Skip to main content

Blog number 1157. ಹಳೇಸೊರಬದ ಜೆ. ಶಿವಾನಂದಪ್ಪ ಬಂಗಾರಪ್ಪರ ನಂತರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೆಂದೇ ಬಾವಿಸಲಾಗಿತ್ತು ಆದರೆ ಕಾಣದ ಕೈಗಳು ಅವರನ್ನು ಕನಿಷ್ಟ ಜಿಲ್ಲಾ ರಾಜಕಾರಣಕ್ಕೂ ಹೋಗಲು ಬಿಡಲಿಲ್ಲ, ಇಹಲೋಕ ತ್ಯಜಿಸಿದ ಶಿವಾನಂದಪ್ಪರ ನೆನಪುಗಳು

#ಹಳೇ_ಸೊರಬದ_ಜೆ_ಶಿವಾನಂದಪ್ಪ

#ಬಂಗಾರಪ್ಪರ_ಬಲಗೈ_ಬಂಟರಾಗಿದ್ದರು.

#ಒಂದು_ಚುನಾವಣೆಯಲ್ಲಿ_ಅಜಿ೯_ಹಾಕಲು_ಬಂದ_ಬಂಗಾರಪ್ಪನವರು_ಮತ್ತೆ_ಬಂದದ್ದು_ಗೆದ್ದ_ಮೇಲೆ

#ಸಂಪೂರ್ಣ_ಚುನಾವಣೆ_ಮಾಡಿದ್ದು_ಶಿವಾನಂದಪ್ಪನವರೆ

#ತಮ್ಮ_ರಾಜಕೀಯ_ಜೀವನವನ್ನೆ_ಬಂಗಾರಪ್ಪರ_ಕುಟುಂಬಕ್ಕೆ_ಮೀಸಲಿಟ್ಟಿದ್ದರು

#ಮನಸ್ಸು_ಮಾಡಿದ್ದರೆ_ವಿದಾನ_ಸಭಾ_ಸದಸ್ಯರಾಗಿ_ಜಿಲ್ಲೆಯ_ಪ್ರಭಾವಿ_ರಾಜಕಾರಣಿ_ಆಗುತ್ತಿದ್ದರು.

