Skip to main content

Posts

Showing posts with the label Member of Lagislative Assembly Haratalu Halappa

Blog number 1301.192A ಕಾಯ್ದೆಯಿಂದ ಮಲೆನಾಡು ವ್ಯಾಪ್ತಿ ಕೈಬಿಡಲು ಶಾಸಕ ಹರತಾಳು ಹಾಲಪ್ಪ ವಿಧಾನಸಭೆಯಲ್ಲಿ ಮಾಡಿದ ಪ್ರಸ್ತಾವನೆ

#ಹರತಾಳುಹಾಲಪ್ಪರ ಈ ಕೆಲಸ ಸಣ್ಣದಲ್ಲ!  ಯಾರೂ ಏನೇ ಟೇಕೆ ಟಿಪ್ಪಣಿ ಮಾಡಲಿ ಇಡೀ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಪರವಾಗಿ ಈ ಇಬ್ಬರು ಶಾಸಕರನ್ನ ಅಭಿನಂದಸಲೇ ಬೇಕು ಸಾಗರದ ಮೊದಲ ಶಾಸಕರಾದ ಶಾಂತವೇರಿ ಗೋಪಾಲಗೌಡರು ಹೇಳಿದಂತೆ ಶಾಸಕರು ಶಾಸನ ಮಾಡುವಂತಾಗ ಬೇಕು ಅಂದದ್ದು ಇವರು ಸಾಬೀತು ಮಾಡಿದ್ದಾರೆ. # *192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಕೈಬಿಡುವಂತೆ ಹರತಾಳು ಹಾಲಪ್ಪ ಆಗ್ರಹ:-*  ರಾಜ್ಯದಲ್ಲಿ ಕರ್ನಾಟಕ  ಭೂ ಕಂದಾಯ ಅಧಿನಿಯಮ 192ಎ ಕಾಯ್ದೆಯ ವ್ಯಾಪ್ತಿಯಿಂದ *ಮಲೆನಾಡು ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶವನ್ನು ಹೊರಗಿಡುವಂತೆ ಸಾಗರ-ಹೊಸನಗರ ಶಾಸಕ ಹರತಾಳು ಹಾಲಪ್ಪ* ವಿಧಾನ ಸಭೆಯಲ್ಲಿಂದು ಆಗ್ರಹಿಸಿದ್ದಾರೆ. ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಹಾಲಪ್ಪ, *ಭೂ ಕಬಳಿಕೆ ನಿಷೇಧ ಕಾನೂನು ಅಡಿಯಲ್ಲಿ ಪಟ್ಟಣ, ನಗರದ ಸುತ್ತಮುತ್ತ ಪ್ರದೇಶ, ಗ್ರಾಮೀಣ ಪ್ರದೇಶವನ್ನು ಒಳಪಡಿಸಿರುವುದರಿಂದ ಮಲೆನಾಡು ರೈತರು ವಿಶೇಷವಾಗಿ ಗ್ರಾಮೀಣ ಪ್ರದೇಶದ ನೂರಾರು ರೈತರು ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.* ಅರಣ್ಯ ಇಲಾಖೆಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ದಿನ ಕಳೆದಂತೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು. *ಮಲೆನಾಡು ಪ್ರದೇಶವಾದ ಬಾರಂಗಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರ...