Blog number 1200. ಇವತ್ತು ಗಣಪತಿ ಜಯಂತಿ, ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದ 17ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ರಥೋತ್ಸವದ ಸವಿ ನೆನಪಿಗಾಗಿ ದೈವಜ್ಞ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳು ನಿರ್ಮಿಸಿ ಕೊಟ್ಟಿರುವ ಪಾಕಶಾಲೆ ಲೋಕಾರ್ಪಾಣೆ ಮತ್ತು ಮುಂದಿನ 18 ನೇ ವರ್ಷದ ನೆನಪಿಗಾಗಿ ಅವರಿಂದ ಅರ್ಚಕರ ನಿವಾಸ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ.
#ಇವತ್ತು_ನಮ್ಮ_ಊರಿನ_ಶ್ರೀವರಸಿದ್ದಿವಿನಾಯಕ_ದೇವರ_ಬ್ರಹ್ಮರಥೋತ್ಸವ
#ಹದಿನೇಳನೇ_ವಷ೯ದ_ಜಾತ್ರಾ_ಮಹೋತ್ಸವ.
#ದೇವಸ್ಥಾನದ_ನನ್ನ_ಕನಸು_ನನಸು_ಮಾಡಿದ್ದ_ದೈವಜ್ಞ_ಜೋತಿಷಿ_ಡಾ_NS_ವಿಶ್ವಪತಿಶಾಸ್ತ್ರೀಗಳ_ಆಶ್ರೀವಾದದೊಂದಿಗೆ
#ಅವರು_ದೇವಸ್ಥಾನಕ್ಕೆ_ನಿರ್ಮಿಸಿಕೊಟ್ಟಿರುವ_ಪಾಕಶಾಲೆ_ಇವತ್ತು_ಲೋಕಾರ್ಪಣೆ '
#ಮುಂದಿನ_18ನೇ_ವಷಾ೯ಚಾರಣೆಗೆ_ಅರ್ಚಕರಿಗೆ_ವಾಸದ_ಮನೆ_ನಿರ್ಮಿಸಲಿದ್ದಾರೆ.
ಇವತ್ತು ಹಿಂದೂ ಪಂಚಾಗದ ಪ್ರಕಾರ ಗಣೇಶ ಜಯಂತೋತ್ಸವ, ಶಿವ ಪಾರ್ವತಿಯ ಪುತ್ರ ಗಣಪತಿ ಮಾಘ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನ ಜಗತ್ತಿಗೆ ಅವತರಿಸಿದರೆಂದು ಮತ್ತು ಈ ದಿನ #ಮಾಘ_ಶುಕ್ಲ_ಪಕ್ಷ_ಕುಂದಚತುರ್ಥಿ ಎಂದೇ ಹಿಂದೂ ದರ್ಮಿಯರ ಪವಿತ್ರ ದಿನವಾಗಿದೆ.
ಇದೇ ಶುಭ ಮಹೂರ್ತದಲ್ಲಿ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ಸ್ಟಾಮಿಯ ಪ್ರತಿಷ್ಟಾಪನೆ ಸನ್ಮಾನ್ಯ ವಿಶ್ವಪತಿ ಶಾಸ್ತ್ರೀಜಿ ಮತ್ತು ಪುರೋಹಿತರಾದ ಕೆಂಜಿಗಾಪುರ ಶ್ರೀಧರ ಭಟ್ಟರು ಸೇರಿ ತೀರ್ಮಾನಿಸಿ ದಿನಾಂಕ 4- ಪೆಬ್ರುವರಿ-2006 ರಂದು ನೆರವೇರಿಸಿದ್ದರು.
ಅದರಂತೆ ಪ್ರತಿ ವರ್ಷ ನಮ್ಮ ಊರ ವರಸಿದ್ದಿ ವಿನಾಯಕ ಸ್ವಾಮಿ ಜಾತ್ರೆ ಮತ್ತು ರಥೋತ್ಸವ ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು 17 ವರ್ಷದಿಂದ ನಡೆಯುತ್ತಿದೆ.
ಈ ಶುಭ ಸಂದರ್ಭದಲ್ಲಿ ವಿಶ್ವಪತಿ ಶಾಸ್ತ್ರೀಜಿಯವರು ದೇವಾಲಯಕ್ಕೆ ನಿರ್ಮಿಸಿ ಕೊಟ್ಟಿರುವ ಪಾಕಶಾಲೆ ರಥೋತ್ಸವ ನಂತರ ಶಾಸ್ತ್ರೀಜಿಯವರ ತಾತ್ಕಾಲಿಕ ಅನಾರೋಗ್ಯದ ಕಾರಣ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಕುಮಾರಿ ಸಾವಿತ್ರಿ ಅವರನ್ನು ಆಹ್ವಾನಿಸಲಾಗಿದೆ ಅವರು ಬೆಂಗಳೂರಿಂದ ಬಂದಿದ್ದಾರೆ.
ಇವತ್ತು ಬೆಳಿಗ್ಗೆ ವಿಶ್ವಪತಿ ಶಾಸ್ತ್ರೀಗಳು ಪೋನಾಯಿಸಿ ಇವತ್ತಿನ ರಥೋತ್ಸವಕ್ಕೆ ಶುಭ ಹಾರೈಸಿ ಮುಂದಿನ 18ನೇ ವಾಷಿ೯ಕೋತ್ಸವ ಸ್ಮರಣೀಯಗೊಳಿಸುವಂತ ಇನ್ನೊಂದು ಮಹತ್ಕಾಯ೯ ಘೋಷಿಸಿದ್ದಾರೆ ಅದೇನೆಂದರೆ ಇವತ್ತು ಉದ್ಘಾಟನೆ ಆಗಲಿರುವ ಸುಮಾರು ಐದು ಲಕ್ಷ ಹಣದಲ್ಲಿ ನಿರ್ಮಿಸಿರುವ ಪಾಕಶಾಲೆಯ ಮೊದಲ ಅಂತಸ್ತಿನಲ್ಲಿ ದೇವಾಲಯದ ಅರ್ಚಕರಿಗೆ ವಾಸದ ಮನೆ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ.
ಈ ಘನ ಕಾರ್ಯಕ್ಕೆ ಇವರ ಮೊದಲ ಪುತ್ರ ಇಂಜಿನಿಯರ್ ಶ್ರೀವತ್ಸ ಮತ್ತು ಅಮೇರಿಕಾದಲ್ಲಿ ಉದ್ಯೋಗಿ ಆಗಿರುವ ಶ್ರೀಕಂಠ ಕೂಡ ಕೈ ಜೋಡಿಸಿದ್ದಾರಂತೆ.
ವಿಶ್ವಪತಿ ಶಾಸ್ತ್ರೀಜಿ ಅವರು ತ್ಯಾಗರ್ತಿಯ ಇನಾಂದಾರರಾದ ಶ್ರೀಮತಿ ರಾಜಲಕ್ಷ್ಮಿ ಮತ್ತು ಶ್ರೀಗುರುಮೂರ್ತಿ ರಾಯರ ಕಿರಿಯ ಪುತ್ರಿ ಶ್ರೀಮತಿ ಸುದಾ ಅವರ ಪತಿ, ದೇವೇಗೌಡರು ಪ್ರದಾನ ಮಂತ್ರಿ ಆಗುತ್ತಾರೆಂದು ಜೋತಿಷ್ಯ ಹೇಳಿದವರು.
ಬೆಂಗಳೂರಿನ ಚಾಮರಾಜಪೇಟೆಯ ಮಹದೇಶ್ವರ ದೇವಾಲಯ ಪ್ರತಿಷ್ಟಾಪಿಸಿದವರು ದೇಶ ವಿದೇಶಗಳಲ್ಲೂ ನೂರಾರು ದೇವಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಇವರಿಗೆ ಅತಿ ಹೆಚ್ಚು ಪ್ರೀತಿ ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವರು ಎಂಬುದು ನಮ್ಮ ಊರವರಿಗೆಲ್ಲ ಹೆಮ್ಮೆಯಾಗಿದೆ.
Comments
Post a Comment