Blog number 1162. ಅರವಿಂದ ಚೊಕ್ಕಾಡಿ ಕ್ಷಬ್ ನಲ್ಲಿ?! ಹೌದು ವಿಶ್ವ ವಾಣಿ ಕ್ಲಬ್ ಹೌಸ್ ಇವತ್ತು 5- ಜನವರಿ -2022 ರಂದು ನಡೆಸಿದ ಹಾವೇರಿ ಸಾಹಿತ್ಯ ಪರಿಷತ್ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದದ ಬಗ್ಗೆ ಚರ್ಚೆ.
#ಸಾಹಿತ್ಯ_ಸಮ್ಮೇಳನ_ಮತ್ತು_ಜನಸಾಹಿತ್ಯ_ಸಮ್ಮೇಳನದ
#ವಿವಾದ_ಕುರಿತು.
ಪ್ರಾರಂಭದಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಕೇಳುತ್ತಿದ್ದೆ ನಂತರ ಬಿಟ್ಟಿದ್ದೆ ಇವತ್ತು ಅರವಿಂದ ಚೊಕ್ಕಾಡಿ ಅವರು ಲಿಂಕ್ ವಾಟ್ಸಪ್ ಮಾಡಿದ್ದರು.
ಪ್ರಸ್ತುತ ಹಾವೇರಿಯ ಸಾಹಿತ್ಯ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದ ಕುರಿತು ಕ್ಲಬ್ ಹೌಸ್ ಇವರೊಂದಿಗೆ ಮಾತಾಡುವುದು ಕೇಳಿದೆ.
ಪ್ರಾರಂಭದಲ್ಲಿ ಅರವಿಂದರ ಸಂಪರ್ಕದಲ್ಲಿ ಅಡಚಣೆ ಆಯಿತು ನಂತರ ಸಂಪರ್ಕ ಏರ್ಪಟ್ಟು ಸಾಂಗವಾಗಿ ನೆರವೇರಿತು ಮತ್ತು ಕ್ಲಬ್ ನ ಮುಖ್ಯಸ್ಥೆ ಅರವಿಂದ ಚೊಕ್ಕಾಡಿಯವರನ್ನು ಕನ್ನಡ ಸಾಹಿತ್ಯದ ವಿವಾದ ಕಾಲದಲ್ಲಿ ನೀವು ಹಿರಿಯಣ್ಣನ ರೀತಿ ಮಾತಾಡಿದಿರಿ ಎಂದು ಅಭಿನಂದಿಸಿದ್ದು ಸರಿ ಅನ್ನಿಸಿತು.
ಒಂದು ಕಡೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜೋಷಿ ಮತ್ತೊಂದು ಕಡೆ ಜನ ಸಾಹಿತ್ಯ ಸಮ್ಮೇಳನದ ಪುರುಶೋತ್ತಮ ಬಿಳಿಮಲೆ ಇದ್ದಾರೆ ಇವರಿಬ್ಬರ ಆರೋಪ ಪ್ರತ್ಯಾರೋಪದ ಪೆಂಡಾಲ್ ಬಗ್ಗೆ ಅರವಿಂದ ಚೊಕ್ಕಾಡಿ ಏನು ಹೇಳುತ್ತಾರೆಂಬ ಕುತೂಹಲವಿತ್ತು.
ಅರವಿಂದ ಚೊಕ್ಕಾಡಿ ಅವರು ತಾವು ವೈಯಕ್ತಿಕವಾಗಿ ಬಲ್ಲ ಪುರುಶೋತ್ತಮ ಬಿಳಿಮಲೆ ಅವರ ಮೇಲೆ ಜೋಷಿ ಅವರ ಆರೋಪ ನಿರಾಕರಿಸಿದರು ಬಿಳಿಮಲೆ ಅಂತಹ ವ್ಯಕ್ತಿ ಅಲ್ಲವೆಂದರು ಮತ್ತು ಜೋಷಿ ಅವರ ಆರೋಪಕ್ಕೆ ಸಾಕ್ಷಿಗಳು ಏಕಿಲ್ಲ ಎಂಬ ಪ್ರಶ್ನೆ ಅವರದ್ದು.
ಇನ್ನೊಂದು ಈ ಸಂದರ್ಭದಲ್ಲಿ ಜೋಷಿ ಗುರು ಗೋವಿಂದ ಭಟ್ಟರ ಮೊಮ್ಮಗ ಅಪ್ರಸ್ತುತ ಎಂದರು.
ಸಾಹಿತ್ಯ ಪರಿಷತ್ ಮತ್ತು ಜನ ಸಾಹಿತ್ಯ ಪರಿಷತ್ತು ಎರೆಡೂ ಕನ್ನಡದ ಕೆಲಸ ಎಂದರು ಹಾಗೆಯೇ ಅವರು ಎರೆಡೂ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಕಾರಣ ಮೈಸೂರಲ್ಲಿ ಅವರ ಮಾವ ಸುಬ್ರಾವ್ ಚೊಕ್ಕಾಡಿ ಅವರ ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ ಆಗುವುದು ಆ ಪುಸ್ತಕದ ಸಂಪಾದಕರು ಇವರೇ ಆದ್ದರಿಂದ ಇವರು ಅಲ್ಲಿರಲೇ ಬೇಕು.
ಗಾಂಧಿ ಅವರ ಚರಕ ಚಳವಳಿ ದೇಶಕ್ಕೆ ಸ್ವಾತಂತ್ರ ತರಲಿಲ್ಲ ಎನ್ನುವವರು ಚರಕದ ಚಳವಳಿ ಗೊತ್ತಿಲ್ಲ ಅದು ಯುರೋಪಿನ ಆ ಕಾಲದ ಟೆಕ್ಸಟ್ಟೆಲ್ಸ್ ಉಧ್ಯಮಕ್ಕೆ ದೊಡ್ಡ ಚೆಕ್ ಮೇಟ್ ಆದ ಹೋರಾಟ, ಸಾಹಿತ್ಯ ಪರಿಷತ್ ನಲ್ಲಿ ಬ್ಯಾರಿ ಭಾಷೆ ಸಾಹಿತ್ಯ, ಎಡ ಮತ್ತು ಬಲಪಂಥೀಯ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಅಂತರಿಕ್ಷ ಬ್ರಹ್ಮ ವ್ಯಾಖ್ಯಾನವನ್ನು ಸುಂದರವಾಗಿ ಪ್ರಸ್ತಾವಿಸಿದರು.
ಪ್ರಶ್ನೋತ್ತರದಲ್ಲಿ ಸಾಹಿತ್ಯ ಪರಿಷತ್ ಸಾಂವಿದಾನಕ ಸಂಸ್ಥೆ ಅಲ್ಲ ಕಸಾಪ ಸರ್ಕಾರದ ಆರ್ಥಿಕ ಸಹಾಯ ಪಡೆಯುವ ಸಂಸ್ಥೆ ಸಾಂವಿಧಾನಿಕ ಸಂಸ್ಥೆ ಅಂದರೆ ಚುನಾವಣಾ ಆಯೋಗ ಇತ್ಯಾದಿ ಎಂದು ವಿವರಿಸಿದರು.
ಅರವಿಂದ ಚೊಕ್ಕಾಡಿ ಅವರು ತಾತ್ವಿಕವಾಗಿ ಈ ವಿಚಾರದಲ್ಲಿ ತಾವು ಎಡಪಂತಿಯರ ಜೊತೆ ಇದ್ದೇನೆ ಕಾರಣ ಅಧಿಕಾರ ಇಲ್ಲದವರ ಪರ ಅದು ಅವರಿಗೆ ಅಧಿಕಾರ ಸಿಗುವ ತನಕ ಮಾತ್ರ ಅಂದಿದ್ದು ವಿಶೇಷ.
ತುಂಬಾ ಸ್ವಾರಸ್ಯಕರ - ಅಥ೯ಪೂರ್ಣವಾದ ಪ್ರಸ್ತುತ ಸಾಹಿತ್ಯ ಪರಿಷತ್ತು ಮತ್ತು ಜನ ಸಾಹಿತ್ಯ ಪರಿಷತ್ ವಿವಾದದ ಬಗ್ಗೆ ಇವತ್ತಿನ ವಿಶ್ವವಾಣಿ ಕ್ಲಬ್ ಹೌಸ್ ಲ್ಲಿ ಅರವಿಂದ ಚೊಕ್ಕಾಡಿ ಮಾತುಗಳು ಕೇಳಿದೆ
Comments
Post a Comment