Skip to main content

Posts

Showing posts from May, 2022

Blog number 878, ನಮ್ಮ ಸುರಕ್ಷತೆಗಾಗಿ ಗ್ಯಾಸ್ ಪೈಪ್ ಲೈನ್ ಮಾಡಿಸಿ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯ ಹೊರಗೆ ಅಳವಡಿಸಲು ಸೂಕ್ತ ವ್ಯಕ್ತಿ ಶಿವಮೊಗ್ಗದ ಮೊಹಮ್ಮದ್ ವಾಸಿಂ, ಮನೆ- ಹೋಟೆಲ್ - ಕಲ್ಯಾಣ ಮಂಟಪ - ಆಹಾರ ಉದ್ಯಮ ಇದನ್ನು ಅಳವಡಿಸಿಕೊಳ್ಳಬೇಕು.

#ನನ್ನ_ಮತ್ತು_ಶಿವಮೊಗ್ಗದ_ಮೊಹಮದ್_ವಾಸೀಮ್_ವ್ಯವಹಾರದ_ಗೆಳೆತನಕ್ಕೆ_ದಶಕದ_ಹರೆಯ. #ಹೋಟೆಲ್_ಮತ್ತು_ಗೃಹಬಳಕೆಗೆ_ಎಲ್_ಪಿ_ಜಿ_ಗ್ಯಾಸ್_ಪೈಪ್_ಲೈನ್_ಅತ್ಯುತ್ತಮವಾಗಿ_ಅಳವಡಿಸಿಕೊಡುತ್ತಾರೆ. #ಇದರಿಂದ_ನೂರಕ್ಕೆ_ನೂರು_ಗ್ಯಾಸ್_ಅವಘಡ_ತಡೆಯಬಹುದು. #ಆಹಾರ_ಉದ್ಯಮ_ಕಲ್ಯಾಣಮಂಟಪ_ಹೋಟೆಲ್_ಮತ್ತು_ಮನೆಗೂ_ಅಳವಡಿಸಿಕೊಳ್ಳುವುದು_ಉತ್ತಮ.   ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ನೇರವಾಗಿ ಅಡುಗೆ ಮನೆಯ ಒಳಗೆ ತಂದು ಒಲೆಗೆ ಅಳವಡಿಸಿ ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆದರೆ, ಗ್ಯಾಸ್ ಪೈಪ್ ಒಡೆದರೆ, ಅಡುಗೆ ಉಕ್ಕಿ ಬನ೯ರ್ ಬೆಂಕಿ ನಂದಿದರೆ,ಮರೆತು ಗ್ಯಾಸ್ ಆಫ್ ಮಾಡದಿದ್ದರೆ ಲೀಕಾದ ಗ್ಯಾಸ್ ಎಲೆಕ್ಟ್ರಿಕ್ ಸ್ವಿಚ್ ಆನ್ ಮಾಡಿದರೆ ಅಥವ ಯಾವುದೇ ರೀತಿಯ ಬೆಂಕಿ ಕಿಡಿಯಿಂದ ಅಗ್ನಿ ಅವಘಡಗಳು ಸಂಭವಿಸಿದರೆ ಆಗ ಒಳಗಿರುವ ಗ್ಯಾಸ್ ಸಿಲಿಂಡರ್ ಸೇರಿ ದೊಡ್ಡ ಅಗ್ನಿ ದುರಂತ ಶತಸಿದ್ದ .    ಹೋಟೆಲ್ ಗಳಲ್ಲಿ, ಪಾಸ್ಟ್ ಫುಡ್ ಗಳಲ್ಲಿ, ಆಹಾರ ಉತ್ಪನ್ನ ಕೈಗಾರಿಕೆಯಲ್ಲಿ ಹೆಚ್ಚು ಪ್ರೆಶರ್ ನಲ್ಲಿ ಗ್ಯಾಸ್ ಒಲೆ ಬಳಸುವುದರಿಂದ ಯಾವುದೇ ಕಾರಣಕ್ಕೂ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯಲ್ಲಿ ಇಡುವುದು ಅಪಾಯ.   2012ರಲ್ಲಿ ನಾನು ನನ್ನ ಕಲ್ಯಾಣ ಮಂಟಪ, ಮಲ್ಲಿಕಾ ವೆಜ್ ಮತ್ತು ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ತೀರ್ಮಾನಿಸಿ ಒಬ್ಬರಿಗೆ ಗುತ್ತಿಗೆ ಕೊಟ್ಟೆ ಆದರೆ ಅವರ ಅನನುಭವಿ ಕೆಲಸ ನನಗೆ ತೃಪ್ತಿ ತರಲಿಲ್ಲ.

Blog number 877, ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಗೆ ಕಪ್ಪು ಚುಕ್ಕೆ ಆದ ಭಾರತ್ ಕಿಸಾನ್ ಯುನಿಯನ್ ಮುಖಂಡರಾದ ರಾಕೇಶ್ ಟಿಕಾಯಿತರ ಮೇಲೆ ಪತ್ರಿಕಾಗೋಷ್ಟಿಯಲಿ ಮಾಡಿದ ಹಲ್ಲೆ.

