Skip to main content

Posts

Showing posts with the label Kadidal Shamanna and P.Puttia Shivamogga district senior socialist

3467. ಕಡಿದಾಳು ಶಾಮಣ್ಣ ಮತ್ತು ಪಿ. ಪುಟ್ಟಯ್ಯ ಶಿವಮೊಗ್ಗ ಜಿಲ್ಲೆಯ ಹಿರಿಯ ಗೌರವಾನ್ವಿತರು

#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಗೌರವಾನ್ವಿತರು #ಕಡಿದಾಳು_ಶಾಮಣ್ಣ_ಮತ್ತು_ಪಿ_ಪುಟ್ಟಯ್ಯ #ಮೊನ್ನೆ_ಕಡಿದಾಳುಶಾಮಣ್ಣರ_ಮನೆಗೆ_ಹೋಗಿ_ಅವರ_ಆರೋಗ್ಯ_ವಿಚಾರಿಸಿದ_ಪುಟ್ಟಯ್ಯನವರು #ಈ_ನೆನಪಿನ_ಚಿತ್ರ_ಸೆರೆಹಿಡಿದು_ಕಳಿಸಿದ_ಮಿತ್ರರು_ಅಯನೂರು_ಬೆಲ್ಲದಪ್ರಕಾಶ್ #Kadidalshamanna #PPuttaia #Samajvadi #Shivamogga #Mysore #Tejaswi #kuvempu #Raithasanga     ಕಡಿದಾಳು ಶಾಮಣ್ಣ ಮತ್ತು ಪಿ.ಪುಟಯ್ಯ ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯ ಹಿರಿಯ ಗೌರವಾನ್ವಿತರು.   ಇವರಿಬ್ಬರ ಈಗಿನ ವಯಸ್ಸು 86 ಅಥವ 87 ಇರಬೇಕು ಇತ್ತೀಚೆಗೆ ಕಡಿದಾಳು ಶಾಮಣ್ಣ ತುಂಬಾ ಬಳಲಿದಂತೆ ಕಾಣುತ್ತಾರೆ.    ಮೊನ್ನೆ ಇವರಿಬ್ಬರ ಸ್ಮರಣೀಯ ಭೇಟಿಯ ಪರಸ್ಪರ ಆರೋಗ್ಯ ವಿಚಾರಣೆಯ ಫೋಟೋ ಸೆರೆಹಿಡಿದು ಕಳಿಸಿದವರು ಶಿವಮೊಗ್ಗದ ಹಿರಿಯ ಮಿತ್ರರಾದ ಅಯನೂರು ಬೆಲ್ಲದ ಪ್ರಕಾಶ್.    ಇವರಿಬ್ಬರೂ ಸಮ ವಯಸ್ಕರು ಮೈಸೂರಿನಲ್ಲಿ ವ್ಯಾಸಂಗದಲ್ಲಿ ಜೊತೆಯಾದವರು ಶ್ಯಾಮಣ್ಣ ಮಹಾರಾಜ ಕಾಲೇಜಿನಲ್ಲಿ ಮತ್ತು ಪುಟ್ಟಯ್ಯ ಯುವರಾಜ ಕಾಲೇಜಿನಲ್ಲಿ.    ಸಮಾಜವಾದಿ ಯುವ ಜನ ಸಭಾ ಮತ್ತು ಕನ್ನಡ ಯುವಜನ ಸಭಾದ ಮೂಲಕ ರಾಜ್ಯದ್ಯಾದಂತ ಜನಜಾಗೃತಿ ಮಾಡಿದವರು.    ಇವರಿಬ್ಬರೂ ಪ್ರೊಪೆಸರ್ ನಂಜುಂಡ ಸ್ವಾಮಿ, ಅವರ ತಂದೆ ಮಹಾಂತರ ಮತ್ತು ಅವರ ಗೆಳೆಯರಾದ ನಾಗರಾಜ್ ವಕೀಲರ ಹಾಗೂ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಸ್ವಾಮಿ ರಾವ್...