# ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕರಾದ ರವಿ ಬೆಳೆಗೆರೆ ನನ್ನ ಅತಿಥಿ ಆಗಿದ್ದು ಈ ಸಂದಭ೯ದ ಮಾತುಕತೆ ಸಂದಶ೯ನ ಅಥವ ಸಂವಾದ ಇಲ್ಲಿದೆ#
ದಿನಾ೦ಕ 16-ಪೆಬ್ರವರಿ -2018ರ ಶುಕ್ರವಾರ ಬೆಳಿಗ್ಗೆ 9ಕ್ಕೆ ಧ್ಯಾನ ಮುಗಿಸಿ ಸೈಲೆಂಟ್ ಮಾಡಿದ್ದ ಸೆಲ್ ಫೋನ್ ತೆಗೆದು ನೋಡಿದಾಗ ಅನೇಕರ ಮಿಸ್ ಕಾಲ್ ಮಧ್ಯ ಹಾಯ್ ಬೆಂಗಳೂರು ವರದಿಗಾರರು ಹಾಗೂ ಶಿವಮೊಗ್ಗದ ಜನ ಹೋರಾಟದ ದೈನಿಕದ ಶೃ೦ಗೇಶರ ಮಿಸ್ ಕಾಲ್ಯಾಕೆ ಅಂತ ಅವರಿಗೆ ಪೋನಾಯಿಸಿದಾಗ ಅವರು ರವಿ ಬೆಳೆಗೆರೆ ನಿಮ್ಮಲ್ಲಿ ಉಪಹಾರ ಮಾಡಿ ಸಾಗರಕ್ಕೆ ಹೋಗುತ್ತಾರೆ ಇನ್ನೊಂದು 20 ನಿಮಿಷದಲ್ಲಿ ನಿಮ್ಮಲ್ಲಿ ಇರುತ್ತೇವೆ ಅಂದಾಗ ನನಗೆ ತುಂಬಾ ಸಂತೋಷ ಗಡಿಬಿಡಿ ಆಯಿತು.
ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ 1997-98ರಲ್ಲಿ ಶಿವಮೊಗ್ಗದಲ್ಲಿ ಸಕಾ೯ರಿ ಆಸ್ಪತ್ರೆಗೆ ಖರೀದಿಸಿದ ಕೋಟ್ಯಾ0ತರ ಮೌಲ್ಯದ ಔಷದಗಳು ಕಳಪೆ ಜನರ ಆರೋಗ್ಯಕ್ಕೆ ಮಾರಕ ಅಂತ ಅಂದಿನ ಜಿಲ್ಲಾ ಸಜ೯ನ್ ರು ಮಾಹಿತಿ ಕಳಿಸಿದ್ದರು ಇದನ್ನ ಜಿಲ್ಲಾ ಪಂಚಾಯತ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನವೆ ಜಿಲ್ಲಾ ಪಂಚಾಯತನ ಜಾಷದಿ ಗೋದಾಮಿಗೆ ಬೆಂಕಿ ಹಾಕಿ ಕಳಪೆ ಔಷದಿಗಳನ್ನ ಸುಟ್ಟು ವಿದ್ಯುತ್ ಅವಗಡದಲ್ಲಿ ಔಷದ ಭಸ್ಮ ಅಂತ ಸುದ್ದಿ ಮಾಡಿದರು ಇದನ್ನ ಮುಂದಿನ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನ ಎರೆಡೆರಡು ಸುಳ್ಳು ದೂರು ನೀಡಿ ಜೈಲಿಗೆ ಕಳಿಸಿದ್ದರು.
ಆಗ ಪಟೇಲರು ಮುಖ್ಯಮಂತ್ರಿ, ಜಿಲ್ಲಾ ಮಂತ್ರಿ ಜಿ.ಬಸವಣ್ಯಪ್ಪ, ಸಂಸದರು ಡಿ.ಬಿ.ಚಂದ್ರಗೌಡರು, ಸಾಗರದ ಶಾಸಕರು ಕಾಗೋಡರು ಆದರೆ ಅವರೆಲ್ಲರೂ ನನ್ನ ವಿರೋದವಾಗಿದ್ದರು ಆಗ ನನ್ನ ಬೆಂಬಲಿಸಿದವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇಸ್ಮಯಿಲ್ ಖಾನ್, ವೈ.ಹೆಚ್.ನಾಗರಾಜ, ರಾಮೇಗೌಡರು, sp.ದಿನೇಶ್, ರವಿಕುಮಾರ್ ಇವರ ತಂಡ ಆಗ ರಾಜ್ಯ ಮಟ್ಟದ ಭ್ರಷ್ಟಾಚಾರದ ವಿರುದ್ಧ ಬೆಂಕಿ ಉಗುಳುವ ಪತ್ರಿಕೆ ಹಾಯ್ ಬೆಂಗಳೂರು ನನ್ನ ಪರವಾಗಿ ಸುದ್ದಿ ಮಾಡಿತ್ತು.
