Skip to main content

Posts

Showing posts from January, 2023

Blog number 1208. ಮುರುಘಾಮಠದ ದಯಾನಂದ ಪೂಜಾರಿ ನಮ್ಮ ಊರಿನವರು ದೇಶಾಭಿಮಾನದ ಅವರು ಭಾರತೀಯ ಸೈನ್ಯ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ತಂದೆ ಶೇಖರ್ ಪೂಜಾರರು ನನ್ನ ಗೆಳೆಯರು.

#ದಯಾನOದಪೂಜಾರ್ ನಮ್ಮ ಊರಿನ ಹೆಮ್ಮೆಯ ಯುವಕ ಆರು ವಷ೯ದಿಂದ ಕಾಶ್ಮೀರದಲ್ಲಿ ಯೋದರಾಗಿದ್ದಾರೆ.#   ಆನಂದಪುರO ಸಮೀಪದ ಮುರುಘಾಮಠದಲ್ಲಿ ಹೋಟೆಲ್ ದಿನಸಿ ಅಂಗಡಿ ನಡೆಸುವ ಶೇಖರ್ ಪೂಜಾರರು ಮತ್ತು ನಾವೆಲ್ಲ ಕಾಮಿ೯ಕ ಹೋರಾಟ ದಲಿತ ಸಂಘಷ೯ ಸಮಿತಿಯಲ್ಲಿ ಒಟ್ಟಾಗಿ ಒಡನಾಟ ಮಾಡಿದವರು.   ಇವರ ಮಗ ದಯಾನಂದ ಪದವಿ ವ್ಯಾಸಂಗ ಮಾಡಿ ದೇಶ ಸೇವೆಯ ಸೈನ್ಯದಲ್ಲಿದ್ದಾರೆ, ಸತತ ಆರು ವಷ೯ದಿಂದ ಕಾಶ್ಮೀರದಲ್ಲಿನ ಪ್ರತಿಕೂಲ ಹವೆ ಮತ್ತು ಆತಂಕಕಾರಿ ಆಭದ್ರತೆಯ ಪ್ರದೇಶದಲ್ಲಿ ಯಾವುದೇ ಭಯ ಇಲ್ಲದೆ ಸೇವೆ ಸಲ್ಲಿಸುತ್ತಾ ಅಲ್ಲಿ ಅವರ ಇಲಾಖೆಯಲ್ಲಿ ಕ್ರೀಡೆಯಲ್ಲಿ ಸೇವೆಯಲ್ಲಿ ಅನೇಕ ಪದಕ ಪಡೆದಿದ್ದಾರೆ.    ಮುಖತಃ ಬೇಟಿ ಮಾಡಿ ಅಭಿನಂದಿಸಬೇಕು ಅಂತ ಮಾಡಿದ್ದರೂ ಸಾಧ್ಯವಾಗಿರಲಿಲ್ಲ ಮೊನ್ನೆ ನಮ್ಮ ಊರ ವರಸಿದ್ಧಿವಿನಾಯಕ ದೇವರ ಜಾತ್ರೆಗೆ ಅವರು ಬಂದಿದ್ದರು ಅವಾಗ ಅವರನ್ನ ಮಾತಾಡಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುವ ಅವರಿಗೆ ದೇವರಲ್ಲಿ ಆರೋಗ್ಯ- ಐಶ್ವಯ೯-ಯಶಸ್ಸು-ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸಲಾಯಿತು.    ದಯಾನಂದ ಮೃದು ಮಾತುಗಾರ, ಕಠಿಣ ಗುರಿ ತಲುಪುವ ಏಕಾಗ್ರತೆ, ದೇಶ ಪ್ರೇಮ, ತನ್ನ ಕುಟುಂಬದ ಬಗ್ಗೆ ಮಮತೆ ಮತ್ತು ತನ್ನ ಹುಟ್ಟಿದ ಊರಿನ ಬಗ್ಗೆ ಪ್ರೀತಿ ಅವರ ಜೊತೆ ಮಾತಾಡಿದಾಗ ಗುರುತಿಸಿದೆ.     ಯೋದರಾಗಿ ಕಾಶ್ಮೀರದಂತ ಪ್ರದೇಶದಲ್ಲಿ ಸತತ ಆರು ವಷ೯ದಿಂದ ಸೇವೆ ಸಲ್ಲಿಸುವ ಈ ದೀರ ಯುವಕ ನ

Blog number 1207. ಜಾರ್ಜ್ ಪರ್ನಾಂಡಿಸ್ ವಿಶಿಷ್ಟ ವ್ಯಕ್ತಿತ್ವ ಭಾಗ 1. ಸ್ವತಃ ತಮ್ಮ ಬಟ್ಟೆ ಒಗೆದು ಸೋಪಿನ ಪುಡಿ ಶಿಪಾರಸ್ಸು ಮಾಡಿದ ಜಾರ್ಜ್

#ವಿಶಿಷ್ಟ ವ್ಯಕ್ತಿತ್ವದ ಜಾಜ್೯(1)      ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ.   ಸಮತಾ ಪಾಟಿ೯ಯ ಕಾಯ೯ಕತ೯ನಾಗಿದ್ದ ಆತ ಒಮ್ಮೆ ದೆಹಲಿಯಲ್ಲಿ ಸಾಲ ಕೊಡಿಸಿ ಅಂತ ಜಾಜ್೯ರಿಗೆ ಮನವಿ ನೀಡಿದ್ದ.   ಜಾಜ್೯ ಯಾವುದೋ ಬ್ಯಾಂಕ್ ಒಂದರ ಚೇಮ೯ನರಿಗೆ ಶಿಪಾರಸ್ಸು ಮಾಡಿದ್ದರಿಂದ ಆ ಯುವಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿ ಆದನು, ಇದಕ್ಕೆ ಸಹಾಯ ಮಾಡಿದ ಜಾಜ್೯ರಿಗೆ ಒಂದು ಕೃಜ್ಞತೆ ಪತ್ರ ಅದರ ಜೊತೆ ಅವನು ತಯಾರಿಸುವ ಒಂದು ಸೋಪಿನ ಪುಡಿ ಪೊಟ್ಟಣ ಮಾದರಿ ತೋರಿಸಲು ಕಳಿಸಿದ್ದ.   ಕೆಲವು ದಿನದ ನಂತರ ಆ ಯುವಕನಿಗೆ ದೇಶದ ಪ್ರತಿಷ್ಠಿತ ಪಂಚತಾರ ಹೋಟೆಲ್ ಆದ ಲೀಲಾ ಪ್ಯಾಲೇಸ್ ನಿಂದ ಪ್ರತಿ ತಿಂಗಳು 6 ಟನ್ ಸೋಪಿನ ಪುಡಿಯ ಆಡ೯ರ್ ಅಂಚೆಯಲ್ಲಿ ಬಂದಾಗ ಯುವ ಉದ್ಯಮಿ ತಬ್ಬಿಬ್ಬಾಗಿದ್ದ.    ವಾಸ್ತವ ಏನಾಗಿತ್ತೆ೦ದರೆ, ಆ ಯುವಕ ಕಳಿಸಿದ ಸೋಪಿನ ಪುಡಿಯನ್ನ ಸ್ವತಃ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ರಕ್ಷಣಾ ಸಚಿವರು ಬಳಸಿದಾಗ ಅವರಿಗೆ ಆ ಸೋಪಿನ ಪುಡಿಯ ಕಾಯ೯ಕ್ಷಮತೆ ಹಿಡಿಸಿತು ಹಾಗಾಗಿ ಅವರು ಲೀಲಾ ಪ್ಯಾಲೇಸ್ ನ ಮಾಲಿಕರಾದ ನಿವೃತ್ತ ಕನ೯ಲ್ ರಿಗೆ ಪತ್ರ ಬರೆದು "ಈ ಸೋಪಿನ ಪುಡಿ ನಾನು ಸ್ವತಃ ಬಳಸಿ ನೋಡಿದ್ದೇನೆ ಉತ್ತಮವಾಗಿದೆ ಹಾಗಾಗಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡಿರುವ ಕೇರಳದ ಯುವಕನಿಗೆ ನಿಮ್ಮ ಸಂಸ್ಥೆಗೆ ಬೇಕಾದ ಸೋ

