# ಮಲೆನಾಡಿನಲ್ಲಿ ಹೊಟ್ಟೆಗೆ ಮದ್ದು ಹಾಕುವರು ಇದ್ದಾರಾ?#
ಗೋಸುಂಬೆ ಸಾಯಿಸಿ ಅದರ ಬಾಲಕ್ಕೆ ಹಗ್ಗ ಕಟ್ಟಿ ನೇತಾಡಿಸಿಟ್ಟರೆ ಅದು ಕೊಳೆತು ಅದರ ಬಾಯಿ೦ದ ತೊಟಕುವ ರಸಗಳು ಕೆಳಗೆ ಎಲೆಯಲ್ಲಿ ಮುಷ್ಟಿಯಷ್ಟು ಅಕ್ಕಿ ಹರಡಿಟ್ಟು ಅದರ ಮೇಲೆ ಬೀಳುವಂತೆ ಮಾಡಬೇಕು ಪೂಣ೯ ಪ್ರಮಾಣದ ರಸ ಸ್ರವಿಸಿದ ನಂತರ ಈ ಅಕ್ಕಿ ಒಣಗಿಸಿ ನಂತರ ಹಿಟ್ಟು ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು, ಯಾರ ಮೇಲಾದರು ಈ ಮದ್ದು ಪ್ರಯೋಗಿಸಬೇಕಾದರೆ ಒಂದು ಹತ್ತಿಯ ದೀಪದ ಬತ್ತಿಯಲ್ಲಿ ಸಂಗ್ರಹಿಸಿದ ಹಿಟ್ಟಲ್ಲಿ ಬತ್ತಿ ಅದ್ದಿ ಅದನ್ನ ಕಾಪಿ, ಟಿಯಲ್ಲಿ ಅಥವ ಊಟ, ಉಪಹಾರದಲ್ಲಿ ಅದ್ದಿದರೆ ಆಯಿತು ಅದನ್ನ ತಿಂದವರು ಕ್ರಮೇಣ ಜೀಣ೯ ಶಕ್ತಿ ಕಳೆದು ಕೊಳ್ಳುತ್ತಾರೆ, ಊಟ ಸೇರುವುದಿಲ್ಲ ದೇಹ ಕೃಷವಾಗುತ್ತೆ, ವೈದ್ಯರ ಹತ್ತಿರ ಹೋದರೆ ಏನೂ ಕಾಯಿಲೆ ಇಲ್ಲ ಅಂತಾರೆ ದಿನದಿಂದ ದಿನಕ್ಕೆ ಆರೋಗ್ಯ ಬಿಗಡಾಯಿಸಿ ಸಾವು ಬರುತ್ತೆ ಇದೊಂದು ಥರ ಸ್ಲೋ ಪಾಯಿಸನ್ ಇದ್ದಂತೆ ಅಂತ ಅವರು ವಿವರಿಸುತ್ತಿದ್ದರು ಹಾಗಾದರೆ ಇದಕ್ಕೆ ಪರಿಹಾರ ಅಂದೆ? .
ಅವರ ಪ್ರಕಾರ ಹಳ್ಳಿಗಳಲ್ಲಿ ಇದನ್ನ ಪರಿಹರಿಸುವ ಕೆಲ ಪಾರಂಪರಿಕ ಮನೆ ವೈದ್ಯರಿದ್ದಾರೆ ಅವರು ಕಾಯಿ ಅಥವ ಹಣ ಪಡೆದು ಔಷಧ ನೀಡುತ್ತಾರೆ ಅಲ್ಲೇ ಸ್ವಲ್ಪ ಹೊತ್ತಲ್ಲಿ ವಾಂತಿ ಆಗುತ್ತೆ ಯಾವುದರಲ್ಲಿ ಮದ್ದು ಹಾಕಿದ್ದಾರೆ ಅದು ಹೊರಬೀಳುತ್ತೆ ಇದೇ ರೀತಿ ಇನ್ನೊಂದು ರೀತಿ ಮದ್ದು ತೆಗೆಯುವ ಸಂಪ್ರದಾಯವಿದೆ ಒಂದು ಪಾತ್ರೆಯಲ್ಲಿ ನೀರು ಜಾಷದ ಹಾಕಿ ಕೈ ತೊಳೆಸುತ್ತಾರೆ ಆಗ ಪಾತ್ರೆಯಲ್ಲಿ ಯಾವುದರಲ್ಲಿ ಮದ್ದು ಹಾಕಿದ್ದಾರೆ ಆ ಆಕೃತಿ ಬರುತ್ತೆ ಅವತ್ತಿಂದ ಮದ್ದಿನ ಬಾದೆ ಮುಕ್ತಿ ಆಗಿ ರೋಗಿಯ ಜೀಣ೯ ಶಕ್ತಿ ಸರಿ ಆಗಿ ಮೊದಲಿನ ಸ್ಥಿತಿಗೆ ಬರುತ್ತಾರೆ ಅಂದರು.
ಇದು ನಿಜಾನಾ? ಆದರೆ ಹಳ್ಳಿಗಳಲ್ಲಿ ಈಗಲೂ ಇದನ್ನ ನಂಬುವವರಿದ್ದಾರೆ, ಈ ರೀತಿ ಆದವರು ಅವರಿಗಾಗದವರಾರು ಇದ್ದಾರೋ ಅವರನ್ನ ಅನುಮಾನದಿಂದ ನೋಡುತ್ತಾರೆ.