#ಭಾರತ್_ಕಿಸಾನ್_ಯುನಿಯನ್_ರಾಕೇಶ್_ಟಿಕಾಯಿತರ_ಮೇಲೆ_ಹಲ್ಲೆ #ಕರ್ನಾಟಕ_ರಾಜ್ಯದ_ಸಾಂಸ್ಕೃತಿಕ_ಶ್ರೀಮಂತಿಕೆಗೆ_ಕಪ್ಪು_ಚುಕ್ಕೆ. #ಪ್ರಜಾಪ್ರಭುತ್ವಕ್ಕೆ_ಅಪಹಾಸ್ಯ_ಮಾಡುವಂತ_ಘಟನೆಗಳು_ಮರುಕಳಿಸದಿರಲಿ. #ನಮ್ಮ_ದೇಶದ_ಬೃಹತ್_ಸಂಘಟನೆಯ_ನೇತಾರರಿಗೆ_ಆದ_ನೋವಿಗೆ_ವಿಷಾದವಿದೆ.     ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಶಾಹಿಯನ್ನು ವಿರೋದಿಸುವ ಜನಸಾಮಾನ್ಯನು ಸಮಾಜದಲ್ಲಿ ನಿರ್ಬೀತಿಯಿಂದ ಬದುಕುವ ವಾತಾವರಣ ಸೃಷ್ಟಿಯಾದರೆ ಅದೇ ನಿಜ ಪ್ರಜಾಪ್ರಭುತ್ವ ಅಂತ ವ್ಯಾಖ್ಯಾನಿಸುತ್ತಾರೆ.    ಅದರಲ್ಲೂ ಕರ್ನಾಟಕ ರಾಜ್ಯ ದೇಶದ ಬೇರೆಲ್ಲ ರಾಜ್ಯಕ್ಕಿಂತ ಹೆಚ್ಚು ಸುಸಂಸ್ಕೃತರು ಇರುವ ಸಾಂಸ್ಕೃತಿಕ ಸಿರಿವಂತರ ನಾಡು ಎಂಬ ಪ್ರತೀತಿ ಇದೆ.   ಆದರೆ ಇವತ್ತು ದೇಶದ ಅತಿದೊಡ್ಡ ರೈತ ಸಂಘಟನೆ ಬಾರತ್ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ರನ್ನೆ ಗುರಿಯಾಗಿಸಿ ಹಲ್ಲೆ ಮಾಡಿ ಕಪ್ಪು ಮಸಿ ಬಳಿದ ಘಟನೆ ಖಂಡನೀಯ.   ಈ ದುಷ್ಟ ಕೆಲಸಕ್ಕೆ ಅವರು ಕನ್ನಡದ ಹೆಸರು ಮತ್ತು ದೇಶದ ಪ್ರಧಾನಿ ಮೋದಿ ಹೆಸರು ಬಳಸಿದ್ದಾರೆ ಹಾಗಂತ ಈ ದುಷ್ಕೃತ್ಯಕ್ಕೆ ಇಡೀ ರಾಜ್ಯದ ಕನ್ನಡಿಗರು ಹೊಣೆಯಲ್ಲ ಹಾಗೆಯೇ ದೇಶದ ಪ್ರಧಾನಿ ಅಥವ ಅವರ ಪಕ್ಷವೂ ಕೂಡ ಹೊಣೆಯಲ್ಲ ಆದರೆ ಇದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಗೆ ಒ0ದು ಕಪ್ಪು ಚುಕ್ಕೆ ಮಾತ್ರ.   ಈಗ ಅನೇಕರ FB ವಾಲ್ ನಲ್ಲಿ ದೊಡ್ಡ ದೊಡ್ಡ ಜನ ಬರೆದು ಕೊಂಡಿದ್ದು ನೋಡಿ ಅದರಲ್ಲಿ ಈ ಕಿಡಿಗೇಡಿತನವನ್

Blog number 876, ಹಿಂಸೆಗೆ ತಿರುಗಿದ ಕೆರೆ ಬೇಟೆ, ಜಿಲ್ಲಾಡಳಿತ ಇದಕ್ಕೊಂದು ನಿಯಮ ಗೊತ್ತುಪಡಿಸಬೇಕು, ಆಯೋಜಕರೂ ಕೆರೆ ವಿಸ್ತಿರ್ಣ ಮತ್ತು ಕೆರೆಯಲ್ಲಿ ಸಿಗಬಹುದಾದ ಮೀನಿನ ಪ್ರಾಮಾಣ ನೋಡಿ ಪ್ರವೇಶ ಮಿತಿಗೊಳಿಸಬೇಕು.

