Blog number 1208. ಮುರುಘಾಮಠದ ದಯಾನಂದ ಪೂಜಾರಿ ನಮ್ಮ ಊರಿನವರು ದೇಶಾಭಿಮಾನದ ಅವರು ಭಾರತೀಯ ಸೈನ್ಯ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ತಂದೆ ಶೇಖರ್ ಪೂಜಾರರು ನನ್ನ ಗೆಳೆಯರು.
ಆನಂದಪುರO ಸಮೀಪದ ಮುರುಘಾಮಠದಲ್ಲಿ ಹೋಟೆಲ್ ದಿನಸಿ ಅಂಗಡಿ ನಡೆಸುವ ಶೇಖರ್ ಪೂಜಾರರು ಮತ್ತು ನಾವೆಲ್ಲ ಕಾಮಿ೯ಕ ಹೋರಾಟ ದಲಿತ ಸಂಘಷ೯ ಸಮಿತಿಯಲ್ಲಿ ಒಟ್ಟಾಗಿ ಒಡನಾಟ ಮಾಡಿದವರು.
ಇವರ ಮಗ ದಯಾನಂದ ಪದವಿ ವ್ಯಾಸಂಗ ಮಾಡಿ ದೇಶ ಸೇವೆಯ ಸೈನ್ಯದಲ್ಲಿದ್ದಾರೆ, ಸತತ ಆರು ವಷ೯ದಿಂದ ಕಾಶ್ಮೀರದಲ್ಲಿನ ಪ್ರತಿಕೂಲ ಹವೆ ಮತ್ತು ಆತಂಕಕಾರಿ ಆಭದ್ರತೆಯ ಪ್ರದೇಶದಲ್ಲಿ ಯಾವುದೇ ಭಯ ಇಲ್ಲದೆ ಸೇವೆ ಸಲ್ಲಿಸುತ್ತಾ ಅಲ್ಲಿ ಅವರ ಇಲಾಖೆಯಲ್ಲಿ ಕ್ರೀಡೆಯಲ್ಲಿ ಸೇವೆಯಲ್ಲಿ ಅನೇಕ ಪದಕ ಪಡೆದಿದ್ದಾರೆ.
ಮುಖತಃ ಬೇಟಿ ಮಾಡಿ ಅಭಿನಂದಿಸಬೇಕು ಅಂತ ಮಾಡಿದ್ದರೂ ಸಾಧ್ಯವಾಗಿರಲಿಲ್ಲ ಮೊನ್ನೆ ನಮ್ಮ ಊರ ವರಸಿದ್ಧಿವಿನಾಯಕ ದೇವರ ಜಾತ್ರೆಗೆ ಅವರು ಬಂದಿದ್ದರು ಅವಾಗ ಅವರನ್ನ ಮಾತಾಡಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುವ ಅವರಿಗೆ ದೇವರಲ್ಲಿ ಆರೋಗ್ಯ- ಐಶ್ವಯ೯-ಯಶಸ್ಸು-ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸಲಾಯಿತು.
ದಯಾನಂದ ಮೃದು ಮಾತುಗಾರ, ಕಠಿಣ ಗುರಿ ತಲುಪುವ ಏಕಾಗ್ರತೆ, ದೇಶ ಪ್ರೇಮ, ತನ್ನ ಕುಟುಂಬದ ಬಗ್ಗೆ ಮಮತೆ ಮತ್ತು ತನ್ನ ಹುಟ್ಟಿದ ಊರಿನ ಬಗ್ಗೆ ಪ್ರೀತಿ ಅವರ ಜೊತೆ ಮಾತಾಡಿದಾಗ ಗುರುತಿಸಿದೆ.
Comments
Post a Comment