Skip to main content

Blog number 1175. ನೀವೂ ಹೋಟೆಲ್ ಮಾಲಿಕರಾಗಬಹುದು, ಆಸಕ್ತಿ ಇದ್ದವರು ಸಂಪರ್ಕಿಸಿ

#ಇದು_ನನ್ನ_ಹೊಸ_ಅವತಾರ

#ರೆಸ್ಟೋರೆಂಟ್_ಸರಣಿಗಳ_ಪ್ರಾರಂಭ

#ಆಸಕ್ತರು_ಪಾಲ್ಗೊಂಡು_ಉದ್ಯಮಿ_ಆಗಬಹುದು

#ಜಾಗ_ಮಾತ್ರ_ನಿಮ್ಮದು_ಲಾಭ_ಕೂಡ_ನಿಮಗೆ

#ರಾಸಾಯನಿಕ_ಮುಕ್ತ_ಪರಿಶುದ್ದ_ಆಹಾರ

#ಸ್ಥಳಿಯ_ಗೃಹಕೈಗಾರಿಕೆಗಳ_ಆಹಾರೋತ್ಪನ್ನಗಳಿಗೆ_ಅಂತರಾಷ್ಟ್ರೀಯ_ಮಾನ್ಯತೆ.

#ಎಂಟು_ಟೇಬಲ್_ಮುವ್ವತ್ತರೆಡು_ಜನರ_ಸೀಟಿಂಗ್_ಸಾಮರ್ಥ್ಯ_ಅಟ್ಯಾಚ್_ಟಾಯಿಲೆಟ್

#ಟ್ರೇಡ್_ಮಾರ್ಕ್_ಟ್ರೀಡ್_ನೇಮ್_ರಿಜಿಸ್ಟರ್ಡ್

  EXPLORE THE WESTERN GHATS/ ಎಕ್ಸ್ ಪ್ಲೋರ್ ದಿ ವೆಸ್ಟರ್ನ್ ಘಾಟ್ಸ್ ಎಂಬ ಟ್ರೇಡ್ ನೇಮ್ ಪಡೆಯಲು ಎಷ್ಟೋ ತಿಂಗಳ ಶ್ರಮ ಇದೆ ಇಡೀ ಯೋಜನೆ ಕಾರ್ಯರೂಪಕ್ಕೆ ತರಲು 5 ವರ್ಷ ಬೇಕಾಯಿತು.
  ನನ್ನ ಕನಸಿಗೆ ಸರಿ ರೂಪ ನೀಡಲು ಸಂಪರ್ಕಕ್ಕೆ ಬಂದ ಪರಿಣಿತರು ನೂರಾರು ಜನ, ಇಂತವರಲ್ಲಿ ಯುರೋಪಿನ ಸಂಸ್ಥೆ, ಮುಂಬಾಯಿಯ ಸಂಸ್ಥೆ ಮತ್ತು ಬೆಂಗಳೂರಿನ ಸಂಸ್ಥೆಗಳು ನನ್ನ ಜೊತೆ ಮುಂದಿನ ದಿನದಲ್ಲೂ ಹೆಜ್ಜೆ ಹಾಕಲಿದ್ದಾರೆ.
  ನನ್ನ ಸ್ವಂತ ಆಹಾರ ಉದ್ಯಮದ ಅನುಭವ, ಹಾಲಿ ನಡೆಸುತ್ತಿರುವ ರೆಸ್ಟೋರೆಂಟ್, ಲಾಡ್ಜ್, ಕಾಟೇಜ್ ಗಳ ಅನುಭವವೂ ಈ ಯೋಜನೆ ರೂಪಿಸಲು ಸಹಾಯವಾಗಿದೆ.
   ಇಡೀ ರಾಜ್ಯದಲ್ಲಿ ಈ ಯೋಜನೆ ವಿಸ್ತಾರ ಮಾಡಿ ಪಕ್ಕದ ರಾಜ್ಯಗಳಿಗೂ ಪಾದಾರ್ಪಣೆಯ ಗುರಿ ಇದೆ ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಜರ್ಮನ್ ದೇಶದ ಸಾಪ್ಟ್ ವೇರ್ (ಐದು ಸಾವಿರ ರೆಸ್ಟೋರಂಟ್ ನಿಬಾಯಿಸುವ ಸಾಮರ್ಥ್ಯ ಹೊಂದಿದೆ) ಪಡೆದಿದ್ದೇವೆ.
  ಪ್ರತಿ ರೆಸ್ಟೋರೆಂಟ್ ಗೆ 10 ಕಿ.ಮಿ. ವ್ಯಾಸದಲ್ಲಿ ಪುಡ್ ಆರ್ಡರ್ ಮಾಡಬಹುದಾದ ಪ್ರತ್ಯೇಕ ಆಪ್ (Aap), ಕ್ಯಾಟರಿಂಗ್ ವ್ಯವಸ್ಥೆ ಈ ಯೋಜನೆಯಲ್ಲಿದೆ.
  ಈ ರೆಸ್ಟೋರೆಂಟ್ ಗಳಿಗೆ ಸೆಂಟಲ್ ಕಿಚನ್ (Cloud Kitchen) ಮೂಲಕ ಗುಣಮಟ್ಟದ ಪರಿಶುದ್ಧವಾದ ಆಹಾರ ವಿಶೇಷವಾದ ಬಿಸಿಪಾತ್ರೆಯಲ್ಲಿ ಕ್ಲೋಸ್ಡ್ ವ್ಯಾನ್ ನಲ್ಲಿ ಸರಭರಾಜು.
