Skip to main content

Posts

Showing posts from February, 2018

# ಕನಾ೯ಟಕ ರಾಜ್ಯದಲ್ಲಿನ ಕುಣುಬಿ ಸಮಾಜದ ಸಾಮಾಜಿಕ ಸ್ಥಿತಿಗತಿ#

ಇಡೀ ಕನಾ೯ಟಕ ರಾಜ್ಯದಲ್ಲಿ ಕುಣುಬಿ ಸಮಾಜಕ್ಕೆ ಈ ಸವಲತ್ತು ಸಿಕ್ಕಿಲ್ಲ, ಕೇರಳ, ಗೋವಾ ಮತ್ತು ಗುಜರಾತನಲ್ಲಿ ಇವರು ST ಆಗಿದ್ದಾರೆ, ಇವರ ಜನಾಂಗದ ಮೊದಲ ಜಿಲ್ಲಾ ಸಮಾವೇಶ 1995 ರಲ್ಲಿ ಆನಂದಪುರಂನಲ್ಲಿ, ರಾಜ್ಯ ಸಮಾವೇಶ 1997ರಲ್ಲಿ ಕೋಗಾರಿನ ದೇವಗಾರಿನಲ್ಲಿ ಮತ್ತು ರಾಷ್ಟ್ರ ಮಟ್ಟದ ಸಮಾವೇಶ ಕಳೆದ ವಷ೯ ಗೇರುಸೊಪ್ಪೆಯ ಬಂಗಾರು ಮಕ್ಕಿಯಲ್ಲಿ ನಡೆಯಿತು, ಕೇಂದ್ರ ಸಕಾ೯ರದಲ್ಲಿ ಈ ಜನಾಂಗದವರೊಬ್ಬರು ಮಂತ್ರಿ ಇದ್ದಾರೆ, ಗೋವಾದಲ್ಲಿ ಶಾಸಕರಿದ್ದಾರೆ, ಕೇರಳದಲ್ಲಿ ನ್ಯಾಯಾಧೀಶರು ಇದ್ದಾರೆ ಈ ಬಗ್ಗೆ ಸಾಗರದ ನ್ಯಾಯವಾದಿ ಮಂಜಪ್ಪ ಬಳ್ಳಿಬೈಲು 1995 ರಿಂದ ನಿರಂತರ ಹೋರಾಟ ನಡೆಸಿದ್ದಾರೆ.

