#ಗ್ರಾಮ ಪಂಚಾಯತಗಳು ಗ್ರಾಮ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡದಿರಲು ಕಾರಣಗಳು.#
ಹಿಂದೆ ವಿಲೇಜ್ ಪಂಚಾಯತಗಳು ಅಸ್ತಿತ್ವದಲ್ಲಿ ಇದ್ದಾಗ ಹಳ್ಳಿಯ ಮುಖ್ಯ ಭಾಗಗಳನ್ನ ನಿತ್ಯ ಗುಡಿಸಿ ಕಸ ವಿಲೇವಾರಿಗೆ ಜನರನ್ನ ನೇಮಿಸಲು ಅವರಿಗೆ ಸಂಬಳ ನೀಡಲು ಅವಕಾಶ ಇತ್ತು, ಅವರುಗಳು ಹಳ್ಳಿಯಲ್ಲಿ ಸತ್ತ ನಾಯಿ, ದನಗಳನ್ನು ತೆಗೆದು ಹಳ್ಳಿಯ ನೈಮ೯ಲ್ಯ ಕಾಪಾಡುತ್ತಿದ್ದರು ಆದರೆ ಪಂಚಾಯತ್ ರಾಜ್ ಕಾಯ್ದೆ ಬಂದು ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ಮೇಲೆ ಹಳ್ಳಿಯ ಸ್ವಚ್ಚತೆಗೆ ಯಾರನ್ನೂ ನೇಮಿಸಲು ಅಥವ ಈ ಬಗ್ಗೆ ಹಣ ಖಚು೯ ಮಾಡಲು ಅವಕಾಶವಿಲ್ಲ.
ಆದರೆ ಕಂದಾಯ ವಶೀಲಿಗೆ, ರೋಜಗಾರ ಯೋಜನೆ ಅನುಷ್ಟಾನಕ್ಕೆ, ನೀರು ಸರಬರಾಜು ಮಾಡಲು ನೌಕರರ ನೇಮಕಾತಿಗೆ ಅವಕಾಶವಿದೆ ಇದರಿಂದ ಯಾವುದೇ ಹಳ್ಳಿಗೆ ಹೋಗಿ ರಸ್ತೆ ಬದಿಯಲ್ಲಿ ಸತ್ತ ನಾಯಿ, ದನ ಅಲ್ಲೆ ಕೊಳೆತು ಕರಗಿ ಮಣ್ಣಾಗಿ ಹೋಗುವ ದೃಷ್ಯ ಕಾಣಬಹುದು.
ಇದರ ಮಧ್ಯ ಗ್ರಾಮ ಪಂಚಾಯತಗಳಿಗೆ ಸ್ವಚ್ಚತೆಗಾಗಿ ಪ್ರಶಸ್ತಿ ನೀಡುವ ಕೇಂದ್ರ ಸಕಾ೯ರ, ರಾಜ್ಯ ಸಕಾ೯ರ ಮತ್ತು ಜಿಲ್ಲಾ ಪಂಚಾಯತಗಳು ಯಾವ ಮಾನದಂಡದಲ್ಲಿ ಪ್ರಶಸ್ತಿ ನೀಡುತ್ತದೆ ಎಂಬುದು ಉತ್ತರವಿಲ್ಲದ ಪ್ರಶ್ನೆ.
ಇತ್ತೀಚಿಗೆ ಪಟ್ಟಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ರದ್ದಾಗಿದೆ ಆದರೆ ಅಲ್ಲಿ ಮಾರಾಟ ಮಾಡಲು ಅನುಮತಿ ರದ್ದಾಗಿರುವ ಪ್ಲಾಸ್ಟಿಕಗಳು ಹಳ್ಳಿಗಳ ಅಂಗಡಿಗಳಲ್ಲಿ ಸ್ವಚ್ಚOದವಾಗಿ ಲಭ್ಯವಿದೆ.
ಸಕಾ೯ರ ನಿಷೇದಿಸಿದ ಗುಟ್ಕ, ತಂಬಾಕು, ಗಾಂಜಾ ಕಳಪೆ ಮದ್ಯಗಳು ನಮ್ಮ ಹಳ್ಳಿಗಳಲ್ಲಿ ರಾಜಾರೋಷವಾಗಿ ಸಿಗುತ್ತದೆ.
ಪಂಚಾಯತಿಗಳು ಆದಾಯಕ್ಕಾಗಿ ಯಾವುದೇ ಮಾನದಂಡ ಅಳವಡಿಸದೆ ಕೋಳಿ, ಕುರಿಮಾಂಸ ಮತ್ತು ಮೀನಿನ ಮಾರುಕಟ್ಟೆಗೆ ಅನುಮತಿ ನೀಡುತ್ತಿದೆ ಅಲ್ಲಿ ಸಾವ೯ಜನಿಕರ ಆರೋಗ್ಯದ ಯಾವುದೇ ಭರವಸೆ ಇರುವುದಿಲ್ಲ ತೀರಾ ಕೊಳಕಾಗಿ ಮಾಂಸಗಳನ್ನ ರಸ್ತೆಗೆ ಕಾಣುವಂತೆ ನೇತಾಡಿಸಿರುತ್ತಾರೆ ರಸ್ತೆಯ ದೂಳು, ನೊಣಗಳು ಇದಕ್ಕೆ ಹತ್ತಿರುತ್ತದೆ ಅಷ್ಟೆ ಅಲ್ಲ ಈ ಅಂಗಡಿಗಳು ಮಾಂಸದ ತ್ಯಾಜ್ಯ, ಕೋಳಿ ಪುಕ್ಕಗಳನ್ನ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡದೆ ಹಳ್ಳಿಯ ಹೆದ್ದಾರಿಗಳ ಪಕ್ಕದಲ್ಲಿ ಹಾಕುತ್ತಾರೆ ಇದರಿಂದ ಬೀದಿ ನಾಯಿ ಕಾಟ ಮತ್ತು ನೊಣಗಳ ಕಾರಾಸ್ತಾನವಾಗಿದೆ.
