Blog number 862, ಪಶ್ಚಿಮ ಘಟ್ಟದ ಜನವಸತಿ ಕೇಂದ್ರಗಳು ವಿಸ್ತಾರವಾದಂತೆ ಒ0ದು ಕಾಲದಲ್ಲಿ ಸಮೃದ್ಧವಾಗಿದ್ದ ಕವಳಿಕಾಯಿ ಪೂದೆಗಳು ಕಣ್ಮರೆ ಆಗಲು ಕಾರಣವೇನು? ನೈಸಗಿ೯ಕವಾಗಿ ದೊರೆಯುವ ಕವಳಿಕಾಯಿ ಮತ್ತು ರಸವತ್ತಾದ ಕಪ್ಪು ದ್ರಾಕ್ಷಿಯಂತ ಕವಳಿ ಹಣ್ಣಿನ ಮೌಲ್ಯವರ್ಧನೆ ಆಗಬೇಕಾಗಿದೆ.
#ಕವಳಿ_ಗಿಡಗಳು_ಈಗ_ಅಪರೂಪ_ಏಕೆ? #ಪರಿಸರ_ಮಾಲಿನ್ಯ_ಇದಕ್ಕೆ_ಕಾರಣವಾ? #ಒಂದು_ಕಾಲದಲ್ಲಿ_ಹಳ್ಳಿಯ_ಸುತ್ತಲು_ಗುಡ್ಡಗಾಡಿನಲ್ಲಿ_ಯಥೇಚ್ಚವಾಗಿದ್ದ_ಕವಳಿ_ಗಿಡ_ಈಗಿಲ್ಲ. #ಕವಳಿಕಾಯಿ_ಖಾದ್ಯ_ದ್ರಾಕ್ಷಿಹಣ್ಣಿನಂತ_ಕವಳಿಕಾಯಿ_ಈಗ_ನೆನಪು_ಮಾತ್ರ. #ಕವಳಿ_ಕಾಯಿ_ಮತ್ತು_ಹಣ್ಣಿನ_ಮೌಲ್ಯವರ್ಧನೆ_ಆಗಬೇಕಾಗಿದೆ. 80-90ರ ದಶಕದಲ್ಲಿ ಉತ್ತರ ಕನ್ನಡದ ಕರಾವಳಿಯ ಸಂತೆಗಳಲ್ಲಿ ಕವಳಿಕಾಯಿ - ಹಣ್ಣು ಮಾರಾಟ ಮಾಡುತ್ತಿದ್ದ ಹಾಲಕ್ಕಿ ಮಹಿಳೆಯರು, ಗೋವಾದಲ್ಲಿ ಇದನ್ನು ಮಾರುವ ಕುಣುಬಿ ಮಹಿಳೆಯರು ಮತ್ತು ಬಯಲು ಸೀಮೆಯಲ್ಲಿ ಲಂಬಾಣಿ ಮಹಿಳೆಯರ ನೋಡಿದಾಗ ನಮಗೆಲ್ಲ ಸೋಜಿಗ ಯಾಕೆಂದರೆ ಆಗಿನ ದಿನದಲ್ಲಿ ನಮ್ಮ ಊರ ಕೊನೆಯ ಮನೆ ದಾಟಿದರೆ ಕವಳಿಕಾಯಿಯ ಸಾವಿರಾರು ಪೊದೆಗಳು ಇದ್ದವು, ಯಾರೂ ಮಾರಾಟ ಮಾಡುತ್ತಿರಲಿಲ್ಲ ಮತ್ತು ಖರೀದಿಸುವವರು ಇರಲಿಲ್ಲ. ನಾವೆಲ್ಲ ಉಪ್ಪಿನ ಪೊಟ್ಟಣದ ಜೊತೆ ತರಹೇವಾರಿ ಕವಳಿಕಾಯಿ ಜಗಿದು ಚುಳ್ಳನಿಸುವ ದವಡೆ ದಂತದಿಂದ ಸಂಜೆ ಊರಿಗೆ ಬರುತ್ತಿದ್ದೆವು. ಕವಳಿ ಹಣ್ಣಿನ ಕಾಲದಲ್ಲಿ ಕೇಜಿಗಟ್ಟಲೆ ಕಪ್ಪು ದ್ರಾಕ್ಷಿಯ ತಿನ್ನುತ್ತಾ ಬೇಸಿಗೆ ರಜೆ ಕಳೆಯುತ್ತಿದ್ದೆವು. ಆದರೆ ಈಗ ಕವಳಿ ಗಿಡ ಯಾಕೆ ನಶಿಸಿದೆ? ಯಾರಿಗೂ ಗೊತ್ತಿಲ್ಲ! ಇದನ್ನು ಬೇರಾವುದೇ ಉದ್ದೇಶಕ್ಕೆ ಬಳಕೆ ಇದ್ದರೆ ಈ ಸಸ್ಯ ನಶಿಸುತ್ತಿದೆ ಅಂತ ಭಾವಿಸಬಹುದಿತ್ತು ಅಂತದ್ದು ಯಾವುದೂ ಇಲ್ಲ ಆದರೆ ಈಗ ಕ...