Skip to main content

Posts

Showing posts with the label New business style of Hakkipikki youths

Blog number 1214.ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಯುವಕರ ಹೊಸ ಉದ್ಯೋಗದಲ್ಲಿ.

#ಒಂದುಕಾಲದಲ್ಲಿ_ಹಕ್ಕಿ_ಪಿಕ್ಕಿಜನಾಂಗ_ಅಲೆಮಾರಿ_ಶಿಕಾರಿಗಳು_ಗಿಡಮೂಲಿಕ_ತಜ್ಞರು #ಈಗ_ಬದಲಾದ_ಕಾಲಮಾನದಲ್ಲಿ_ಬದಲಾಗಿದ್ದಾರೆ_ವ್ಯಾಪಾರಿಗಳಾಗಿದ್ದಾರೆ  ಇವತ್ತು ಬೆಳಿಗ್ಗೆ ಪ್ಲಾಸ್ಟಿಕ್ ಹೂವಿನ ಮಾಲೆ ಮಾರಾಟಕ್ಕೆ ಬಂದ ಶಿವಮೊಗ್ಗ ಚಿಕ್ಕಮಟ್ಟಿ ಹಳ್ಳಿಯ ಹಕ್ಕಿಪಿಕ್ಕಿ ಕ್ಯಾಂಪಿನ ಹಾಲಿ ಶಿವಮೊಗ್ಗದ ನಂಜಪ್ಪ ಹೆಲ್ತ್ ಕೇರ್ ಹಿಂಬಾಗದ ಅಂಬೇಡ್ಕರ್ ಕಾಲೋನಿ ವಾಸಿ ಬೋಣಿಗೆ ಮಾಡಲು ವಿನಂತಿಸಿದ, ಪ್ಲಾಸ್ಟಿಕ್ ನಲ್ಲಿ ಹೂವಿನ ಬಣ್ಣದಲ್ಲಿ ಹೂವು ಸುರಿದು ಮಾಡಿದಂತ ಈ ಮಾಲೆ ನಿಜಕ್ಕೂ ಆಕಷ೯ಕವಾಗಿದೆ ಅವನ ಇವತ್ತಿನ ವ್ಯಾಪಾರಕ್ಕೆ 300 ರೂಪಾಯಿ ಬೊಣಿಗೆ ಮಾಡಿ ಅವನ ಜೊತೆಯ ವಿಡಿಯೋ ಈ ಜನಾಂಗದ 50 ವರ್ಷ ಹಿಂದಿನ ಇವರ ಜನ ಜೀವನದ ಚಿತ್ರದ ಜೊತೆ ಹಾಕಿದ್ದೇನೆ.    1960 ರ ದಶಕದಲ್ಲಿ ಸೀಮಿತ ಜನ ಸಂಖ್ಯೆಯ ನಮ್ಮ ಹಳ್ಳಿ ಕಾಡಿನ ಅಂಚಿನಲ್ಲಿ ಇದ್ದ ಹಾಗಿತ್ತು ಆಗ ಪ್ರತಿ ವರ್ಷ ಸುಗ್ಗಿ ನ೦ತರ ಹಕ್ಕಿಪಿಕ್ಕಿ ಜನರ ದೊಡ್ಡ ಕ್ಯಾಂಪ್ ನಮ್ಮ ಊರಿನ ಈಗಿನ ಮಸೀದಿ ಜಾಗದಲ್ಲಿ ಇದ್ದ ದೊಡ್ಡ ಅತ್ತಿ ಮರದ ಬುಡದಲ್ಲಿ ಹಾಕುತ್ತಿದ್ದರು ಆಗೆಲ್ಲ ಇವರು ಶಿಕಾರಿ ಮಾಡುತ್ತಿದ್ದದ್ದು ಅವರ ನಿತ್ಯ ಆಹಾರಕ್ಕೆ ಮಾತ್ರ ಯಾಕೆಂದರೆ ಆಗ ಕಾಡು ಕೋಳಿ ಖರೀದಿ ಮಾಡುವವರು ಹಳ್ಳಿಗಳಲ್ಲಿ ಇರಲಿಲ್ಲ.     ಇವರು ತಮ್ಮ ಸಾಕು ದನ (ಶಿಕಾರಿಗೆ ಬಳಸುತ್ತಾರೆ) ಗಳ ಮೇಲೆ ಇಡೀ ಸಂಸಾರ ಸಾಗಿಸುತ್ತಾ ಬರುತ್ತಿದ್ದರು ಅದರಲ್ಲಿ ಟೆಂಟ್ ,ಶಿಕಾರಿ ಸಾಧನಗಳು, ಅಡುಗೆ ಪ...