Blog number 1203. ಯಲ್ಲಪ್ಪ ಅಪ್ಪಾರಾವ್ ದಂತಿ ಕನ್ನಡ ಸಾಹಿತ್ಯದ ಅತಿರಥ ಮಹಾರಥರ ಪುಸ್ತಕ ಮಲೆನಾಡಿನ ಮೂಲೆ ಸಾಗರ - ಕಾರ್ಗಲ್ ನ ರವೀ೦ದ್ರ ಪುಸ್ತಕಾಲಯದಿಂದ ಪ್ರಕಟಿಸಿದವರು, ಇವರು ಪ್ರಕಟಿಸಿದ ಅನೇಕ ಕಾದಂಬರಿ ಕನ್ನಡದ ಹಿಟ್ ಸಿನಿಮಾವಾಗಿದೆ ಇವತ್ತಿಗೆ ಇವರಿಗೆ 85 ವರ್ಷ, ಇವರ ವಿವಾಹಕ್ಕೆ 50 ವಷ೯ ಇವರಂತದೇ ವ್ಯಕ್ತಿತ್ವದ ಮಂಗಳೂರಿನ ಅತ್ರಿಪುಸ್ತಕಾಲಯದ ಅಶೋಕ ವರ್ಧನರು ಇವರಿಬ್ಬರೂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಸ್ತುತ್ಯಾರ್ಹ.
#ಮಲೆನಾಡಿಗರಿಗೆ_ಏನಾಗಿದೆ?
#ಅಹ೯ರಿಗೆ_ಅಹ೯ತೆಯೆ_ಅನರ್ಹತೆಯೇ?
#ಸಾಗರದ_ರವೀ೦ದ್ರ_ಪುಸ್ತಕಾಲಯದ_ಯಲ್ಲಪ್ಪಅಪ್ಪಾರಾವ್_ದಂತಿಯವರ_ಕನ್ನಡ_ಸಾದನೆ_ಸಣ್ಣದೇ ?
#ದಂತಿಯವರಿಗೆ_85_ಅವರ_ವಿವಾಹಕ್ಕೆ_50ವರ್ಷ
#ಇವತ್ತಿನ_ಪ್ರಜಾವಾಣಿಯಲ್ಲಿ_ಎಂ_ರಾಘುರವರ_ಲೇಖನ_ಅಭಿನಂದನೀಯ
#ಎಲೆಮರೆಯ_ಕಾಯಿಯಂತ_ಕನ್ನಡಸಾಹಿತ್ಯ_ಲೋಕದ_ದಂತಿ_ದಂಪತಿಗಳಿಗೆ_ಶುಭಹಾರೈಕೆಗಳು.
ಐವತ್ತು ವರ್ಷಗಳ ಹಿಂದೆಯೇ ಮಲೆನಾಡಿನ ಕುಗ್ರಾಮದ ಕಾರ್ಗಲ್ - ಸಾಗರದಂತ ಊರಿನಿಂದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಕತೆ- ಕಾದಂಬರಿ ಪ್ರಕಟಿಸಿ ಅದನ್ನು ಮಾರಾಟ ಮಾಡಿ ಜನಪ್ರಿಯಗೊಳಿಸಿದ ಯಲ್ಲಪ್ಪ ಅಪ್ಪಾರಾವ್ ದಂತಿ ಅವರ ಸಾದನೆ ಸಣ್ಣದಲ್ಲ.
ಇವರು ಪ್ರಕಟಿಸಿದ ಕಾದ೦ಬರಿಗಳು ಸೂಪರ್ ಡೂಪರ್ ಸಿನಿಮಾ ಆಗಿದ್ದು ಕೂಡ ಇಷ್ಟೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡದರು ಯಾರಿಗೂ ಹೇಳಿಕೊಳ್ಳದ, ಯಾರಿಂದ ಏನನ್ನೂ ಬಯಸದ ಮತ್ತು ಪ್ರಚಾರ ಪ್ರಶಸ್ತಿಯ ಕೀರ್ತಿಗಳಿ೦ದ ಮಾರಲ್ಲ ಮೈಲಿಗಳ ಅಂತರ ಕಾಪಾಡಿಕೊಂಡ ದಂತಿ ನಮ್ಮ ಸಾಗರದ ರವೀಂದ್ರ ಪುಸ್ತಕಾಲಯ, ಗ್ರಂಥಾಲಯದವರು ಎಂಬುದು ನನಗೆ ಹೆಮ್ಮೆ.
ಇವರ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು https://arunprasadhombuja.blogspot.com/2021/09/blog-post_20.html.
ಅವರೊಂದು ದಂತಕಥೆಯೆ ಇವರ೦ತವರೇ ಆದ ಮಂಗಳೂರಿನ ಅತ್ರಿ ಪುಸ್ತಕಾಲಯದ ಅಶೋಕ ವರ್ಧನರೂ ಕೂಡ ಪುಸ್ತಕ ಪ್ರಕಾಶನ ಮಾರಾಟದಲ್ಲಿ ಸಾದನೆ ಮಾಡಿದವರೆ ದಂತಿಯವರಂತೆ ಸಕಾ೯ರ ನೀಡುವ ಪ್ರಶಸ್ತಿ- ಕೀರ್ತಿಗಳನ್ನು ಪೂರ್ಣಚಂದ್ರ ತೇಜಸ್ವಿಯಂತೆ ಕಾಲಲ್ಲಿ ಒದ್ದವರೆ.
ನನ್ನದೇ ಪ್ರಕಾಶನದಲ್ಲಿ ಪ್ರಕಟಿಸಿದ ನನ್ನ ಕಾದಂಬರಿ ಮತ್ತು ಕಥಾ ಸಂಕಲನ ದಂತಿಯವರು ರಾಜ್ಯದಾದ್ಯಂತ ಮಾರಾಟಕ್ಕೆ ಸಹಕಾರ ನೀಡಿದ ಸದ್ಗುಣವಂತರು.
85ನೇ ವರ್ಷದ ಹುಟ್ಟುಹಬ್ಬ ಮತ್ತು ಅವರ ವಿವಾಹದ ಸುವಣ೯ ಮಹೋತ್ಸವದ ಹೊತ್ತಿನಲ್ಲಿ ಪ್ರಜಾವಾಣಿಯಲ್ಲಿ ಅತ್ಯುತ್ತಮ ಅಭಿನಂದನೀಯ ಬರಹ ಸಾಗರದ ಎಂ.ರಾಘವೇಂದ್ರ ಬರೆದಿದ್ದಾರೆ.
ಸರ್ಕಾರಗಳಿಗೆ ಸಾಗರದ ರವೀಂದ್ರ ಪುಸ್ತಕಾಲಯದ ದಂತಿ, ಮಂಗಳೂರಿನ ಅತ್ರಿಪುಸ್ತಕಾಲಯದ #ಅಶೋಕವರ್ಧನರಂತ ಕನ್ನಡದ ತೇರು ಎಳೆದ ಸಾದಕರು ಯಾಕೆ ಕಾಣುವುದಿಲ್ಲ? ಅರ್ಹತೆಯೇ ಅನರ್ಹತೆಯೇ? ಅರ್ಜಿ ಹಾಕಿ ವಸೂಲಿ ಬಾಜಿ ಮಾಡಿದರೆ ಮಾತ್ರ ಪ್ರಶಸ್ತಿಯಾ? ಎಂಬ ಪ್ರಶ್ನೆ ಮೂಡುತ್ತದೆ.
ಬೆಂಗಳೂರಿನ ಸ್ವಪ್ನ ಬುಕ್ ಸ್ಟಾಲ್ ಗೆ ಎಲ್ಲಾ ಪ್ರಶಸ್ತಿ ಕೊಡಮಾಡುವ ಅವರಿಗೆ ಬಿಡಿಎ ನಿವೇಶನ ನೀಡುವ ಸರ್ಕಾರಗಳ ನಡೆ ಪ್ರಶ್ನಾತೀತವಾಗಿದೆ.
ಸರ್ಕಾರಗಳು ಬಿಡಿ ವಿಶ್ವವಿದ್ಯಾಲಯಗಳು, ಸಾಹಿತ್ಯ ಪರಿಷತ್ ಗಳು, ಪ್ರಾಧಿಕಾರಗಳೂ ಕುರುಡಾಗಿದೆಯಾ? ಅನ್ನಿಸದೇ ಇರಲಾರದು.
ಅಪ್ರತಿಮ ಎಲೆ ಮರೆಯ ಕಾಯಿಯಂತ ಈ ಸಾಧಕರನ್ನು ಸಮಸ್ತ ಕನ್ನಡಿಗರು ಅಭಿನಂದಿಸುವ ಕಾಲ ಬರಲಿ ಇಂತವರ ಸಾದನೆ ಕನ್ನಡಿಗರಿಗೆ ತಲುಪಿಸುವ ಮಹತ್ಕಾರ್ಯ ಮಾಡುವ ಮನಸ್ಸು ಪತ್ರಿಕೆ - ಟೀವಿಗಳಿಗೆ ಉಂಟಾಗಲಿ ಎಂಬ ನನ್ನ ಕನಸು ನನಸಾಗಲಿ ಎಂದು ಆಶಿಸುತ್ತಾ.
ಸಾಗರದ ರವೀಂದ್ರ ಪುಸ್ತಕಾಲಯದ ಕನ್ನಡ ಬಾಷಾಭಿವೃದ್ದಿಗಾಗಿ ಸಾಹಿತ್ಯದ ತಮ್ಮ ಸರಣಿ ಪ್ರಕಟಣೆ ಮತ್ತು ಮಾರಾಟದಲ್ಲಿ ಅತ್ಯುನ್ನತ ಸಾಧನೆ ಮಾಡಿದ #ಯಲ್ಲಪ್ಪಅಪ್ಪಾರಾವ್_ದಂತಿ ಅವರಿಗೆ 85ನೇ ಹುಟ್ಟು ಹಬ್ಬ ಮತ್ತು ದಂತಿ ದಂಪತಿಗಳ 50ನೇ ವಿವಾಹ ವಾರ್ಷಿಕೊತ್ಸವದ ಶುಭ ಹಾರೈಕೆಗಳು.
Comments
Post a Comment