1972ರಲ್ಲಿ ನಮ್ಮ ತಂದೆಗೆ ದರಕಾಸ್ತುನಲ್ಲಿ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ತಾವರೇಹಳ್ಳಿ ಗ್ರಾಮದ ಸ.ನಂ.44ರಲ್ಲಿ 6 ಎಕರೆ ಖುಷ್ಕಿ ಜಮೀನು ಮಂಜೂರಾಗಿತ್ತು, ಆ ಸ್ಥ೪ದ ಹೆಸರು ಜೇಡಿ ಸರ ಯಾಕೆಂದರೆ ಅಲ್ಲಿನ ಮಣ್ಣಿನಲ್ಲಿ ಜೇಡಿ ಜಾಸ್ತಿ ಹಾಗಾಗಿ ಇದು ಫಲವತ್ತಾದ ಜಮೀನಲ್ಲ ಬೇರೆ ಕಡೆ ಜಮೀನು ಮಂಜೂರು ಮಾಡಿ ಅಂತ ನಮ್ಮ ತಂದೆ ಮತ್ತು ಅನೇಕರು ಸಕಾ೯ರಕ್ಕೆ ಅಜಿ೯ ಸಲ್ಲಿಸಿ ಈ ಜಮೀನು ಬೇಡ ಅಂತ ತೀಮಾ೯ನಿಸಿದ್ದರು.
ಸಕಾ೯ರ ಇವರ ಅಜಿ೯ ಪುರಸ್ಕರಿಸಲಿಲ್ಲ, ನಾನು ಚಿಕ್ಕವನಿದ್ದಾಗ ಈ ಜಮೀನು ಖರೀದಿಸಲು ಆನಂದಪುರದ ಟಿಂಬರ್ ಕಂಟ್ರಾಕ್ಟರ್ ಚಂದ್ರಹಾಸ ಶೇಟ್ ಮತ್ತು ಮಧ್ಯಸ್ಥಿಕೆಗಾಗಿ ಗ್ರಾಮ ಪಂಚಾಯತ್ ನೌಕರರಾದ ಪ್ರತಾಪ್ ಸಿಂಗ್ ಮತ್ತು ಬಳೆಗಾರ್ ಸುಬ್ಬಣ್ಣ ಬಂದಿದ್ದರು.
ಒಳಗಿನ ಕೋಣೆಯಲ್ಲಿ ಮಾರಾಟದ ಮಾತುಕಥೆ ಅಂತಿಮ ಹಂತಕ್ಕೆ ಬರುತ್ತಿತ್ತು. ಹೊರಗಿನ ಕೋಣೆಯಲ್ಲಿ ಬುಗುರಿಯನ್ನ ಗಾಳಿಯಲ್ಲಿ ಹಾರಿಸಿ ಅಂಗೈ ಮೇಲೆ ತಿರುಗಿಸುತ್ತಾ ಒಳಗಿನ ವ್ಯವಹಾರ ಆಲೈಸುತ್ತಿದ್ದೆ.
ಎಕರೆಗೆ ಅಂತಿಮವಾಗಿ ನಮ್ಮ ತಂದೆ 2500 ರಂತೆ 6 ಎಕರೆಗೆ 15000 ಕೇಳುತ್ತಿದ್ದರು ಆದರೆ ಚಂದ್ರಹಾಸ ಶೇಟ್ರವರು 12000ಕ್ಕೆ ಪಟ್ಟು ಹಿಡಿದಿದ್ದರು ಅಷ್ಟರಲ್ಲಿ ಒಳಕ್ಕೆ ಇಣುಕಿದ ನಾನು ಅಪ್ಪಯ್ಯ ಆ ಜಮೀನು ನನಗೆ ಇರಲಿ ಅಂದೆ, ನನಗೆ ಬೇಕೆ ಬೇಕು ಎನ್ನುವ ಹಟವಾಗಲಿ ಅಥವ ಇನ್ನಾವುದೆ ಉದ್ದೇಶವಿರಲಿಲ್ಲ, ಆದರೆ ನಮ್ಮ ತಂದೆ ಈ ವ್ಯವಹಾರ ಅಲ್ಲಿಗೆ ತುಂಡರಿಸಿದರು " ಚOದ್ರಹಾಸ ಸರಿ ಬಿಡು ನನ್ನ ಮಗನಿಗೆ ಈ ಜಮೀನು ಇರಲಿ" ಅಂದರು.ಆಗ ಖರೀದಿದಾರರು ನಮ್ಮ ತಂದೆಗೆ " ಈ ಸಣ್ಣ ಹುಡುಗನಿಗೆ ಏನು ಗೊತ್ತು ಕೃಷ್ಣಣ್ಣ 15000ನೆ ಕೊಡುತೀನಿ ನನಗೆ ಇರಲಿ" ಅಂದರು,ಮುಂದೆ ಅಂತಿಮ ತೀಮಾ೯ನ ಏನಂತ ಕಾಯದೆ ಆಟಕ್ಕೆ ಓಡಿದೆ.