#ಇಹಲೋಕ_ತ್ಯಜಿಸಿದ_ಶಿವಾನಂದಪ್ಪರ_ನೆನಪುಗಳು

   ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ನಂತರ ವರದಾ ನದಿ ಸೇತುವೆ ದಾಟಿ ಎಡಕ್ಕೆ ಇರುವ ಹಳೇಸೊರಬದ ಸಣ್ಣ ಹಂಚಿನ ಮನೆಯಲ್ಲಿ ಜೆ. ಶಿವಾನಂದಪ್ಪರ ಮೊದಲ ಬೇಟಿ ನನ್ನದು.
   ಸದಾ ಹಸನ್ಮುಖಿಯಾಗಿ ಇಡೀ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಬಂಗಾರಪ್ಪರ ಪ್ರತಿನಿದಿ ಆಗಿ ಅವರ ಕಷ್ಟ ಸುಖಗಳಿಗೆ ಪ್ರತಿಸ್ಪಂದಿಸುತ್ತಾ ಪ್ರತಿ ಚುನಾವಣೆಯಲ್ಲಿ ಬಂಗಾರಪ್ಪರಿಗೆ ಅವರ ಮತಗಳು ತಪ್ಪದಂತೆ ನೋಡಿಕೊಳ್ಳುತ್ತಿದ್ದ ಯುವ ನಾಯಕರಾಗಿದ್ದ ಶಿವಾನಂದಪ್ಪ ಯಾವಾಗಲೂ ಬಂಗಾರಪ್ಪರ ಚುನಾವಣಾ ರಾಜಕಾರಣದ ಸೇನಾ ನಾಯಕರು.
  ಬಂಗಾರಪ್ಪನವರು ಮುಖ್ಯಮಂತ್ರಿ ಆಗಲೇ ಬೇಕು, ಅವರು ಮುಖ್ಯಮಂತ್ರಿ ಆಗಿದ್ದು ತಮ್ಮ ಕಣ್ಣಲ್ಲಿ ನೋಡಬೇಕೆಂಬುದೇ ಇವರ ಕನಸಾಗಿತ್ತು ಅಂತಹ ಸಂದರ್ಭಗಳು ಬಂಗಾರಪ್ಪರಿಗೆ ಬಂದರೂ ಈಡೇರದ ನೋವು ಎಲ್ಲರಿಗಿಂತ ಹೆಚ್ಚು ಬಾದಿಸಿದ್ದು ಶಿವಾನಂದಪ್ಪರಿಗೆ.
  ಇಂತಹ ಒಂದು ಚುನಾವಣೆಯಲ್ಲಿ ಶಿವಾನಂದಪ್ಪ ಒಂದು ಘೋಷಣೆ ಮಾಡಿದ್ದರು ಅದೇನೆಂದರೆ ಬಂಗಾರಪ್ಪನವರು ವಿದಾನ ಸಭಾ ಚುನಾವಣೆಗೆ ಅರ್ಜಿ ಸಲ್ಲಿಸಲು ಮಾತ್ರ ಸೊರಬಕ್ಕೆ ಬರುತ್ತಾರೆ ಇಡೀ ಚುನಾವಣೆ ಸೊರಬ ವಿಧಾನಸಭಾ ಕ್ಷೇತ್ರದ ಮತದಾರರೇ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಅಂತ ಅದರಂತೆ ಬಂಗಾರಪ್ಪನವರು ಶಿವಾನಂದಪ್ಪರ ಆಶಯದಂತೆ ಸೊರಬಕ್ಕೆ ಬಂದು ಅಜಿ೯ಸಲ್ಲಿಸಿ ಹೋದರು.
   ಇಡೀ ವಿದಾನ ಸಭಾ ಕ್ಷೇತ್ರದಲ್ಲಿ ಪ್ರಚಾರದ ಜವಾಬ್ದಾರಿಯು  ಇದೇ ಶಿವಾನಂದಪ್ಪನವರದ್ದಾಗಿತ್ತು, ಜನತೆ ಇವರಲ್ಲಿ ಬಂಗಾರಪ್ಪನವರ ಪ್ರತಿಬಿಂಬ ನೋಡಿತ್ತು, ಅದರಂತೆ ಬಾರೀ ಬಹುಮತದಲ್ಲಿ ಬಂಗಾರಪ್ಪ ಗೆದ್ದರು ಬಹುಶಃ ಇದು ರಾಜ್ಯ ರಾಜಕಾರಣದಲ್ಲಿ ಮೊದಲು ಮತ್ತು ಕೊನೆಯ ಹೊಸ ಪ್ರಯೋಗ ಅನ್ನಿಸಿದೆ.
   ಇಡೀ ಸೊರಬ ಕ್ಷೇತ್ರದ ಜನ ಬಂಗಾರಪ್ಪರ ನಂತರ ಹಳೇ ಸೊರಬದ ಶಿವಾನಂದಪ್ಪನವರೆ ಶಾಸಕರಾಗುತ್ತಾರೆ, ಬಂಗಾರಪ್ಪ ಶಿವಾನಂದಪ್ಪನವರನ್ನೇ ಬೆಳೆಸುತ್ತಾರೆಂಬ ಭಾವನೆಯಲ್ಲಿದ್ದರು ಸ್ವತಃ ಶಿವಾನಂದಪ್ಪನವರಿಗೂ ಅದೇ ಭರವಸೆ ಇತ್ತು.
