Blog number 1555. ಹಸಿದವರಿಗೆ ನೀಡುವ ಒ0ದು ಹಿಡಿ ಅನ್ನ ಭಗವಂತನಿಗೆ ಸಮರ್ಪಿಸಿದ ನೈವೇದ್ಯಕ್ಕೆ ಸಮ ಆಗಿರುತ್ತದೆ ನೆನಪಿರಲಿ.
#ಅನ್ನ_ದಾನ_ಮಹಾದಾನ
#ಭೂದಾನ_ಗೋದಾನ_ಅರ್ಥದಾನ_ಶ್ರೀಮಂತರು_ಮಾತ್ರ_ಮಾಡ_ಬಹುದು.
#ಅನ್ನದಾನ_ಸಾಮಾನ್ಯ_ವ್ಯಕ್ತಿ_ಕೂಡ_ಮಾಡಬಹುದು.
#ಸಾವಿರ_ಯಜ್ಞಕ್ಕಿಂತ_ಶ್ರೇಷ್ಟ.
#ಸಹಾಯ_ಮಾಡುವ_ಸಂದರ್ಭ_ಬಂದರೆ_ಸಹಾಯ_ಮಾಡುವುದೇ_ದೇವರು_ಕೊಟ್ಟ_ಸುವರ್ಣಾವಕಾಶ.
#ಸಹಾಯ_ಮಾಡುವ_ಮನಸ್ಸಿಲ್ಲದೆ_ಟೀಕೆ_ಟಿಪ್ಪಣೆ_ಎಷ್ಟು_ಸರಿ.
#ಸರ್ಕಾರದ_ಅನ್ನ_ಭಾಗ್ಯಕ್ಕೆ_ಬಿಟ್ಟಿ_ಬಾಗ್ಯ_ಎನ್ನುವುದು_ಸರಿಯಾ?
ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾರೆ ಅನ್ನ ದೇವರ ಮುಂದೆ ಅನ್ಯ ದೇವರು೦ಟೆ ಅಂತ.
ಎಲ್ಲಾ ಪ್ರಾಚೀನ ಭಾರತೀಯ ಜ್ಞಾನಿಗಳು ಹೇಳಿದ್ದಾರೆ ಹಸಿವು ಅತ್ಯಂತ ದೊಡ್ಡ ಪಿಡಗು ಇದು ಎಲ್ಲರಿಗೂ ಬರುವ ಕಾಯಿಲೆ ಇದಕ್ಕೆ ಮದ್ದು ಆಹಾರ.
ಜಠರ ಬೆಂಕಿ ವಾಸಿಸುವ ಅಗ್ನಿಕುಂಡ , ಪಂಚಭೂತಗಳಲ್ಲಿ ಒಂದು, ಈ ಅಗ್ನಿ ಕುಂಡ ತಣಿಸಲು ನಾವು ಸಹಾಯ ಮಾಡಿದರೆ ಆ ಕಾರ್ಯವು ಸಾವಿರ ಯಜ್ಞಕ್ಕಿಂತ ಹೆಚ್ಚು ಪುಣ್ಯ ಎನ್ನುತ್ತಾರೆ.
ಸಹಾಯ ಮಾಡುವ ಸಂದರ್ಭ ಬಂದಾಗ ಸಹಾಯ ಮಾಡುವುದೇ ದೇವರು ನಮಗೆ ಕೊಟ್ಟ ಸುವರ್ಣಾವಕಾಶ ಅಂತ ತಕ್ಷಣ ಕಾಯ೯ತತ್ಪರರಾಗಬೇಕು, ಪಾಪಿಗಳು ಈ ಸಂದರ್ಭದಲ್ಲೂ ಸಹಾಯ ಮಾಡವ ಮನಸ್ಸಿಲ್ಲದೆ ಟೀಕೆ ಟಿಪ್ಪಣೆ ಮಾಡುತ್ತಾರೆ.