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

# ಹೀಗಿದೆ ಸಾಗರ ತಾಲ್ಲೂಕಿನ ಕೃಷಿಕ ಸಮಾಜ#

# ಸಾಗರ ತಾಲ್ಲೂಕಿನ ಕೃಷಿಕ ಸಮಾಜಕ್ಕೆ ಹೊಸದಾಗಿ ಸದಸ್ಯರಾಗದಂತೆ ನೋಡಿಕೊಂಡು ಅವರವರೇ ಅವಿರೋಧವಾಗಿ ಆಯ್ಕೆ ಆಗುವ ಅಯೋಗ್ಯ ಪದ್ದತಿ#       ಸಾಗರ ತಾಲ್ಲೂಕಿನ ಕೃಷಿ ಇಲಾಖೆ ಅವ್ಯವಹಾರ ಬೆಳಕಿಗೆ ತಂದು ಆಗಿನ ಕೃಷಿ ಸಚಿವರಾದ ಬೈರೇ ಗೌಡರನ್ನ ಸ್ಥಳ ಪರಿಶೀಲನೆಗೆ ಕರೆತಂದು 8 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಜೈಲಿಗೆ ಕಳಿಸಿದ ಹೋರಾಟದಿಂದ ಮುಂದಿನ ದಿನದಲ್ಲಿ ಪಡಬಾರದಷ್ಟ ಕಷ್ಟ ಪ್ರತಿಫಲವಾಗಿ ಪಡೆದೆ ಆ ದಿನದಲ್ಲಿ ಸಾಗರ ತಾಲ್ಲೂಕ್ ಕೃಷಿಕ ಸಮಾಜದ ಅಧ್ಯಕ್ಷರಾದವರೆ ಈಗಲೂ ಅದ್ಯಕ್ಷರು ಅಂದರೆ ಸುಮಾರು 23 ವಷ೯ದಿಂದ ಒಬ್ಬರೆ ಹೇಗೆ ಅಧ್ಯಕ್ಷರು? ಎಂದು ಕೇಳಿದರೆ ಕಾಲ ಕಾಲಕ್ಕೆ ಚುನಾವಣೆ ನಡೆದು ಆಯ್ಕೆ ಆಗಿದ್ದಾರೆ ಎಂಬ ಸಿದ್ದ ಉತ್ತರ ಇದೆ ಆದರೆ ಸುಮಾರು 50 ವಷ೯ದಿಂದ ಮತದಾರರ ಪಟ್ಟಿ ಪರಿಷ್ಕೃತ ಆಗಿಲ್ಲ.   ಸಾಗರ ತಾಲ್ಲೂಕಿನಲ್ಲಿ ಅನೇಕ ಪ್ರಗತಿ ಪರ ರೈತರಿದ್ದಾರೆ, ಹೊಸ ಪ್ರಯೋಗ ಮಾಡಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾದನೆ ಮಾಡಿದ್ದಾರೆ ಅವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿರ ಬಹುದು ಆದರೆ 230 ಜನರ ಹಳೆ ಪಟ್ಟಿ ಇಟ್ಟುಕೊಂಡಿದ್ದಾರೆ ಇದರಲ್ಲಿ ಅನೇಕರು ಮೃತ ಪಟ್ಟಿದ್ದಾರೆ.   ಕೃಷಿಕ ಸಮಾಜ ಕೃಷಿ ಇಲಾಖೆಗೆ ಸಮಾನಾ೦ತರವಾಗಿ ಕಾಯ೯ ನಿವ೯ಹಿಸುವ ಜನಪ್ರತಿನಿಧಿ ಸಂಸ್ಥೆ, ತಾಲ್ಲೂಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿದೆ ಮಾಸಿಕ ಪತ್ರಿಕೆ ಇದೆ, ತಾಲ್ಲೂಕ್ ಪಂಚಾಯತ್ ನಂತೆಯೆ ಕೃಷಿ ಇಲಾಖೆ ಪರಿಶೀಲನೆ ಸಲಹೆ ನೀಡಬಹುದಾದ ಈ ಸಂಸ್ಥೆ ರಾಜ್ಯದ ಉತ್ತರ ಕನಾ೯

