Blog number 1185. ಟಾಮ್ಸ್ ವಲ್ಡ್೯ ವಾಕ್ ಯುರೋಪ್ - ಅಮೇರಿಕಾ - ಏಷ್ಯಾ- ಆಸ್ಟ್ರೇಲಿಯ ನಾಲ್ಕು ಖಂಡಗಳ ಸುಮಾರು 18 ಸಾವಿರ ಕಿಲೋ ಮೀಟರ್ ನ ಪಾದಯಾತ್ರೆ ಸಾಹಸ.
#ಖ೦ಡಾ೦ತರ_ಪಾದಯಾತ್ರಿ_ಜೊತೆ_ಸಂದರ್ಶನ
#ತೈವಾನನಲ್ಲಿ_ಇಂಗ್ಲೀಷ್_ಶಿಕ್ಷಕ_ವಯಸ್ಸು_56
#ಪ್ರಪಂಚದ_ನಾಲ್ಕು_ಭೂ_ಖಂಡದಲ್ಲಿ_18500_ಕೀಲೋ_ಮೀಟರ್_ನಡೆಯುವ_ಗುರಿ
#ಈಗ_ಏಷ್ಯಾ_ಖಂಡ_ದಾಟಿ_ಆಸ್ಟ್ರೇಲಿಯ_ತಲುಪಬೇಕು.
#ಇವರ_23ನೆ_ವಯಸ್ಸಲ್ಲಿ_ಸೈಕಲನಲ್ಲಿ_ಯುರೋಪಿನಿಂದ_ಆಸ್ಟ್ರೇಲಿಯ_ಪ್ರವಾಸ_ಮಾಡಿದ್ದರು.
#ಇವರ_30ನೇ_ವಯಸ್ಸಲ್ಲಿ_ಹೇಸರಗತ್ತೆಯಲ್ಲಿ_ಅಮೆರಿಕಾ_ಪ್ರವಾಸ_ಮಾಡಿದವರು.
ಇವತ್ತು ಸಂಜೆ ಟಾಮ್ ತಮ್ಮ ತಳ್ಳು ಗಾಡಿಯಲ್ಲಿ ಬೆಳಿಗ್ಗೆ ಸಾಗರದಿಂದ ತಮ್ಮ ಪಾದಯಾತ್ರೆ ಪ್ರಾರಂಬಿಸಿ ಆನಂದಪುರಂನ ನಮ್ಮ ಹೊಂಬುಜ ಲಾಡ್ಜ್ ತಲುಪಿದ್ದಾರೆ.
ಈಗಾಗಲೇ ಅಮೇರಿಕಾದಲ್ಲಿ 6000 ಕಿಮೀ ನಡೆದಿದ್ದಾರೆ, ಇ೦ಗ್ಲೆಂಡ್ನಿಂದ ಪ್ರಾನ್ಸ್, ಜಮ೯ನ್, ಹಂಗೇರಿ, ಬಲ್ಗೇರಿಯಾ, ಟರ್ಕಿ, ಆಸ್ಟ್ರಿಯ ಸರ್ಬಿಯ, ಲೆಬನಾನ್, ಸೈಪ್ರಸ್ ಗಳ ಪಾದಯಾತ್ರೆ ಮುಗಿಸಿ ಗೋವಾದಿಂದ ಭಾರತದಲ್ಲಿ ಸುಮಾರು 1500 ಕಿ ಮಿ ಸಾಗಿ, ಇಂಡೋನೇಷ್ಯಾದಲ್ಲಿ 1000 ಕಿ.ಮಿ. ಮುಗಿಸಿ ಆಸ್ಟ್ರೇಲಿಯದಲ್ಲಿ 4000 ಕಿ.ಮಿ. ನಂತರ ನ್ಯೂಜಿಲೆಂಡ್ ನಲ್ಲಿ 500 ಕಿ.ಮಿ. ಮತ್ತು ಐಸ್ ಲ್ಯಾಂಡ್ ನಲ್ಲಿ 500 ಕಿ.ಮಿ. ನಡೆದು ತೈವಾನ್ ನಲ್ಲಿ ಇವರಿಗೆ ಕಾಯುತ್ತಿರುವ ಪ್ರಿಯತಮೆಯನ್ನು ಸೇರುತ್ತೇನೆ ಅನ್ನುತ್ತಾರೆ.