ಇದನ್ನೆಲ್ಲ ಯಾರಿಗೆ ದೂರು ನೀಡ ಬೇಕು? ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಿಗೆ ಹೇಳಿದರೆ PDO ಗಳಿಗೆ ಹೇಳಿ ಅನ್ನು ತ್ತಾರೆ ಆದರೆ ಪಂಚಾಯತ ಕೇಂದ್ರ ಸ್ಥಾನದಲ್ಲಿ ಯಾವತ್ತೂ ವಾಸ ಮಾಡದ, ತಾಲ್ಲೂಕ ಕೇಂದ್ರದಲ್ಲಿ ಮನೆ ಮಾಡಿ ವಾಸ ಮಾಡುವ ಇವರುಗಳು ಹಳ್ಳಿಗಳ ಅಭಿವೃದ್ಧಿಗೆ ಆಷ್ಟು ಆಸಕ್ತಿವಹಿಸುವುದಿಲ್ಲ ಅವರಿಗೆ ಇರುವ ಕೆಲಸವೇ ಮಾಡಲಾಗುಗುವುದಿಲ್ಲ ಆದರೆ ಸಕಾ೯ರ ಇನ್ನೂ ಹೆಚ್ಚುವರಿ ಇಲಾಖಾ ಕೆಲಸ ಇವರಿಗೆ ಹಂಚುತ್ತಿದೆ.
ಕೇಂದ್ರ ಸಕಾ೯ರದ ಆರೋಗ್ಯ ಸುರಕ್ಷಯೋಜನೆ (Health Safety Licence) ಜಾರಿ ಇದೆ ಅವರಾರು ಅಂತಹ ಸುರಕ್ಷೆ ವಹಿಸಿದ ಉದಾಹರಣೆ ಇಲ್ಲ.
ಹಳ್ಳಿಯಲ್ಲಿ ಪರಿಸರ ಮಾಲಿನ್ಯ ಮಾಡಬೇಡಿ, ಎಲ್ಲೆಂದರಲ್ಲಿ ಕಸ ಹಾಕ ಬೇಡಿ ಅಂತ ಹೇಳಲು ಭಯಪಡುವ ಕಾಲ ಬಂದಿದೆ ಸಂಬಂದಪಟ್ಟವರೇ ಕೇಳಲ್ಲ ನೀನ್ಯಾರು ದೊಣ್ಣೆ ನಾಯಕ ಅಂತ ಮರುಪ್ರಶ್ನೆ ಬರುತ್ತೆ.
ಒಂದಕೊಂದು ಸಂಬಂದವಿಲ್ಲದ ಇಲಾಖೆಗಳು, ನಿಯಂತ್ರಣ ಮಾಡಲು ಪ್ರಯತ್ನ ಮಾಡದ ಅಧಿಕಾರಿಗಳು, ಹಳ್ಳಿಗಳ ಅಭಿವೃದ್ಧಿ ಕಾಳಜಿ ಇಲ್ಲದ ಆಯ್ಕೆ ಆಗಿರುವ ಜನಪ್ರತಿನಿಧಿಗಳು ಇವರಿಂದ ಹಳ್ಳಿಗಳು ಬೇರೆಯ ದಾರಿಯಲ್ಲಿ ಸಾಗುತ್ತಿದೆ.
ಆಡಳಿತ ವಿಕೇ೦ದ್ರಿಕರಣದಿಂದ ಅಧಿಕಾರ ಮತ್ತು ಅಭಿವೃದ್ದಿ ಹಣ ಹಳ್ಳಿ ತಲುಪಿ ಹಳ್ಳಿಗಳ ಅಭಿವೃದ್ದಿ ಆಗುತ್ತೆ ಎಂಬ ಜ್ಯೋತಿ ಬಸು, ರಾಮಕೃಷ್ಣ ಹೆಗ್ಗಡೆಯವರ ಕನಸು, ಪಂಚಾಯತ ರಾಜ್ ಕಾಯ್ದೆ ಜಾರಿ ತಂದು ನನಸು ಮಾಡಿದ ಪ್ರದಾನಿ ರಾಜೀವ್ ಗಾಂಧಿ ಯೋಜನೆ ಹಳ್ಳ ಹಿಡಿದಿದೆ, ಇಡೀ ದೇಶದ ಹಳ್ಳಿಗಳ ಅಭಿವೃದ್ಧಿ ಕನಸಾಗಿಯೇ ಉಳಿಯುವ ಭ್ರಷ್ಟಾಚಾರದ ವಿಕೇ೦ದ್ರಿಕರಣ ಎನ್ನುವಷ್ಟು ಅಪಹಾಸ್ಯವಾಗಿದೆ.
ಎಲ್ಲೋ ಒಮ್ಮೆ ಮೈದೊಳಲು ಗ್ರಾಮ ಪಂಚಾಯತಿಯ ರೀತಿ ಅನಾಹುತವಾದಾಗ ಸುದ್ದಿ ಆಗಿ ಮರೆತು ಬಿಡುತ್ತೇವೆ ಆದರೆ ಹಳ್ಳಿಗಳ ನೈಮ೯ಲ್ಯ ಯಾರ ಜವಾಬ್ದಾರಿ ?.
Comments
Post a Comment