Blog number 1206. ಸಾಗರ ವಿಧಾನಸಭಾ ಸದಸ್ಯರಾದ ಹರತಾಳು ಹಾಲಪ್ಪನವರು ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ರಥೋತ್ಸವಕ್ಕೆ ಆಗಮಿಸಿದ್ದರು ಅವರನ್ನು ದೇವಾಲಯದ ಜಾತ್ರಾ ಸಮಿತಿವತಿಯಿಂದ ಸನ್ಮಾನಿಸಲಾಯಿತು,ಅವರು ದೇವಾಲಯದ ರಥಬೀದಿಯ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ.

#ಶಾಸಕರಾದ_ಹರತಾಳುಹಾಲಪ್ಪನವರು #ನಮ್ಮ_ಊರಿನ_ವರಸಿದ್ಧಿವಿನಾಯಕ_ದೇವರ_ಜಾತ್ರೆಯಲ್ಲಿ #ದೇವಾಲಯದ_ಎದುರಿಗೆ_ಕಾಂಕ್ರೀಟ್_ರಸ್ತೆ_ಮಾಡಿಸಿದ್ದಾರೆ #ಅನೇಕ_ಹಿಂದಿನ_ಸಂದರ್ಭಗಳ_ನೆನಪಿಸಿಕೊಂಡರು.    2018ರ ವಿಧಾನಸಭಾ ಚುನಾವಣೆಯ ದಿನಗಳ ಒಂದು ರಾತ್ರಿ ಹರತಾಳು ಹಾಲಪ್ಪನವರು ನನ್ನ ಹಳೇ ಕಛೇರಿಗೆ ಬಂದಿದ್ದರು, ನಂತರ ನನ್ನ ಮಗಳ ಮದುವೆಗೆ ಬಂದು ಶುಭ ಹಾರೈಸಿದಾಗ ನನಗೆ ಆಶ್ಚಯ೯ ಕೂಡ ಯಾಕೆಂದರೆ ವಿವಾಹ ಆಮಂತ್ರಣ ಮುದ್ದಾಂ ನೀಡಲಾಗದೆ ಅಂಚೆ ಮುಖಾಂತರ ಕಳಿಸಿದರೂ ಅವರೂ ಆಗಮಿಸಿದ್ದರು.   ನಂತರದ ಬೇಟಿ ಮೊನ್ನೆ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವದ ದಿನ (25- ಜನವರಿ -20 23ರ ಬುಧವಾರ) ಒಳ ಬರುತ್ತಲೇ "ಅರುಣ್ ಪ್ರಸಾದ್ ನಮ್ಮ ಹಳೆಯ ಗೆಳೆಯರು" ಅನ್ನುತ್ತಾ ಅವರು ಪದವಿ ಓದುವಾಗ ಸಾಗರದ ಸೊರಬ ರಸ್ತೆಯ ಹಳೆಯ ಯುನೈಟೆಡ್‌ ಟ್ರೇಡಿಂಗ್ ಕಂಪನಿ ಎದುರಿಗಿದ್ದ ಬಿಸಿಎಂ ಕಾಲೇಜು ಹಾಸ್ಟೆಲ್ ನಲ್ಲಿದ್ದಾಗ ನಾನು ಅದೇ ಕಟ್ಟಡದಲ್ಲಿದ್ದ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಎಸ್ ಎಸ್ ಎಲ್ ಸಿ ಅದನ್ನು ನೆನಪು ಮಾಡಿಕೊಂಡರು.   ವಿದ್ಯಾರ್ಥಿ ಜೀವನದಲ್ಲೂ ಹಾಲಪ್ಪ ಮಾತುಗಾರರು, ಕವಿಗಳ ಪದ್ಯಗಳನ್ನು ಉಲ್ಲೇಖಿಸಿ ರಸವತ್ತಾಗಿ ಮಾತಾಡುತ್ತಾ ನೆರೆದವರೆಲ್ಲರನ್ನು ನಗಿಸುತ್ತಿದ್ದರು ಅದೇ ರೀತಿ ವಿದ್ಯಾರ್ಥಿ ಸಂಘಟನೆಯಲ್ಲೂ ಮುಂದಿದ್ದರು.    ರೈಲಿನ ಪ್ರಯಾಣದಲ್ಲಿ ಹೆಚ್ಚಾಗಿ ಪುಸ್ತಕ ಓದುತ್ತೇನೆ ಮೊನ್ನೆ ಒಂದು

#Blog number 1205. ಶಂಭೂರಾಮನಿಗೆ ಎಳೆ ಸೌತೆಕಾಯಿ ಎಂದರೆ ಬಲು ಪ್ರೀತಿ, ಕರ ಕರ ಅಂತ ಕತ್ತರಿಸಿ ಸವಿಯುವುದನ್ನು ನೋಡಲೇ ಚಂದ.

