Blog number 1518.ಕರ್ನಾಟಕ ವಿಧಾನಸಭಾ ಚುನಾವಣೆ 2023. ಸರ್ಕಾರ ರಚನೆಯಲ್ಲಿ ಸಾದ್ಯಾಸಾಧ್ಯತೆಗಳು, ಪಕ್ಷಗಳ ಪ್ಲಾನ್ ಗಳು
#ಇ೦ತಹ_ಸಾಧ್ಯತೆ_ಇದೆಯಾ?
#ಹೀಗಾದರೆ_ಪಕ್ಷಾಂತರ_ಮು೦ಬೈ_ಯಾತ್ರೆ_ತಡೆ_ಆದೀತಾ?
#ಕಾಂಗ್ರೇಸ್_ಮತ್ತು_ಬಿಜೆಪಿ_ಜೆಡಿಎಸ್_ಜೊತೆ_ಮಾತುಕಥೆ_ಪ್ರಾರಂಬಿಸಿದೆ.
ನಾಳೆ ಕನಾ೯ಟಕ ವಿಧಾನಸಭಾ ಪಲಿತಾಂಶ ಬರಲಿದೆ, ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೇಸ್ ಬರಲಿದೆ ಎಂದಿದೆ, ಬಿಜೆಪಿಗೆ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಿಲ್ಲ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಗಳ ಅಂಬೋಣ ಹಾಗೆಯೆ ಜೆಡಿಎಸ್ ಕೂಡ 20 ರಿಂದ 40 ಸೀಟ್ ಪಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದಿದೆ.
#ಕಾಂಗ್ರೇಸ್_ಜೊತೆ_ಜೆಡಿಎಸ್
ಪ್ಲಾನ್ - 1
ಕಾಂಗ್ರೇಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದ ಬಹುಮತ ಪಡೆಯುವ ಎಲ್ಲಾ ಸಾಧ್ಯತೆ ಇದ್ದರೂ ರಾಜಕೀಯ ತಜ್ಞರು ಕಾಂಗ್ರೇಸ್ ಪಕ್ಷಕ್ಕೆ ಇವತ್ತೇ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆಯ ಮಾತು ಕಥೆ ಪ್ರಾರಂಬಿಸಲು ಸೂಚಿಸಿದ್ದಾರೆ.
ಇದರಿಂದ ನಾಳೆ ಪಲಿತಾಂಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕೊರತೆ ಆದರೂ ಜೆಡಿಎಸ್ ಪಕ್ಷದ ಬೆಂಬಲ ಸಿಗಲಿದೆ ಒಂದು ವೇಳೆ ಕಾಂಗ್ರೇಸ್ ಪಕ್ಷ absolute ಮೆಜಾರಿಟಿ ಇದ್ದರೂ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದರೆ ಪಕ್ಷಾಂತರ - ಮುಂಬೈ ಬಾಯ್ಸ್ ನಂತ ಅಪರಾತಪರಾಕ್ಕೆ ಅವಕಾಶವಿರುವುದಿಲ್ಲ ಎಂಬ ದೂರಾಲೋಚನೆ ಕೂಡ ಇಲ್ಲಿದೆ.
ಹಾಗೆಯ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿ ಹೆಚ್ಚು ಲೋಕ ಸಭಾ ಸ್ಥಾನ ಪಡೆಯುವ ಸಾಧ್ಯತೆಯ ನಿರೀಕ್ಷೆ ಮಾಡಬಹುದು.
ಇದರ ಮದ್ಯೆ ದೇವೇಗೌಡರು ನಿಚ್ಚಳ ಬಹುಮತದ ಕಾಂಗ್ರೇಸ್ ಸರ್ಕಾರದಲ್ಲಿನ ಮೈತ್ರಿಗೆ ದಲಿತ ಮುಖ್ಯಮಂತ್ರಿ ಕಾರ್ಡ್ ಎಸೆಯುವ ಮೂಲಕ ಕಾಂಗ್ರೇಸ್ ಪಕ್ಷದ ಅತಿರಥ ಮಹಾರಥರನ್ನು ಕಟ್ಟಿ ಹಾಕುವ ಸಾಧ್ಯತೆ ಹೆಚ್ಚು.
ಪ್ಲಾನ್ - 2 .
ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಕೊರತೆ ಆದರೆ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಕೇಳ ಬಹುದು ಮತ್ತು ಕಾಂಗ್ರೇಸ್ ಪಕ್ಷ ಸೇರಿ ಗೆದ್ದ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದವರ ಪಟ್ಟಿ ಮಾಡಿ ಅವರಿಗೆ ಯಾವುದೇ ಕಾರಣಕ್ಕೂ ಮಂತ್ರಿ ಮಾಡದ ಕಂಡಿಷನ್ ಹಾಕಬಹುದು.
ಪ್ಲಾನ್ - 3.
ಕಾಂಗ್ರೇಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ ಡಿ.ಕೆ.ಶಿವಕುಮಾರ್ ಗೆ ಮುಖ್ಯಮಂತ್ರಿ ಮಾಡಿ ಯಾವುದೇ ಬಿನ್ನಮತ ಎದುರಿಸಲು ಅವರಿಗೆ ಜವಾಬ್ದಾರಿ ನೀಡಿ ಜೆಡಿಎಸ್ ನಿಂದ ಅಂತರ ಕಾಪಾಡಿ ಕೊಳ್ಳಬಹುದು.
ಈ ಮೂರು ಸಾಧ್ಯತೆ ಇದೆ ಅದರ೦ತೆ ಮೂರು ಪ್ಲಾನ್ ಗಳು ಇದೆ.
ಪ್ಲಾನ್ - 1
ಬಿಜೆಪಿಗೆ ಸಕಾ೯ರ ರಚನೆಗೆ ಕೊರತೆ ಆಗಿದಷ್ಟು ಸೀಟ್ ಜೆಡಿಎಸ್ ಹತ್ತಿರ ಇದ್ದರೆ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ NDA ರಚನೆಗೆ ಆಹ್ವಾನ ನೀಡಬಹುದು ಇದರಿಂದ ಜೆಡಿಎಸ್ ಮುಖ್ಯಮಂತ್ರಿಯ NDA ಮೈತ್ರಿ ಸರ್ಕಾರ ರಚಿಸಬಹುದು
ಪ್ಲಾನ್ - 2 .
ದೇವೇಗೌಡರು ತಮ್ಮ ಜಾತ್ಯಾತೀತ ನಿಲುವು ಬದಲಿಸದಿದ್ದರೆ.... ಜೆಡಿಎಸ್ ಗೆ ಸರ್ಕಾರ ರಚಿಸಲು ಬಾಹ್ಯ ಬೆಂಬಲ
ಪ್ಲಾನ್ - 3
ಸರ್ಕಾರ ರಚನೆ ಸಾಧ್ಯವಾಗದಿದ್ದರೆ ಮುಂದಿನ ವರ್ಷದ ಲೋಕ ಸಭಾ ಚುನಾವಣೆಯ ತನಕ ಕಾದು ನೋಡಿ ನಂತರ ಅತೃಪ್ತರಿಂದ ರಾಜಿನಾಮೆ ಕೊಡಿಸಿ ಸರ್ಕಾರ ರಚನೆ.
Comments
Post a Comment