Blog number 1480. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಮ್ಮ ಲಾಡ್ಜ್ ಗೆ ಕರೆ ತಂದ ಗೆಳೆಯ ಗೋಪಾಲಕೃಷ್ಣ ಬೇಳೂರು (1 - ಮೇ -2023)
https://youtu.be/Jdc2hrZaRgs
#ಹ್ಯಾಟ್ರಿಕ್_ಹೀರೋ_ಶಿವರಾಜ್_ಕುಮಾರ್_ನಮ್ಮ_ಹೊಂಬುಜ_ಲಾಡ್ಜನಲ್ಲಿ.
#ಅವರನ್ನು_ಕರೆತಂದವರು_ಗೆಳೆಯ_ಗೋಪಾಲಕೃಷ್ಣ_ಬೇಳೂರು_ಕಾಂಗ್ರೇಸ್_ಅಭ್ಯರ್ಥಿ
ನಿನ್ನೆ ಸಂಜೆ (1 ಮೇ 2023) ನಮ್ಮ ತಂದೆ ತಾಯಿ ಸ್ಮರಣಾರ್ಥ ನಿರ್ಮಿಸಿರುವ ಕಲ್ಯಾಣ ಮಂಟಪ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ನಿರಂತರವಾಗಿ ಮದುವೆ ಸಮಾರ೦ಭಗಳು ನಡೆಯುತ್ತಿದ್ದರಿಂದ ಅದರ ಸ್ವಚ್ಚತೆಯ ಮೇಲುಸ್ತುವಾರಿ ಮತ್ತು ಹಣ ಪಾವತಿಯ ಗಡಿಬಿಡಿಯಲ್ಲಿದ್ದೆ ಆಗ ಕಿರಿಯ ಗೆಳೆಯ ಶುಂಠಿ ವ್ಯಾಪಾರಿ ಪ್ರಮೋದ್ ಶೇಠ್ ಬಂದವರು ನಾನು ಅವರ ಪೋನ್ ತೆಗೆಯಲಿಲ್ಲ ಅಂದಾಗಲೇ ಗೊತ್ತಾಗಿದ್ದು ಮ್ಯೂಟ್ ಮಾಡಿದ್ದ ಸೆಲ್ ಫೋನಿನಲ್ಲಿ ಅನೇಕ ಅವರ ಮಿಸ್ ಕಾಲ್ ಗಳು.
ಕೆಲವೇ ನಿಮಿಷಗಳಲ್ಲಿ ಸಾಗರ ವಿದಾನ ಸಭಾ ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣಬೇಳೂರು ಚಲನಚಿತ್ರ ನಟ ಶಿವರಾಜ್ ಕುಮಾರ್, ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಸೊರಬದ ಕಾಂಗ್ರೇಸ್ ಅಭ್ಯರ್ಥಿ ಮದು ಬಂಗಾರಪ್ಪ ಅವರನ್ನು ಕರೆತರುತ್ತಿದ್ದಾರೆ ನಿಮ್ಮ ಲಾಡ್ಜ್ ನಲ್ಲಿ ಒಂದು ಟೀ ಬ್ರೇಕ್ ಮತ್ತು ಪ್ರೆಶಪ್ ಗೆ ಅಂದರು.
ಕೆಲವೇ ನಿಮಿಷದಲ್ಲಿ ನಮ್ಮ ಯಡೇಹಳ್ಳಿ ಸರ್ಕಲ್ ಗೋಪಾಲಕೃಷ್ಣ ಬೇಳೂರು - ಶಿವರಾಜ್ ಕುಮಾರ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿರುವಾಗಲೇ ಅವರ ವಾಹನ ನಮ್ಮ ಲಾಡ್ಜ್ ಅವರಣ ಪ್ರವೇಶಿಸಿತು ತಕ್ಷಣ ಪೋಲಿಸರು ಗೇಟ್ ಲಾಕ್ ಮಾಡಿದರು.
ಹೊಸನಗರ ರಿಪ್ಪನ್ ಪೇಟೆ ರೋಡ್ ಶೋ ನಂತರ ನಮ್ಮ ಆನಂದಪುರಂ ರೋಡ್ ಶೋ ನಂತರ ಸಾಗರದಲ್ಲಿ ಸಂಜೆ ರೋಡ್ ಶೋ ವ್ಯವಸ್ಥೆ ಮಾಡಿದ್ದರು.
