Blog number 876, ಹಿಂಸೆಗೆ ತಿರುಗಿದ ಕೆರೆ ಬೇಟೆ, ಜಿಲ್ಲಾಡಳಿತ ಇದಕ್ಕೊಂದು ನಿಯಮ ಗೊತ್ತುಪಡಿಸಬೇಕು, ಆಯೋಜಕರೂ ಕೆರೆ ವಿಸ್ತಿರ್ಣ ಮತ್ತು ಕೆರೆಯಲ್ಲಿ ಸಿಗಬಹುದಾದ ಮೀನಿನ ಪ್ರಾಮಾಣ ನೋಡಿ ಪ್ರವೇಶ ಮಿತಿಗೊಳಿಸಬೇಕು.
#ಜಿಲ್ಲಾಡಳಿತ_ಇದಕ್ಕೊಂದು_ನಿಯಮ_ಗೊತ್ತು_ಮಾಡಬೇಕು.
#ಪೋಲಿಸರ_ಅನುಮತಿ_ಜೊತೆಗೆ_ಕೆರೆಬೇಟೆಗೆ_ನಿರ್ದಿಷ್ಟ_ಜನರಿಗೆ_ಮಾತ್ರ_ಅವಕಾಶ_ನೀಡಬೇಕು.
ನನ್ನ ಮನೆ ಕೆರೆ ಅಂಚಿನಲ್ಲಿದೆ ಆದ್ದರಿಂದ ಕೆರೆಯ ಮೀನು ಶಿಕಾರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು.
ಮೀನು ಶಿಕಾರಿಗೆ ಬೇಕಾದ ಏಕಾಗ್ರತೆ ಮತ್ತು ತಾಳ್ಮೆ ಇಲ್ಲದಿದ್ದರೆ ಮೀನು ಸಿಗುವುದು ದೂರದ ಮಾತು.
ಮೀನುಗಾರಿಕಾ ಇಲಾಖೆ/ ಗ್ರಾಮ ಪಂಚಾಯತ್ ಗಳು ಕೆರೆಗಳನ್ನು ಹರಾಜು ಮಾಡಿ ಆದಾಯ ಪಡೆಯಲು ಶುರು ಮಾಡಿದ ಮೇಲೆ ಹರಾಜು ಹಿಡಿದವ ತಾನು ವಿನಿಯೋಗಿಸಿದ ಬಂಡವಾಳದ ಮೇಲೆ ಲಾಭ ಪಡೆಯಲು ಈ ಕೆರೆ ಬೇಟೆ ಎಂಬ ಕ್ರೀಡೆಯಂತಹ ಮೀನು ಶಿಕಾರಿಗೆ ಖದರು ಬಂತು.
40-50 ವರ್ಷದ ಹಿಂದೆ 50 ರಿಂದ 100 ಕೂಣಿ (ಮೀನು ಹಿಡಿಯುವ ಬಿದಿರಿನ ಸಾದನ ) ಬಂದರೆ ಹೆಚ್ಚು, 40 ಎಕರೆ ವಿಸ್ತಿರ್ಣದ ಕೆರೆಯಲ್ಲಿ ನೂರು ಜನರಿಗೆ ಯಥೇಚ್ಚ ಮೀನು ಸಿಗುತ್ತಿತ್ತು ಆಗೆಲ್ಲ ಕೆರೆ ಬೇಟೆಗೆ ಕೂಣಿಗೆ 1ರೂಪಾಯಿ ಅಥವ 2 ರೂಪಾಯಿ ಇರುತ್ತಿತ್ತು ಆದರೆ ಆ ಕಾಲದಲ್ಲಿ ಇದು ದುಬಾರಿ ಅಂತ ಬೇಟೆಗಾರರು ತಗಾದೆ ತೆಗೆಯುತ್ತಿದ್ದರು.
