Blog number 1493. ಹಠ ಯೋಗಿ ಮತ್ತಿಕೊಪ್ಪ ಹರನಾಥ ರಾಯರು ಹಾಲಿ ಪ್ರತಿಷ್ಟಿತ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಆಡಳಿತ ಮಂಡಳಿ ಎಂ ಡಿ ಎಪ್ ಸಂಸ್ಥೆ ಅಧ್ಯಕ್ಷರು.
https://youtu.be/g9_SxBtJN_U
#ಹರನಾಥರಾವ್_ಮತ್ತಿಕೊಪ್ಪ_ಎಂಬ_ಹಠಯೋಗಿ
#ಸಾಗರದ_ಎಂ ಡಿ ಎಫ್ ಸಂಸ್ಥೆ ಅಧ್ಯಕ್ಷರು
#ನನ್ನ_ಅವರ_ಗೆಳೆತನಕ್ಕೆ_30_ವರ್ಷ
#ನಿನ್ನೆ_ಬಹಳ_ದಿನದ_ನಂತರ_ಬೇಟಿ_ಆಯಿತು.
#ಮಾಜಿಮುಖ್ಯಮಂತ್ರಿ_ಬಂಗಾರಪ್ಪ_ಶಾಸಕ_ಹಾಲಪ್ಪರ_ಗಳಸ್ಯ_ಕಂಠಸ್ಯ_ಸಂಬಂದಕ್ಕೆ_ಕಾರಣ?
#ಚಪ್ಪಲಿ_ಧರಿಸಿದ್ದಕ್ಕೆ_ಅವಮಾನಿಸಿದವರಿಗೆ_ವಿರುದ್ಧವಾಗಿ_ಚಪ್ಪಲಿ_ಧರಿಸದ_ಶಪಥಕ್ಕೆ_ಅರ್ದ_ಶತಮಾನ.
#ಆಪ್ಸ್_ಕೋಸ್_ಹಗರಣಗಳಿಂದ_ಸಂಸ್ಥೆ_ಸರಿದಾರಿಗೆ_ತಂದ_ಮನದಾಳದ_ಮಾತು.
ಮಲೆನಾಡು ಪ್ರಾಂತ್ಯ ಅಂದರೆ ಸಾಗರ - ಹೊಸನಗರ- ಸೊರಬ ತಾಲ್ಲೂಕುಗಳಲ್ಲಿ ಮತ್ತಿಕೊಪ್ಪ ಹರನಾಥ ರಾಯರೆಂದರೆ ಗೊತ್ತಿಲ್ಲದವರು ಇಲ್ಲ, ವಾಮನಾಕೃತಿಯ ಬರಿಗಾಲಲ್ಲಿ ನಡೆಯುವ ಹಠ ಯೋಗಿ ಇವರು.
ಯೌವನದಲ್ಲಿ ಇವರ ಜಾತಿ ಹವ್ಯಕರ ಸಮಾಜದಲ್ಲಿನ ಯಾರದೋ ಮನೆಯಲ್ಲಿ ಕೌಟುಂಬಿಕ ಕಾರ್ಯಕ್ರಮದಲ್ಲಿ ಇವರು ಚಪ್ಪಲಿ ಧರಿಸಿ ಹೋದಾಗ ಇವರಿಗಾದ ಅವಮಾನದಿಂದ ಇವರು ಜೀವನ ಪರ್ಯಂತ್ ಚಪ್ಪಲಿ ಧರಿಸುವುದಿಲ್ಲ ಎಂಬ ಇವರ ಶಪಥಕ್ಕೆ ಅರ್ಧ ಶತಮಾನವಾಯಿತು.
ಯಾರಿಂದಲೂ ಏನನ್ನೂ ನಿರೀಕ್ಷಿಸದೆ ತಮ್ಮದೇ ಆದಂತಹ ವಿಶಿಷ್ಟ ರೀತಿಯ ಸಮಾಜ ಸೇವೆ ಇವರದ್ದು ಅದಕ್ಕಾಗಿ ಯಾರನ್ನು ಎದುರು ಹಾಕಿಕೊಂಡರೂ ಎದೆಗುಂದದೆ ಗುರಿ ಮುಟ್ಟಲು ಎಲ್ಲಾ ರೀತಿಯ ಚಾಣಕ್ಷತನ ಮೆರೆಯುವ ಹರನಾಥ ರಾಯರ ಮನೆಯಲ್ಲಿ ಖ್ಯಾತ ಚಲನಚಿತ್ರ ನಟ ರಾಜಕುಮಾರ್, ಬಂಗಾರಪ್ಪ, ಹೆಚ್.ಕೆ ಪಾಟೀಲರಂತಹ ಮಹನೀಯರು ಬಂದು ತಂಗುತ್ತಿದ್ದರೆಂದರೆ...
ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತರಾದ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಾಗರ ತಾಲೂಕಿನ ಸಂಪೂರ್ಣ ಜವಾಬ್ದಾರಿಯನ್ನು ಹರನಾಥರಾಯರು ವಹಿಸಿದ್ದರು ಮತ್ತು ಇಡೀ ಚುನಾವಣೆಯ ಕಾಲಾವಾದಿ ಬಂಗಾರಪ್ಪರ ವಾಸ್ತವ್ಯ ಸಾಗರ ತಾಲ್ಲುಕಿನ ಉಳ್ಳೂರು ಗ್ರಾಮ ಪಂಚಾಯತಿಯ ಮತ್ತಿ ಕೊಪ್ಪದ ಹರನಾಥರ ಮನೆಯೇ ಆಗಿತ್ತು.
ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನನ್ನ ಮತ್ತು ಕಾಗೋಡು ತಿಮ್ಮಪ್ಪನವರ ಸೈದ್ದಾಂತಿಕ ಬಿನ್ನಾಭಿಪ್ರಾಯ ನೋಡಿದ್ದ ಬಂಗಾರಪ್ಪನವರು ನನ್ನನ್ನು ಅವರ ಚುನಾವಣೆಯಲ್ಲಿ ಬೆಂಬಲಿಸುವಂತೆ ಮತ್ತು ಸಾಗರ ತಾಲ್ಲೂಕಿನಲ್ಲಿ ನನ್ನನ್ನು ರಾಜಕೀಯವಾಗಿ ಬೆಳೆಸುವ ಗಾಡ್ ಪಾದರ್ ಆಗುವ ಅಶ್ವಾಸನೆಯಿಂದ ನಾನು ಮತ್ತು ನನ್ನ ಸಂಘಡಿಗರು ಬಂಗಾರಪ್ಪರ ಪರವಾಗಿ ಹೋಗಿದ್ದೆವು.
ಹೊಸನಗರದಿಂದ ಸಾಗರದ ಸಭೆಗೆ ಆಗಮಿಸಿದ ಬಂಗಾರಪ್ಪರನ್ನು ಹೆಗ್ಗೋಡಿನ ಸಮೀಪ ನಾವೆಲ್ಲ ಸ್ವಾಗತಿಸಿದಾಗ ನನ್ನನ್ನು ಅವರ ಕಾರಿನಲ್ಲಿ ಸಾಗರದ ಗಾಂಧಿ ಮೈದಾನದ ಸಭೆಗೆ ಬಂಗಾರಪ್ಪನವರು ಕರೆದೊಯ್ದಿದ್ದರು, ಅಲ್ಲಿ ವೇದಿಕೆಗೆ ನನ್ನ ಕೈ ಹಿಡಿದು ಕರೆದೊಯ್ದ ಬಂಗಾರಪ್ಪನವರು ವೇದಿಕೆಯಲ್ಲಿ ನನ್ನ ಕೈ ಹಿಡಿದೆತ್ತಿ ಸಭೆಯಲ್ಲಿ ನನ್ನನ್ನು ಮುಂದಿನ ಸಾಗರದ ನಾಯಕ ಎಂದು ಘೋಷಿಸಿದ್ದರು.
ಆ ಸಭೆ ನಂತರ ನಮ್ಮ ಊರಾದ ಆನಂದಪುರಂನ ಸಭೆ ಸಂಜೆ 8 ಕ್ಕೆ ಆನಂದಪುರಂ ಬಸ್ ನಿಲ್ದಾಣದ ಆವರಣದಲ್ಲಿ ಟ್ರಾಕ್ಟರ್ ಟ್ರೇಲರ್ ಮೇಲಿನ ವೇದಿಕೆಯಲ್ಲಿ, ಆ ಬೃಹತ್ ಸಭೆ ನೋಡಿ ಬಂಗಾರಪ್ಪನವರು ತುಂಬಾ ಖುಷಿಯಿಂದ ಚುನಾವಣಾ ವೆಚ್ಚಕ್ಕಾಗಿ ಹಣ ಕಳಿಸುವುದಾಗಿ ಹೇಳಿದಾಗ ನಾನು ನಯವಾಗಿ ನಿರಾಕರಿಸಿದೆ, ಹಾಗಾದರೆ ಚುನಾವಣೆ ಹೇಗೆ ನಡೆಸುತ್ತೀರಿ? ಅಂತ ಅವರು ಪ್ರಶ್ನಿಸಿದಾಗ ನಾನು ಮತ್ತು ನನ್ನ ಗೆಳೆಯರು ಹೇಗೋ ಚುನಾವಣೆ ನಡೆಸುತ್ತೇವೆ ನಮಗೆ ಹಣ ಬೇಡ ಅಂದಿದ್ದೆ ವಾಸ್ತವವಾಗಿ ನನ್ನದು ಹಣವಿಲ್ಲದ ಚುನಾವಣಾ ರಾಜಕೀಯ ಆಗಿತ್ತು.
ಆ ಸಂದರ್ಭದಲ್ಲಿ ನನ್ನ ನಿರಾಕರಣೆಯ ಮದ್ಯದಲ್ಲಿಯೇ ಹರನಾಥ ರಾಯರು ಅವರ ಸ್ವಂತದ್ದಾದ ಹತ್ತು ಸಾವಿರ ರೂಪಾಯಿ ಒತ್ತಾಯದಿಂದ ನಮ್ಮ ಹೋಬಳಿಯ ಚುನಾವಣಾ ಪ್ರಚಾರ ವೆಚ್ಚವಾಗಿ ಅವರ ವೈಯಕ್ತಿಕ ದೇಣಿಗೆ ನೀಡಿದ್ದರು.
ಹರನಾಥ ರಾಯರು ಬಂಗಾರಪ್ಪರನ್ನು ಯಾಕೆ ಇಷ್ಟು ಬೆಂಬಲಿಸುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿದಿತ್ತು ಮತ್ತು ಹರತಾಳು ಹಾಲಪ್ಪನವರ ಗಳಸ್ಯ ಕಂಠಸ್ಯ ಸಂಬಂದಕ್ಕೆ ಕಾರಣ ಏನು ಎಂಬ ಪ್ರಶ್ನೆ ಹಾಗೇ ಉಳಿದಿತ್ತು.
ನಿನ್ನೆ ಸಾಗರದ ಪ್ರತಿಷ್ಟಿತ ಲಾಲ್ ಬಹದ್ದೂರು ಶಾಸ್ತ್ರೀ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಹರನಾಥ ರಾಯರು, ಸಾಗರದ ವರದಶ್ರೀ ಲಾಡ್ಜನ ಮಾರಿಕರಾದ ಕವಲಕೋಡು ವೆಂಕಟೇಶ್, ಲಕ್ಷ್ಮೀನಾರಾಯಣ ಬೆಳೆಯೂರು ಮತ್ತು ಹೊಸನಗರ ತಾಲ್ಲೂಕಿನ ಮಡವಳ್ಳಿಯ ಗೌಡರು ಬಂದಾಗ ಅದಕ್ಕೆ ಉತ್ತರ ದೊರೆಯಿತು.
ಈ ಸಂಸ್ಥೆಯ ಆಡಳಿತ ಮಂಡಳಿ ಸವ೯ ಸದಸ್ಯರ ಸಭೆಯಲ್ಲಿ ಉಪಾದ್ಯಕ್ಷ ಶ್ರೀಪಾದ ನಿಸ್ರಾಣಿ ಮತ್ತು ಕಾಯ೯ದರ್ಶಿ ಜಗದೀಶ್ ಗೌಡರ ಮೇಲೆ ನಡೆದ ಹಲ್ಲೆಯೇ ಈ ಬಾರಿಯ ಸಾಗರ ವಿಧಾನ ಸಭಾ ಚುನಾವಣೆಯ ಮುಖ್ಯ ವಿಷಯವಾಗಿದೆ.
ಸಾಗರ ವಾರ್ತಾ ಎ.ಡಿ. ರಾಮಚಂದ್ರ, ಕೆ.ಜಿ. ಶಿವಪ್ಪ, ಹರತಾಳು ಹಾಲಪ್ಪ ಮತ್ತು ಆಗಿನ ಮುಖ್ಯಮಂತ್ರಿ ಬಂಗಾರಪ್ಪರ ಸಹಾಯದಿಂದ ಆಪ್ಸ್ ಕೋಸ್ ಉಳಿಸಿಕೊಂಡ ಅವರ ಮನದಾಳದ ಉಪಕಾರ ಸ್ಮರಣೆ ಮಾಡಿದ್ದಾರೆ.
#ನಾಳಿನ_ಭಾಗದಲ್ಲಿ_ಹರತಾಳುಹಾಲಪ್ಪ_ಗೋಪಾಲಕೃಷ್ಣಬೇಳೂರು_ದಿವಾಕರ್_ವಕೀಲರು_ಬಗ್ಗೆ
#ಮತ್ತುಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಶ್ರೀಪಾದ_ನಿಸ್ರಾಣಿ_ಅವರ_ಮೇಲೆ_ನಡೆದ_ಹಲ್ಲೆಯ_ಪರಿಣಾಮದ_ಬಗ್ಗೆ
#ಹರನಾಥರ_ಅಭಿಪ್ರಾಯ.
Comments
Post a Comment