# ಮದ್ದು ಹಾಕೋ ಮನೇಲಿ ಉಣಬೇಡ ಕುಡಿಬೇಡ#

# ಮಲೆನಾಡಿನಲ್ಲಿ ಹೊಟ್ಟೆಗೆ ಮದ್ದು ಹಾಕುವರು ಇದ್ದಾರಾ?#   ಗೋಸುಂಬೆ ಸಾಯಿಸಿ ಅದರ ಬಾಲಕ್ಕೆ ಹಗ್ಗ ಕಟ್ಟಿ ನೇತಾಡಿಸಿಟ್ಟರೆ ಅದು ಕೊಳೆತು ಅದರ ಬಾಯಿ೦ದ ತೊಟಕುವ ರಸಗಳು ಕೆಳಗೆ ಎಲೆಯಲ್ಲಿ ಮುಷ್ಟಿಯಷ್ಟು ಅಕ್ಕಿ ಹರಡಿಟ್ಟು ಅದರ ಮೇಲೆ ಬೀಳುವಂತೆ ಮಾಡಬೇಕು ಪೂಣ೯ ಪ್ರಮಾಣದ ರಸ ಸ್ರವಿಸಿದ ನಂತರ ಈ ಅಕ್ಕಿ ಒಣಗಿಸಿ ನಂತರ ಹಿಟ್ಟು ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು, ಯಾರ ಮೇಲಾದರು ಈ ಮದ್ದು ಪ್ರಯೋಗಿಸಬೇಕಾದರೆ ಒಂದು ಹತ್ತಿಯ ದೀಪದ ಬತ್ತಿಯಲ್ಲಿ ಸಂಗ್ರಹಿಸಿದ ಹಿಟ್ಟಲ್ಲಿ ಬತ್ತಿ ಅದ್ದಿ ಅದನ್ನ ಕಾಪಿ, ಟಿಯಲ್ಲಿ ಅಥವ ಊಟ, ಉಪಹಾರದಲ್ಲಿ ಅದ್ದಿದರೆ ಆಯಿತು ಅದನ್ನ ತಿಂದವರು ಕ್ರಮೇಣ ಜೀಣ೯ ಶಕ್ತಿ ಕಳೆದು ಕೊಳ್ಳುತ್ತಾರೆ, ಊಟ ಸೇರುವುದಿಲ್ಲ ದೇಹ ಕೃಷವಾಗುತ್ತೆ, ವೈದ್ಯರ ಹತ್ತಿರ ಹೋದರೆ ಏನೂ ಕಾಯಿಲೆ ಇಲ್ಲ ಅಂತಾರೆ ದಿನದಿಂದ ದಿನಕ್ಕೆ ಆರೋಗ್ಯ ಬಿಗಡಾಯಿಸಿ ಸಾವು ಬರುತ್ತೆ ಇದೊಂದು ಥರ ಸ್ಲೋ ಪಾಯಿಸನ್ ಇದ್ದಂತೆ ಅಂತ ಅವರು ವಿವರಿಸುತ್ತಿದ್ದರು ಹಾಗಾದರೆ ಇದಕ್ಕೆ ಪರಿಹಾರ ಅಂದೆ? .   ಅವರ ಪ್ರಕಾರ ಹಳ್ಳಿಗಳಲ್ಲಿ ಇದನ್ನ ಪರಿಹರಿಸುವ ಕೆಲ ಪಾರಂಪರಿಕ ಮನೆ ವೈದ್ಯರಿದ್ದಾರೆ ಅವರು ಕಾಯಿ ಅಥವ ಹಣ ಪಡೆದು ಔಷಧ ನೀಡುತ್ತಾರೆ ಅಲ್ಲೇ ಸ್ವಲ್ಪ ಹೊತ್ತಲ್ಲಿ ವಾಂತಿ ಆಗುತ್ತೆ ಯಾವುದರಲ್ಲಿ ಮದ್ದು ಹಾಕಿದ್ದಾರೆ ಅದು ಹೊರಬೀಳುತ್ತೆ ಇದೇ ರೀತಿ ಇನ್ನೊಂದು ರೀತಿ ಮದ್ದು ತೆಗೆಯುವ ಸಂಪ್ರದಾಯವಿದೆ ಒಂದು ಪಾತ್ರೆಯಲ್ಲಿ ನೀರು ಜಾಷದ ಹಾಕಿ ಕೈ ತೊಳೆಸುತ್ತಾರೆ ಆಗ ಪಾ

# 23 ವಷ೯ದ ಹಿಂದೆ ಇವರನ್ನೆಲ್ಲ ಸಾಲಲ್ಲಿ ಕೂರಿಸಿ ಪೋಟೋ ತೆಗೆಯಲು ಕಷ್ಟವಾಗಿತ್ತು ಈಗ ಇದು ಸವಿ ನೆನಪಿನ ಚಿತ್ರ#

# ಕಾಲದ ವೇಗದಲ್ಲಿ ಏನೆಲ್ಲ ಪರಿವತ೯ನೆ#   ಮೊದಲ ಚಿತ್ರ ನಾನು 1993 ಅಥವ 1994ರಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದದ್ದು ನನ್ನ ಮಗಳು, ನನ್ನ ಅಣ್ಣನ ಇಬ್ಬರು ಮಕ್ಕಳು, ಇಬ್ಬರು ಅಕ್ಕ೦ದಿರ ತಲಾ ಇಬ್ಬರು ಮಕ್ಕಳನ್ನ ಹಿಡಿದು ಒಂದು ಕಡೆ ಕೂರಿಸಿ ಈ ಪೋಟೊ ತೆಗೆಯುವ ಕಷ್ಟದ ಕೆಲಸ ಇದಾಗಿತ್ತು, ಈಗ ಅವತ್ತು ತೆಗೆದ ಪೋಟೊ ಅತ್ಯಂತ ಸಂತೋಷದ ಸವಿ ನೆನಪಿನದ್ದಾಗಿದೆ ಯಾಕೆಂದರೆ ಸುಮಾರು 23 ಅಥವ 24 ವಷ೯ದ ನಂತರ ನನ್ನಣ್ಣನ ಮಗಳಾದ ಅನು ಪ್ರಿಯಳ ಮದುವೆಯಲ್ಲಿ ಅವರವರೆ ಸೇರಿ ತೆಗೆಸಿ ಕೊಂಡ ನಮ್ಮ ಮುಂದಿನ ತಲೆಮಾರಿನ ಪ್ಯಾಮಿಲಿ ಪೋಟೋ ಸೇಷನ್, ಇದರಲ್ಲಿನ 1993ರ ಪೋಟೋ ತೆಗೆಯುವಾಗ ನನ್ನ ಮಗ ಇನ್ನು ಹುಟ್ಟಿರಲಿಲ್ಲ, ಮದುವೆ ಪೋಟೋದಲ್ಲಿ ನನ್ನ ದೊಡ್ಡಮ್ಮನ ಮಗಳು ದಿವ೦ಗತ ಗುಲಾಬಿ ಮಗ ಮತ್ತು ನನ್ನ ಅಣ್ಣನ ನಾದಿನಿ ಮಗ ಕೂಡ ಇದ್ದಾರೆ. # Time changes every thing# 1993 old photo taken by my camera with difficult to make all children in one order another one is latest photo of our next generation marriage ceremony family photo session, after 23 years the old memories snap became valuable for them.

