Blog number 1517. ಭಾರತೀಯ ಮೂಲದ ನುಗ್ಗೆ ಕಾಯಿಯಲ್ಲಿ ಬೇರೆ ಎಲ್ಲಾ ಹಣ್ಣು - ತರಕಾರಿ- ಮೊಟ್ಟೆಗಿಂತ ಕೆಲವು ಪಟ್ಟು ಹೆಚ್ಚು ಇರುವ ವಿಟಮಿನ್-ಪೊಟ್ಯಾಷಿಯಂ ಕ್ಯಾಲ್ಷಿಯಂ - ಪ್ರೋಟೀನ್ ಗಳ ಆಗರವೇ ಅಡಗಿದೆ.
#ನುಗ್ಗೆ_ಕಾಯಿಯಂತ_ಶಕ್ತಿ_ಶಾಲಿ_ಇನ್ನೊಂದು_ಇದೆಯಾ?
https://youtu.be/NZkVVAH1JTY
#ಭಾರತದ_ಮೂಲದ_ಸಸ್ಯ
#ಇದರ_ರುಚಿ_ಘಮ_ಬಲ್ಲವರೇ_ಬಲ್ಲರು.
#ಬಹುಬೇಡಿಕೆಯ_ನುಗ್ಗೆಕಾಯಿ_2019ರಲ್ಲಿ_ಕಿಲೋಗೆ_500_ಆಗಿತ್ತು
#ಕಿತ್ತಳೆಹಣ್ಣಿಗಿಂತ_7_ಪಟ್ಟು_ಹೆಚ್ಚು_ವಿಟಮಿನ್_ಸಿ.
#ಹಾಲಿಗಿಂತ_4_ಪಟ್ಟು_ಹೆಚ್ಚು_ಕ್ಯಾಲ್ಸಿಯಂ,
#ಬಾಳೆಹಣ್ಣಿಗಿಂತ_3_ ಪಟ್ಟು_ಹೆಚ್ಚು_ಪೊಟ್ಯಾಷಿಯಂ
#ಕ್ಯಾರೆಟಗಿಂತ_4_ಪಟ್ಟು_ಹೆಚ್ಚು_ವಿಟಮಿನ್_ಎ.
#ಪಾಲಕಗಿಂತ_3_ಪಟ್ಟು_ಹೆಚ್ಚು_ವಿಟಮಿನ್_ಇ.
#ಬಾದಾಮಿಗಿಂತ_3_ ಪಟ್ಟು_ಹೆಚ್ಚು_ವಿಟಮಿನ್_ಇ.
#ಮೊಟ್ಟೆಯ_ಬಿಳಿಬಾಗಕ್ಕಿಂತ_2_ಪಟ್ಟು_ಹೆಚ್ಚು_ಪ್ರೋಟೀನ್
ನಿನ್ನೆ ಪತ್ರಕರ್ತ ಗೆಳೆಯರಾದ ಶೃಂಗೇಶ್ ಶಿವಮೊಗ್ಗದ ಅವರ ಮನೆ ಅಂಗಳದಲ್ಲಿನ ನುಗ್ಗೆ ಮರದಿಂದ ತಾಜಾ ನುಗ್ಗೆ ಕಾಯಿಯನ್ನು ಹೆಗ್ಗೋಡು ಸಮೀಪದ ಅವರ ಕೃಷಿ ಭೂಮಿಗೆ ಹೋಗುವಾಗ ಮಾರ್ಗ ಮಧ್ಯ ನನ್ನ ಕಛೇರಿಗೆ ತಲುಪಿಸಿದ್ದರು ನಾವಿಬ್ಬರು ಪರಸ್ಪರ ಹಣ್ಣು ತರಕಾರಿ ಸಿಹಿ ಹಂಚಿಕೊಳ್ಳುವವರಾದ್ದೇವೆ ಮತ್ತು ಈ ಬಾರಿ ಅವರ ಮನೆಯ ನುಗ್ಗೆ ಮರದಲ್ಲಿ ಬರಪೂರ ಪಸಲು ಆಗಿದೆ ಅಂತೆ.
ನಾನು ತಡ ಮಾಡಲೇ ಇಲ್ಲ.. ನುಗ್ಗೆಕಾಯಿ ಕತ್ತರಿಸಿ ಪ್ರತ್ಯೇಕ ಬೇಯಿಸಿದೆ,ಬೇಳೆ ಬೇಯಿಸಿ, ಮಸಾಲೆ ಅರೆದು ಕೊಂಡು ಬದಿಗೆ ಇಟ್ಟು, ಬಾಣಲೆಯಲ್ಲಿ ಒಗ್ಗರಣೆ ಹಾಕಿ ಅದಕ್ಕೆ ಅರೆದು ಕೊಂಡ ಮಸಾಲೆ ಸೇರಿಸಿ ತಿರುವಿ ನಂತರ ಬೇಯಿಸಿದ ಬೇಳೆ ಮತ್ತು ಬೇಯಿಸಿದ ನುಗ್ಗೆಕಾಯಿ ಮಿಶ್ರಣ ಮಾಡಿ ಸಾರಿನ ಹದಕ್ಕೆ ಬೇಯಿಸಿ ಇಳಿಸಿದೆ.
ನುಗ್ಗೆ ಕಾಯಿಯಲ್ಲಿ ಇರುವ ವಿಟಮಿನ್, ಕ್ಯಾಲ್ಷಿಯಂ, ಪ್ರೋಟೀನ್ ಮತ್ತು ಪೊಟಾಷಿಯಂ ಮೊಟ್ಟೆ - ಹಣ್ಣು - ಬೇರೆಲ್ಲ ತರಕಾರಿಗಿಂತ ನಾಕಾರು ಪಟ್ಟು ಹೆಚ್ಚು ಇರುವುದನ್ನು ಗಮನಿಸಬೇಕು.
ಇದರ ವಿಶಿಷ್ಟ ರುಚಿ ಮತ್ತು ಘಮದಿಂದ ನುಗ್ಗೆ ಕಾಯಿಗೆ ಬೇಡಿಕೆ ಹೆಚ್ಚು ಆದ್ದರಿಂದ ಇದರ ಬೆಲೆ ಕೂಡ, 2019 ನವೆಂಬರ್ ತಿಂಗಳಲ್ಲಿ ನುಗ್ಗೆ ಕಾಯಿ ಬೆಲೆ ಗರಿಷ್ಟ ಆರು ನೂರು ರೂಪಾಯಿ ಆಗಿತ್ತು ನಾನು ಕಿಲೋಗೆ 500 ಮಾಡಿ 10 ಕಿಲೋ ನನ್ನ ಮಗಳ ಮದುವೆಗಾಗಿ ಖರೀದಿಸಿದ್ದು ಮರೆಯಲಾರದ ನೆನಪು.
Comments
Post a Comment