Skip to main content

Blog number 1478. ಆನಂದಪುರಂ ಇತಿಹಾಸ ಭಾಗ-6

#ಆನಂದಪುರಂ ಇತಿಹಾಸ ಭಾಗ_6

#ತಿರುಮಲಾಚಾರ್_ಗಣ್ಯ_ಗುತ್ತಿಗೆದಾರರು_ಆನಂದಪುರಂನ_ವಿಲೇಜ್_ಪಂಚಾಯತ್_ಅಧ್ಯಕ್ಷರು_ಆಗಿದ್ದರು.

#ರಾಮಕೃಷ್ಣ_ಆಯ್ಯಂಗಾರರ_ಪ್ರೇರಣೆಯಿಂದ_ಗೊರೂರಿನಿಂದ_ಆನಂದಪುರಕ್ಕೆ_ಬಂದ_ಕುಟುಂಬದವರು.
 
#ಆ_ಕಾಲದಲ್ಲಿ_ಲಾರಿ_ರಾಜದೂತ್_ಬೈಕ್_ಹೊಂದಿದ್ದ_ಏಕೈಕ_PWD_ಗುತ್ತಿಗೆದಾರರು


  ಇನಾಂದಾರರು, ಆನಂದಪುರಂ ನ ಏಕೈಕ ರೈಸ್ ಮಿಲ್ ಮಾಲಿಕರು ಹಾಗೂ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಮೂಲ ಕುಟುಂಬಗಳು ಹಾಸನ ಜಿಲ್ಲೆಯ ಗೊರೂರಿನವರು, ಇವರೆಲ್ಲ ಮದ್ರಾಸ್ ನ ಅಯ್ಯಂಗಾರರು.
  ಇವರೆಲ್ಲ ಮದ್ರಾಸ್ ನಿಂದ  ಹಾಸನದ ಗೊರೂರಿಗೆ ಬಂದ ಕಾರಣ ಗೊತ್ತಾಗಲಿಲ್ಲ, ಅಲ್ಲಿನ ಅಯ್ಯಂಗಾರರಿಂದಲೇ ಇವತ್ತು ಅಯ್ಯಂಗಾರ್ ಬೇಕರಿಗಳು ಪ್ರಸಿದ್ಧಿ ಆಗಿದೆ.
    ರಾಮಕೃಷ್ಣ ಆಯ್ಯಂಗಾರ್ ರು ತಮ್ಮ ರೈಸ್ ಮಿಲ್ ಇತ್ಯಾದಿ ವ್ಯವಹಾರ ನೋಡಿಕೊಳ್ಳಲು ಗೊರೂರಿನಿಂದ ಶ್ರೀನಿವಾಸ ಅಯ್ಯಂಗಾರ್ ಮತ್ತು ಅವರ ಪತ್ನಿ ಶ್ರೀರಂಗಮ್ಮ ದಂಪತಿಗಳನ್ನು ಕರೆತರುತ್ತಾರೆ, ಇವರ ಜೊತೆ ರೈಲ್ವೆ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರ ಸಹೋದರ ಚೆಲುವಯ್ಯಂಗಾರ್ ಕುಟುಂಬ ಮತ್ತು ಇವರ ಅಣ್ಣನ ಮಗ ತಿರುಮಲಾಚಾರ್ ಕುಟುಂಬ ಕೂಡ ಆನಂದಪುರಂ ಗೆ ಬಂದು ನೆಲೆಸುತ್ತದೆ.
   ಶ್ರೀನಿವಾಸಯ್ಯಂಗಾರ್ ಮತ್ತು ಶ್ರೀರಂಗಂ ದಂಪತಿಗಳಿಗೆ ವರದರಾಜ್, ತಿರುಮಲಾಚಾರ್, ರಂಗರಾಜನ್, ದಶರಾಶಿ ಎಂಬ ನಾಲ್ಕು ಗಂಡು ಮಕ್ಕಳು ಮತ್ತು ಆನಂದಮ್ಮ ಎಂಬ ಏಕೈಕ ಪುತ್ರಿ ಆಗುತ್ತದೆ.