ಆ ಕಾಲದಲ್ಲಿ ಕೆರೆಯಲ್ಲಿ ಸಿಗುತ್ತಿದ್ದ ಕುಚ್ಚು, ಮುರುಗೋಡು ಮತ್ತು ಚೇಳಿ ಮೀನಿನ ತಳಿಗಳು ಈಗ ಇಲ್ಲವೇ ಇಲ್ಲ.
ನಿನ್ನೆ ಪಕ್ಕದ ಸಿದ್ದಾಪುರ ತಾಲ್ಲೂಕಿನ ಕಾನಗೋಡಿನ ಕೆರೆ ಬೇಟೆ ಸದರಿ ಕೆರೆ ಮೀನು ಸಾಕಾಣಿಕೆ ಮಾಡುತ್ತಿರುವ ಊರಿನ ದೇವಸ್ಥಾನದ ಸಮಿತಿ ಹಮ್ಮಿಕೊಂಡಿದೆ ಇದರಲ್ಲಿ ಬರುವ ಆದಾಯ ಗ್ರಾಮದ ದೇವಾಲಯದ ಅಭಿವೃದ್ಧಿಗಾಗಿ ಬಳಸುತ್ತಾರೆ ಅಂತ ಇದೇ ಊರಿನ ಈಗ ಬೆಂಗಳೂರಲ್ಲಿ ಖ್ಯಾತ ವಕೀಲರಾಗಿರುವ ಕಾನುಗೋಡು ಗಣಪತಿಯವರ ಪೇಸ್ ಬುಕ್ ನಲ್ಲಿ ನೋಡಿದ್ದೆ.
ಕುತೂಹಲದಿಂದ ನಿನ್ನೆ ಬೆಳಿಗ್ಗೆ ಅಲ್ಲಿ೦ದ ಲೈವ್ ಮಾಡುತ್ತಿದ್ದ ಅನೇಕ FB ಗೆಳೆಯರ ವಾಲ್ ನಲ್ಲಿ ನೋಡುವಾಗ ಅಲ್ಲಿನ ವ್ಯವಸ್ಥೆ, ಪ್ರವೇಶ ಧರ 600, ಬೇಟೆಗಾರರಿಗೆ ಸಮಿತಿಯಿಂದ ಟೀ ಶರ್ಟ್ ಎಲ್ಲ ನೀಡುತ್ತಿದ್ದನ್ನು ನೋಡುತ್ತಾ ಇದ್ದೆ.
ವ್ಯಾಪಕ ಪ್ರಚಾರ ಸಾಮಾಜಿಕ ಜಾಲ ತಾಣದಿಂದ ಈ ಕೆರೆ ಬೇಟೆಗೆ ಸಿಕ್ಕಿದ್ದರಿಂದ ನಿರೀಕ್ಷೆಗೂ ಮೀರಿ ಮೀನು ಹಿಡಿಯುವ ಸಾದನ ಬಿದಿರಿನ ಕೂಣಿಗಳು ಬಂದಿದ್ದವು ಅದಕ್ಕೂ ನಾಲ್ಕು ಪಟ್ಟು ಪ್ರೇಕ್ಷಕರು ಅಲ್ಲಿದ್ದರು.
5000 ದಾಟಿದೆ 7000 ಮುಟ್ಟಿದೆ (ಉತ್ಪ್ರೇಕ್ಷೆ ಇರಬಹುದು) ಎಂಬ ಮಾತುಗಳು, 7000 ಕೂಣಿ X 600 ರೂಪಾಯಿ ಅಂದರೆ 42 ಲಕ್ಷ ಹಣ ಆಯಿತು ಎಂಬ ಗುಲ್ಲೂ ಆಯಿತು ಇದರ ಅದ೯ ಆದರು ಖರ್ಚು ಕಳೆದು 20 ಲಕ್ಷ ದೇವಾಲಯ ನಿರ್ಮಾಣಕ್ಕೆ ಸಂಗ್ರಹ ಆಗಿರಬೇಕು.
