ಗೆದ್ದು ಬಹುಮತ ಪಡೆದ ಪಕ್ಷ 5 ವಷ೯ ಆಡಳಿತ ನಡೆಸುವುದು, ಬಹುಮತ ಪಡೆಯದ ಪಕ್ಷ ವಿರೋದ ಪಕ್ಷವಾಗಿ ಪ್ರಜಾಪ್ರಭುತ್ವವನ್ನ ಕಾಪಾಡುತ್ತದೆ.
ಅದೇ ರೀತಿ ಪ್ರತಿ ಲೋಕ ಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದರಾದವರು ನಮ್ಮ ಲೋಕ ಸಭಾ ಪ್ರತಿನಿಧಿಗಳಾಗಿ ಸೋತವರು ವಿರೋದ ಪಕ್ಷದಂತೆ ಗೆದ್ದವರ ತಪ್ಪುಗಳನ್ನ ತಿದ್ದುವವರಾಗುತ್ತಾರೆ.
ಮತದಾರನಿಗೆ ಪಕ್ಷವಿಲ್ಲ ಅವನು ಹರಿಯುವ ನೀರಿನಂತೆ, ಬೀಸುವ ಗಾಳಿಯ೦ತೆ. ಇವತ್ತು ಒಬ್ಬರ ಗೆಲುವಿಗೆ ನೀಡಿದ ಮತ ಮುಂದೆ ಅವರ ಸೋಲಿಸುವ ಮತವೂ ಆಗಬಹುದು.
ಗೆದ್ದವರು ಮೈಮರೆಯದೆ ಕ್ಷೇತ್ರಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲಿ ಸೋತವರು ಕಾವಲುಗಾರನಂತೆ ಕಾಯ೯ ನಿವ೯ಹಿಸಲಿ.
ಇನ್ನಾದರೂ ಕಾಂಗ್ರೇಸ್ ಮುಕ್ತ, ಬಿಜೆಪಿ ಮುಕ್ತ ಭಾರತ ಅನ್ನುವುದಕ್ಕಿಂತ ಭ್ರಷ್ಟಾಚಾರ ಮುಕ್ತ ಭಾರತ ನಮ್ಮೆಲ್ಲರ ಗುರಿ ಆಗಲಿ.
ಭಕ್ತರು - ಗುಲಾಮರು ಎಂಬ ಅಪಹಾಸ್ಯಕ್ಕಿಂತ ಭಾರತೀಯರೆಂಬ ಅಭಿಮಾನ ಪ್ರಜ್ವಲಿಸಲಿ.
ಗೆದ್ದವರಂತೆ ಸೋತವರನ್ನು ಗೌರವಿಸೋಣ ಇದು ಪ್ರಜಾಪ್ರಭುತ್ವ.
Comments
Post a Comment