ನಮ್ಮ ತಂದೆಯಿಂದ ಬಂದ ಈ ಜಮೀನಿನಲ್ಲಿ ಏನೆಲ್ಲ ಪ್ರಯತ್ನ ಮಾಡಿದೆ, ಅಡಿಕೆ ಹಾಕಿದೆ ಫಸಲು ಬರುವ ಮೊದಲೇ ಯಾರೋ ದುರುದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟರು, ನಂತರ ಮಾವು, ಸಪೋಟ ಮತ್ತು ತೆಂಗು ಕೃಷಿ ಮಾಡಿದೆ ಆದರೆ ಅಲ್ಲಿನ ಜಾನುವಾರುಗಳಿಗಿಂತ ಹೆಚ್ಚು ಹೊಟ್ಟೆಕಿಚ್ಚು ಅಲ್ಲಿನ ಕೆಲವರಿಗಿತ್ತಾ ಗೊತಿಲ್ಲ, ಆದರೆ ಜಾನುವಾರಿಗಿಂತ ಅಂತ ಜನರೇ ಬೇಲಿ ಕಿತ್ತಿ ಜಾನುವಾರನ್ನ ಬಿಡುತ್ತಿದ್ದರು.
ನಂತರ ಈ ಎಲ್ಲಾ ಕೃಷಿಗಿ೦ತ ರಬ್ಬರ್ ಬೆಳೆ ಬೆಳೆಯಲು ತೀಮಾ೯ನಿಸಿದೆ, ಮುಂಬಾಳಿನ ಪಾದರ್ ಜೋಸ್ ರಬ್ಬರ್ ಬೆಳೆಯಲು ಹೇಳಿದರೆ ಉತ್ಸಾಹ ತೋರದೆ ಕಾಲಹರಣ ಮಾಡಿದ್ದು ದೊಡ್ಡ ತಪ್ಪು ಅಂತ ಅನ್ನಿಸಿತ್ತು. ರಬ್ಬರ್ ಸಸಿ ನೆಟ್ಟರೂ ನನಗೆ ತೊoದರೆ ಕೊಡುವವರು ತಪ್ಪಲಿಲ್ಲ ದೊಡ್ಡ ಅಗಳು ತೆಗೆದೆ, ತಂತಿ ಬೇಲಿ ಮಾಡಿದೆ, ಪ್ರಯಾಸದ 8 ವಷ೯ದ ಕೃಷಿ ಈ ವಷ೯ ಅಲ್ಪ ಅದಾಯ ನೀಡುತ್ತಿದೆ, ಮಳೆಗಾಲದ ನಂತರ ಹೆಚ್ಚು ಲಾಭ ಗ್ಯಾರಂಟಿ ಅಂತ ರಬ್ಬರ್ ಟ್ಯಾಪರ್ ಗಳು ಹೇಳುತ್ತಿದ್ದಾರೆ.
ವ್ಯವಹಾರಗಳಲ್ಲಿ ಹೆಚ್ಚು ಲಾಭ ಇರಬಹುದು ಅಲ್ಲಿ ಶಾಂತಿ ನೆಮ್ಮದಿ ಖಂಡಿತಾ ಇಲ್ಲ ಹಾಗಾಗಿ ನನಗೆ ನನ್ನ ಜಮೀನಿನಲ್ಲಿ ಒಂದು ಮನೆ, ಈಜು ಕೊಳ ಮಾಡಬೇಕೆಂಬ ಆಸೆ ಹುಟ್ಟಿದೆ.ಈಗಾಗಲೆ ಸುತ್ತಲೂ ವಾಕಿಂಗ್ ಟ್ರಾಕ್ ಮಾಡಿದ್ದೇನೆ.
ಮೊನ್ನೆ ಇಡೀ ದಿನ ಅಲ್ಲಿ ಕಳೆದೆ, ಕೆಲಸದವರ ಜೊತೆ ತಿರುಗಾಟ ಮಧ್ಯಾನದ ಊಟ ಆಯಿತು, ಅಲ್ಲಿನ ಕೆಲ ಮೊಬೈಲ್ ಫೋಟೊಗಳು ಕೂಡ.
Comments
Post a Comment