ಕೆರೆ ವಿಸ್ತಿರ್ಣಕ್ಕಿಂತ ಸೇರಿದ ಶಿಕಾರಿಗಾರರ ಸಂಖ್ಯೆ ಮಿತಿ ಮೀರಿದ್ದರಿಂದ ಸ್ವಾಭಾವಿಕವಾಗಿ ಎಲ್ಲರಿಗೂ ಮೀನು ಸಿಗಲಿಲ್ಲ ಇದು ಶಿಕಾರಿಯನ್ನು ಕ್ರೀಡೆ ಎಂಬ ಕ್ರೀಡಾ ಮನೋಬಾವದಲ್ಲಿ ಭಾಗವಹಿಸಿದವರು ಪರಿಗಣಿಸಿದ್ದರೆ ಮತ್ತು ಈ ಹಣ ಯಾರೋ ವ್ಯಾಪಾರಿಗೆ ಲಾಭ ಆಗುವುದಿಲ್ಲ ಸಮೂದಾಯದ ದೇವಾಲಯಕ್ಕೆ ಬಳಕೆ ಆಗುತ್ತಿದೆ ಎಂಬುದರಿಂದ ಮತ್ತು ಎಲ್ಲೇ ಕೆರೆ ಬೇಟಿ ಆದರೆ ಶಿಕಾರಿ ಆಗಲಿ ಬಿಡಲಿ ಕಟ್ಟಿದ ಪ್ರವೇಶ ಧನ ವಾಪಾಸು ಕೊಡುವ ಪದ್ಧತಿ ಇಲ್ಲವಾದ್ದರಿಂದ ಇಲ್ಲಿ ಮೀನು ಸಿಕ್ಕಿಲ್ಲ ಹಣ ವಾಪಾಸು ಕೊಡಿ ಎಂದು ತಕರಾರು ಮಾಡಿದವರ ಉದ್ದೇಶ ಸರಿ ಅಲ್ಲ.
ಪೇಸ್ ಬುಕ್ ಲೈವ್ ನೋಡುವಾಗಲೇ ಯಾರಿಗೂ ಮೀನು ಸಿಕ್ಕಿಲ್ಲ, ಮೋಸ ಅಂತೆಲ್ಲ ಹೇಳುತ್ತಿದ್ದ ಪ್ರೇಕ್ಷಕರ ಮಾತು ನಂತರ ಹಣ ವಾಪಾಸಿಗೆ ಒತ್ತಡ, ಪೋಲಿಸರ ಹರ ಸಾಹಸ ನಂತರ ಊರಲ್ಲಿ ಮನೆಗೆ ನುಗ್ಗುತ್ತಿದ್ದಾರೆಂಬಲ್ಲಿಗೆ ಕೇಳಿ ಬಂತು.
ಇವತ್ತು ಪತ್ರಿಕೆಗಳಲ್ಲಿ, ಟೀವಿ ಚಾನಲ್ ನಲ್ಲಿ ಊರಿಗೆ ನುಗ್ಗಿ ದರೋಡೆ ಹಲ್ಲೆ ಮಾಡಿದ್ದು ನೋಡಿ ಸದುದ್ದೇಶದ ಜನಪದ ಕ್ರೀಡೆಯಂತ ಕೆರೆ ಬೇಟೆ ಮುಂದಿನ ದಿನದಲ್ಲಿ ಈ ರೀತಿ ಹಿಂಸಾತ್ಮಕವಾಗಿ ಊರಿನ ಶಾಂತಿ ಭಂಗ ದರೋಡೆ - ಕೊಲೆಗಳೂ ಆಗುವ ಸಾಧ್ಯತೆ ಇದೆ.
