Blog number 1164. ಶಬರಿಮಲೈ ಯಾತ್ರಾರ್ಥಿಗಳನ್ನೆ ಅವಲಂಬಿಸಿ ಉತ್ಪಾದನೆ ಮತ್ತು ಮಾರಾಟ ಆಗುತ್ತಿರುವ ಕೇರಳದ ಹಲ್ವಾ ಮಾರುಕಟ್ಟೆ 45 ದಿನದಲ್ಲಿ 150 ಕೋಟಿಗೂ ಮಿಕ್ಕಿದ ವಹಿವಾಟು.
#ಕೇರಳದ_ಕೆಂಪು_ಹಲ್ವಾ_ವ್ಯಾಪಾರ_ಕೂಡ.
#ಪ್ರತಿಯೊಬ್ಬ_ಶಬರಿಮಲೈ_ಯಾತ್ರಾರ್ಥಿ_ಕನಿಷ್ಟ_ಹತ್ತು_ಕಿಲೋ_ಹಲ್ವಾ_ಖರೀದಿಸುತ್ತಾರೆ
#ಪ್ರತಿದಿನ_ಶಬರಿಮಲೈಗೆ_ಬರುವ_ಯಾತ್ರಾರ್ಥಿಗಳ_ಸಂಖ್ಯೆ_90_ಸಾವಿರ
#ಪ್ರತಿನಿತ್ಯ_ಕೇರಳದಲ್ಲಿ_ಶಬರಿಮಲೈ_ಯಾತ್ರಾರ್ಥಿಗಳಿಂದ_9_ಕೋಟಿಗೂ_ಮೀರಿದ_ಹಲ್ವಾ_ಖರೀದಿ
#ಶಬರಿಮಲೈ_ಯಾತ್ರಾರ್ಥಿಗಳ_ಹಲ್ವಾ_ಖರೀದಿ_ಕಡ್ಡಾಯವಾ?
ನಮ್ಮ ಮನೆಗೆ ನಿತ್ಯ 2 ಲೀಟರ್ ಮಲೆನಾಡು ಗಿಡ್ಡ ದನದ ಹಾಲು ನೀಡುವ ಹುಲಿಮರಡಿಯ ಮ೦ಜುನಾಥ ಶೆಟ್ಟರು ಇದೇ ಗುರುವಾರ ಶಬರಿಮಲೈ ಯಾತ್ರೆ ಹೋಗುವುದಾಗಿ ತಿಳಿಸಲು ಬಂದಿದ್ದರು ಇದು ಅವರು 5 ನೇ ಶಬರಿಮಲೆ ಯಾತ್ರೆ.
ಒ0ದು ಯಾತ್ರೆಗೆ ಬರುವ ಖರ್ಚು ವೆಚ್ಚಗಳ ಬಗ್ಗೆ ಮಾತಾಡುವಾಗ ಹಲ್ವಾದ ವಿಚಾರ ಪ್ರಸ್ತಾಪವಾಯಿತು, ಕನಿಷ್ಟ 10 ಕೆ.ಜಿ. ಹಲ್ವಾ ಅವರು ತರುತ್ತಾರಂತೆ ಅದನ್ನು ಅವರ ಕುಟುಂಬಿಕರುಗಳಿಗೆ ಪ್ರಸಾದ ರೂಪದಲ್ಲಿ ಹ೦ಚುತ್ತಾರ೦ತೆ.
ಕೇರಳದಲ್ಲಿ ಬಾಳೆ ಹಣ್ಣಿನ ಹಲ್ವಾ,ಗೋದಿ ಹಲ್ವಾ, ಕೇರಳ ರೆಡ್ ಹಲ್ವಾ, ಕ್ಯಾಲಿಕಟ್ ಬ್ಲಾಕ್ ಹಲ್ವಾ, ಮೈದಾ ಹಲ್ವಾ, ಕೋಜಿಕಾಡ್ ಹಲ್ವಾ ವಿದೇಶದಲ್ಲೂ ಪ್ರಸಿದ್ದಿ ಪಡೆದಿದೆ.
ಕ್ಯಾಲಿಕಟ್ಟಿನ ಬ್ಲಾಕ್ ಹಲ್ವಾ ಕೇರಳ ಹಲ್ವಾದಲ್ಲೇ ಅತ್ಯುತ್ತಮ ಹಲ್ವಾ ಇದರ ಬೆಲೆ ಸ್ವಲ್ಪ ಜಾಸ್ತಿ ಇದನ್ನು ತೆಂಗಿನ ಹಾಲು, ಅಕ್ಕಿ ಮತ್ತು ಬೆಲ್ಲದಿಂದ ತಯಾರಿಸುತ್ತಾರೆ.