#ಹಿಂಸಾಚಾರಕ್ಕೆ_ತಿರುಗಿದ_ಕೆರೆಬೇಟೆ #ಜಿಲ್ಲಾಡಳಿತ_ಇದಕ್ಕೊಂದು_ನಿಯಮ_ಗೊತ್ತು_ಮಾಡಬೇಕು. #ಪೋಲಿಸರ_ಅನುಮತಿ_ಜೊತೆಗೆ_ಕೆರೆಬೇಟೆಗೆ_ನಿರ್ದಿಷ್ಟ_ಜನರಿಗೆ_ಮಾತ್ರ_ಅವಕಾಶ_ನೀಡಬೇಕು.   ನನ್ನ ಮನೆ ಕೆರೆ ಅಂಚಿನಲ್ಲಿದೆ ಆದ್ದರಿಂದ ಕೆರೆಯ ಮೀನು ಶಿಕಾರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು.   ಮೀನು ಶಿಕಾರಿಗೆ ಬೇಕಾದ ಏಕಾಗ್ರತೆ ಮತ್ತು ತಾಳ್ಮೆ ಇಲ್ಲದಿದ್ದರೆ ಮೀನು ಸಿಗುವುದು ದೂರದ ಮಾತು.    ಮೀನುಗಾರಿಕಾ ಇಲಾಖೆ/ ಗ್ರಾಮ ಪಂಚಾಯತ್ ಗಳು ಕೆರೆಗಳನ್ನು ಹರಾಜು ಮಾಡಿ ಆದಾಯ ಪಡೆಯಲು ಶುರು ಮಾಡಿದ ಮೇಲೆ ಹರಾಜು ಹಿಡಿದವ ತಾನು ವಿನಿಯೋಗಿಸಿದ ಬಂಡವಾಳದ ಮೇಲೆ ಲಾಭ ಪಡೆಯಲು ಈ ಕೆರೆ ಬೇಟೆ ಎಂಬ ಕ್ರೀಡೆಯಂತಹ ಮೀನು ಶಿಕಾರಿಗೆ ಖದರು ಬಂತು.   40-50 ವರ್ಷದ ಹಿಂದೆ 50 ರಿಂದ 100 ಕೂಣಿ (ಮೀನು ಹಿಡಿಯುವ ಬಿದಿರಿನ ಸಾದನ ) ಬಂದರೆ ಹೆಚ್ಚು, 40 ಎಕರೆ ವಿಸ್ತಿರ್ಣದ ಕೆರೆಯಲ್ಲಿ ನೂರು ಜನರಿಗೆ ಯಥೇಚ್ಚ ಮೀನು ಸಿಗುತ್ತಿತ್ತು ಆಗೆಲ್ಲ ಕೆರೆ ಬೇಟೆಗೆ ಕೂಣಿಗೆ 1ರೂಪಾಯಿ ಅಥವ 2 ರೂಪಾಯಿ ಇರುತ್ತಿತ್ತು ಆದರೆ ಆ ಕಾಲದಲ್ಲಿ ಇದು ದುಬಾರಿ ಅಂತ ಬೇಟೆಗಾರರು ತಗಾದೆ ತೆಗೆಯುತ್ತಿದ್ದರು.    ಆ ಕಾಲದಲ್ಲಿ ಕೆರೆಯಲ್ಲಿ ಸಿಗುತ್ತಿದ್ದ ಕುಚ್ಚು, ಮುರುಗೋಡು ಮತ್ತು ಚೇಳಿ ಮೀನಿನ ತಳಿಗಳು ಈಗ ಇಲ್ಲವೇ ಇಲ್ಲ.   ನಿನ್ನೆ ಪಕ್ಕದ ಸಿದ್ದಾಪುರ ತಾಲ್ಲೂಕಿನ ಕಾನಗೋಡಿನ ಕೆರೆ ಬೇಟೆ ಸದರಿ ಕೆರೆ ಮೀನು ಸಾಕಾಣಿಕೆ ಮಾಡುತ್ತಿರುವ ಊರಿನ ದೇವಸ್

Blog number 875, ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ಅಮೂರ್ತ ವೇಳೆಯಲ್ಲಿ ನನ್ನ ಮದುವೆ ಆಗಿ 33 ವರ್ಷ ಆಗಲಿದೆ, ಮದುವೆ ಮಾಡಿಸಿದವರು ಪ್ರದಾನ ಅರ್ಚಕರಾದ ವಿಶ್ವ ಹಿಂದೂ ಪರಿಷತ್ ಸಂತ ಸಮಾವೇಶದ ಸಂಚಾಲಕರಾದ ನರಸಿಂಹಮೂರ್ತಿ ಆಯ್ಯಂಗಾರರು

#ಶಿವಮೊಗ್ಗದ_ಕೋಟೆ_ಆಂಜನೇಯ_ದೇವಸ್ಥಾನ. #ಕೆಳದಿ_ಅರಸರ_ಶಿವಮೊಗ್ಗ_ಕೋಟೆಯ_ಆಂಜನೇಯ #ಇಲ್ಲಿನ_ಅರ್ಚಕರಾಗಿದ್ದ_ನರಸಿಂಹಮೂರ್ತಿ_ಅಯ್ಯಂಗಾರ್ #ನನ್ನ_ಮದುವೆ_ಮಾಡಿಸಿದವರು.   1989 - ಆಗಸ್ಟ್ -23 ರಂದು ನನ್ನ ಮದುವೆ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯಲ್ಲಿ ನಿಗದಿ ಆಗಿತ್ತು, ವಿವಾಹ ಆಹ್ವಾನ ಪತ್ರಿಕೆ ಇಲ್ಲ, ಕೆಲವೇ ಕೆಲವು ಆಪ್ತರ ಸಾಕ್ಷಿಯಾಗಿ ನನ್ನ ಮದುವೆ.   ಇದಕ್ಕೂ ಒ0ದು ವರ್ಷ ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮನೆಯಲ್ಲಿ ಯಾರಿಗೂ ತಿಳಿಸದೆ ವಿವಾಹ ನೊಂದಾವಣೆ ಮಾಡಿಸಿದ್ದೆ.    ನನಗೆ ಗಾರ್ಡಿಯನ್ ಆಗಿ ಸಾಗರದ ತೀ.ನಾ. ಶ್ರೀನಿವಾಸ್ (ನಂತರರ ಸಾಗರ ಪುರಸಭೆ ಅಧ್ಯಕ್ಷರಾದರು - ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ನನ್ನ ಪತ್ನಿಗೆ ಗಾರ್ಡಿಯನ್ ಆಗಿ ಅವಳ ಸಹೋದರಿಯ ಬಾಡಿಗೆ ಮನೆ ಮಾಲಿಕರಾದ ಶ್ರೀ ಮತಿ ಮುತ್ತು ಮೇರಿಯಮ್ಮ ಸಹಿ ಮಾಡಿದ್ದರು.   ವಿವಾಹ ನೊಂದಾವಣೆ ಮಾಡಿದ್ದು ನನ್ನ ಪತ್ನಿಗೆ ಮುಂದೆ ಮದುವೆಗೆ ಏನಾದರೂ ಅಡೆತಡೆ ಬಂದರೂ ನಮ್ಮ ವಿವಾಹ ಖಾತ್ರಿ ಎಂದು ದೃಡೀಕರಿಸಲು ಮತ್ತು ಇದು ರಹಸ್ಯವಾಗಿಡಬೇಕೆಂಬುದು ನಮ್ಮ ಉದ್ದೇಶ ಆದರೆ ನಮ್ಮ ವಿವಾಹ ನೊಂದಾವಣಿಯನ್ನು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಸಾಗರದ ಸಬ್ ರಿಜಿಸ್ಟ್ರಾರ್ ಆಫೀಸಿನ ನೋಟೀಸ್ ಬೋರ್ಡಿಗೆ ಹಾಕುತ್ತಾರಂತ ಗೊತ್ತಿರಲಿಲ್ಲ.   ಪಕ್ಕದ ಟ್ರಜರಿಯಲ್ಲಿ ಉದ್ಯೋಗಿ ಆಗಿದ್ದ ನನ್ನಣ್ಣನ ಶಾಲಾ ಸಹಪಾಠಿ ಅಣ್ಣಪ್ಪನವರು ನನ್ನಣ್ಣನಿಗೆ ತಿಳಿ