https://youtu.be/bEyKat6T0Jw #ಶಂಭೂರಾಮನ_ಗುಣಗಾನ_ಮಾಡದಿರಲುಂಟೆ? #ನನ್ನ_ಬೆಳಗಿನ_ಒಂದು_ಗಂಟೆಯ_ವಾಕಿಂಗ್_ಸಂಗಾತಿ #ಹಾಗಂತ_ನನ್ನನ್ನು_ಎಬ್ಬಿಸಿ_ವಾಕಿಂಗ್_ಮಾಡಿಸುವವ_ಇವನೆ. #ಇವನಿಗೆ_ಇಷ್ಟವಾದ_ತರಕಾರಿ_ಹಣ್ಣು_ತಂದಿಟ್ಟಿರಲೇ_ಬೇಕು. #ಎಳೆ_ಸೌತೇ_ಕಾಯಿ_ಇವನಿಗೆ_ಪಂಚಪ್ರಾಣ   ಸಾಕು ಪ್ರಾಣಿಗಳಲ್ಲಿ ನಾಯಿಗಳನ್ನು ಮನುಷ್ಯ ಅಷ್ಟೇಕೆ ಹಚ್ಚಿಕೊಳ್ಳುತ್ತಾನೆ, ಅದರ ಆರೋಗ್ಯ ಏರುಪೇರಾದರೆ, ಅವುಗಳು ಇಹಲೋಕ ತ್ಯಜಿಸಿದರೆ ಅಷ್ಟೇಕೆ ಚಡಪಡಿಕೆ -ದುಃಖ ಅಂತ ಅರ್ಥವಾಗಬೇಕಾದರೆ ಸಾಕು ಪ್ರಾಣಿಯ ಒಡನಾಟ ಮಾಡಿಯೇ ನೋಡಬೇಕು.   ಅನ್ನ ಹಾಕುವವರ ಜೊತೆ ಮಿತ್ರದ್ರೋಹ, ಕಪಟ, ದ್ವೇಷಸಾದನೆ ಮಾಡದೆ ಸದಾ ಪ್ರೀತಿಯ ನಿರಂತರ ದಾರೆ ಹರಿಸುವ ಎಚ್ಚರದಲ್ಲಿ ಆಗಲಿ ನಿದ್ದೆಯಲ್ಲಾಗಲಿ ತನ್ನ ಯಜಮಾನನ ಕಾಳಜಿ ವಹಿಸುವುದೇ ತನ್ನ ಜೀವಮಾನದ ಸಾಧನೆ ಅಂತ ನಿರ್ದರಿಸಿ ಬಿಡುವ ಸಾಕು ನಾಯಿಗಳು ಆ ಕಾರಣದಿಂದಲೇ ಅಚ್ಚುಮೆಚ್ಚಾಗಿ ಬಿಡುವುದು.   ಮುಂದಿನ ಮಾಚ್೯ 23ಕ್ಕೆ ಎರೆಡು ವರ್ಷ ಪೂರೈಸುವ ನಮ್ಮ ಶಂಭೂರಾಮನಿಗೆ ಎಳೆ ಸೌತೆಕಾಯಿ ಅಂದರೆ ಅಚ್ಚುಮೆಚ್ಚು ಅಷ್ಟೆ ಅಲ್ಲ ಕ್ಯಾರೆಟ್, ಅಲಸಂದೆ, ಬೀನ್ಸ್, ಬಾಳೆ ಹಣ್ಣು, ಸಪೋಟ, ಕಲ್ಲ೦ಗಡಿ  ಮಾವಿನ ಹಣ್ಣು, ಹಲಸಿನ ಹಣ್ಣು ಹೀಗೆ ಆಯಾ ಕಾಲದ ಹಣ್ಣುಗಳು ಅವನಿಗೆ ಪ್ರಿಯವಾಗಿದೆ (ಹುಳಿ ಇರುವ ಹಣ್ಣು, ಗಾಡ ಬಣ್ಣದ ತರಕಾರಿ ನಾಯಿಗಳಿಗೆ ಕೊಡಬಾರದೆಂಬ ವೆಟನರಿ ವೈದ್ಯರ ಶಿಪಾರಸ್ಸಿನಂತೆ ಕೊಡಬಾರದು).    ಸಣ್ಣಿಂದಲೇ ಸಾ

Blog number 1204. ಡಾಕ್ಟರ್ ಡೊಂಗ್ರೆ ಪಾರ್ಕ್ ಅಮೇರಿಕಾದ ಅತಿ ಹೆಚ್ಚು ಆದಾಯ ಗಳಿಸುವ ನಂಬರ್ ಒನ್ ಅಕ್ಯೂಪಂಚರಿಸ್ಟ್, ವಿಶ್ವದರ್ಜೆ ಅಕ್ಯೂಪಂಚರ್ ಚಿಕಿತ್ಸೆ ನನ್ನ ಹೊಂಬುಜ ಲಾಡ್ಜ್ ನಲ್ಲಿ ಭಾರತೀಯರಿಗೆ ಸಿಗಬಹುದಾ? ಗೊತ್ತಿಲ್ಲ

https://youtu.be/vpQBNys1RCs #ಭಾಗ_1. #ಅಮೇರಿಕಾದ_ನಂಬರ್_ಒನ್_ಆಕ್ಯೂಪಂಚರಿಸ್ಟ್ #ಡಾಕ್ಟರ್_ಡೊಂಗ್ರೆ_ಪಾರ್ಕ್_ನನ್ನ_ಬೇಟಿಗಾಗಿ_ನನ್ನ_ಊರಿಗೆ  #ಇವರ_ವಾರ್ಷಿಕ_ಆದಾಯ_ಎರೆಡು_ದಶಲಕ್ಷ_ಡಾಲರ್. #ಆಕ್ಯೂಪಂಚರ್_ಚಿಕಿತ್ಸೆ_ಜಗಪ್ರಸಿದ್ದ. #ಇದರ_ಮೂಲ_ಚೀನಾ_ಎಂಬುದು_ತಪ್ಪು_ಇದು_ಕೋರಿಯಾದ್ದು. #ಇದಕ್ಕೆ_ಆದಾರ_1600_ವಷ೯ದ_ಯೆಲ್ಲೋ_ಬುಕ್_ಆಫ್_ಎಂಪರರ್ #ಮತ್ತು_ಕೋರಿಯಾದ_ರಾಷ್ಟ್ರೀಯ_ಮ್ಯೂಸಿಯಂನಲ್ಲಿರುವ_ವಿವಿದ_ಸೂಜಿಗಳು #ಮುಂದಿನ_ದಿನಗಳಲ್ಲಿ_ವಿಶ್ವದರ್ಜಿಯ_ಅಕ್ಯುಪಂಚರ್_ಚಿಕಿತ್ಸೆ_ನನ್ನ_ಸಂಸ್ಧೆಯಿಂದ_ಸಾಧ್ಯವಾ?    ಮೊನ್ನೆ ಅಂದರೆ 26- ಜನವರಿ -2023ರ ಸಂಜೆ ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಾಲ್ ಹೌಸ್ ಸಿಟಿಯ ಅಮೇರಿಕಾ ಪೌರಾತ್ಯದ  ದಕ್ಷಿಣ ಕೊರಿಯಾ ಮೂಲದ ಡಾಕ್ಟರ್ ಡೊಂಗ್ರೆ ಪಾರ್ಕ್ ನನ್ನ ಬೇಟಿಗಾಗಿ ಒಂದು ತಿಂಗಳ ಮೊದಲೇ ಬರುವುದಾಗಿ ತಿಳಿಸಿದ್ದರು.   ಅದೇ ದಿನ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ 17ನೇ ವಾರ್ಷಿಕೋತ್ಸವದ ಅಂತಿಮ ದಿನದ ರಂಗಪೂಜೆಯಲ್ಲಿ ನಾನಿದ್ದೆ .   ಅಲ್ಲಿಗೆ ಬಂದು ರಂಗ ಪೂಜೆ ಮುಗಿಯುವ ತನಕ ಎಲ್ಲಾ ಪೂಜಾ ವಿಧಾನ ವೀಕ್ಷಿಸಿ ಪ್ರಸಾದ ಸ್ವೀಕರಿಸಿ ತಡ ರಾತ್ರಿವರೆಗೆ ಅನೇಕ ವಿಚಾರಗಳ ಚರ್ಚಿಸಿ, ಬೆಳಿಗ್ಗೆ ಜೋಗ್ ಪಾಲ್ಸ್  ವೀಕ್ಷಿಸಿ ವಾಪಾಸು ಬಂದು ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಾಸಾದರು.   ಇವರು ದಕ್ಷಿಣ ಕೋರಿಯಾ ಮೂಲದವರು ಈಗ ಅಮೇ