ಹಲ್ವಾದ ಮೂಲ ಪರ್ಷಿಯಾ ದೇಶದ್ದು, 7 ನೇ ಶತಮಾನದಲ್ಲಿ ಬಳಸುತ್ತಿದ್ದ ಮಾಹಿತಿ ಇದೆ, 13 ನೇ ಸೆಂಚುರಿಯಲ್ಲಿ ಕಿತಬ್-ಅಲ್-ತಬಿಕಾ ಪುಸ್ತಕದಲ್ಲಿ ಹಲ್ವಾ ರೆಸಿಪಿ ದಾಖಲಾಗಿದೆ.
ಹಲ್ವಾ ಭಾರತಕ್ಕೆ ಪರ್ಷಿಯಾದಿಂದ ಅರಬ್ ವ್ಯಾಪಾರಿಗಳಿಂದ ಪರಿಚಯವಾಗಿ ಭಾರತದ ಲಖನೌ ಹಲ್ವಾಕ್ಕೆ ಪ್ರಸಿದ್ಧಿ ಆಗಿದೆ ಅದೇ ರೀತಿ ದಕ್ಷಿಣ ಭಾರತದ ತಮಿಳುನಾಡಿನ ತಿರುನಲ್ವೇಲಿಯ ಶುದ್ದ ತುಪ್ಪದ ಹಲ್ವಾ ಕೂಡ ವಿಶ್ವವಿಖ್ಯಾತಿ ಪಡೆದಿದೆ.
ತಿರುನಲ್ವೇಲಿ ಮತ್ತು ಶಬರಿಮಲೆಯ ಅಂತರ 215 ಕಿ.ಮಿ. ಈ ಕಾರಣದಿಂದಲೇ ಶಬರಿಮಲೈನಲ್ಲಿ ಹಲ್ವಾ ವ್ಯಾಪಾರ ಉದ್ಯಮ ಈ ಮಟ್ಟಕ್ಕೆ ಬೆಳೆಯಲು ಕಾರಣ ಅನ್ನುತ್ತಾರೆ.
ಶಬರಿಮಲೈ ಯಾತ್ರಾರ್ಥಿಗಳು ಕನಿಷ್ಟ 10 ಕಿಲೋ ಹಲ್ವಾ ಖರೀದಿಸಿದರೂ ಪ್ರತಿ ವಷ೯ ಇಲ್ಲಿಗೆ ಯಾತ್ರೆಗೆ ಬರುವವರ ಸಂಖ್ಯೆ ಒಂದರಿಂದ ಒಂದೂವರೆ ಕೋಟಿ ಭಕ್ತರು ಅದೂ ಡಿಸೆಂಬರ್ ನಿಂದ ಜನವರಿ 15ರ ವರೆಗೆ ಅಂದರೆ ಒಂದೂವರೆ ತಿಂಗಳಲ್ಲಿ ಇಲ್ಲಿ ಮಾರಾಟ ಆಗುವ ಹಲ್ವಾ ಕನಿಷ್ಟ 150 ಸಾವಿರ ಟನ್! ಅಂದರೆ 15 ಸಾವಿರ ಲಾರಿ ಲೋಡಿನಷ್ಟು! ಹಲ್ವಾ ತಯಾರಿ ಮತ್ತು ಮಾರಾಟ ಆಗುತ್ತದೆ ಇದರ ಒಟ್ಟು ವಹಿವಾಟು 150 ಕೋಟಿಗೂ ಮಿಕ್ಕುತ್ತದೆ.
ಇದು ಕೇವಲ 45 ದಿನದಲ್ಲಿ ಅಂದರೆ ಶಬರಿಮಲೆ ಹಲ್ವಾದ ಕೇರಳದ ಹಲ್ವಾ ಉತ್ಪಾದಕರ ಮತ್ತು ಮಾರಾಟಗಾರರ ವ್ಯಾಪಾರದ ಗಾತ್ರ ಅರಿವಾಗುತ್ತದೆ.
ಇಲ್ಲಿ ಹಲ್ವಾ ವ್ಯಾಪಾರದ ಸಿಂಹಪಾಲು ತ್ರಿಶೂರ್ ನ ಮರಿಯಮ್ಮನ ಹಲ್ವಾದ್ದು, ಸ್ಥಳಿಯ ಹಲ್ವಾ ತಯಾರಕರು ವಾಹನ ಚಾಲಕರಿಗೆ ಉಚಿತವಾಗಿ 10 ಕೇಜಿ ಹಲ್ವಾ ಮತ್ತು ಬ್ಯಾಗ್ ಮತ್ತಿತರ ಉಡುಗೊರೆ ನೀಡಿ ತಮ್ಮ ಹಲ್ವಾ ಮಾರುಕಟ್ಟೆ ವಿಸ್ತರಿಸುತ್ತಿದ್ದಾರೆ ಈ ಮೂಲಕ ಕೇರಳದ ಹಲ್ವಾ ತಯಾರಾಕರು ತಮ್ಮ ಹಲ್ವಾ ಉದ್ಯಮಕ್ಕೆ ಉತ್ತೇಜನ ನೀಡಿದ್ದಾರೆ.
Comments
Post a Comment