Blog number number 874. ಶರಾವತಿ ಮುಳುಗಡೆ ಸಂತ್ರಸ್ಥರ ಊರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮಕ್ಕೆ ನನ್ನ ಬಸ್ ಪರ್ಮಿಟ್. ಆಗಿನ ಜಿಲ್ಲಾದಿಕಾರಿ ವಿಜಯ ಕುಮಾರರ ಕನಸಿನ ಗ್ರಾಮಾಂತರ ಸಾರಿಗೆ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು, ಪ್ರಸ್ತಾವಿಕ ಭಾಷಣ ಮಾಡಿದ ನಾನು.

#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಬೆಳ್ಳೂರಿನಲ್ಲಿ_ಜಿಲ್ಲಾದಿಕಾರಿ_ವಾಸ್ತವ್ಯ_ಇವತ್ತು  #ರಿಪ್ಪನ್ಪೇಟೆಯಿಂದ_14_ಕಿಮಿ_ದೂರ #ಅಭಯಾರಣ್ಯದ_ಮಧ್ಯೆ_ಶರಾವತಿ_ಮುಳುಗಡೆ_ಸಂತ್ರಸ್ಥರ_ಬೀಡು. #ಈ_ಹಳ್ಳಿಗೆ_ಬಸ್_ಸೌಕರ್ಯ_ನೀಡಿದ_ನನ್ನ_ಅನುಭವ. #ಆಗಿನ_ಉತ್ಸಾಹಿ_ಜಿಲ್ಲಾಧಿಕಾರಿ_ವಿಜಯಕುಮಾರರ_ಗ್ರಾಮಾಂತರ_ಸಾರಿಗೆ_ಯೋಜನೆ. #ಅದನ್ನು_ಶಿವಮೊಗ್ಗ_ನೆಹರೂ_ಸ್ಟೇಡಿಯಂನಲ್ಲಿ_ಉದ್ಘಾಟಿಸಿದ_ಆಗಿನ_ಮುಖ್ಯಮಂತ್ರಿ_ವೀರೆಂದ್ರಪಾಟೀಲರು. #ಪ್ರಸ್ತಾವಿಕ_ಭಾಷಣ_ಮಾಡಿದ_ನಾನು_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.   ಇವತ್ತು ಶಿವಮೊಗ್ಗ ಜಿಲ್ಲಾದಿಕಾರಿಗಳು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.   ಈ ಸಂದರ್ಭದಲ್ಲಿ 1992-93ರ ಒಂದು ಘಟನೆ ನೆನಪಾಯಿತು ಹಾಗಾಗಿ ಅದನ್ನು ಬರೆಯಲು ಅವಕಾಶ.   ಸುಮಾರು 30 ವರ್ಷದ ಹಿಂದೆ ನನಗೆ 26 ರ ಪ್ರಾಯ, ಹೊಸದು ಮತ್ತು ಹೊಸತನದ ಬಗ್ಗೆ ತೆರೆದುಕೊಳ್ಳುವ ಬಿಸಿ ರಕ್ತದ ಹುಮ್ಮಸ್ಸು, ಆಗ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರು ವಿಜಯ ಕುಮಾರ್.   ತಮಿಳುನಾಡಿನ ಮೂಲದ ಐ.ಎ.ಎಸ್ ಅಧಿಕಾರಿ ತುಂಬಾ ಜನಪರ ಕಾಳಜಿಯ ಜಿಲ್ಲಾಧಿಕಾರಿಗಳು ಅವರು ಶಿವಮೊಗ್ಗ ಜಿಲ್ಲೆಗೆ ಬಂದಾಗ ಇಲ್ಲಿನ ಅನೇಕ ಕುಗ್ರಾಮಗಳಿಗೆ ರಸ್ತೆ ಇದ್ದರೂ ಬಸ್ ಸೌಕರ್ಯ ಇರಲಿಲ್ಲ.    ಆ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿತ್

Blog number 873, 30 ನಂಬರ್ ಬ್ರಾಂಡ್ ಬೀಡಿ ಉಧ್ಯಮದ ಕಥೆ, ಸಂಸ್ಥಾಕ ಬಿ. ಮಂಜುನಾಥ ಪೈಯರ ಸಾದನೆ ಇವತ್ತೂ ಸ್ವಯ೦ ಉದ್ಯೋಗ ಮಾಡುವವರಿಗೆ ದಾರಿ ದೀಪ ಆಗಿರುವ ಆತ್ಮವಿಶ್ವಾಸದ ಪಥ.