   ಆದರೆ ಶಿವಾನಂದಪ್ಪ ಸೊರಬ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವ೦ತಾಯಿತು ಅವರನ್ನು ಕನಿಷ್ಟ ಜಿಲ್ಲಾ ಮಟ್ಟದ ರಾಜಕಾರಣಕ್ಕೂ ತಲುಪದಂತೆ ಕಾಣದ ಕೈಗಳು ನೋಡಿಕೊಂಡಿದ್ದು ವಿಪಯಾ೯ಸ.
  ಅವರು ಮನಸ್ಸು ಮಾಡಿ ಬಂಡಾಯ ಎದ್ದಿದ್ದರೆ ಶಾಸಕರೂ ಆಗಬಹುದಿತ್ತು ಮತ್ತು ಬಂಗಾರಪ್ಪನವರು ದೊಡ್ಡ ಮನಸ್ಸು ಮಾಡಿ ಇವರನ್ನು ಕನಿಷ್ಟ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ಮಾಡಬಹುದಿತು.
  ಈ ವಿಚಾರದಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಅವರ ಆಪ್ತ ಸಾಗರದ ಗುರುಮೂರ್ತಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಿರುವ ಉದಾಹರಣೆ ಎದುರಿಗಿದೆ ಆದರೆ ಶಿವಮೊಗ್ಗ ಜಿಲ್ಲೆಯ ಬಂಗಾರಪ್ಪ ಮತ್ತು ಕಾಗೋಡು ತಮ್ಮ ಆಪ್ತರಿಗೆ ಇಂತಹ ಅವಕಾಶ ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ.
  ಆನಂದಪುರಂ ಮಾರ್ಗದಲ್ಲಿ ಸಂಚರಿಸುವಾಗೆಲ್ಲ ಶಿವಾನಂದಪ್ಪನವರು ನನ್ನ ಬೇಟಿ ಮಾಡದೇ ಹೋಗುತ್ತಿರಲಿಲ್ಲ, ಸಪ್ಪೆ ಚಹಾದ ಜೊತೆ ಆಗೆಲ್ಲ ಅನೇಕ ರಾಜಕಾರಣದ ಸತ್ಯಕಥೆ ಹೇಳುತ್ತಿದ್ದರು ಅಂತಹ ಅನೇಕ ಘಟನೆಗಳು ದಾಖಲು ಆಗಿದೆ.
   ಕೆಲ ತಿಂಗಳ ಹಿಂದೆ ಚಂದ್ರಗುತ್ತಿ ಬೆತ್ತಲೆ ಸೇವೆ, ಬದರಿನಾರಾಯಣ ಅಯ್ಯಂಗಾರ್ ಮತ್ತು ಬಂಗಾರಪ್ಪರ ಒಡನಾಟದ ಬಗ್ಗೆ ಯುಟ್ಯೂಬ್ ಗಾಗಿ ವಿಡಿಯೋ ಸಂದರ್ಶನ ಮಾಡುವ ಬಗ್ಗೆ ಒಪ್ಪಿದ್ದರು ಆದರೆ ಅದಕ್ಕಿಂತ ಮೊದಲೇ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್ ಬಂಗಾರಪ್ಪರ ನೆರಳಿನಂತಿದ್ದ ಅವರ ಕಟ್ಟಾ ಅಭಿಮಾನಿ, ಚುನಾವಣಾ ರಾಜಕಾರಣದ ಅವರ ಸೇನಾಧಿಕಾರಿ ಸೊರಬದ ಜನರ ಬಾಯಲ್ಲಿ ಹಳೇ ಸೊರಬದ ಶಿವಾನಂದಪ್ಪ ಎಂದೇ ಗುರುತಿಸಿಕೊಂಡಿದ್ದ ಜೆ. ಶಿವಾನಂದಪ್ಪ ಇಹಲೋಕ ತ್ಯಜಿಸಿದ್ದಾರೆ.
   ಅವರ ಆತ್ಮಕ್ಕೆ ಸದ್ಗತಿ - ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...