   ನಮ್ಮದೆ ಗೋಲ್ಡನ್ ಬ್ಯಾಸ್ಕೆಟ್ ಬ್ರಾಂಡ್ ನಲ್ಲಿ ಸ್ಥಳಿಯ ಗೃಹ ಉತ್ಪನ್ನಗಳ ತಯಾರಕರಿಗೆ ಪ್ರೋತ್ಸಾಹಿಸಿ ಅವರ ಮಸಾಲೆ, ಉಪ್ಪಿನಕಾಯಿ, ಸ್ಥಳಿಯ ಸಿಹಿ ತಿಂಡಿ, ಜೇನು, ಬೆಲ್ಲ, ಹಣ್ಣಿನ ರಸ, ಹಪ್ಪಳ ಇತ್ಯಾದಿ ಪ್ರತಿ ರೆಸ್ಟೋರಂಟ್ ನಲ್ಲಿ ಮಾರಾಟಕ್ಕೆ ದೊಡ್ಡ ಶೋಕೇಸ್ ವ್ಯವಸ್ಥೆ.
  900 ಚದರ ಅಡಿಯ ಬೋಲ್ಟ್ ನಟ್ ಆಧಾರದಲ್ಲಿ ಸುಲಭವಾಗಿ ನಿರ್ಮಿಸುವ ಬೇಡ ಅಂದರೆ ಬಿಚ್ಚಿ ಸ್ಥಳಾಂತರಿಸಬಹುದಾದ ಸುಂದರವಾದ ರೆಸ್ಟೋರೆಂಟ್ ನಲ್ಲಿ 32 ಜನ ಗ್ರಾಹಕರು ಒಮ್ಮೆಗೆ ಕುಳಿತು ಆಹಾರ ಸೇವಿಸಬಹುದಾದ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಊಟ-ಉಪಹಾರ ಮಂದಿರ ನಮ್ಮದು.
   ಜಾಗವನ್ನು ಸ್ವಂತ/ಬಾಡಿಗೆ/ಲೀಸ್ ಮೇಲೆ ಪಡೆದು ನಮ್ಮ ಜೊತೆ ಸೇರಿ ಉದ್ಯಮ ನಡೆಸುವ ಆಸಕ್ತರಿಗೆ ಅವಕಾಶ ಇದೆ ಇಡೀ ರೆಸ್ಟೋರೆಂಟ್ ನ ಮಾಲಿಕರು ನೀವಾಗಬಹುದು.
   ಇದಕ್ಕೆ ಬೇಕಾದ ಬಂಡವಾಳ ನಾವೇ ವ್ಯವಸ್ಥೆ ಮಾಡಿಕೊಡುತ್ತೇವೆ, ಅತ್ಯಂತ ಕಡಿಮೆ ಸಿಬ್ಬಂದಿಗಳಿಂದ, ಅಡಿಗೆ ಮನೆ-ಅಡುಗೆಯವರು- ದಿನಸಿ - ಗ್ಯಾಸ್ ಇಂದನವಿಲ್ಲದೆ ನಡೆಯುವ ಈ ರೆಸ್ಟೋರೆಂಟ್ ನಷ್ಟವಿಲ್ಲದೆ ಲಾಭದಲ್ಲಿ ನಡೆಯುವಂತೆ ರೂಪಿಸಲಾಗಿದೆ.
   ಐದು ವರ್ಷಗಳಲ್ಲಿ ಒಂದು ಕೋಟಿ ಆದಾಯ ಗಳಿಸುವಂತಾ ಈ ಉದ್ಯಮವನ್ನು ಸ್ವಾವಲಂಬಿ ಮಹಿಳೆಯರು, ನಿರುದ್ಯೋಗಿಗಳು ನಡೆಸಬಹುದಾಗಿದೆ.
  ಪೈಲಟ್ ಪ್ರಾಜೆಕ್ಟ್ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗದಿಂದ ಜೋಗ್ ಪಾಲ್ಸ್ ತನಕ ಹತ್ತು ಸರಣಿ ರೆಸ್ಟೋರಂಟ್ ಸದ್ಯದಲ್ಲೇ ಪ್ರಾರಂಭವಾಗಲಿದೆ.
    ಈ ಉದ್ಯಮಕ್ಕೆ ಊರಿನಿಂದ ಹೊರಗಿರುವ ಮುಖ್ಯ ರಸ್ತೆಗೆ ಅಭಿಮುಖವಾಗಿರುವ ಜಾಗಗಳೇ ಪ್ರಶಸ್ತವಾದದ್ದು ಅಂತಹ ಜಾಗ ಲೀಸ್ / ಬಾಡಿಗೆಗೆ ನೀಡುವವರೂ ನಮ್ಮನ್ನು ಸಂಪರ್ಕಿಸಿದರೆ ಅಲ್ಲಿ ನಾವೇ ರೆಸ್ಟೋರೆಂಟ್ ಪ್ರಾರಂಬಿಸುತ್ತೇವೆ.
  ಸ್ಥಳಿಯ ಉದ್ಯೋಗ ವ್ಯವಸ್ಥೆ, ಸ್ಥಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ನನ್ನ ಈ ಯೋಜನೆಯಲ್ಲಿ ಆಸಕ್ತಿ ಇದ್ದವರು ನನ್ನ ಜೊತೆಯಾಗಬಹುದು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