Blog number 1203. ಯಲ್ಲಪ್ಪ ಅಪ್ಪಾರಾವ್ ದಂತಿ ಕನ್ನಡ ಸಾಹಿತ್ಯದ ಅತಿರಥ ಮಹಾರಥರ ಪುಸ್ತಕ ಮಲೆನಾಡಿನ ಮೂಲೆ ಸಾಗರ - ಕಾರ್ಗಲ್ ನ ರವೀ೦ದ್ರ ಪುಸ್ತಕಾಲಯದಿಂದ ಪ್ರಕಟಿಸಿದವರು, ಇವರು ಪ್ರಕಟಿಸಿದ ಅನೇಕ ಕಾದಂಬರಿ ಕನ್ನಡದ ಹಿಟ್ ಸಿನಿಮಾವಾಗಿದೆ ಇವತ್ತಿಗೆ ಇವರಿಗೆ 85 ವರ್ಷ, ಇವರ ವಿವಾಹಕ್ಕೆ 50 ವಷ೯ ಇವರಂತದೇ ವ್ಯಕ್ತಿತ್ವದ ಮಂಗಳೂರಿನ ಅತ್ರಿಪುಸ್ತಕಾಲಯದ ಅಶೋಕ ವರ್ಧನರು ಇವರಿಬ್ಬರೂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಸ್ತುತ್ಯಾರ್ಹ.

#ಮಲೆನಾಡಿಗರಿಗೆ_ಏನಾಗಿದೆ? #ಅಹ೯ರಿಗೆ_ಅಹ೯ತೆಯೆ_ಅನರ್ಹತೆಯೇ? #ಸಾಗರದ_ರವೀ೦ದ್ರ_ಪುಸ್ತಕಾಲಯದ_ಯಲ್ಲಪ್ಪಅಪ್ಪಾರಾವ್_ದಂತಿಯವರ_ಕನ್ನಡ_ಸಾದನೆ_ಸಣ್ಣದೇ ? #ದಂತಿಯವರಿಗೆ_85_ಅವರ_ವಿವಾಹಕ್ಕೆ_50ವರ್ಷ #ಇವತ್ತಿನ_ಪ್ರಜಾವಾಣಿಯಲ್ಲಿ_ಎಂ_ರಾಘುರವರ_ಲೇಖನ_ಅಭಿನಂದನೀಯ #ಎಲೆಮರೆಯ_ಕಾಯಿಯಂತ_ಕನ್ನಡಸಾಹಿತ್ಯ_ಲೋಕದ_ದಂತಿ_ದಂಪತಿಗಳಿಗೆ_ಶುಭಹಾರೈಕೆಗಳು.    ಐವತ್ತು ವರ್ಷಗಳ ಹಿಂದೆಯೇ ಮಲೆನಾಡಿನ ಕುಗ್ರಾಮದ ಕಾರ್ಗಲ್ - ಸಾಗರದಂತ ಊರಿನಿಂದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಕತೆ- ಕಾದಂಬರಿ ಪ್ರಕಟಿಸಿ ಅದನ್ನು ಮಾರಾಟ ಮಾಡಿ ಜನಪ್ರಿಯಗೊಳಿಸಿದ ಯಲ್ಲಪ್ಪ ಅಪ್ಪಾರಾವ್ ದಂತಿ ಅವರ ಸಾದನೆ ಸಣ್ಣದಲ್ಲ.     ಇವರು ಪ್ರಕಟಿಸಿದ ಕಾದ೦ಬರಿಗಳು ಸೂಪರ್ ಡೂಪರ್ ಸಿನಿಮಾ ಆಗಿದ್ದು ಕೂಡ ಇಷ್ಟೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡದರು ಯಾರಿಗೂ ಹೇಳಿಕೊಳ್ಳದ, ಯಾರಿಂದ ಏನನ್ನೂ ಬಯಸದ ಮತ್ತು ಪ್ರಚಾರ ಪ್ರಶಸ್ತಿಯ ಕೀರ್ತಿಗಳಿ೦ದ ಮಾರಲ್ಲ ಮೈಲಿಗಳ ಅಂತರ ಕಾಪಾಡಿಕೊಂಡ ದಂತಿ ನಮ್ಮ ಸಾಗರದ ರವೀಂದ್ರ ಪುಸ್ತಕಾಲಯ, ಗ್ರಂಥಾಲಯದವರು ಎಂಬುದು ನನಗೆ ಹೆಮ್ಮೆ.   ಇವರ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು https://arunprasadhombuja.blogspot.com/2021/09/blog-post_20.html.    ಅವರೊಂದು ದಂತಕಥೆಯೆ ಇವರ೦ತವರೇ ಆದ ಮಂಗಳೂರಿನ ಅತ್ರಿ ಪುಸ್ತಕಾಲಯದ ಅಶೋಕ ವರ್ಧನರೂ ಕೂಡ ಪುಸ್ತಕ ಪ್ರಕಾಶನ ಮಾರಾಟದ

Blog number 1202.ಪ್ರಖ್ಯಾತ ಚಿತ್ರಗಾರ ನಿರ೦ಜನ ಕುಗ್ವೆ ಕುಂಚದಲ್ಲಿ ನನ್ನ ಕ್ಯಾರಿಕೇಚರ್

#ನಿರOಜನಕುಗ್ವೆ ಇವತ್ತು ನನ್ನ ಕಚೇರಿಯಲ್ಲಿ ಮತ್ತು ನಮ್ಮ ಊರ ವರಸಿದ್ಧಿ ವಿನಾಯಕ ಜಾತ್ರೆಯಲ್ಲಿ #   ಅವರು ಬರುವುದೇ ಹಾಗೆ ಸುದ್ದಿ ಇಲ್ಲದೆ ಹಾಗೇ ಇವತ್ತು ನಿರ೦ಜನ್ ಕುಗ್ವೆ ನನಗಾಗಿ ಬರೆದ ಕ್ಯಾರಿಕೇಚರ್ ಉಡುಗೊರೆ ಪ್ರೇ೦ ಹಾಕಿ ತಲುಪಿಸಿದರು ಸಂತೋಷದಿ೦ದ ಸ್ಟೀಕರಿಸಿದೆ ನನ್ನ ಆಪೀಸಿನಲ್ಲಿ ಇಟ್ಟು ಕೊಂಡಿದ್ದೇನೆ.  ಅವರಿಗೆ ಕಾಫಿಯೊ೦ದಿಗೆ ಅವರ ಹುಟ್ಟುಹಬ್ಬದ ನೆನಪಿಗಾಗಿ ಸಾಗರದ ಪ್ರಖ್ಯಾತ ಬರಹಗಾರ ಪತ್ರಕತ೯ರಾದ ಆರ್.ಟಿ. ವಿಠಲ್ ಮೂತಿ೯ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ.   ನಮ್ಮ ಊರ ವರಸಿದ್ದಿ ವಿನಾಯಕ ದೇವರ ದೇವಲಯದಲ್ಲಿ ಅವರ ಎಲ್ಲಾ ಹೋರಾಟಕ್ಕೆ ಯಶಸ್ಸು ದೊರೆಯಲಿ ಎಂದು ವಿಶೇಷ ಪೂಜೆ ಮಾಡಿ ಪ್ರಾಥಿ೯ಸಿ ಪ್ರಸಾದ ನೀಡಲಾಯಿತು.   ಪ್ರತಿ ವಷ೯ ನಡೆಯುವ ಜಾತ್ರ ರಂಗೋಲಿ ಸ್ಪದೆ೯ಯ ತೀಪು೯ಗಾರರಾಗಿ ಕಾಯ೯ ನಿವ೯ಹಿಸಿದರು ಅಲ್ಲೆಲ್ಲಾ ಇವರು ನನ್ನ ಬಗ್ಗೆ ಬರೆದ ಕಾಟೂ೯ನ್ ಬಗ್ಗೆಯೆ ಎಲ್ಲರೂ ಮಾತಾಡುತ್ತಿದ್ದದ್ದು ವಿಶೇಷ.   ನಮ್ಮ ಊರ ಜಾತ್ರೆಗೆ ಬಂದು ಭಾಗವಹಿಸಿದ ಕುಗ್ವೆ ನಿರಂಜನರಿಗೆ ಕೃತಜ್ಞತೆಗಳು.