#ಬೀಡಿ_ಏನಿದು_ನಿನ್ನ_ಮಹಿಮೆ. #ಭಾರತ್_ಬೀಡಿ_ವರ್ಕ್ಸನ_30_ನಂಬರ್_ಬೀಡಿ. #ವಿಶ್ವದಾದ್ಯಂತ_ಬೀಡಿ_ಪ್ರಿಯರಿದ್ದಾರೆ. #ಅಮೆರಿಕಾದಲ್ಲಿ_ನಮ್ಮ_ಬೀಡಿಗೆ_ಹೆಸರು_ಕನ್ವೆನ್ಷ್ನಲ್_ಸಿಗರೇಟು    ನಮ್ಮ ದುಮುಗಣ್ಣ ನನ್ನ ರೋಲ್ ಮಾಡಲ್ (ಡುಮಿಂಗ್ ರೆಬೆಲೋ) ನಮ್ಮ ಮನೆ ಮಗನಂತೆ ಇದ್ದವರು, ಸಿನಿಮಾ ಟಾಕೀಸಿನಲ್ಲಿ ಗೇಟ್ ಕೀಪರ್ ಆಗಿದ್ದರು.     ರಾತ್ರಿ ವಾಸ್ತವ್ಯ ಊಟ ನಮ್ಮ ಮನೆಯಲ್ಲಿ ಅದಕ್ಕೆ ಪ್ರತಿಫಲವಾಗಿ ಬೆಳಿಗ್ಗೆ ಬೇಗನೆ ಎದ್ದು ಸರ್ಕಾರಿ ಬಾವಿಯಿಂದ ನೀರು ತಂದು ಸ್ನಾನದ ಮನೆ ಹಂಡೆ ತುಂಬಿಸಿ, ಹಂಡೆ ಒಲೆ ಉರಿಸುತ್ತಿದ್ದರು ಅದಕ್ಕೆ ಬೇಕಾಗುವ ಕಟ್ಟಿಗೆ ಚಕ್ಕೆ ಅವರೇ ಕೊಡಲಿಯಿಂದ ಮಾಡಿಕೊಳ್ಳುತ್ತಿದ್ದರು.   ಅವರಿಗೆ ಇಡೀ ಮನೆಯಲ್ಲಿ ಒಡಾಡಲು ಅನುಮತಿ ಇದ್ದರೂ ಅಡುಗೆ ಮನೆ ಪ್ರವೇಶ ಮಾತ್ರ ನನ್ನ ಅಜ್ಜಿ ಕೊಟ್ಟಿರಲಿಲ್ಲ ಆದ್ದರಿಂದ ಮಧ್ಯಾಹ್ನ ಎಲ್ಲರೂ ಮಲಗಿದಾಗ ದುಮುಗಣ್ಣ ಬೀಡಿ ಒಂದನ್ನು ನನ್ನ ಕೈಗೆ ಕೊಟ್ಟು ಅದನ್ನು ಅಡುಗೆ ಮನೆಯ ಒಲೆಯಲ್ಲಿ ಉಳಿದಿರುತ್ತಿದ್ದ ಕಟ್ಟಿಗೆ ಬೆಂಕಿಯಲ್ಲಿ ಹಚ್ಚಿ ಕೊಡುವ ಕೆಲಸ.   ಅಷ್ಟೇ ಅಲ್ಲ ಬೀಡಿ ಬಾಯಲ್ಲಿ ಇಟ್ಟು ಅದರ ತುದಿ ಕಟ್ಟಿಗೆಯ ಬೆಂಕಿಯಲ್ಲಿ ತಾಗಿಸಿ ಉಸಿರು ಎಳೆದು ಹಚ್ಚಿ ಕೊಡುವ ಕೆಲಸ ನಮ್ಮದು, ಇದು ನಿಷಿದ್ದವಾದ್ದರಿಂದಲೇ ನಮಗೆ ಈ ಸಾಹಸ ಗುಟ್ಟಾಗಿ ಮಾಡಲು ಉತ್ಸಾಹ ಅಷ್ಟುಕ್ಕೂ ದುಮಿ೦ಗಣ್ಣರಿಗೆ ಈ ಮೂಲಕ ಸಹಾಯ ಮಾಡಲು ಪ್ರೇರಣೆ ನಾನು ಆನಂದಪುರಂ ಸಂತೆಯಿಂದ ತಂದ ಸಿನಿಮಾ ನೋಡುವ ಬೂತ ಕನ್ನಡಿ ಡಬ್ಬ

Blog number 872, ಮಲೆನಾಡಿನ ಸಂಪ್ರದಾಯಿಕ ಉಂಡೆ ಕಡಬು ರಾಜಮುಡಿ ಅಕ್ಕಿಯಲ್ಲಿ ತಯಾರಿಸಿದರೆ ವಿಶಿಷ್ಟ ರುಚಿ ಮತ್ತು ಘಮ ಇರುತ್ತದೆ.

