Blog number 1484. ಆನಂದಪುರಂ ಇತಿಹಾಸ ಭಾಗ 91. ಡಾಕ್ಟರ್ ಜಿ.ಡಿ. ನಾರಾಯಣಪ್ಪ ಮಾಜಿ ಶಾಸಕರು ಹೊಸನಗರ ಇವರ ತಾಯಿ ತವರು ಮನೆ ಆನಂದಪುರಂ ಹೋಬಳಿ ಖೈರಾ ಗ್ರಾಮ.
#ಆನಂದಪುರಂ_ಇತಿಹಾಸ_ಭಾಗ_91.
#ಭಾರತದ_ಮೊದಲ_ಚುನಾವಣೆ_ಹೇಗಿತ್ತು?
#ಮತದಾರ_ಅಲಂಕೃತ_ಎತ್ತಿನಗಾಡಿಯಲ್ಲಿ_ದೇವರ_ದರ್ಶನಕ್ಕೆ_ಹೋಗುವ೦ತೆ_ಕುಟುಂಬ_ಸಮೇತ_ಹೋಗುತ್ತಿದ್ದರಂತೆ
#ಈಗಿನ_ಚುನಾವಣೆ_ಹೇಗಿದೆ?
#ಸಾಮಾಜಿಕ_ಜಾಲತಾಣದ_ಕಮಾಲ್!
#ಹಣ_ಜಾತಿ_ದರ್ಮ_ಪಕ್ಷಗಳ_ಕಾಪೋ೯ರೇಟ್_ವ್ಯವಹಾರ
#ದೇಶದ_ಮೊದಲ_ಚುನಾವಣೆ_ನೋಡಿದ_ಮಾಜಿ_ಶಾಸಕರಾದ_ಜಿ_ಡಿ_ನಾರಾಯಣಪ್ಪರ_ಅನುಭವ.
#ಇವರ_ತಾಯಿ_ತವರುಮನೆ_ಆನಂದಪುರಂ_ಹೋಬಳಿ_ಆಚಾಪುರ_ಗ್ರಾಮಪಂಚಾಯತನ_ಖೈರಾ .
ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣದ ಪಾತ್ರವೇ ದೊಡ್ಡದಾಗಿದೆ, ಪ್ರತಿಯೊಬ್ಬ ಅಭ್ಯರ್ಥಿಯ Media creator ಗಳು ಪ್ರಚಾರದ ಪ್ರತಿ ಕ್ಷಣದ ಲೈವ್ ಪೋಸ್ಟ್ ಮಾಡುವುದರಿಂದ ಇಡೀ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ, ಪಲಿತಾಂಶ ಏನಾಗಬಹುದು ಎಂದು ಅಂದಾಜಿಸಬಹುದಾಗಿದೆ.
ಪತ್ರಕರ್ತರೂ ಬರೆಯುವ ಲೇಖನಿ ಬದಿಗಿಟ್ಟು ಅವರದೇ ಪೇಸ್ ಬುಕ್/ ವೆಬ್ / ಯುಟ್ಯೂಬ್ ಸುದ್ದಿ ಚಾನಲ್ ನ ಮೂಲಕ ಕ್ರಿಯಾಶೀಲರಾಗಿದ್ದಾರೆ, ಕ್ಷಣಮಾತ್ರದಲ್ಲಿ ಇದನ್ನು ಜನತೆಗೆ ತಲುಪಿಸುವ ತಂತ್ರಜ್ಞಾನದ ಕ್ರಾಂತಿ ಮುಂದಿನ ಚುನಾವಣೆಯಲ್ಲಿ ಇನ್ನು ಯಾವ ರೀತಿ ಬದಲಾಗಬಹುದೋ ಗೊತ್ತಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಸಾರ್ವಜನಿಕ ಚುನಾವಣೆ 1952 ರಲ್ಲಿ ನಡೆದಾಗ ಮತದಾರನ ಪ್ರತಿಕ್ರಿಯೆ ಹೇಗಿತ್ತು ಅಂತ ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಜಿ.ಡಿ.ನಾರಾಯಣಪ್ಪನವರು ವಿವರಿಸಿದ್ದು ತುಂಬಾ ಕುತೂಹಲವಾಗಿತ್ತು.