ಆದ್ದರಿಂದ ಜಿಲ್ಲಾಡಳಿತ ಪೋಲಿಸ್ ಅನುಮತಿ ಇಲ್ಲದೆ ಇಂತಹ ಕೆರೆ ಬೇಟೆ ನಡೆಸಲು ಬಿಡ ಭಾರದು, ಕೆರೆ ವಿಸ್ತಿಣ೯ಕ್ಕೆ ತಕ್ಕ೦ತೆ ಬೇಟೆಗಾರರ ಸಂಖ್ಯೆ ನಿಗದಿ ಮಾಡಬೇಕು.
ಒ0ದು ಎಕರೆ ವಿಸ್ತಿರ್ಣ ಅಂದರೆ 42 ಸಾವಿರ ಚದರಡಿ ಪ್ರತಿ ಕೆರೆ ಬೇಟೆ ಶಿಕಾರಿಗಾರನಿಗೆ 2000 ಅಡಿ ಮೀಸಲೆಂದರು (40×50 ಅಡಿ ವಿಸ್ತಿರ್ಣ) ಕನಿಷ್ಟ 20 ಗರಿಷ್ಟ 25 ಜನರಿಗೆ ಎನ್ನುವ ಲೆಖ್ಖದಲ್ಲಿ 10 ಎಕರೆ ವಿಸ್ತಿಣ೯ದ ಕೆರೆಗೆ 250 ಜನರಿಗೆ ಮಾತ್ರ ಪ್ರವೇಶ ನೀಡಿದರೆ ಶಿಕಾರಿಗಾರರಿಗೂ ತೃಪ್ತಿಯಷ್ಟು ಮೀನು ಮತ್ತು ಸೇರುವ ಜನಸಂಖ್ಯೆಯ ಮಿತಿಯಿಂದ ಜಗಳಾ ಗಲಾಟೆ ನಿಯಂತ್ರಿಸಬಹುದು.
ಇಲ್ಲ ಇದು ನಷ್ಟ ಅಂದರೆ ಪ್ರವೇಶ ಧರ ಜಾಸ್ತಿ ಮಾಡಿ ಸರಿದೂಗಿಸಬಹುದು ಅಥವ ಶಿಕಾರಿಗೆ ಸಮಯ ನಿಗದಿ ಮಾಡಿ ಎರೆಡು ಅವಧಿ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು.
ನಿನ್ನೆ ಕಾನುಗೋಡಿನಲ್ಲಿ ಶಿಕಾರಿಗಾರರು ಹೆಚ್ಚು ಸೇರಿದ್ದು, ಕೆರೆ ವಿಸ್ತಿರ್ಣ ಆ ಸಂಖ್ಯೆಯ ಜನರಿಗೆ ಸಮಪಾತವಾಗಿರಲಿಲ್ಲ, ಮೀನು ಸಿಗದ ಬಗ್ಗೆ ಶಿಕಾರಿಗಾರರಿಗೆ ನಿರಾಸೆ ಇದ್ದರೂ ಅವರು ಹಿಂಸೆಗೆ ಹೋಗುತ್ತಿರಲಿಲ್ಲ ಅನ್ನಿಸುತ್ತೆ ಆದರೆ ಇದನ್ನು ಹಿಂಸಾತ್ಮಕವಾಗಿ ದೊಂಬಿಗೆ ಪ್ರೇರೇಪಿಸಿದವರು ಪ್ರೇಕ್ಷಕರು ಅದರಲ್ಲಿ ಊರಿನ ದೇವಾಲಯದ ಅಭಿವೃದ್ಧಿ ಅಥವ ದೇವಾಲಯ ಸಮಿತಿಗೆ ಸಂಗ್ರಹವಾದ ಹಣವನ್ನು ನೋಡಿ ಸಹಿಸದ ಅವರ ವಿರೋದಿಗಳ ಕುಮ್ಮಕ್ಕೂ ಇಲ್ಲಿ ಪರೋಕ್ಷವಾಗಿ ಬೆಂಬಲಿಸಿದ ಸಾಧ್ಯತೆ ಇದೆ.
Comments
Post a Comment