#ರಾಜಮುಡಿ_ಅಕ್ಕಿಯಲ್ಲಿ_ಮಲೆನಾಡ_ಉ೦ಡೆಕಡಬು #ಉಂಡೆಕಡಬು_ಪಾಲೀಶ್_ಅಕ್ಕಿಯಲ್ಲಿ_ನೋಡಲು_ಚೆಂದ #ಸೆಮಿಪಾಲೀಶ್_ಅಕ್ಕಿ_ಅಥವ_ಕೆಂಪಕ್ಕಿ_ಉಂಡೆ_ಕಡುಬು_ಮಾತ್ರ_ಬಲುರುಚಿ.    ಮೈಸೂರಿನಲ್ಲಿ ಇರುವ ಇಂಜಿನಿಯರ್ ನಟರಾಜ್ ಒಂದು ಕಾಲದ ಮೈಸೂರು ಮಹಾರಾಜರ ನಿತ್ಯ ಊಟದ ಅಕ್ಕಿ ರಾಜಮುಡಿ ಅಕ್ಕಿ ಇವತ್ತು ಎಲ್ಲರಿಗೂ ಸುಲಭವಾಗಿ ಸಿಗುವು೦ತಾ ಅನುಕೂಲ ಮಾಡಿದ್ದಾರೆ.   ಕಳೆದ ಎರಡು ವರ್ಷದಿಂದ ನನಗೆ ಇವರ ಸೆಮಿ ಪಾಲೀಶ್ ರಾಜಮುಡಿ ಅಕ್ಕಿ VRLನಲ್ಲಿ ಕಳಿಸುತ್ತಾರೆ.   ಮಲೆನಾಡಿನ ಪಶ್ಚಿಮ ಘಟ್ಟದ ಉಂಡೆ ಕಡಬು ತುಂಬಾ ಪ್ರಸಿದ್ದ ಆದರೆ ಈಗಿನ ಪುಲ್ ಪಾಲೀಶ್ ಅಕ್ಕಿಯ ಉಂಡೆ ಕಡಬು ತನ್ನ ಮೂಲ ರುಚಿ ಕಳೆದುಕೊಂಡಿದೆ.   ಈಗಿನ ಮಕಳು "ಅಮ್ಮ ಇವತ್ತೇನೆ ತಿಂಡಿ" ಎಂದು ಕೇಳುವುದು ಅದಕ್ಕೆ ಅಮ್ಮ "ಇವತ್ತು ಉಂಡೆ ಕಡಬು ಚಟ್ನಿ" ಅಂದಾಗ ಮಕ್ಕಳು ಮುಖ ತಿರುಗಿಸುವ ಮಲ್ನಾಡ್ ಕಾರ್ಟೂನ್ ನಲ್ಲಿ ಪೂಜಾ ಹರೀಶ್ ರ ವಿಡಿಯೋ ವೈರಲ್ ಆಗಿತ್ತು.   ನನಗೂ ಉಂಡೆ ಕಡಬು ಅಂದರೆ ಆಲಸ್ಯ ಆಗಿತ್ತು, ಯಾಕಾದರೂ ಮನೇಲಿ ಮಾಡುತ್ತಾರೆ ಅಂತ ಅನ್ನಿಸುತ್ತಿತ್ತು.   ಪಾಲೀಶ್ ಅಕ್ಕಿಯ ಉಂಡೆ ಕಡಬು ನೋಡಲು ಅಚ್ಚ ಶುಭ್ರ ಬಿಳುಪು ಆದರೆ ರುಚಿ - ಅರೋಮ ಮಾತ್ರ ಇರುತ್ತಿರಲಿಲ್ಲ.   ಈಗ ರಾಜ ಮುಡಿ ಅಕ್ಕಿಯಲ್ಲಿ ಮಾಡುವ ಉಂಡೆ ಕಡುಬಿನ ರುಚಿಯೇ ಉಂಡೆ ಕಡಬು ತಿನ್ನಬೇಕೆನ್ನಿಸುತ್ತದೆ ಅದರ ಆರೋಮ ಕೂಡ ವಿಶಿಷ್ಟ.   ಇವತ್ತಿನ ರಾಜ ಮುಡಿ ಅಕ್ಕಿ ಬೆ

Blog number 871.ಹೆಲ್ತ್ ಟೂರಿಸಂ ಭಾಗವಾಗಿ ನನ್ನ ಕನಸಿನ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗಲಿದೆ ಇದು ಸುಸಜ್ಜಿತವಾದ ಸ್ಟಾರ್ ಕೆಟಗರಿಯ ವಸತಿ - ಊಟ ಸೌಲಭ್ಯದ ಜೊತೆ ಚಿಕಿತ್ಸೆಯನ್ನು ಸುಲಭವಾಗಿ ಅವರವರ ಬಜೆಟ್ ನಲ್ಲಿ ಪಡೆಯುವಂತೆ ಯೋಜಿಸಲಾಗುತ್ತದೆ.

