್ಕೆ ಕಾರಣ ಮಾತ್ರ ಯಾರೂ ವಿವರಿಸುತ್ತಿರಲಿಲ್ಲ.
ವೈಜ್ಞಾನಿಕವಾಗಿ ನಮ್ಮ ಶ್ವಾಸಕೋಶ ಮತ್ತು ಬಾಯಿಯ ಒಳಗಿರುವ ನೀರಿನ ಕಣಗಳು ಆವಿಯಾಗಿ ಉಸಿರಿನ ಗಾಳಿಯಿಂದ ಹೊರಬಂದಾಗ ವಾತಾವರಣದಲ್ಲಿ ತೇವಾಂಶ ಜಾಸ್ತಿ ಇದ್ದು ತಂಪಾಗಿದ್ದಾಗ ನೀರಿನ ಅಂಶದ ಕಣಗಳು ವಿಭಜನೆ ಆಗಿ ನೀರಿನ ಕಣಗಳಾಗಿ ಘನಿಕೃತವಾಗುವ ಪ್ರಕ್ರಿಯೆಯಿಂದ ಹೊಗೆ-ಮಂಜು ರೂಪ ಪಡೆದು ವಾತಾವರಣದಲ್ಲಿ ಲೀನವಾಗುತ್ತದೆ.
ನಾಯಿಗಳು ಬೆವರುವುದಿಲ್ಲವಾದ್ದರಿಂದ ಅವುಗಳು ತಮ್ಮ ದೇಹದ ಒಳಗಿನ ಉಷ್ಣಾಂಶ ಸರಿದೂಗಿಸಲು ತನ್ನ ನಾಲಿಗೆ ಹೊರ ಹಾಕಿ ಡಾಗ್ ಬ್ರೀತಿಂಗ್ (ವೇಗದಿಂದ ಉಸಿರು ಸತತವಾಗಿ ಹೊರಹಾಕುವ ಪ್ರಕ್ರಿಯೆ) ಮಾಡುತ್ತದೆ.
ನನ್ನ ಶಂಭೂರಾಮ ವಾಕಿಂಗ್ ಸಮಯದಲ್ಲಿ ಅವನನ್ನು ಕೆರಳಿಸುವ ಪಕ್ಕದ ಮನೆ ಬೆಕ್ಕುಗಳು, ಪಾರಿವಾಳಗಳು ಅವನನ್ನು ಓಡುವಂತೆ ಮಾಡಿ ಆಯಾಸಗೊಳಿಸುತ್ತವೆ ಅದರಿಂದ ತನ್ನ ದೇಹದಲ್ಲಿ ಹೆಚ್ಚಾಗುವ ಉಷ್ಣಾ೦ಶ ಕಡಿಮೆ ಮಾಡಿಕೊಳ್ಳಲು ದೇವರು ಅವುಗಳಿಗೆ ಸೃಷ್ಟಿಸಿದ ಮಾರ್ಗದಲ್ಲಿ ಡಾಗ್ ಬ್ರೀಥಿಂಗ್ ಮಾಡುವಾಗ ಬೆಳಗಿನ ಮಳೆಯಿಂದ ಹೆಚ್ಚಾದ ವಾತಾವರಣದ ತೇವಾಂಶ ಮತ್ತು ಕಡಿಮೆ ಆದ ಉಷ್ಣಾಂಶದಿಂದ ಶಂಭೂರಾಮನ ಬಾಯಿಂದ ಹೊಗೆ ಉಗುಳಿದಂತೆ ಬಿಳಿ ದೂಮದ ಉಸಿರು ಗೋಚರಿಸುವ ತಮಾಷೆ ದೃಷ್ಯಕಂಡು ಬಂದಿತ್ತು.
Comments
Post a Comment