Blog number 1201. ಶೃಂಗೇಶ್ ಸಂಪಾದಕತ್ವದಲ್ಲಿ ಶಿವಮೊಗ್ಗ ಜಿಲ್ಲಾ ದೈನಿಕ ಜನ ಹೋರಾಟ ಪತ್ರಿಕೆಯ 19 ನೇ ಹುಟ್ಟುಹಬ್ಬದ ಶುಭಾಶಯಗಳು.

#ಶೃ೦ಗೇಶರ_ಜನಹೋರಾಟ_ದಿನ_ಪತ್ರಿಕೆಗೆ_18ರ_ಪ್ರಾಯ #ಇವತ್ತಿನ_ಪತ್ರಿಕೆ_19ನೇ_ವಷ೯ದ_ಮೊದಲ_ಪತ್ರಿಕೆ  #ಜನಹೋರಾಟ_ಶಿವಮೊಗ್ಗ_ಜಿಲ್ಲಾ_ದಿನಪತ್ರಿಕೆಯಾಗಿ_19ನೇ_ವಾಷಿ೯ಕೋತ್ಸವದ_ಸಂದರ್ಭದಲ್ಲಿ #ಸಂಪಾದಕರಾದ_ಶೃಂಗೇಶ್_ಮತ್ತು_ಅವರ_ಪತ್ರಿಕಾ_ಬಳಗಕ್ಕೆ_ಅಭಿನಂದನೆಗಳು.      ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 19ನೇ ವಷ೯ಕ

Blog number 1200. ಇವತ್ತು ಗಣಪತಿ ಜಯಂತಿ, ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದ 17ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ರಥೋತ್ಸವದ ಸವಿ ನೆನಪಿಗಾಗಿ ದೈವಜ್ಞ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳು ನಿರ್ಮಿಸಿ ಕೊಟ್ಟಿರುವ ಪಾಕಶಾಲೆ ಲೋಕಾರ್ಪಾಣೆ ಮತ್ತು ಮುಂದಿನ 18 ನೇ ವರ್ಷದ ನೆನಪಿಗಾಗಿ ಅವರಿಂದ ಅರ್ಚಕರ ನಿವಾಸ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ.

#ಗಣಪತಿ_ಜಯಂತೋತ್ಸವದ_ಶುಭಹಾರೈಕೆಗಳು. #ಇವತ್ತು_ನಮ್ಮ_ಊರಿನ_ಶ್ರೀವರಸಿದ್ದಿವಿನಾಯಕ_ದೇವರ_ಬ್ರಹ್ಮರಥೋತ್ಸವ #ಹದಿನೇಳನೇ_ವಷ೯ದ_ಜಾತ್ರಾ_ಮಹೋತ್ಸವ. #ದೇವಸ್ಥಾನದ_ನನ್ನ_ಕನಸು_ನನಸು_ಮಾಡಿದ್ದ_ದೈವಜ್ಞ_ಜೋತಿಷಿ_ಡಾ_NS_ವಿಶ್ವಪತಿಶಾಸ್ತ್ರೀಗಳ_ಆಶ್ರೀವಾದದೊಂದಿಗೆ #ಅವರು_ದೇವಸ್ಥಾನಕ್ಕೆ_ನಿರ್ಮಿಸಿಕೊಟ್ಟಿರುವ_ಪಾಕಶಾಲೆ_ಇವತ್ತು_ಲೋಕಾರ್ಪಣೆ ' #ಮುಂದಿನ_18ನೇ_ವಷಾ೯ಚಾರಣೆಗೆ_ಅರ್ಚಕರಿಗೆ_ವಾಸದ_ಮನೆ_ನಿರ್ಮಿಸಲಿದ್ದಾರೆ.    ಇವತ್ತು ಹಿಂದೂ ಪಂಚಾಗದ ಪ್ರಕಾರ ಗಣೇಶ ಜಯಂತೋತ್ಸವ, ಶಿವ ಪಾರ್ವತಿಯ ಪುತ್ರ ಗಣಪತಿ ಮಾಘ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನ ಜಗತ್ತಿಗೆ ಅವತರಿಸಿದರೆಂದು ಮತ್ತು ಈ ದಿನ #ಮಾಘ_ಶುಕ್ಲ_ಪಕ್ಷ_ಕುಂದಚತುರ್ಥಿ ಎಂದೇ ಹಿಂದೂ ದರ್ಮಿಯರ ಪವಿತ್ರ ದಿನವಾಗಿದೆ.   ಇದೇ ಶುಭ ಮಹೂರ್ತದಲ್ಲಿ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ಸ್ಟಾಮಿಯ ಪ್ರತಿಷ್ಟಾಪನೆ ಸನ್ಮಾನ್ಯ ವಿಶ್ವಪತಿ ಶಾಸ್ತ್ರೀಜಿ ಮತ್ತು ಪುರೋಹಿತರಾದ ಕೆಂಜಿಗಾಪುರ ಶ್ರೀಧರ ಭಟ್ಟರು ಸೇರಿ ತೀರ್ಮಾನಿಸಿ ದಿನಾಂಕ 4- ಪೆಬ್ರುವರಿ-2006 ರಂದು ನೆರವೇರಿಸಿದ್ದರು.   ಅದರಂತೆ ಪ್ರತಿ ವರ್ಷ ನಮ್ಮ ಊರ ವರಸಿದ್ದಿ ವಿನಾಯಕ ಸ್ವಾಮಿ ಜಾತ್ರೆ ಮತ್ತು ರಥೋತ್ಸವ  ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು 17 ವರ್ಷದಿಂದ ನಡೆಯುತ್ತಿದೆ.    ಈ ಶುಭ ಸಂದರ್ಭದಲ್ಲಿ ವಿಶ್ವಪತಿ ಶಾಸ್ತ್ರೀಜಿಯವರು ದೇವಾಲಯಕ್ಕೆ ನಿರ್ಮಿಸಿ ಕೊಟ್ಟಿರುವ ಪಾಕಶಾಲೆ ರಥ

Blog number 1199. ಪಾರೆಸ್ಟರ್ ಬೋರಯ್ಯರ ನೆನಪುಗಳು.