# ತುಮರಿ ಸೇತುವೆಗಾಗಿ ನಡೆದ ಪಾದಯಾತ್ರೆ#

# ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರೆ.#    21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ.   ಸುಮಾರು 360 ಕಿ.ಮಿ. ಆನಂದಪುರಂನ ಮೂರುಘ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈ ದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆ ರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.    ಈ ಪಾದ ಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿ ವಯಸಲ್ಲಿ ಸಾಗರ ತಾಲ್ಲೂಕಿನ ಆಧ್ಯOತ

#ರವಿ ಬೆಳೆಗೆರೆಗೆ ಆತಿಥ್ಯ ನೀಡಿದ ಸಂಭ್ರಮ#

# ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕರಾದ ರವಿ ಬೆಳೆಗೆರೆ ನನ್ನ ಅತಿಥಿ ಆಗಿದ್ದು ಈ ಸಂದಭ೯ದ ಮಾತುಕತೆ ಸಂದಶ೯ನ ಅಥವ ಸಂವಾದ ಇಲ್ಲಿದೆ#        ದಿನಾ೦ಕ 16-ಪೆಬ್ರವರಿ -2018ರ ಶುಕ್ರವಾರ ಬೆಳಿಗ್ಗೆ 9ಕ್ಕೆ ಧ್ಯಾನ ಮುಗಿಸಿ ಸೈಲೆಂಟ್ ಮಾಡಿದ್ದ ಸೆಲ್ ಫೋನ್ ತೆಗೆದು ನೋಡಿದಾಗ ಅನೇಕರ ಮಿಸ್ ಕಾಲ್ ಮಧ್ಯ ಹಾಯ್ ಬೆಂಗಳೂರು ವರದಿಗಾರರು ಹಾಗೂ ಶಿವಮೊಗ್ಗದ ಜನ ಹೋರಾಟದ ದೈನಿಕದ ಶೃ೦ಗೇಶರ ಮಿಸ್ ಕಾಲ್ಯಾಕೆ ಅಂತ ಅವರಿಗೆ ಪೋನಾಯಿಸಿದಾಗ ಅವರು ರವಿ ಬೆಳೆಗೆರೆ ನಿಮ್ಮಲ್ಲಿ ಉಪಹಾರ ಮಾಡಿ ಸಾಗರಕ್ಕೆ ಹೋಗುತ್ತಾರೆ ಇನ್ನೊಂದು 20 ನಿಮಿಷದಲ್ಲಿ ನಿಮ್ಮಲ್ಲಿ ಇರುತ್ತೇವೆ ಅಂದಾಗ ನನಗೆ ತುಂಬಾ ಸಂತೋಷ ಗಡಿಬಿಡಿ ಆಯಿತು.   ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ 1997-98ರಲ್ಲಿ ಶಿವಮೊಗ್ಗದಲ್ಲಿ ಸಕಾ೯ರಿ ಆಸ್ಪತ್ರೆಗೆ ಖರೀದಿಸಿದ ಕೋಟ್ಯಾ0ತರ ಮೌಲ್ಯದ ಔಷದಗಳು ಕಳಪೆ ಜನರ ಆರೋಗ್ಯಕ್ಕೆ ಮಾರಕ ಅಂತ ಅಂದಿನ ಜಿಲ್ಲಾ ಸಜ೯ನ್ ರು ಮಾಹಿತಿ ಕಳಿಸಿದ್ದರು ಇದನ್ನ ಜಿಲ್ಲಾ ಪಂಚಾಯತ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನವೆ ಜಿಲ್ಲಾ ಪಂಚಾಯತನ ಜಾಷದಿ ಗೋದಾಮಿಗೆ ಬೆಂಕಿ ಹಾಕಿ ಕಳಪೆ ಔಷದಿಗಳನ್ನ ಸುಟ್ಟು ವಿದ್ಯುತ್ ಅವಗಡದಲ್ಲಿ ಔಷದ ಭಸ್ಮ ಅಂತ ಸುದ್ದಿ ಮಾಡಿದರು ಇದನ್ನ ಮುಂದಿನ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನ ಎರೆಡೆರಡು ಸುಳ್ಳು ದೂರು ನೀಡಿ ಜೈಲಿಗೆ ಕಳಿಸಿದ್ದರು.    ಆಗ ಪಟೇಲರು ಮುಖ್ಯಮಂತ್ರಿ, ಜಿಲ್ಲಾ ಮಂತ್ರಿ ಜಿ.ಬಸವಣ್ಯಪ್ಪ, ಸಂಸದರು ಡಿ.ಬಿ.

# ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಗಳ ಸುದಾರಿಸದ ಸ್ವಚ್ಚತೆ#

#ಗ್ರಾಮ ಪಂಚಾಯತ ಗಳು ಗ್ರಾಮ ಸ್ವಚ್ಚ ತೆಗೆ ಪ್ರಾಮುಖ್ಯತೆ ನೀಡದಿ ರಲು ಕಾರಣ ಗಳು.#   ಹಿಂದೆ ವಿಲೇಜ್ ಪಂಚಾಯತಗಳು ಅಸ್ತಿತ್ವದಲ್ಲಿ ಇದ್ದಾಗ ಹಳ್ಳಿಯ ಮುಖ್ಯ ಭಾಗಗಳನ್ನ ನಿತ್ಯ ಗುಡಿಸಿ ಕಸ ವಿಲೇವಾರಿಗೆ ಜನರನ್ನ ನೇಮಿಸಲು ಅವರಿಗೆ ಸಂಬಳ ನೀಡಲು ಅವಕಾಶ ಇತ್ತು, ಅವರುಗಳು ಹಳ್ಳಿಯಲ್ಲಿ ಸತ್ತ ನಾಯಿ, ದನಗಳನ್ನು ತೆಗೆದು ಹಳ್ಳಿಯ ನೈಮ೯ಲ್ಯ ಕಾಪಾಡುತ್ತಿದ್ದರು ಆದರೆ ಪಂಚಾಯತ್ ರಾಜ್ ಕಾಯ್ದೆ ಬಂದು ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ಮೇಲೆ ಹಳ್ಳಿಯ ಸ್ವಚ್ಚತೆಗೆ ಯಾರನ್ನೂ ನೇಮಿಸಲು ಅಥವ ಈ ಬಗ್ಗೆ ಹಣ ಖಚು೯ ಮಾಡಲು ಅವಕಾಶವಿಲ್ಲ.    ಆದರೆ ಕಂದಾಯ ವಶೀಲಿಗೆ, ರೋಜಗಾರ ಯೋಜನೆ ಅನುಷ್ಟಾನಕ್ಕೆ, ನೀರು ಸರಬರಾಜು ಮಾಡಲು ನೌಕರರ ನೇಮಕಾತಿಗೆ ಅವಕಾಶವಿದೆ ಇದರಿಂದ ಯಾವುದೇ ಹಳ್ಳಿಗೆ ಹೋಗಿ ರಸ್ತೆ ಬದಿಯಲ್ಲಿ ಸತ್ತ ನಾಯಿ, ದನ ಅಲ್ಲೆ ಕೊಳೆತು ಕರಗಿ ಮಣ್ಣಾಗಿ ಹೋಗುವ ದೃಷ್ಯ ಕಾಣಬಹುದು.    ಇದರ ಮಧ್ಯ ಗ್ರಾಮ ಪಂಚಾಯತಗಳಿಗೆ ಸ್ವಚ್ಚತೆಗಾಗಿ ಪ್ರಶಸ್ತಿ ನೀಡುವ ಕೇಂದ್ರ ಸಕಾ೯ರ, ರಾಜ್ಯ ಸಕಾ೯ರ ಮತ್ತು ಜಿಲ್ಲಾ ಪಂಚಾಯತಗಳು ಯಾವ ಮಾನದಂಡದಲ್ಲಿ ಪ್ರಶಸ್ತಿ ನೀಡುತ್ತದೆ ಎಂಬುದು ಉತ್ತರವಿಲ್ಲದ ಪ್ರಶ್ನೆ.    ಇತ್ತೀಚಿಗೆ ಪಟ್ಟಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ರದ್ದಾಗಿದೆ ಆದರೆ ಅಲ್ಲಿ ಮಾರಾಟ ಮಾಡಲು ಅನುಮತಿ ರದ್ದಾಗಿರುವ ಪ್ಲಾಸ್ಟಿಕಗಳು ಹಳ್ಳಿಗಳ ಅಂಗಡಿಗಳಲ್ಲಿ ಸ್ವಚ್ಚOದವಾಗಿ ಲಭ್ಯವಿದೆ.   ಸಕಾ೯ರ ನಿಷೇದಿಸಿದ ಗುಟ್ಕ, ತಂಬಾಕು, ಗಾಂಜಾ ಕಳಪೆ ಮದ್