#THIS IS MY NEW ADVENTURE
#RESTAURANT CHAINS
#THOSE INTERESTED CAN BE A PARTNER

WE HAD TO WORK A LOT AND WAIT FOR MONTHS TO GET THE TRADE NAME “EXPLORE THE WESTERN GHATS” REGISTERED. THE WHOLE PROJECT TOOK 5 YEARS TO TAKE SHAPE.
WE CONSULTED MANY EXPERTS, AND SOME OF THEM ARE FROM VARIOUS INSTITUTIONS IN EUROPE, MUMBAI, AND BENGALURU, THEY WILL BE WITH US GOING FORWARD IN THIS NEW VENTURE.
I HAVE GAINED EXPERIENCE FROM MY OWN LODGE, RESTAURANT, AND COTTAGES WHICH HELPED ME IN PLANNING THIS PROJECT. WE ARE PLANNING TO EXPAND THROUGHOUT THE STATE OF KARNATAKA AND THEN TO OTHER STATES. AND TO RUN THESE RESTAURANTS EFFICIENTLY WE HAVE ACQUIRED A SOFTWARE WHICH IS GERMAN MADE.
EVERY RESTAURANT WILL HAVE AN APP FROM WHICH CUSTOMERS IN 10 KILOMETERS DIAMETER CAN ORDER FOOD FROM HOME. FOOD FOR THESE RESTAURANTS WILL BE PREPARED HYGENICALLY AND SUPPLIED BY A CLOUD KITCHEN, IN A FOOD DELIVERY VAN.
UNDER OUR GOLDEN BASKET BRAND, LOCAL SUPPLIERS WILL BE ENCOURAGED TO SELL SPICES, PICKLES, REGIONAL SWEETS AND SAVOURIES, HONEY, JAGGERY, PAPAD ET CETERA.
OUR RESTAURANTS WILL BE BUILT ON 900 SQUARE FEET OF LAND, AND THE STRUCTURE WILL BE EASILY ASSEMBLED AND DISASSEMBLED, IT WILL BE SPACIOUS ENOUGH FOR 32 PEOPLE TO DINE COMFORTABLY, AND IT ALSO INCLUDES SEPARATE WASHROOMS FOR MEN AND WOMEN. OUR RESTAURANTS WILL SERVE BOTH SOUTH AND NORTH INDIAN CUISINE. 
INTERESTED ENTREPRENEURS CAN PARTNER UP WITH US AND START THEIR OWN RESTAURANTS ON THEIR OWN OR LEASED LAND. WE WILL HELP WITH FINANCING THE CAPITAL REQUIRED, THESE RESTAURANTS ARE DESIGNED TO BE COST-EFFICIENT, WITHOUT GAS AND PROVISIONS, AND WITH MINIMAL STAFF.
THIS VENTURE WILL HELP MEN AND WOMEN WHO ARE SEEKING EMPLOYMENT AND FINANCIAL INDEPENDENCE. AND THIS PROJECT HAS THE POTENTIAL TO PROVIDE UP TO 1 CRORE RUPEES OF INCOME WITHIN THE PERIOD OF 5 YEARS.
A PILOT PROJECT CONSISTING OF 10 RESTAURANTS FROM SHIVAMOGGA TO JOG FALLS WILL BE LAUNCHED SHORTLY, THIS PROJECT REQUIRES LAND OUTSIDE OF CITIES AND BESIDE HIGHWAYS AND MAIN ROADS, THOSE WHO ARE INTERESTED IN LEASING/RENTING LAND CAN CONTACT US WE WILL START THE RESTAURANT IN SUCH PLACES.
THIS PROJECT WILL COMPLEMENT AND GIVE A BOOST TO THE LOCAL TOURISM AND HOSPITALITY INDUSTRY. IF YOU ARE INTERESTED IN HAVING YOUR OWN BUSINESS AND FINANCIAL FREEDOM AND MOST IMPORTANTLY IF YOU WANT TO BE A RESTAURANT OWNER PLEASE CLICK ON THE LINK BELOW.
https://m.facebook.com/story.php?story_fbid=pfbid02PDsQfZvBdBkXSR7dmBook5gRqkPSXUVfacjnyMUX5bLP4sUpR2xgUNaHZMYXygHRl&id=100088978730493&mibextid=Nif5oz

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