ಮದ್ದು ದೊಸೆ, ಹೋಳಿಗೆ ಅಥವ ಇಡ್ಲಿ ರೂಪದಲ್ಲಿ ಹಾಕಿದ್ದು ಅಂತಾದರೆ ಈ ಹಿಂದೆ ಯಾರ ಮನೆಯಲ್ಲಿ ತಿಂದಿದ್ದರೋ ಅವರೆ ಅಪರಾದಿ ಆಗುತ್ತಾರೆ.
ಇತ್ತೀಚಿಗೆ ಬ್ರಾಹಮಣರ ಬಾಣಂತಿಗೆ ಈ ಸಮಸ್ಯೆ ಆಗಿತ್ತು, ಮದ್ದು ತೆಗೆದವ ದೊಸೆಯಲ್ಲಿ ಮದ್ದು ಹಾಕಿದ್ದು ಅಂದಾಗ ಬಸಿರಿ ಹೆಂಗಸು ಒಮ್ಮೆ ತನ್ನ ಸಂಬಂದಿ ಹತ್ತಿರ ದೊಸೆ ತಿನ್ನುವ ಆಸೆ ಅಂದಾಗ ಅವರು ಮನೆಯಿ೦ದ ಪ್ರೀತಿಯಿ೦ದ ದೊಸೆ ಮಾಡಿ ಒಯ್ದದ್ದರಿಂದ ಅವರೇ ಅಪರಾದಿ ಆಗಿ ಬಿಟ್ಟರು.
ಇದೆಲ್ಲ ಮೌಡ್ಯನಾ? ಹಾಗಾದರೆ ವಿದ್ಯಾವಂತರು, ಮೇಲ್ಜಾತಿ ಜನರಲ್ಲಿ ಈ ನಂಬಿಕೆ ಯಾಕೆ?ಗೊತ್ತಿಲ್ಲ.
ಈ ರೀತಿ ಮದ್ದು ಹಾಕುವ ಕಳಂಕ ಹೊತ್ತ ಮನೆಗಳಲ್ಲಿ ಆಹಾರ ಸೇವಿಸಲು ಹೆದರುತ್ತಾರೆ ಹೆಚ್ಚಾಗಿ ಇಂತಹ ಕಳಂಕದ ಕುಟುಂಬಗಳು ಬ್ರಾಹಮಣ, ಲಿಂಗಾಯಿತರಲ್ಲಿ ಇದೆ.
ನಮ್ಮ ಊರಲ್ಲಿ ಇತ್ತಿಚಿಗೆ ಪ್ರತಿ ಮನೇಲಿ ಒಬ್ಬ ಈ ರೀತಿ ಜಾಷದಿ ಹಾಕಿದ್ದರು ರಿಪ್ಪನ್ ಪೇಟೆ ಹತ್ತಿರದ ಗತಿ೯ ಕೆರೆಯಲ್ಲಿ ತೆಗೆಸಿ ಕೊಂಡು ಸರಿ ಆದೆ ಅನ್ನುವವರು ಸಿಗುತ್ತಾರೆ.
ನನಗೆ ಈ ಬಗ್ಗೆ ಕುತೂಹಲ ಅನೇಕರಲ್ಲಿ ವಿಚಾರಿಸಿದಾಗ ಇಂತಹ ಒಂದು ವಿಷಪ್ರಾಶನ ಹಿಂದಿನ ಕಾಲದಲ್ಲಿತ್ತು ನಂತರ ಇಲ್ಲವಾಗಿದೆ ಎಲ್ಲೋ ಕೆಲವರು ಈ ವಿದ್ಯ ತಿಳಿದಿರಬಹುದು ಆದರೆ ತಮಗೆ ಆಗದವರ ಮೇಲೆ ಅನುಮಾನ ಮೂಡಿಸಿ ಸಮಾಜದಲ್ಲಿ ಅವರನ್ನ ಒಂದು ರೀತಿಯ ಬಹಿಷ್ಕರಿಸಲು ಈ ರೀತಿ ವದಂತಿ ಬರುತ್ತೆ ಅಂತ ಅವರು ಹೇಳುತ್ತಾರೆ.
ಹೀಗಿರುವಾಗಲೇ ನಾನು ಮೊನ್ನೆ ಬೇಟಿ ಮಾಡಿದ ಒಬ್ಬ ಪ್ರಸಿದ್ದ ಬ್ರಾಹಮಣ ಮೂಖಂಡರು ತಮಗೆ ತಮ್ಮ ದಾಯಾದಿಗಳಿಂದ ಹೊಟ್ಟೆಗೆ ಮದ್ದು ಬಿದ್ದಿದೆ ತೆಗೆಸಿಕೊಳ್ಳಬೇಕು ಅಂದಾಗ ಇದೆಲ್ಲ ಬರೆಯಬೇಕಾಯಿತು.
ಇದು ಸತ್ಯನಾ? ಮಿಥ್ಯನಾ? ನಿಮ್ಮ ಅನುಭವ ಬರೆಯಿರಿ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment