Skip to main content

Posts

Showing posts with the label Horsegram contains rich protein

Blog number 2064. ಹುರುಳಿ ಕಾಳಿನಲ್ಲಿರುವ ಶಕ್ತಿ ಇದರ ರಸ ಹುರುಳಿ ಕಟ್ಟಿನ ರಸ ಕಟ್ಟು ಈಗ ದಿಡೀರ್ ತಯಾರಿಯ ಪೇಸ್ಟ್ ಆಗಿ ಲಭ್ಯವಿದೆ.

#ಒಂದು_ಕಾಲದ_ರೈತರ_ಮನೆಯ_ಎತ್ತಿನ_ಪೌಷ್ಟಿಕ_ಆಹಾರ_ಹುರುಳಿ #ಬೇಯಿಸಿದ_ಹುರುಳಿಕಾಳು_ನೆನಸಿದ_ಹುರುಳಿ_ನುಚ್ಚು_ಎತ್ತುಗಳಿಗೆ #ಹುರುಳಿ_ಬೇಯಿಸಿದ_ನೀರು_ಹುಳ್ಳಿ_ಕಟ್ಟು_ನಮ್ಮಂತ_ಹುಳ್ಳಿಕಟ್ಟು_ಪ್ರಿಯರಿಗೆ #ಹಿಂಗಾರಿನ_ನಂತರದ_ಇಬ್ಬನಿಯಲ್ಲಿ_ಹುರುಳಿ_ಪಸಲು #ಹುರುಳಿ_ಕಾಳು_ಸಿಪ್ಪೆ_ಬೂಸ_ಹುರುಳಿ_ಗಿಡ_ಕೂಡ_ಜಾನುವಾರು_ಆಹಾರ #ಈಗ_ಕೃಷಿಯಲ್ಲಿ_ಎತ್ತುಗಳಿಲ್ಲ_ಹುಳ್ಳಿ_ಬೆಳೆಯುವ_ರೈತರೂ_ಇಲ್ಲ https://youtube.com/shorts/3fcf-CgaHwg?feature=shared     ಎತ್ತು ಮತ್ತು ಕೋಣಗಳನ್ನು ಅವಲಂಬಿಸಿ ಕೃಷಿ ಮಾಡುವ ಕಾಲ ಹೆಚ್ಚು ಕಡಿಮೆ ಮುಗಿದೇ ಹೋಗಿದೆ, ಯಂತ್ರ ಆದಾರಿತ ಕೃಷಿಯಿಂದ ಎತ್ತು ಕೋಣ ಕೊಟ್ಟಿಗೆ ಮತ್ತು ಹುರುಳಿ ಕೂಡ ಇಲ್ಲವಾಗಿದೆ.      ಬಿದನೂರು ನಗರದ ದೇವಗಂಗೆಯಲ್ಲಿ ನಮ್ಮ ದೊಡ್ಡಪ್ಪನ ಮನೆಯಲ್ಲಿ ಎರೆಡು ಜೊತೆ ಹಾಸನದ ಬಿಳಿ ಅಮೃತ ಮಹಲ್ ಜೋಡಿ ಎತ್ತುಗಳಿದ್ದವು ಅದಕ್ಕೆ ಪ್ರತ್ಯೇಕ ಕೊಟ್ಟಿಗೆ ಹೆಚ್ಚು ಬೆಲೆಯ ದೊಡ್ಡ ಎತ್ತುಗಳು ಪೇಟೆಗೆ ಅಕ್ಕಿ ಮಾಡಿಸಲು ದೊಡ್ಡ ಎತ್ತಿನಗಾಡಿಗೆ ಮಾತ್ರ ಸೀಮಿತವಾಗಿತ್ತು ಅದೊಂದು ತರ ಆ ಕಾಲದ ರೈತರಿಗೆ ಅವರ ಅಂತಸ್ತಿನ ಪ್ರದರ್ಶನದ ಬಾಗವೂ ಆಗಿರಬಹುದು.    ಇದರ ಜೊತೆ ಇನ್ನೆರೆಡು ಜೋಡಿ ಸಾದಾರಣ ಎತ್ತುಗಳು ಆದರೆ ಅವು ಹೆಚ್ಚು ಶ್ರಮದ ಕೆಲಸದ ಕೃಷಿ ಮಾಡುವಂತವು ಅವುಗಳಿಗೆ ಕೂಡ ಕೊಟ್ಟಿಗೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಆಗಿರುತ್ತಿತ್ತು. ...