  ಎಲ್ಲರೂ ಆನಂದಪುರದಲ್ಲಿ ಪ್ರಾಥಮಿಕ ಶಿಕ್ಷಣ ಮಾಡುತ್ತಾರೆ, ಮೊದಲ ಪುತ್ರ ವರದರಾಜ್ ಮುಂದೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನಲ್ಲಿ ಉಪನ್ಯಾಸಕರಾಗುತ್ತಾರೆ, ಮೂರನೆ ಪುತ್ರ ರಾಂಚಿಯಲ್ಲಿ ಸೈಲ್ ಕಬ್ಬಿಣ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಾರೆ, ಕೊನೆಯ ಪುತ್ರ ಕುವೈತ್ ನಲ್ಲಿ ಇಂಜಿನಿಯರ್ ಆಗಿ ಉದ್ಯೋಗ ಮಾಡಿದರೆ ಎರಡನೆಯ ತಿರುಮಲಾಚಾರ್ ಇಂಜಿನಿಯರಿಂಗ್ ಮಾಡಿ ಆನಂದಪುರದಲ್ಲೇ ನೆಲೆಸಿ PWD ಗುತ್ತಿಗೆದಾರರಾಗಿ ಜೀವನ ಮಾಡುತ್ತಾರೆ, ಕೃಷಿ ಹೈನು ಗಾರಿಕೆ ಕೂಡ ಮಾಡುತ್ತಾರೆ.
   ಒ0ದು ಅವಧಿಗೆ ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗುತ್ತಾರೆ ಆಗ ಇಬ್ರಾಹಿಂ ಸಾಹೇಬರು (ಈಗಿನ ಸಾಗರದ ಟಿಪ್ ಟಾಪ್ ಲಾಡ್ಜ್ ಮಾಲಿಕರು) ಉಪಾಧ್ಯಕ್ಷರಾಗುತ್ತಾರೆ ಆಗ ನಮ್ಮ ತಂದೆ ಕೃಷ್ಣಪ್ಪ, ಆಗಿನ ಸೈಕಲ್ ಶಾಪ್ ಮಾಲಿಕರಾದ ಸಿರಿಲ್ ಡಿಕಾಸ್ಟ. ಬಾಲ ಗಂಗಾದರ ಗೌಡರು, ಕರುಣಾಕರ್, ಶಾಂತಮ್ಮ ಮುಂತಾದವರು ಸದಸ್ಯರು.
  ತಿರುಮಲಾಚಾರ್ ಅಯ್ಯಂಗಾರರಿಗೆ ಶ್ರೀದರ್, ಮಾಲಿನಿ, ನೀಲಾದೇವಿ, ಸುಂದರ್, ಬಾರತಿ ಮತ್ತು ಜಯಶ್ರೀ ಎಂಬ ಮಕ್ಕಳು. ಇವರಲ್ಲಿ ಶ್ರೀದರ್ ಇಂಜಿನಿಯರ್ ಆಗಿ ಚಕ್ರಾ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದರು ಈಗ ಇನ್ನೊವ೯ ಪುತ್ರ ಸುಂದರ್ ಬೆಂಗಳೂರಲ್ಲಿ ನೆಲೆಸಿದ್ದಾರೆ, ಸುಂದರ್ ಅತ್ಯುತ್ತಮ  ಬಾಲ್ ಬಾಡ್ಮಿಂಟನ್ ಕ್ರೀಡಾಪಟು ಆಗಿದ್ದರು.
  ತಿರುಮಲಾಚಾರ್ ರಾಜದೂತ್ ಬೈಕ್ ಇಡೀ ಆನಂದಪುರಂ ನ ಎಕೈಕ ಬೈಕ್ ಆಗಿತ್ತು, ಇವರು ತಮ್ಮ ಕಂಟ್ರಾಕ್ಟ್ ಕೆಲಸಕ್ಕೆ ಸಾಮಾಗ್ರಿ ಸಾಗಾಣಿಕೆಗೆ ಆಕಾಲದಲ್ಲಿ ಶ್ರೀನಿವಾಸ ಹೆಸರಿನ ಡಾಡ್ಜ್ ಲಾರಿ ಹೊಂದಿದ್ದರು. ಆ ಕಾಲದಲ್ಲಿ ಆನಂದಪುರಂ ನಲ್ಲಿ ಲಾರಿ ಮಾಲಿಕರೆಂದರೆ ಫೋಸ್ಟ್ ಈರಣ್ಣರ ತಂದೆಯವರದ್ದು, ಬಸವನ ಬೀದಿ ಶಿವರಾಜ್ ತಂದೆಯವರದ್ದು, ಪೋಲಿಸ್ ಸ್ಟೇಷನ್ ಪಕ್ಕದ ಸಂಗಣ್ಣರ ತಂದೆಯದ್ದು, ಪ್ರಭು ಡಾಕ್ಟರ್ ತಂದೆ ಮಾದವ ಪ್ರಭುಗಳದ್ದು,  ಈಗಿನ ಹಿರಿಯರಕದಲ್ಲಿ ನೆಲೆಸಿರುವ ಯೋಮಕೇಶಪ್ಪ ಗೌಡರದ್ದು ನಂತರ ಈಗಿನ ದುಗಾ೯ ಗ್ಯಾರೇಜ್ ರಮೇಶರ ತಂದೆ ಅಚ್ಯುತಾಚಾರ್ ಮತ್ತು ಗುತ್ತಿಗೆದಾರರಾದ ಕೊಲ್ಲಾ ಬೋವಿಯವರು ಲಾರಿ ಮಾಲಿಕರಾಗಿದ್ದು ಆನಂದಪುರದ ಇತಿಹಾಸ.
   ತರಿಕೆರೆ ಭಾಗದಲ್ಲಿ ಬದರಿನಾರಾಯಣ್ ಅಯ್ಯಂಗಾರರ ಕುಟುಂಬ ನೀರಾವರಿ ಜಮೀನು ಹೊಂದಿದ್ದರು, ಭದ್ರಾ ಜಲಾಶಯ ನಿರ್ಮಾಣ ಆಗುವಾಗ ತಿರುಮಲಾಚರ್ ತರಿಕೆರೆ ಭಾಗದಲ್ಲಿ ನೀರಾವರಿ ಚಾನಲ್ ಗುತ್ತಿಗೆ ಕೆಲಸ ಮಾಡುತ್ತಾರೆ ನಂತರ ಸಾಗರ ಭಾಗದಲ್ಲಿ ರಸ್ತೆ, ಮೋರಿ ಇತ್ಯಾದಿ ಕೆಲಸ ನಿರ್ವಹಿಸಲು ತರಿಕೆರೆಯಲ್ಲಿ ನೆಲೆಸಿದ್ದ ಆಂಧ್ರ ಮೂಲದ ಕೆಲಸಗಾರರ ಕ್ಯಾಂಪ್ ಆನಂದಪುರಕ್ಕೆ ಕರೆ ತರುತ್ತಾರೆ ಅದರಲ್ಲಿ ನಂತರ ಆನಂದಪುರಂ ಭಾಗದಲ್ಲಿ ಪ್ರಖ್ಯಾತ ಗುತ್ತಿಗೆದಾರ ಲಾರಿ ಮಾಲಿಕರಾದ ಕೊಲ್ಲಾ ಬೋವಿಯವರ ತಂದೆ ಆ ಕ್ಯಾಂಪ್ ಮುಖಂಡರಾಗಿದ್ದು ತಿರುಮಲಾಚಾರ್ ಎಲ್ಲಾ ಗುತ್ತಿಗೆ ಕೆಲಸದ ಉಸ್ತುವಾರಿ ಮೇಸ್ತ್ರಿ ಆಗಿ ಕೆಲಸ ಮಾಡುತ್ತಾರೆ.
  ಕೊಲ್ಲಾ ಬೋವಿಯವರ ಮಗ ಚಂದ್ರ ಕುಮಾರ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆಗುತ್ತಾರೆ.
   ತಿರುಮಲಾಚಾರ್ ದೇಶಭಕ್ತರು, ದೈವಭಕ್ತರು ಮತ್ತು ಸಾತ್ವಿಕರು ಇವರು ನಿರ್ಮಿಸಿದ ಕೆರೆಕಟ್ಟೆ, ಮೊರಿಗಳು ಈಗಲೂ ಸುಸಜ್ಜಿತವಾಗಿದೆ ಅಂದರೆ ಆ ಕಾಲದ ಗುತ್ತಿಗೆ ದಾರರ ಗುಣಮಟ್ಟದ ಕೆಲಸಕ್ಕೆ ಸಾಕ್ಷಿ, ಅಷ್ಟು ದೊಡ್ಡ ಗುತ್ತಿಗೆದಾರರಾದರೂ ಆಸ್ತಿ ಮನೆ ಮಾಡಲಿಲ್ಲ ಆದರೆ ಈ ಭಾಗದಲ್ಲಿ ಒಳ್ಳೇ ಹೆಸರು ಮಾಡಿದರು.
  ತಿರುಮಲಾಚಾರ್ ಇಹಲೋಕ ತ್ಯಜಿಸಿದ್ದಾರೆ,ಇವರ ಕುಟುಂಬದವರು ಈಗ ಯಾರು ಆನಂದಪುರಂ ನಲ್ಲಿ ಇಲ್ಲ, ಎಲ್ಲಾ ಬೆಂಗಳೂರಲ್ಲಿ ನೆಲೆಸಿದ್ದಾರೆ.
(ನಾಳೆ ಮುಂದಿನ ಭಾಗ - 7)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...