Blog number 1195. ನಮ್ಮ ಊರಿನ ಕೇರಳ ಸಂಜಾತ ಗೆಳೆಯ ಬೇಬಿ ಉಲ್ ಹನನ್ ಪುತ್ರಿ ಇಂಜಿನಿಯರ್ ಮರಿಯಾ ಬೇಬಿ ವಿವಾಹ ಆಹ್ವಾನ ಪತ್ರಿಕೆ.
#ಪತ್ರಿಕೆ_ನೀಡಲು_ಸ್ವತಃ_ಮದುಮಗಳು_ಬಂದಿದ್ದರು
#ಸಹೋದರ_ಅಮಲ್_ಮತ್ತು_ಮರಿಯಾ_ಗೆಳತಿ_ಜೊತೆಯಾಗಿ
#ಇವರ_ಕುಟುಂಬ_ಕೇರಳದಿಂದ_ಬಂದವರು
#ಬೇಬಿ_ಉಲ್_ಹನನ್_ದಂಪತಿಗಳ_ಈ_ಮಕ್ಕಳ_ಸಾಧನೆ_ಸಣ್ಣದಲ್ಲ.
#ನೂತನ_ದಂಪತಿಗಳಿಗೆ_ಶುಭಹಾರೈಕೆಗಳು.
ಬೇಬಿ ಉಲ್ ಹನನ್ ಕುಟುಂಬ 1991 - 92ರಲ್ಲಿ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಹಾದೀಬೀಸು ಎಂಬಲ್ಲಿ ಜಮೀನು ಖರೀದಿಸಿ ಕೃಷಿ ಪ್ರಾರಂಭಿಸಿದರು.
ರಬ್ಬರ್, ಅಡಿಕೆ, ಗೇರು ಮತ್ತು ತಾಳೆ ಕೃಷಿ ಜೊತೆಯಲ್ಲಿ ಬೇಬಿ ಸ್ಥಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತವಾಗಿ ಉಪನ್ಯಾಸ ಮಾಡುತ್ತಿದ್ದರು.
ನಂತರ ಬಿಹಾರದಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಅಲ್ಲಿಂದ ಬಂದು ಪುನಃ ಕೃಷಿಯಲ್ಲಿ ತೊಡಗಿದಾಗಲೇ ಕೆಲವು ಹಿತ ಶತೃಗಳು ಇವರ ಜಮೀನಿನ ವಿಚಾರವಾಗಿ ಇವರಿಗೂ ಇವರ ತಂದೆ ತಾಯಿಗೂ ಬಿನ್ನಾಭಿಪ್ರಾಯ ತಂದರು ಅದೆಲ್ಲವನ್ನು ಬಗೆಹರಿಸುವಲ್ಲಿ ಇವರ ದೊಡ್ಡ ಮಗಳು ಮರಿಯಾ ಇಂಜಿನಿಯರ್ ಆಗಿ ಕಾಂಗ್ನಿಜೆಂಟ್ ಕಂಪನಿಯಲ್ಲಿ ಉದ್ಯೋಗ ಪಡೆದರು.
ಮಗ ಅಮಲ್ ಕೂಡ ಮ್ಯಾನೇಜ್ ಮೆಂಟ್ ಪದವಿದರನಾಗಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ ಈ ಸಂದರ್ಭದಲ್ಲೆ ಮರಿಯಾ ವಿವಾಹ ಆಹ್ವಾನ ಪತ್ರಿಕೆ ನೀಡಲು ನನ್ನಲ್ಲಿಗೆ ಅವರ ಸಹೋದರ ಮತ್ತು ಮರಿಯಾ ಸಹೋದ್ಯೋಗಿ ಗೆಳತಿ ಜೊತೆ ನಿನ್ನೆ ಬಂದಿದ್ದರು.
ಈ ಕುಟುಂಬ ನಮ್ಮ ಊರಿಗೆ ಬಂದಾಗ ಇವರಿಗೆ ಅವರ ಮಾತೃ ಬಾಷೆ ಮಲೆಯಾಳ ಮಾತ್ರ ಗೊತ್ತಿತ್ತು, ಇವರ ತಂದೆ ಬೇಬಿಗೆ ಮಾತ್ರ ಮಲೆಯಾಳದ ಜೊತೆ ಇಂಗ್ಲೀಷ್ ಚೆನ್ನಾಗಿ ಬರುತ್ತಿತ್ತು.
ಈ ಇಬ್ಬರೂ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ವಿದ್ಯಾಬ್ಯಾಸ ಕೊಡಿಸಿದರು ಆಗ ಇವರ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇರಲಿಲ್ಲ, ಈ ಮಕ್ಕಳು ಪದವಿ ವಿದ್ಯಾಬ್ಯಾಸ ಪಡೆದ ಮೇಲೆ ವಿದ್ಯುತ್ ಬಂದಿದೆ.
ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿನ ಕನ್ನಡ ಭಾಷೆಯಲ್ಲಿ ಓದು ಪ್ರಾರಂಬಿಸಿ, ವಿದ್ಯುತ್ ಸಂಪರ್ಕ ಇಲ್ಲದೇ ಇಂಜಿನಿಯರ್ ಆದ ಮರಿಯಾಳ ಸಾದನೆ ಸಣ್ಣದಲ್ಲ ಅದೇ ರೀತಿ ಇವರ ತಮ್ಮ ಅಮಲ್ ಕೂಡ.
Comments
Post a Comment