ಆನಂದಪುರದಲ್ಲೇ_ಬಾಳಿ_ಬದುಕಿದ_ಶ್ರಮ_ಜೀವಿ_ಕಲಾವಿದ_ಪಾರೆಸ್ಟರ್_ಬೋರಯ್ಯ   ನಿಂತಲ್ಲೇ ಯಾವುದೇ ವಿಷಯ ಅಥವ ವ್ಯಕ್ತಿಯ ಮೇಲೆ ಹಾಡು ಬರೆದು ಅದಕ್ಕೆ ರಾಗ ಸಂಯೋಜಿಸಿ ಹಾಡುವ ಕಲೆ ಬೋರಯ್ಯರಲ್ಲಿತ್ತು, ಎಲ್ಲೇ ಸಾಂಸ್ಕೃತಿಕ ಕಾಯ೯ಕ್ರಮ ಇದ್ದರೂ ಅದನ್ನ ನೋಡಲು ಎಷ್ಟೇ ದೂರ ಇದ್ದರೂ ತಮ್ಮ ಇಳಿ ವಯಸ್ಸಿನಲ್ಲಿ ಸೈಕಲ್ ಹತ್ತಿ ಹೊರಟು ಬಿಡುತ್ತಿದ್ದರು.  ಸಂಗೀತ ಕಲಿತವರು, ಹಾರ್ಮೋನಿಯಂ ತಬಲ ಕೂಡ ಕರಗತ ಮಾಡಿಕೊಂಡವರು.   ಇವರ ತಂದೆ ರೈಲ್ವೆ ಇಲಾಖೆ ಕೆಲಸಕ್ಕೆ ಮಂಡ್ಯದಿಂದ ಬಂದವರು ಇಲ್ಲೇ ನೆಲೆನಿಂತವರು, ಬೋರಯ್ಯನವರು ಆನಂದಪುರದಲ್ಲೆ ವಿದ್ಯಾಬ್ಯಾಸ ಮಾಡಿ ಅರಣ್ಯ ಇಲಾಖೆ ಸೇರಿ ಸೇವೆ ಸಲ್ಲಿಸಿ ನಿವೃತ್ತರಾದವರು.   ನಿವೃತ್ತಿ ನಂತರ ನಮ್ಮ ಗ್ರಾಮ ಪಂಚಾಯತನ ಬಸವನ ಹೊಂಡದಲ್ಲಿ ಕೃಷಿ ಮಾಡಿಕೊಂಡಿದ್ದರು 1995ರಲ್ಲಿ ಯಡೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.   ನಮ್ಮ ಊರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಪ್ರತಿಷ್ಟಾಪನೆಗೆ ದೂರದ ಕೋಲಾರ ಜಿಲ್ಲೆಯ ಶಿವಾರಪಟ್ಟಣದಿಂದ ಶ್ರೀ ಕೃಷ್ಣ ಶಿಲಾ ವಿಗ್ರಹ 2006ರಲ್ಲಿ ಬಂದಾಗ ದೇವಾಲಯದಲ್ಲಿ ತಮ್ಮ ಹಾರ್ಮೋನಿಯೊಂದಿಗೆ ಭಕ್ತಿ ಗೀತೆಗಳಿಂದ ಸ್ವಾಗತಿಸಿದವರು ದಲಿತ ಹಾಡುಗಾರರಾದ ಬೋರಯ್ಯನವರು ಮತ್ತು ಊರಿನ ಅಂದ ಕಲಾವಿದ ಒಲೇರಿಯನ್ ಡಿಸೋಜರವರು.   15ನೇ ವರ್ಷದ ಜಾತ್ರಾ ಸಂದಭ೯ದಲ್ಲಿ ನಮ್ಮ ಊರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದ ನಿವೃತ್ತ ಪಾರೆಸ್ಟರ್ ಮತ್

Blog number 1198. ಜಂಗಲ್ ವಾಲೆ ಬಾಬಾ ಜೈನ ಸಂತರು ನಮ್ಮಲ್ಲಿ ತಂಗಿದ್ದರು ಅವರ ಜೊತೆ ಸತ್ಸಂಗ ಮತ್ತು ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟಕ್ಕೆ ಸಂದರ್ಶನ ಮಾಡಿದ ಭಾಗ್ಯ ನನ್ನದು.

#ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರ ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ನಿನ್ನೆ ಶನಿವಾರದಿಂದ (12 ಅಕ್ಟೋಬರ್ 2019) ದಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದೇಹ ತ್ಯಾಗ ಮಾಡಿದ್ದಾರೆ#.     ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ಯಥಾವತ್ತು ಇಲ್ಲಿ ಹಾಕಿದ್ದೇನೆ.  ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.     ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.       ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲ

Blog number 1197. ಕಾರ್ಗಿಲ್ ನಲ್ಲಿ ವಾಸ ಇರುವ ಭಾರತ ರಾಷ್ಟ್ರಪ್ರೇಮಿ, ಭಾರತೀಯ ಸೈನ್ಯದ ಪ್ರೀತಿಪಾತ್ರ ಕುಟುಂಬದ ಮೊಹಮದ್ ಅಲೀ ಅಕ್ಬರ್.

ಮೊಹಮದ್ ಆಲೀ ಅಕ್ಬರ್ ಕಾಗಿ೯ಲ್ ನಿವಾಸಿ ಇವತ್ತು ನಮ್ಮ ಅತಿಥಿ ಇವರು ಮಹಾನ್ ದೇಶ ಪ್ರೇಮಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ಮು೦ದೆ ದೇಶದ ರಕ್ಷಣಾ ಇಲಾಖೆಗೆ ಇವರು ತುಂಬಾ ಸಹಾಯ ಮಾಡುತ್ತಾರೆ ಇವರ ಮಾವನಿಗೆ ಕ್ಯಾನ್ಸರ್ ಎಲ್ಲಾ ಕಡೆ ಚಿಕಿತ್ಸೆ ಮಾಡಿದರೂ ಪ್ರಯೋಜನ ಆಗಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಆಯುವೆ೯ದ ಪಂಡಿತರಾದ ನರಸೀಪುರ ನಾರಾಯಣ ಮೂತಿ೯ ಜಾಷದಿಗಾಗಿ ಬರುತ್ತಿದ್ದಾರೆ ಆದರೆ ಆದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ       ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕಾಗಿ ಕಾಗಿ೯ಲ್ ಆಮಿ೯ ಬೇಸ್ ನಿಂದ ಬಂದ ಕರೆಯOತೆ ಇವರ ಕುಟುಂಬವನ್ನ ನಮ್ಮ ಲಾಡ್ಜ್ ನಲ್ಲಿ ಉಳಿಸಿ ವೈದ್ಯರನ್ನ ಬೇಟಿ ಮಾಡಿಸಿ ಔಷದಿ ಕೊಡಿಸಿ ವಿದಾಯ ಮಾಡಿದೆ.#    ಇವರ ತಂದೆ ಕಾಗಿ೯ಲ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆ ನೀಡಿದವರು ಇವರ ಪ್ರಯತ್ನದಿಂದ ಇಡೀ ಜಿಲ್ಲೆ 75% ಅಕ್ಷರಸ್ಥರಾಗಿದ್ದಾರೆ, ಬಂದ ಪ್ರಶಸ್ತಿಗಳನ್ನ ನಯವಾಗಿ ನಿರಾಕರಿಸಿದವರು ಅವರು ಒಪ್ಪಿದ್ದರೆ ಶಾಸಕ ಸಂಸದರಾಗ ಬಹುದಿತ್ತು ಅವರು ಅದನ್ನೆಲ್ಲ ಬಯಸದೆ ಕಿಂಗ್ ಮೇಕರ್ ಆಗಿದ್ದರು ಅಂತ ಅಕ್ಬರ್ ವಿವರಿಸಿದರು.   ಸ್ಥಳಿಯರ ಸಹಕಾರ ಇಲ್ಲದೆ ಕಾಗಿ೯ಲ್ ಯುದ್ಧ ಗೆಲ್ಲಲಾಗುತ್ತಿರಲಿಲ್ಲ ಅಂತ ಅವತ್ತಿನ ಮುಂಚೂಣಿ ಸೇನಾ ಅಧಿಕಾರಿಗಳ ಹೇಳಿಕೆ 1999ರಲ್ಲಿ ನೆನಪಿತ್ತು ಇದನ್ನ ಪ್ರಸ್ತಾಪಿಸಿದಾಗ ಅವರು ಹೇಳಿದ್ದು ಕಾಗಿ೯ಲ್ ನಲ್ಲಿ 85% ಮುಸ್ಲಿ೦ ಇದ್ದಾರೆ ಅವರೆಲ್ಲ ಶಿಯಾ ಪಂಥದವರು ಭಾ

