Blog number 1198. ಜಂಗಲ್ ವಾಲೆ ಬಾಬಾ ಜೈನ ಸಂತರು ನಮ್ಮಲ್ಲಿ ತಂಗಿದ್ದರು ಅವರ ಜೊತೆ ಸತ್ಸಂಗ ಮತ್ತು ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟಕ್ಕೆ ಸಂದರ್ಶನ ಮಾಡಿದ ಭಾಗ್ಯ ನನ್ನದು.
#ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರ ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ನಿನ್ನೆ ಶನಿವಾರದಿಂದ (12 ಅಕ್ಟೋಬರ್ 2019) ದಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದೇಹ ತ್ಯಾಗ ಮಾಡಿದ್ದಾರೆ#.
ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ಯಥಾವತ್ತು ಇಲ್ಲಿ ಹಾಕಿದ್ದೇನೆ.
ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.
ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.
ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಬೇಟಿಗೆ ಬಂದಿದ್ದರು, ಜೈನ ಪ್ರಮುಖರಾದ ದಮ೯ ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಸಿಕ್ಕಿಲ್ಲ ಅಂತ ಮಹಾರಾಷ್ಟ್ರದ ಸತಾರದ ಜೈನ ಪ್ರಮುಖರು ಹೇಳಿದರು.
ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.
ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ್ರೀವಾದ ಮಾಡಿ ಹೋಗುತ್ತಾರೆ.
ನನ್ನ ತಂದೆ ಕೃಷ್ಣಪ ಮತ್ತು ತಾಯಿ ಸರಸಮ್ಮರ ಸ್ಮರಣಾಥ೯ ನಿಮಿ೯ಸಿರುವ "ಕೃಷ್ಣ ಸರಸ ಕನ್ವೆನ್ಷನ್ ಹಾಲ್" ನ ಮಹಿಮೆ ಅಂತ ಬಾವಿಸುತ್ತೇನೆ.
ಹಿಂದಿನ ದಿನ ಸಾಗರದ ಜೈನ ಮುಖಂಡರಾದ ರಾಜ್ ಕುಮಾರ್ ಜೈನ್ ಮತ್ತು ವಿ.ಟಿ.ಸ್ವಾಮಿ ಬಂದು ನಾಳೆ ಒಬ್ಬ ಸಂತರು ಬರುತ್ತಾರೆ ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು ಅದರಂತೆ ಮರುದಿನ ಬಂದವರು ಜಂಗಲ್ ವಾಲೆ ಬಾಬ.
ಅವರು ಬಂದು ವಿರಾಜಮಾನರಾದ ನಂತರ ಮಾಲಿಕರನ್ನ ಕರೆಯಿರಿ ಅಂದರಂತೆ ಅವರಾಗಿ ಕರೆದದ್ದರಿಂದ ಹೋಗಿ ದಶ೯ನ ಪಡೆದು ಅವರನ್ನ ಮಾತಿಗೆ ಎಳೆದೆ, ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಗೆ ಅವರ ಅನುಮತಿಯಿಂದ ಸಂದಶ೯ನ ಮಾಡಿದೆ, ಅವರು 3000ಕ್ಕೂ ಹೆಚ್ಚು ನಕ್ಸಲೈಟ್ಸ್ ರನ್ನ ಮುಖ್ಯ ವಾಹಿನಿಗೆ ತಂದವರು, ಹೆಚ್ಚಾಗಿ ಅರಣ್ಯ ಮತ್ತು ಅರುಣ್ಯವಾಸಿಗಳಂದಿಗೆ ಇರುವುದರಿಂದ ಇವರಿಗೆ ಜಂಗಲ್ ವಾಲೆ ಬಾಬ ಅಂತ ಹೆಸರಾಗಿದೆ.
2015 ಮತ್ತು 2016 ರ ವರೆಗೆ ಕನಾ೯ಟಕದ ಪ್ರಮುಖ ಜೈನ ಕೇಂದ್ರ ಸಂದಶಿ೯ಸಿ ಈಗ ಕನಾ೯ಟಕ ದಾಟಿ ಹೋಗಿದ್ದಾರೆ, ಈ ಅವದಿಯಲ್ಲಿ ಎರೆಡು ಚಾತುಮಾ೯ಸ ಕನಾ೯ಟಕದಲ್ಲಿ ಮಾಡಿದ್ದಾರೆ ಒಂದು ಖಾನಾಪುರ ಮತ್ತು ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ.
Comments
Post a Comment