Blog number 1174. ಭಾಗ 1.ಸಾಗರದ ಹಿರಿಯ ಪತ್ರಿಕೋದ್ಯಮಿ ಹರಿದ್ರಾವತಿ ವೆಂಕಟರಾವ್ ರಾಮಚಂದ್ರರಾವ್ ಅವರಿಗೆ 86 ವರ್ಷ, ಅವರ ಪತ್ರಿಕಾ ಉದ್ಯಮಕ್ಕೆ ಅರ್ಧ ಶತಮಾನ, HVR ಎಂದೇ ಜನ ಗುರುತಿಸುತ್ತಾರೆ ಇವರನ್ನು
#ಸಾಗರದ_ಪತ್ರಿಕೋದ್ಯಮದ_ಅತ್ಯಂತ_ಹಿರಿಯರು
#ಸಾಗರ_ಸಂದೇಶ_ದಿನಪತ್ರಿಕೆಯ_ಹೆಚ್_ವಿ_ರಾಮಚಂದ್ರರಾವ್
#ಅರ್ದಶತಮಾನ_ಪತ್ರಿಕೋದ್ಯಮದಲ್ಲಿ
#ಇವರ_ವಯಸ್ಸು_86
#ತೀರ್ಥಹಳ್ಳಿಯ_ಜನಪ್ರಿಯ_ದಿನಪತ್ರಿಕೆ_ಟೈಟಲ್_ಇವರದ್ದೆ
#ಶಿವಮೊಗ್ಗದ_ಭೂಪಾಳಂ_ಚಂದ್ರಶೇಖರರ_ಪತ್ರಿಕೆಯಲ್ಲಿ_ಇವರ_ಸಹೋದರ_ನಾರಾಯಣರಾವ್_ವರದಿಗಾರರು
#ಸ್ಥಳಿಯ_ವರದಿಯಿಂದ_ಕೊಲೆ_ಆದ_ದುರಂತ_ಕುಟುಂಬ.
https://youtu.be/-1Bc6GamnzE
ಹೆಚ್ ವಿ ಆರ್ ಎಂದೇ ಖ್ಯಾತರಾದ ಹರಿದ್ರಾವತಿ ವೆಂಕಟರಾವ್ ಪುತ್ರ ರಾಮಚಂದ್ರ ರಾವ್ ಮೊನ್ನೆ ಸಾಗರದ ಇನ್ನೊಬ್ಬ ಪತ್ರಕರ್ತ ಗಣಪತಿ ಶಿರಳಿಗೆ ಜೊತೆ ನನ್ನ ಕಛೇರಿಗೆ ಬಂದಿದ್ದರು.
ಹೆಚ್ ವಿ ಆರ್ ಮತ್ತು ನಾನು ಮಾಜಿ ಶಾಸಕರಾದ ಶಿರನಾಳಿ ಚಂದ್ರಶೇಖರ್ ಜೊತೆ ಅನೇಕ ಸಂದಭ೯ಗಳಲ್ಲಿ ನಮ್ಮ ಊರಿನ ಪ್ರವಾಸಿ ಮಂದಿರದಲ್ಲಿ ಔತಣ ಕೂಟದಲ್ಲಿ ಅನೇಕ ವಿಚಾರಗಳ ನೆನಪು ಚರ್ಚೆ ಮಾಡಿದ್ದೇವೆ.
ಬೀಮನಕೋಣೆಯ ಪಿ.ಎಲ್.ಡಿ.ಬ್ಯಾ೦ಕ್ ನಿರ್ದೇಶಕರಾಗಿ ಅಲ್ಲಿನ ಲೋಪದೋಷಗಳನ್ನು ಶೇರುದಾರರಿಗೆ ನೀಡಿ ಬ್ಯಾಂಕ್ ಸರಿ ದಾರಿಯಲ್ಲಿ ಸಾಗಲು ಕಾರಣಕರ್ತರು ಇವರು.
ಹೊರನಾಡಿನ ಅನ್ನಪೂಣೇ೯ಶ್ವರಿ ದೇವಾಲಯದ ಬೀಮೇಶ್ವರ ಜೋಷಿ ಸಹೋದರ ಇವರ ಅಳಿಯ.
ಸಾಗರದ ಪ್ರಥಮ ದಿನ ಪತ್ರಿಕೆ ಮನೋಭೂಮಿ ರಾಮಚಂದ್ರ ಶೆಟ್ಟರು, ಉಳ್ಳೂರು ಸುಬ್ರಾಯರ ಸಾಗರವಾರ್ತಾ, ಕಮ೯ಚಾರಿ ದಿನಪತ್ರಿಕೆ ಟಿ.ಡಿ. ಕಮಲಾಕ್ಷ ಪಂಡಿತ್, ಜಿ.ಆರ್.ಜಿ ನಗರ್ ಅವರ ಪತ್ರಿಕೆ ಜೊತೆ ಜೊತೆಗೆ ಹೆಚ್.ವಿ.ಆರ್. ಸಾಗರ ಪತ್ರಿಕೋದ್ಯಮದಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
ವಿಶೇಷ ಅಂದರೆ ತೀರ್ಥಹಳ್ಳಿಯ ಛಲಗಾರ ಪತ್ರಿಕೆ ಟೈಟಲ್ ಇವರದ್ದೆ, ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಆಲಗೇರಿ ಮಂಡ್ರಿಯ ಗಣಪತಿ ಅವರಿಗೆ ಇವರು ನೀಡಿದ್ದು, ಅದು ಸಾಗರದಿಂದ ಮೊದಲಿಗೆ ಪ್ರಕಟವಾಗುತ್ತಿತ್ತು ಎನ್ನುವ ನೆನಪು ಅವರು ಮಾಡಿದ್ದಾರೆ.
ಒಂದು ದುರಂತ ಅಂದರೆ 1970 ರ ದಶಕದಲ್ಲಿ ಇವರ ಸಹೋದರ ಶಿವಮೊಗ್ಗದ ಭೂಪಾಳಂ ಚಂದ್ರಶೇಖರ್ ಅವರ ಮಲೆನಾಡು ವಾತಾ೯ ಪತ್ರಿಕಾ ಸ್ಥಳಿಯ ವರದಿಗಾರ ಮತ್ತು ಏಜೆಂಟರಾದ ಹೆಚ್.ವಿ.ನಾರಾಯಣ ರಾವ್ ಬರೆದ ಸ್ಥಳಿಯ ವರದಿಯಿಂದ ಅವರ ಕೊಲೆ ಆಗಿತ್ತು.
ಹೀಗೆ ಅನೇಕ ವಿಚಾರಗಳನ್ನು ಹೆಚ್.ವಿ. ಆರ್ ನೆನಪಿನ ಸುರಳಿಯಿಂದ ಹೊರ ತೆಗೆಯುವ ಪ್ರಯತ್ನ ಮಾಡಿದ್ದೇನೆ ಕೆಲ ಕಂತುಗಳಾಗಿ ಮರೆತು ಹೋದ ಘಟನೆಗಳು ಇಲ್ಲಿದೆ.
Comments
Post a Comment