ಜಿ.ಡಿ ನಾರಾಯಣಪ್ಪರ ತಾಯಿ ತವರು ಮನೆ ನಮ್ಮ ಆನಂದಪುರಂ ಹೋಬಳಿಯ ಖೈರಾ ಇವರ ತಂದೆ 1957 ರ ಎರಡನೇ ಚುನಾವಣೆಯಲ್ಲಿ ಆನಂದಪುರ೦ನ ಎ.ಆರ್. ಬದರೀನಾರಾಯಣರನ್ನು ಬೆಂಬಲಿಸುತ್ತಾರೆ ಆ ಚುನಾವಣೆಯಲ್ಲಿ ಜಿ.ಡಿ. ನಾರಾಯಣಪ್ಪನವರು ಬದರೀನಾರಾಯಣರ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ.
ನಂತರ ವೈದ್ಯಕೀಯ ಶಿಕ್ಷಣ ಮಾಡಿ ವೈದ್ಯರಾಗುತ್ತಾರೆ, ಹೊಸನಗರ ತಾಲ್ಲೂಕಿನಲ್ಲಿ ವೈದ್ಯಕೀಯ ವಿದ್ಯಾಬ್ಯಾಸ ಮಾಡಿದ ಮೊದಲ ವೈದ್ಯರು ಇವರು.
ನಂತರ ಬಂಗಾರಪ್ಪರ ಪತ್ನಿ ತಂಗಿಯನ್ನು ವಿವಾಹವಾಗುತ್ತಾರೆ, ಹೊಸನಗರ ತಾಲ್ಲುಕಿನಿಂದ ಶಾಸಕರೂ ಆಗುತ್ತಾರೆ.
1952 ರ ಮೊದಲ ಸಾರ್ವತ್ರಿಕ ಚುನಾವಣೆ ಆಗಿನ ದೇಶದ ಪ್ರಜೆಗಳಿಗೆ ಮತದಾನದ ಬಗ್ಗೆ ತುಂಬಾ ಪವಿತ್ರವಾದ ಭಾವನೆ ಇತ್ತಂತೆ, ಮತದಾನಕ್ಕೆ ಹೋಗುವ ಮತದಾರ ದೇವಸ್ಥಾನಕ್ಕೆ ಹೋದಂತೆ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ಪೂಜೆ ಮಾಡಿ ಇಡೀ ಕುಟುಂಬ ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಬಾಳೆ- ಕಬ್ಬು-ಹೂವಿನ ಅಲಂಕಾರ ಮಾಡಿದ ಎತ್ತಿನಗಾಡಿ ಮತ್ತು ಅದನ್ನು ಎಳೆಯಲು ಗೆಜ್ಜೆ -ಗಂಟೆಗಳನ್ನು ಅಲಂಕರಿಸಿದ ಎತ್ತುಗಳನ್ನು ಹೂಡಿ ಸಂಭ್ರಮದಿಂದ ಹೋಗುತ್ತಿದ್ದರಂತೆ.
ನಂತರ ಕ್ರಮೇಣವಾಗಿ ಮತದಾರನನ್ನು ಹೆಂಡ ಹಂಚುವ ಮೂಲಕ ಸೆಳೆಯುವ ಚುನಾವಣೆ ಈಗ ಒಂದು ಮತಕ್ಕೆ ಇಷ್ಟು ಅಂತ ಎಲ್ಲಾ ಪಕ್ಷಗಳು ಖರೀದಿಸುವಲ್ಲಿಗೆ ಬಂದಿದೆ.
ಉತ್ತರ ಭಾರತದಲ್ಲಿ ಇಡೀ ಮತ ಕಟ್ಟೆಯನ್ನು ಅಭ್ಯರ್ಥಿಯ ಹಣ ಬಲ - ತೊಳು ಬಲದಿಂದ ವಶಮಾಡಿ ಅವರೇ ಅವರ ಅಭ್ಯರ್ಥಿಯ ಚುನಾವಣಾ ಗುರುತಿಗೆ ಮತ ಹಾಕುವ ರಿಗ್ಗಿಂಗ್ ಕೂಡ ನಡೆಯುತ್ತಿತ್ತು.
Comments
Post a Comment