ಪಂಜಾಬಿನ ಅಮೃತ್ ಸರದ ಗೋಲ್ಡನ್ ಟೆಂಪಲ್ ನ ಲಂಗರ್, ತುಮಕೂರಿನ ಸಿದ್ದಗಂಗಾ ಸ್ವಾಮೀಜಿಗಳು ಪ್ರಾರಂಬಿಸಿ ನಿರಂತರವಾಗಿ ನಡೆಯುತ್ತಿರುವ ದಾಸೋಹ, ಹುಬ್ಬಳ್ಳಿ ಸಿದ್ದಾರೂಡ ಮಠದ ನಿತ್ಯ ದಾಸೋಹ, ಅಜ್ಮೀರದ ದರ್ಗಾದಲ್ಲಿ, ತಿರುಪತಿ, ಶಿರಡಿ, ದಮ೯ಸ್ಥಳದಲ್ಲಿ ನಡೆಯುವ ಅನ್ನದಾನ ಇದೇ ರೀತಿ ಇನ್ನೂ ನೂರಾರು ಪುಣ್ಯ ಸ್ಥಳಗಳ ಅನ್ನದಾನದಿಂದ ನಮ್ಮ ತಾಲ್ಲೂಕಿನ ವರದಳ್ಳಿಯ ಶ್ರೀಧರ ಸ್ವಾಮಿಗಳ ಪ್ರೇರಣೆಯಿಂದ ನಿತ್ಯ ನಡೆಯುವ ಅನ್ನದಾನಗಳು ಅನ್ನ ದಾನದ ಶ್ರೇಷ್ಟತೆ - ಪುಣ್ಯಗಳನ್ನು ಸಾರಿ ಹೇಳುತ್ತಿದೆ.
ಇದೇ ರೀತಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲಾ 10 ಕೇಜಿ ಅಕ್ಕಿ ಪ್ರತಿ ತಿಂಗಳು ನೀಡುವ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದೆ ಇದು ಪ್ರತಿಯೊಬ್ಬರ ತೆರಿಗೆ ಹಣ ಸರ್ಕಾರ ಸಂಗ್ರಹಿಸಿ ಬಡವರ ಹಸಿವು ತಣಿಸುವ ಯೋಜನೆ ಆದರೆ ಇದನ್ನು ವಿರೋದಿಸುವ ಅನೇಕರು #ಬಿಟ್ಟಿ_ಭಾಗ್ಯ ಎಂಬ ಹೆಸರಿನಲ್ಲಿ ಗೇಲಿ ಪ್ರಾರಂಬಿಸಿರುವುದು ವಿಷಾದನೀಯ.
ತನಗೆ ಅನುಕೂಲ ಇದ್ದರೆ ಸರ್ಕಾರದ ಸಹಾಯ ಸ್ವೀಕರಿಸದಿದ್ದರೆ ಆಯಿತು ಆದರೆ ಹಸಿವಿನ ಪಿಡುಗಿನಿಂದ ತತ್ತರಿಸುವವನ ಜಠರಾಗ್ನಿ ತಣಿಸುವ ಈ ಪುಣ್ಯ ಕೆಲಸ ಈ ಸರ್ಕಾರಕ್ಕೆ ದೇವರು ಕೊಟ್ಟ ಸುವರ್ಣಾವಕಾಶ ಎಂಬುದು ಮರೆಯಬಾರದು, ಸಹಾಯ ಮಾಡುವ ಮನಸ್ಸಿಲ್ಲದೆ ಟೀಕೆ ಟಿಪ್ಪಣೆ ಮಾಡುವುದು ಸರಿಯಲ್ಲ.
ಅಬ್ದುಲ್ ಕಲಾಂ ಅವರು ಹೇಳಿದ್ದಾರೆ "ಬೃಹತ್ ಭಾರತದಿಂದ ನಾವು ಅದಿರು ರಪ್ತು ಮಾಡುವುದಲ್ಲ, ದೇಶದ ಯುವ ಪೀಳಿಗೆಯನ್ನು ಉಚಿತವಾಗಿ ವೈದ್ಯರು - ಇಂಜಿನಿಯರ್ - ಶಿಕ್ಷಕರು - ದಾದಿಗಳನ್ನಾಗಿ ಮಾಡಿ ವಿಶ್ವದಾದ್ಯಂತ ಅವರ ಸೇವೆಗೆ ಅವಕಾಶ ಮಾಡಿದರೆ ಬೃಹತ್ ಭಾರತ ಶ್ರೀಮಂತ ದೇಶ ಆಗುತ್ತದೆ" ಅಂತ ಆದರೆ ಈವರೆಗಿನ ಯಾವ ಸರ್ಕಾರವೂ ಇದನ್ನು ಮಾಡಿಲ್ಲ.
ಆದರೆ ಸರ್ಕಾರಗಳು ಇಂತಹ ಶಿಕ್ಷಣ ಸಂಸ್ಥೆಗಳಿಗೆ ಕೆಂಪು ಕಾರ್ಪೆಟ್ ಹಾಸಿ ಮಠಗಳಿಗೆ ದಾರೆ ಎರೆಯುತ್ತಿದೆ ಅಲ್ಲಿ ಹಣ ಇಲ್ಲದ ಬಡವನಿಗೆ ಪ್ರವೇಶವೇ ಇಲ್ಲ ಇನ್ನು ದೇಶ ಉದ್ದಾರ ಬರೀ ಕನಸಾಗುತ್ತಿದೆ.
Comments
Post a Comment