#ಹೆಲ್ತ್_ಟೂರಿಸಂ #ಪ್ರವಾಸೋದ್ಯಮದ_ಅಂಗವಾಗಿ #ನನ್ನ_ಬಹುದಿನದ_ಕನಸು. #ಸದ್ಯದಲ್ಲೇ_ಪ್ರಾರಂಭವಾಗುವ_ಹಂತದಲ್ಲಿ #ಶಿವಮೊಗ್ಗ_ಜಿಲ್ಲೆಯಲ್ಲಿ_ಸುಂದರ_ಪರಿಸರದಲ್ಲಿ_ಎಲ್ಲಾ_ಸೌಕಯ೯_ಹೊಂದಿದ_ಮೊದಲ_ಚಿಕಿತ್ಸಾಕೇಂದ್ರವಿದು.      ಜೀವನದ ಕನಸುಗಳು ಕೆಲವು ಅದು ನನಸಾದರೆ ಏನಾದೀತು? ಗೊತ್ತಿಲ್ಲ ಆದರೆ ಅದು ನನಸಾಗುವ ತನಕ ಮನಸ್ಸಿಗೆ ವಿಶ್ರಾಂತಿ ಇಲ್ಲ.   ನನ್ನ ತಂದೆ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆ ಸೇರಿದ್ದರು, ಅವರ ಕುಶಲತೆ ಜ್ಞಾನವನ್ನು ನೋಡಿ ಆಗಿನ ಪ್ರಸಿದ್ದ ವೈದ್ಯರಾದ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ ಬೆಂಗಳೂರಿಗೆ  ಹೋಮಿಯೋಪತಿ ವೈದ್ಯ ಕಾಲೇಜಿಗೆ ಸೇರಿಸಿ ವೈದ್ಯರನ್ನಾಗಿಸಿ ಅವರು ಸ್ಥಳಿಯವಾಗಿ ಮತ್ತು ಬಟ್ಟೆ ಮಲ್ಲಪ್ಪದಲ್ಲಿ ಕ್ಲೀನಿಕ್ ಮಾಡಿ ಜನರ ಆರೋಗ್ಯ ಸೇವೆ ಮಾಡುವಂತೆ ಮಾಡುತ್ತಾರೆ.     1960-70 ರ ದಶಕದಲ್ಲಿ ಆನಂದಪುರಂ ಆಸ್ಪತ್ರೆಗೆ ಹೊಸನಗರ ತಾಲ್ಲೂಕಿನಿಂದ - ಶಿವಮೊಗ್ಗ ತಾಲ್ಲೂಕಿನ ಕುಂಸಿಯಿಂದ,ಶಿಕಾರಿಪುರ ತಾಲ್ಲೂಕಿನ ಸಾಲೂರಿನ ತನಕ ರೋಗಿಗಳು ಬರುತ್ತಿದ್ದರು.   ಆಪರೇಷನ್ ಕೂಡ ಮಾಡುತ್ತಿದ್ದರು, ಡಾಕ್ಟರ್ ಕೃಷ್ಣನ್ ಶ್ರೀಮಂತರು, ಕನಕಮ್ಮಳ್ ಆಸ್ಪತ್ರೆ ನಿರ್ಮಿಸಿದ ಅಯ್ಯಂಗಾರ್ ಕುಟುಂಬದ ವೆಂಕಟಾಚಲ ಅಯ್ಯಂಗಾರರು ಅಂಬಾಸಡರ್ ಕಾರು ಹೊಂದಿದ್ದರು ಹಾಗೆ ಡಾಕ್ಟರ್ ಕೃಷ್ಣನ್ ಕೂಡ ಅಂಬಾಸಡರ್ ಕಾರು ಹೊಂದಿದ್ದರು.   ಮಧ್ಯರಾತ್ರಿಯಲ್ಲಿ ಡಾಕ್ಟರ್ ಕೃಷ್ಣನ್ ಕಾರು ಹಾರನ್ ಕೇಳಿ ನಮ್ಮ ತಂದೆ ಗಡ

Blog number 870, ಸಾಗರ ಮೂಲದ ಹೈಕೋರ್ಟನ ಖ್ಯಾತ ವಕೀಲರಾದ ದಿವಾಕರ್ ವಕೀಲರು ಆಮ್ ಆದ್ಮಿ ಪಾರ್ಟಿ ಯಾಕೆ ಸೇರಿದರು?

#ಸಾಗರದ_ದಿವಾಕರ್_ವಕೀಲರು_ಹೈಕೋರ್ಟಿನ_ಪ್ರಖ್ಯಾತ_ವಕೀಲರು #ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದವರು #ಕೆ_ಎಸ್_ಐ_ಡಿ_ಸಿ_ನಿಗಮದ_ಅಧ್ಯಕ್ಷರಾಗಿದ್ದವರು #ಮೊನ್ನೆ_ದೆಹಲಿಯಲ್ಲಿ_ಕೇಜ್ರಿವಾಲರ_ಸಮ್ಮುಖ_ಆಮ್_ಆದ್ಮಿ_ಪಾರ್ಟಿ_ಸೇರಿದ್ದಾರೆ. #ಸಾಗರ_ವಿದಾನಸಭಾ_ಕ್ಷೇತ್ರದಿಂದ_ಸ್ಪರ್ಧಿಸಲು_ತಯಾರಿ_ನಡೆಸಿದ್ದಾರೆ.  https://youtu.be/NNHeMgE1qK0  ಇವತ್ತು ನಮ್ಮ ಲಾಡ್ಜ್ ನ ಲಿಪ್ಟ್ ಮೆಷಿನ್ ರೂಂ ಗೆ 30 ಅಡಿ ಎತ್ತರದ ಕಬ್ಬಿಣದ ಸ್ಟೇರ್ ಕೇಸ್ ಅಳವಡಿಸುವ ಸ್ವಲ್ಪ ಕಷ್ಟದ ಕೆಲಸ, ಮೈ ಮರೆತರೆ ಅಪಾಯದ ಕೆಲಸವೂ ಆದ ಕೆಲಸದಲ್ಲಿ ನಮ್ಮ ಕೆಲಸಗಾರರಿಗೆ ಅವರ ಕೆಲಸದಲ್ಲಿ ರಕ್ಷಣೆಯ ನೆಪದಲ್ಲಿ ಅವರ ಜೊತೆ ಇದ್ದೆ, ನಮ್ಮ ಕೆಲಸಗಾರರು ಕೆಲಸದ ಮಧ್ಯೆ ದೇಶದ ರಾಜಕೀಯನೂ ಮಾತಾಡುತ್ತಾರೆ, ಪ್ರತಿಯೊಬ್ಬರ ಮನೆಯಲ್ಲಿ ಟೀವಿ ಇದೆ, ಅಂಗೈಯಲ್ಲಿ ಮೊಬೈಲ್ ಹಾಗಾಗಿ ಅವರಿಗೆ ಪ್ರಚಲಿತ ವಿಷಯಗಳು ಗೊತ್ತಿರುತ್ತದೆ.     ಲಿಫ್ಟ್ ರೂಂನ 70 ಅಡಿ ಎತ್ತರದಲ್ಲಿ ಸ್ವಲ್ಪ ಕಸ ಇತ್ಯಾದಿ ಬಿದ್ದಿದ್ದು ಅದನ್ನು ತೆಗೆಯಲು ಪೊರಕೆ ಬೇಕು ಅಂದಾಗ ದೆಹಲಿಯ ಕೇಜ್ರಿವಾಲನ (ಸಾಮಾನ್ಯವಾಗಿ ಹಿಂದಿನಿಂದ ಎಲ್ಲರಿಗೂ ಏಕವಚನ ಬಳಸುತ್ತಾರೆ) ಪೊರಕೆನೆ ಈ ಸಾರಿ ಕರ್ನಾಟಕದಲ್ಲಿ ಗ್ಯಾರಂಟಿ ಅಂತ ಅವರವರೆ ಮಾತಾಡುತ್ತಿದ್ದರು.      ಯಾಕ್ರೋ ಬಿಜೆಪಿ-ಕಾಂಗ್ರೇಸ್ -ಜೆಡಿಎಸ್ ಬಿಟ್ರಾ?, ಅಂದೆ ಇನ್ನೇನಣ್ಣಾ ಎಲ್ಲರನ್ನೂ ನೋಡಿ ಆಯಿತು ಯಾರೂ ಉಪಯೋಗ ಇಲ್ಲ,

Blog number 869. ಪ್ರತಿ ಹಳ್ಳಿಯಲ್ಲೂ ಇಂತಹ ಮಾನಸಿಕ ರೋಗಿಗಳು ಇದ್ದಾರೆ, ಸ್ಯಾಡಿಸ್ಟ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ಇವರಿಗೆ ಹಳ್ಳಿಯಲ್ಲಿ ಮೂಕರ್ಜಿ ವೀರರೆಂದೇ ಹೆಸರು

#ಹಳ್ಳಿಗಳಲ್ಲಿ_ಮೂಕಜಿ೯_ವೀರರು #ಎಷ್ಟೋ_ಕುಟುಂಬ_ಹಾಳು_ಮಾಡುತ್ತಾರೆ. #ಇದು_ಮನೋರೋಗ #ನಮ್ಮ_ಸುತ್ತಲೂ_ಇಂತಾ_ಸ್ಯಾಡಿಸ್ಟ್_ಈಗಲೂ_ಇದ್ದಾರೆ.   ಹಳೆಯ ಗೆಳೆಯ ಕೆಲ ದಶಕದಿಂದ ಸಂಪರ್ಕ ಇಲ್ಲ, ನಿತ್ಯ ಕುಡುಕ ಬೇರೆ,ಒಂದು ಬೆಳ್ಳಂ ಬೆಳಿಗ್ಗೆ ಪೋನ್ ಮಾಡಿದ್ದ "ನಿನ್ನೆ ರಾತ್ರಿ ಕನಸು ಬಿತ್ತು,ನನ್ನ ತಪ್ಪು ನನಗೇ ಗೊತ್ತಾಯಿತು ಕ್ಷಮಿಸಿ ಬಿಡು" ಅಂದ ಅಂತಹ ತಪ್ಪೇನು ಮಾಡಿದಿಯಾ ಮರಾಯ ಅಂದೆ, ಇಲ್ಲ ನಿನಗೆ ಗೊತ್ತಿಲ್ಲ ನಿನ್ನ ಏಳಿಗೆ ಸಹಿಸದೆ ನಾನು ಅನೇಕ ರೀತಿ ನಿನಗೆ ತೊಂದರೆ ಕೊಟ್ಟಿದ್ದೆ ಅಂದ. ಯಾಕೋ ಬೆಳಿಗ್ಗೆ ಬೆಳಿಗ್ಗೆ ಕುಡಿದಿದಿಯಾ ಅಂದೆ, ಹೌದು ಕ್ಷಮಿಸುತ್ತೀಯಾ ಇಲ್ಲವೊ? ಅಂದ ನನ್ನ ಹೃದಯ ಮೃದು ಆಯಿತು ಪಶ್ಚಾತ್ತಾಪದ ಮುಂದಿನ ಪ್ರಾಯಶ್ಚಿತ ಬೇರೆ ಇಲ್ಲ ಅನ್ನಿಸಿ ಖಂಡಿತಾ ಕ್ಷಮಿಸಿದ್ದೇನೆ ಅಂದೆ.   ಕೆಲವು ದಿನದ ನಂತರ ಆರೋಗ್ಯ ಇಲಾಖೆಯವರು ಒಂದು ಬೇನಾಮಿ ಅರ್ಜಿ ಹಿಡಿದು ಬಂದಿದ್ದರು ಅದರಲ್ಲಿ ನಮ್ಮ ಮಲ್ಲಿಕಾ ರೆಸ್ಟೋರೆಂಟ್ ಸ್ವಚ್ಚವಾಗಿಲ್ಲ ಜನರ ಆರೋಗ್ಯಕ್ಕೆ ಮಾರಕ ಇತ್ಯಾದಿ, ಬಂದವರೆ ಪರಿಶೀಲಿಸಿ ಹೇಳಿದ್ದು ಈ ಹೋಟೆಲ್ ಇಡೀ ತಾಲ್ಲೂಕನಲ್ಲೇ ಸ್ವಚ್ಚವಾಗಿದೆ ಇದರ ಮೇಲೆ ಇಂತಹ ಅರ್ಜಿ ಮಾಡಿದಾರೆ ಅಂದರೆ? ಅಂತ ಇದ್ದರು.       ನಂತರ ಗೊತ್ತಾಗಿದ್ದು ಈ ಅರ್ಜಿ ಬರೆದಾತ ಪೋನ್ ಮಾಡಿ ಕ್ಷಮೆ ಪಡೆದ ಮಿತ್ರನೇ ಬರೆದ ಮೂಕರ್ಜಿ!!..   ಹಳ್ಳಿಗಳಲ್ಲಿ ಇಂತವರಿಗೆ ಮೂಕರ್ಜಿ ವೀರರೆಂದೆ ಹೆಸರು, ಇವರಿಗೆ ಹಳ್ಳಿಯಲ್ಲಿ