ಮಲ್ಲಿಕಾರ್ಜುನ ಹಕ್ರೆ, ಹಂದಿಗನೂರು ನಾಗರಾಜ್,ಜ್ಯೋತಿ ಮುರುಳಿದರ್, ಕಲಗೋಡು ರತ್ನಾಕರ್ ಜೊತೆ ಸ್ಥಳಿಯ ಮುಖಂಡರುಗಳಾದ ಗೌತಮಪುರದ ಅಮರ್ ಶೆಟ್ಟರು, ಬೋರ್ ವೆಲ್ ಮಂಜುನಾಥ್, ಆಚಾಪುರ ವಿಜಯ ಗೌಡರು, ಪ್ರಮೋದ್ ಶೇಟ್,ಜೇನಿ ರಾಜು, ಆಚಾಪುರದ ವರ್ಕಶಾಪ್ ಮುನ್ನಾ....ಹೀಗೆ ಅನೇಕರು ಒಳಗಿದ್ದರೆ ಗೇಟಿನ ಹೊರಗೆ ಅಸಂಖ್ಯ ಅಭಿಮಾನಿಗಳಿದ್ದರು.
ಶಿವರಾಜ್ ಕುಮಾರ್ ಸಕ್ಕರೆ ರಹಿತ ಕಾಫಿ ಕುಡಿದರು ನಮ್ಮ ಮಲ್ಲಿಕಾ ವೆಜ್ ಕಾಫಿ ತುಂಬಾ ಚೆನ್ನಾಗಿದೆ ಅಂದರು ಮತ್ತು ಅವರ ವಾಹನದಲ್ಲಿನ ಪ್ಲಾಸ್ಕಿನಲ್ಲಿ ಕಾಫಿ ತುಂಬಿಸಲು ಅವರ ಸಿಬ್ಬಂದಿಗಳಿಗೆ ಹೇಳಿದ್ದಾಗಿ ತಿಳಿಸಿದರು.
ನಮ್ಮ ಎಲ್ಲಾ ಸಿಬ್ಬಂದಿಗಳ ಜೊತೆ ಪೋಟೋ ನಂತರ ಸಂಸ್ಥೆಯ ಮಾಲಿಕರಾದ ನಮ್ಮ ಪರಿಚಯ ಗೋಪಾಲಕೃಷ್ಣ ಬೇಳೂರು ಮಾಡಿದರು, ನಮ್ಮ ಜೊತೆ ಆತ್ಮೀಯವಾಗಿ ಕುಶಲೋಪರಿ ಜೊತೆ ಪೋಟೋ ನಂತರ ಕಾರ್ಯಕ್ರಮಕ್ಕೆ ಹೊರಟರು.
ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಜೊತೆ ಇದ್ದ ಗೆಳೆಯರೆಲ್ಲ ನಾನು ರಾಜಕೀಯ ನಿವೃತ್ತಿ ಹೊಂದಿದ ನಂತರ ಎಲ್ಲಾ ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ ಅವರಿಗೆಲ್ಲ ಅವರು ಎಲ್ಲೇ ಇದ್ದರೂ ನನ್ನ ಅಭ್ಯಂತರ ಇಲ್ಲವಾದ್ದರಿಂದ ಆಗಾಗ ಬಂದು ಅವರವರ ಪಕ್ಷದ ಬಗ್ಗೆ ಅಭ್ಯರ್ಥಿ ಬಗ್ಗೆ ಚರ್ಚಿಸುತ್ತಿರುತ್ತಾರೆ.
ಗೋಪಾಲಕೃಷ್ಣ ಬೇಳೂರು 2 ಬಾರಿ ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಸ್ವಂತ ಮಾವ ಕಾಗೋಡು ತಿಮ್ಮಪ್ಪರನ್ನ ಸೋಲಿಸಿ ಶಾಸಕರಾದವರು, 2013 ರಲ್ಲಿ ಬಿಜಿಪಿ ತ್ಯಜಿಸಿ ಜೆಡಿಎಸ್ ನಿಂದ ಸ್ಪರ್ದಿಸಿದ್ದಾಗ ನಾನು ಸಾಗರ ತಾಲೂಕಿನ ಜೆಡಿಎಸ್ ಅಧ್ಯಕ್ಷ ಆ ಚುನಾವಣೆಯಲ್ಲಿ ಕಾಗೋಡು ವಿಜೇತರಾಗಿ ಸ್ಪೀಕರ್ ಮಂತ್ರಿ ಆದರು.