Blog number 1196. ಪತ್ರಕರ್ತ ಹರತಾಳು ಹೆಚ್.ವಿ.ನಾರಾಯಣ ರಾವ್ ಕೊಲೆ 1970 ರ ದಶಕದಲ್ಲಿ ರಾಜ್ಯದಾದ್ಯಂತ ಸೆನ್ಸ್ ಸೇಷನಲ್ ಸರಣಿ ಲೇಖನಗಳ ಸುದ್ದಿ.

https://youtu.be/tPLY21R1V-c #ಹೆಚ್_ವಿ_ಆರ್_ನೆನಪುಗಳು_ಭಾಗ_3 #ಹರತಾಳಿನ_ಪತ್ರಕರ್ತ_ನಾರಾಯಣ್_ರಾವ್_ಕೊಲೆ #ಜಿಲ್ಲಾ_ಪತ್ರಿಕೆ_ಮಲೆನಾಡು_ವಾರ್ತಾ_ವರದಿಗಾರರು #ಭೂಪಾಳಂ_ಚಂದ್ರಶೇಖರಯ್ಯ_ಸಂಪಾದಕತ್ವದಲ್ಲಿ #ಸಾಕ್ಷಿ_ಕೊರತೆಯಿಂದ_ಕೇಸ್_ಖುಲಾಸೆ #ಪ್ರಜಾವಾಣಿ_ಕನ್ನಡಪ್ರಭದಲ್ಲಿ_ಸರಣಿ_ಲೇಖನ #ಹೆದರಿಸಲು_ಹೋಗಿ_ಕೊಲೆ_ಆರೋಪದಿಂದ_ಬಂದಿಸಲ್ಪಟ್ಟವರು. #ಪಶ್ಚಾತ್ತಾಪದಿಂದಲೇ_ಇಹಲೋಕ_ತ್ಯಜಿಸಿದ_ಹತ್ಯಾ_ಆರೋಪಿ  #ಬ್ರಾಹ್ಮಣ_ಹತ್ಯಾ_ದೋಷದಿಂದ_ಕುಷ್ಟ_ರೋಗ_ಬಂದಿತೆಂಬ_ಅವನ_ಸುಪ್ತಮನಸ್ಸಿನ_ಭಯ. #ಹರತಾಳು_ಹಾಲಪ್ಪಗೌಡರ_ಕುಟುಂಬ_ವೈದ್ಯರು_ನಮ್ಮ_ತಂದೆ    ಹೊಸನಗರ ತಾಲ್ಲೂಕಿನ ಹರತಾಳಿನ ಪತ್ರಕರ್ತ ಹೆಚ್.ವಿ. ನಾರಾಯಣ ರಾವ್ ಸಾಗರದ ಹಿರಿಯ ಪತ್ರಕರ್ತ ಸಾಗರ ಸಂದೇಶದ ಹೆಚ್.ವಿ. ಆರ್. ಅಣ್ಣ.   1960-70 ರ ದಶಕದ ಶಿವಮೊಗ್ಗ ಜಿಲ್ಲೆಯ ಅತ್ಯಂತ ಹೆಚ್ಚು ಪ್ರಸರಣದ ಭೂಪಾಳಂ ಚ೦ದ್ರಶೇಖರಯ್ಯನವರ ಮಲೆನಾಡು ವಾರ್ತಾ ಪತ್ರಿಕೆ ವರದಿಗಾರರು.    ಇವರ ಕೊಲೆ ಪ್ರಕರಣ ಆಗ ಇಡೀ ರಾಜ್ಯದಲ್ಲಿ ಸೆನ್ಸೆಷನಲ್ ನ್ಯೂಸ್ ಆಗಿತ್ತು, ಪ್ರಜಾವಾಣಿ ಮತ್ತು ಕನ್ನಡ ಪ್ರಭದಲ್ಲಿ ಸರಣಿ ಲೇಖನವಾಗಿತ್ತು.   ಆಗ ಜಿಲ್ಲಾ ರಕ್ಷಣಾಧಿಕಾರಿಗಳು ಗರುಡಾಚಾರ್ ನಂತರ ಬೆಂಗಳೂರಿನ ದಾಖಲೆಯ ದೀರ್ಘ ಕಾಲಾವದಿಯ ಪೋಲಿಸ್ ಕಮಿಷನರ್ ಆಗಿದ್ದವರು, ಇವರ ಪುತ್ರ ಉದಯ ಗರುಡಾಚಾರ್ ಬೆಂಗಳೂರಿನ ಚಿಕ್ಕಪೇಟೆಯಿಂದ ಹಾಲಿ ಬಿಜೆಪಿ ಶಾಸಕರು.   ಇವರ ಆಪ್ತರಾದ ಸಮಾಜವಾದಿ ಸಾಹಿತಿ ಕೋಣ೦ದೂರು ವೆಂಕಪ

Blog number 1195. ನಮ್ಮ ಊರಿನ ಕೇರಳ ಸಂಜಾತ ಗೆಳೆಯ ಬೇಬಿ ಉಲ್ ಹನನ್ ಪುತ್ರಿ ಇಂಜಿನಿಯರ್ ಮರಿಯಾ ಬೇಬಿ ವಿವಾಹ ಆಹ್ವಾನ ಪತ್ರಿಕೆ.