# ತುಮರಿ ಸೇತುವೆ ನಿಮಾ೯ಣ#

# ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಯಡೂರಪ್ಪರ ಈ ಎರೆಡು ಮಹಾನ್ ಕಾಯ೯ಕ್ಕೆ ಜಿಲ್ಲೆಯ ಜನರ ಪರ ಅಭಿನಂದನೆಗಳು#     ಒಂದು ಹಂತದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದ ಮೀಟರ್ ಗೇಜ್ ರೈಲು ಮಾಗ೯ ಬ್ರಾಡ್ ಗೇಜ್ ಪರಿವತ೯ನೆಗಾಗಿ ರೈಲು ಸಂಚಾರ ನಿಲ್ಲಿಸಿದ್ದು ನಂತರ ಈ ಮಾಗ೯ ಲಾಭದಾಯಕವಲ್ಲ ಎಂದು ಕೇಂದ್ರ ಸಕಾ೯ರ ಅನುದಾನ ನೀಡದೆ ಮುಂದೆ ಈ ರೈಲು ಮಾಗ೯ ರದ್ದಾಗುವ ಮಟ್ಟ ತಲುಪಿತ್ತು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ರಾಜ್ಯ ಸಕಾ೯ರದಿಂದ ಅನುದಾನ ನೀಡಿ, ರೈಲ್ವೆ ಇಲಾಖೆಯ ಹಣ ಪಡೆದು ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬ್ರಾಡ್ ಗೇಜ್ ನಿಮಾ೯ಣಕ್ಕೆ ಕಾರಣಕತ೯ರಾಗಿ ಈ ರೈಲ್ ಮಾಗ್೯ದ ಉಳಿವಿಗೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು.    ತುಮರಿ ಸೇತುವೆಗಾಗಿ ಜನರ ಬೇಡಿಕೆ ಕೆಲವು ದಶಕದ್ದು, ಶರಾವತಿ ನದಿಗೆ ವಿದ್ಯುತ್ ಉತ್ಪಾದನೆಗಾಗಿ ಹಿರೇಬಾಸ್ಕರ ಎಂಬಲ್ಲಿ ಮೊದಲ ಆಣೆಕಟ್ಟು ಕಟ್ಟಿದಾಗಿನಿಂದ ಶುರುವಾಗಿ ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ನಿಮಾ೯ಣವಾದರು ನದಿಯ ಆ ಬಾಗದ ಜನತೆಗೆ ಸಂಚಾರಕ್ಕೆ ಪೆರಿ ಒಂದನ್ನ ಒದಗಿಸಲಾಗಿತ್ತು, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚು ಆಯಿತು.ಈ ಬಾಗದ ಸಿಗಂದೂರು ದೇವಾಲಯ ಪ್ರಖ್ಯಾತಿಗೊಂಡಂತೆ ವಿಪರೀತ ಪ್ರವಾಸಿಗರ ಸಂಖ್ಯೆಯಿ೦ದ ಸ್ಥಳಿಯರಿಗೆ ಸಂಚಾರ ಕಷ್ಟಸಾಧ್ಯವಾಯಿತು.   ಜೆ.ಹೆಚ್.ಪಟೇಲರು ಮುಖ್ಯಮಂತ್ರಿ ಆದಾಗ ಹೆಚ್ಚುವರಿ ಪೆರಿ ನೀಡಿದರು, ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಇನ್ನೊಂದು ಮಂಜೂರಾಗಿತ್