2014ರ ಲೋಕಸಭಾ ಚುನಾವಣೆಯಲ್ಲಿ ಬೇಳೂರು ಪುನಃ ಬಿಜೆಪಿ ಸೇರಿ ಯಡ್ಯೂರಪ್ಪರ ಪರ ಪ್ರಚಾರ ಮಾಡಿದರು, 2018ರ ವಿಧಾನಸಭಾ ಚುನಾವಣೆಯಲ್ಲಿ ಹರತಾಳು ಹಾಲಪ್ಪರಿಗೆ ಬಿಜೆಪಿ ಟಿಕೇಟು ನೀಡಿದ್ದರಿಂದ ಗೋಪಾಲಕೃಷ್ಣ ಬೇಳೂರು ಕಾಂಗ್ರೇಸ್ ಸೇರಿ ಕಾಗೋಡು ತಿಮ್ಮಪ್ಪರ ಪರ ಪ್ರಚಾರ ಮಾಡಿದ್ದರು ಆ ಚುನಾವಣೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ವಿಜೇತರಾದರು.
ಈಗ 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಗೋಪಾಲಕೃಷ್ಣ ಬೇಳೂರು ಮತ್ತು ಬಿಜೆಪಿಯಿಂದ ಹಾಲಿ ಶಾಸಕರಾದ ಹರತಾಳು ಹಾಲಪ್ಪ ಸ್ಪರ್ಧಿಸಿದ್ದಾರೆ, ಸಮೀಕ್ಷೆಗಳು ಟಪ್ ಪೈಟ್ ಎನ್ನುತ್ತಿದೆ, ಕಾಗೋಡು ತಿಮ್ಮಪ್ಪರ ಪುತ್ರಿ ಡಾಕ್ಟರ್ ರಾಜನಂದಿನಿ, ಆನಂದಪುರಂನ ಪ್ರಬಾವಿ ರಾಜಕಾರಣಿ ರತ್ನಾಕರ ಹೊನಗೋಡು ಬಿಜೆಪಿ ಸೇರಿದ್ದಾರೆ, ಖ್ಯಾತ ಹೈಕೋರ್ಟ್ ವಕೀಲರಾದ ದಿವಾಕರ್ ಆಮ್ ಆದ್ಮಿಯಿಂದ, ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಪಕ್ಷೇತರರಾಗಿ, ಜೆಡಿಎಸ್ ನಿಂದ ಜಾಕೀರ್, ಕೊಡೂರಿನ ಕಾಂಗ್ರೇಸ್ ಮುಖಂಡ ಈಶ್ವರಪ್ಪ ಗೌಡರ ಪುತ್ರ ಮತ್ತು ಇನ್ನಿಬ್ಬರು ಪಕ್ಷೇತರರು ಸ್ಪರ್ದೆ ಮಾಡಿದ್ದಾರೆ ಎಲ್ಲರೂ ನನ್ನ ಗೆಳೆಯರೆ ಆಗಿದ್ದಾರೆ.
ಹರತಾಳು ಹಾಲಪ್ಪ ಮತ್ತು ಗೋಪಾಲಕೃಷ್ಣ ಬೇಳೂರು ಅವರ ಪಕ್ಷಗಳಲ್ಲಿ ಕಾಯ೯ಕರ್ತರ ನಿರೀಕ್ಷೆ ಇಬ್ಬರೂ 25 ಸಾವಿರಕ್ಕೂ ಅಧಿಕ ಲೀಡ್ ಪಡೆಯುವ ಆತ್ಮವಿಶ್ವಾಸ ಹೊಂದಿದ್ದಾರೆ.
ಜನರ ಅಭಿಪ್ರಾಯದ ಸರ್ವೆಗಳು ಟಪ್ ಪೈಟ್ ಇದೆ, ಆಮ್ ಆದ್ಮಿ, ಜೆಡಿಎಸ್ ಮತ್ತು ಪಕ್ಷೇತರರು ಪಡೆಯುವ ಮತಗಳು ಪಲಿತಾಂಶವನ್ನು ಬದಲಿಸಲು ಸಾಧ್ಯವಿದೆ ಅನ್ನುತ್ತಿದೆ ಆದರೆ ಬಿಜೆಪಿ ಮತ್ತು ಕಾಂಗ್ರೇಸ್ ಇದನ್ನು ಒಪ್ಪುವುದಿಲ್ಲ.
ಹಾಲಿ ಚುನಾವಣೆಯಲ್ಲಿ ಗೋಪಾಲಕೃಷ್ಣ ಬೇಳೂರು ಮೊದಲ ಹಂತದ ಪ್ರಚಾರದಲ್ಲಿ ಮುಂದಿರುವುದು ಗೋಚರಿಸುತ್ತಿದೆ ಕ್ರಮೇಣ ಬಿಜೆಪಿ ಕೂಡ ವ್ಯವಸ್ಥಿತವಾಗಿ ಮುಂದೆ ಬರುತ್ತಿರುವುದು ಅಷ್ಟೇ ವಾಸ್ತವ ಕೂಡ.
Comments
Post a Comment