#ನಮ್ಮ_ಊರಿನ_ಮರಿಯಾ_ಬೇಬಿ_ವಿವಾಹ_ಆಹ್ವಾನ_ಪತ್ರಿಕೆ. #ಪತ್ರಿಕೆ_ನೀಡಲು_ಸ್ವತಃ_ಮದುಮಗಳು_ಬಂದಿದ್ದರು #ಸಹೋದರ_ಅಮಲ್_ಮತ್ತು_ಮರಿಯಾ_ಗೆಳತಿ_ಜೊತೆಯಾಗಿ #ಇವರ_ಕುಟುಂಬ_ಕೇರಳದಿಂದ_ಬಂದವರು #ಬೇಬಿ_ಉಲ್_ಹನನ್_ದಂಪತಿಗಳ_ಈ_ಮಕ್ಕಳ_ಸಾಧನೆ_ಸಣ್ಣದಲ್ಲ. #ನೂತನ_ದಂಪತಿಗಳಿಗೆ_ಶುಭಹಾರೈಕೆಗಳು.        ಬೇಬಿ ಉಲ್ ಹನನ್ ಕುಟುಂಬ 1991 - 92ರಲ್ಲಿ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಹಾದೀಬೀಸು ಎಂಬಲ್ಲಿ ಜಮೀನು ಖರೀದಿಸಿ ಕೃಷಿ ಪ್ರಾರಂಭಿಸಿದರು.    ರಬ್ಬರ್, ಅಡಿಕೆ, ಗೇರು ಮತ್ತು ತಾಳೆ ಕೃಷಿ ಜೊತೆಯಲ್ಲಿ ಬೇಬಿ ಸ್ಥಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತವಾಗಿ ಉಪನ್ಯಾಸ ಮಾಡುತ್ತಿದ್ದರು.    ನಂತರ ಬಿಹಾರದಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಅಲ್ಲಿಂದ ಬಂದು ಪುನಃ ಕೃಷಿಯಲ್ಲಿ ತೊಡಗಿದಾಗಲೇ ಕೆಲವು ಹಿತ ಶತೃಗಳು ಇವರ ಜಮೀನಿನ ವಿಚಾರವಾಗಿ ಇವರಿಗೂ ಇವರ ತಂದೆ ತಾಯಿಗೂ ಬಿನ್ನಾಭಿಪ್ರಾಯ ತಂದರು ಅದೆಲ್ಲವನ್ನು ಬಗೆಹರಿಸುವಲ್ಲಿ ಇವರ ದೊಡ್ಡ ಮಗಳು ಮರಿಯಾ ಇಂಜಿನಿಯರ್ ಆಗಿ ಕಾಂಗ್ನಿಜೆಂಟ್ ಕಂಪನಿಯಲ್ಲಿ ಉದ್ಯೋಗ ಪಡೆದರು.   ಮಗ ಅಮಲ್ ಕೂಡ ಮ್ಯಾನೇಜ್ ಮೆಂಟ್ ಪದವಿದರನಾಗಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ ಈ ಸಂದರ್ಭದಲ್ಲೆ ಮರಿಯಾ ವಿವಾಹ ಆಹ್ವಾನ ಪತ್ರಿಕೆ ನೀಡಲು ನನ್ನಲ್ಲಿಗೆ ಅವರ ಸಹೋದರ ಮತ್ತು ಮರಿಯಾ ಸಹೋದ್ಯೋಗಿ ಗೆಳತಿ ಜೊತೆ ನಿನ್ನೆ ಬಂದಿದ್ದರು.    ಈ ಕುಟುಂಬ ನಮ್ಮ ಊರಿಗೆ ಬಂದಾಗ ಇವರಿಗೆ ಅವರ ಮಾತ

Blog number 1194. ಬಾಲ್ಯದಲ್ಲಿ ಬಾವಿಗೆ ಬಿದ್ದು ಬದುಕಿದ್ದು ಮರೆಯಲಾರದ ಅನುಭವ

#ಬಾಲ್ಯದಲ್ಲಿ_ನಾನು_ಬಾವಿಯಲ್ಲಿ_ಬಿದ್ದಿದ್ದೆ #ಪ್ರಜ್ಞೆ_ಬಂದ_ಮೇಲೆ_ಅತ್ತೂ_ಕರೆದರೂ_ಯಾರೂ_ಬರಲಿಲ್ಲ #ನನ್ನಮ್ಮ_ಕಾಣೆಯಾದ_ಮಗನ_ಹುಡುಕಿ_ಬಂದಾಗ_ಬಾವಿಯಿಂದ_ಮೇಲೆತ್ತಿದರು. #ನಮ್ಮೂರ_ಸಮೀಪದ_ತಾವರೇಹಳ್ಳಿಯ_ಗೋಡೆಕೃಷ್ಣಣ್ಣರ_ಮನೆ_ಬಾವಿ  #ಸತ್ಯನಾರಾಯಣ_ಕಥೆಯ_ಆಹ್ವಾನದಲ್ಲಿ_ಹೋಗಿದ್ದು #ಕಿಟ್ಟಾಜೋಯಿಸರು_ಸತ್ಯನಾರಾಯಣ_ಕಥೆ_ಪೂರ್ತಿ_ಹೇಳಿ_ಸಪಾದಭಕ್ಷ್ಯ_ಪ್ರಸಾದ_ವಿತರಣೆ_ತನಕ_ಬಾವಿಯಲ್ಲಿದ್ದೆ.      ಬಹುಶಃ 1968-69ರಲ್ಲಿ ನನಗೆ ಮೂರರಿಂದ ನಾಲ್ಕು ವರ್ಷ ಇರುವಾಗ ನಮ್ಮ ಊರಿನ ಸಮೀಪದ ತಾವರೇಹಳ್ಳಿಯ ನಮ್ಮಜ್ಜಿಯ ಸಂಬಂದಿ ಗೋಡೆ ಕೃಷ್ಣಣ್ಣರ ಮನೆಯಲ್ಲಿ ಸತ್ಯನಾರಾಯಣ ವೃತ ಕಾಯ೯ಕ್ರಮದ ಆಹ್ವಾನ ನೀಡಿದ್ದರಿಂದ ನನ್ನ ತಾಯಿ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.     ತಾವರೇಹಳ್ಳಿ ಗೋಡೆ ಕೃಷ್ಣಣ್ಣರ ಮಗ ನಾಗರಾಜ ಈಗಿಲ್ಲ ಇವರ ಮಗ ರಾಘವೇಂದ್ರ ಈಗ ಆನಂದಪುರಂನಲ್ಲಿ ಖ್ಯಾತ ಪೋಟೋಗ್ರಾಪರ್ ಆಗಿದ್ದಾರೆ.    ಅವರ ಮನೆಯಲ್ಲಿ ಅವತ್ತಿನ ಸತ್ಯನಾರಾಯಣ ಕಥೆ ನಡೆಸಿಕೊಡುವ ಅರ್ಚಕರು ಆನಂದಪುರಂನ ಕಿಟ್ಟಾ ಜೋಯಿಸರು.    ಅವರು ಸ್ವಲ್ಪ ತಡವಾಗಿ ಬಂದು ಪೂಜೆ ಪ್ರಾರಂಬಿಸಿ ಕಥೆ ಹೇಳಲು ಪ್ರಾರಂಬಿಸಿದಾಗ ಹಿರಿಯರೆಲ್ಲ ಭಕ್ತಿ ಪರವಶೆಯಿಂದ ಸತ್ಯನಾರಾಯಣ ಕಥೆ ಕೇಳುತ್ತಾ ತಲ್ಲೀನರಾಗಿದ್ದಾಗ ನನ್ನದೇ ವಯೋಮಾನದ ಮಕ್ಕಳೆಲ್ಲ ಮನೆ ಎದುರಿನ ಗದ್ದೆ ಬಯಲಲ್ಲಿ ಆಡುತ್ತಾ ತಿರುಗಾಡಲು ಶುರು ಮಾಡಿದ್ದು ಯಾರಿಗೂ ಗಮನಕ್ಕೆ ಬರಲಿಲ್ಲ.    ಮನೆ