2018ರಲ್ಲಿ ಇವರು ಜಗತ್ತಿನ ನಾಲ್ಕು ಖಂಡದಲ್ಲಿ 28000 ಕಿ.ಮಿ. ಪಾದಯಾತ್ರೆಯ ಗುರಿಯಿ೦ದ ಪ್ರಾರಂಬಿಸಿದ್ದರು ಆದರೆ ಕೊರಾನಾದಿಂದ ಮದ್ಯದಲ್ಲಿ ಅನಿವಾರ್ಯವಾಗಿ ನಿಲ್ಲಿಸಬೇಕಾದ್ದರಿಂದ ಈ ಪಾದಯಾತ್ರೆ 18 ಸಾವಿರ ಅಥವ 18500 ಕಿ.ಮಿ. ಗೆ ಕುಗ್ಗಿಸಿದ್ದಾರೆ.
ಇವರು ಬಾಲ್ಯದಿಂದ ಅನೇಕ ಸಾಹಸ ಯಾತ್ರೆ ಮಾಡಿದ್ದಾರೆ ಸೈಕಲ್ ನಲ್ಲಿ ಇಂಗ್ಲೇಂಡ್ ನಿಂದ ಪಾಕಿಸ್ತಾನ, ವಾಘಾ ಬಾರ್ಡರ್ ನಿಂದ ಬಾರತ ನೇಪಾಳ ಚೀನಾ ಇಂಡೋನೇಷ್ಯಾ, ಆಸ್ಟ್ರೇಲಿಯ ಪ್ರವಾಸ ಮಾಡಿದ್ದಾರೆ.
30 ನೇ ವಯಸ್ಸಲ್ಲಿ ಅಮೇರಿಕಾದಲ್ಲಿ ಹೇಸರಗತ್ತೆ ಮೇಲೆ 6000 ಕಿ.ಮಿ. ಪ್ರವಾಸ ಮಾಡಿದ್ದಾರೆ, ಇಂಗ್ಲೆಂಡಿನಲ್ಲಿ ಪತ್ರಕರ್ತರಾಗಿ ಈಗ ತೈವಾನ್ ನಲ್ಲಿ ಇಂಗ್ಲೀಷ್ ಟೀಚರ್ ಆಗಿದ್ದಾರೆ ಇವರ ಪತ್ನಿ ಮಗಳು ನ್ಯೂಜಿಲೆಂಡ್ ನಲ್ಲಿದ್ದಾರೆ.
ಈ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಇವರ ವೆಬ್ ಸೈಟ್ www.tomsworldwalk.com ನಲ್ಲಿ ಇವರ ಎಲ್ಲಾ ಸಾಹಸಗಳು ದಾಖಲು ಮಾಡುತ್ತಿದ್ದಾರೆ.
ನಮ್ಮ ದೇಶದ ಪುಣೆಯ ರವೀಂದ್ರ ಬುಚಾಕೆ ಪ್ರಾನ್ಸ್ ದೇಶದಲ್ಲಿ ಈ ರೀತಿ ಪಾದಯಾತ್ರೆ ಮಾಡಿದವರು ಪೂನಾದಿಂದ ಶೃಂಗೇರಿಗೆ ಒಬ್ಬರೆ ನಡೆಯುತ್ತಾ ಬಂದು ನಮ್ಮಲ್ಲಿ ಅತಿಥಿ ಆದದ್ದನ್ನು ನಾನು ಪೋಸ್ಟ್ ಮಾಡಿದ್ದೆ ಅವರಂತೆ ಟಾಮ್ ಖಂಡಾಂತರ ಪಾದಯಾತ್ರೆಯಲ್ಲಿ ನನ್ನ ಅತಿಥಿ ಆಗಿದ್ದು ನನಗೆ ಖುಷಿ ತಂದಿತು ನಾಳೆ ಬೆಳಿಗ್ಗೆ ಶಿವಮೊಗ್ಗ ಮಾರ್ಗದಲ್ಲಿ ಸಾಗಲಿದ್ದಾರೆ ಅವರ ಸಾಹಸ ಯಾತ್ರೆಗೆ ಶುಭ ಹಾರೈಸಿದೆ.
Comments
Post a Comment