ಇದನ್ನ ಸುದ್ದಿ ಮಾಡಿದ ಶೃ೦ಗೇಶರ ಪರಿಚಯ ಆಗ ನನಗೆ ಇರಲಿಲ್ಲ, ಸುದ್ದಿ ಮಾಡಿದ್ದಕ್ಕಾಗಿ ರವಿ ಬೆಳೆಗೆರೆಯವರಿಗೆ ಪೋನ್ ಮಾಡಿ ಕೃತಜ್ಞತೆ ಹೇಳಿದೆ ಅದಕ್ಕೆ ಅವರು ಪೋನ್ನಲ್ಲಿ Thanks ಬೇಡ ಬೆಂಗಳೂರಿಗೆ ಬಂದು ಹೇಳಿ ಅಂದರು ಆ ನಂತರ ಬೆಂಗಳೂರಿನ ಅವರ ಕಚೇರಿಗೆ ಹೋಗಿ ಬೇಟಿ ಆಗಿದ್ದೆ, ನಂತರ ಸತತ ಎರೆಡು ವಷ೯ ಹಾಯ್ ಬೆಂಗಳೂರು ವಾಷಿ೯ಕೊತ್ಸವಕ್ಕೆ ಹೋಗಿದ್ದೆ ನಂತರ ಅನೇಕ ಬಾರಿ ನನ್ನ ಚುನಾವಣೆ ಸ್ಪದೆ೯, ಜನಪರ ಹೋರಾಟಗಳ ಬಗ್ಗೆ ಪತ್ರಿಕೆ ಸುದ್ದಿ ಮಾಡಿ ಪ್ರಭಾವಿಗಳ ಕಣ್ಣು ಕೆಂಪಿಗೆ ಕಾರಣ ಆಗಿತ್ತು.
ಅದಾಗಿ ಸುಮಾರು ವಷ೯ ನನ್ನ ಅವರ ಬೇಟಿ ಆಗಿರಲಿಲ್ಲ.
ಉಪಹಾರದ ಸಂದಭ೯ದಲ್ಲಿ ರಾಜಕೀಯದಿಂದ ನಾನು ನಿವೃತ್ತಿ ಆಗಿದ್ದು ತಿಳಿದು ಅವರು ಹೇಳಿದ್ದು ಇನ್ನು ನಿಮ್ಮನ್ನ ನಂಬಬಹುದು ಅಂತ, ನಿಮಗೆ ಹೇಗೆ ಹೋಟೆಲ್ ಉದ್ಯಮ ಅಂತ ತಿಳಿದು ಕೊಂಡರು ಉಪಹಾರದ ನಂತರ ಮಧ್ಯಾಹ್ನದ ಬೋಜನಕ್ಕೆ ಬರಬೇಕಾಗಿ ವಿನಂತಿಸಿದಾಗ ಒಪ್ಪಿದರು.
ಮದ್ಯಾನ್ನ 2 ಗಂಟೆಗೆ ಬಂದವರು ನಮ್ಮ ಕಾಟೇಜಿನಲ್ಲಿ ನಮ್ಮ ಅತಿಥಿಗಳಾದರು, ನಾವು ಅತಿಥೆಯರಾದೆವು ಇದರ ಮಧ್ಯೆ ಅವರು ತಮ್ಮ ಅಗಾದ ನೆನಪಿನ ಭಂಡಾರ ತೆರೆದರು ಆತ್ಮೀಯತೆಯಲ್ಲಿ ಸಲಿಗೆಯಿಂದ ನಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು ನನ್ನ ಅವರ ಸಂವಾದ ಸಾರಾ೦ಶ ಹೀಗಿದೆ.
* 30 ಲಕ್ಷದ ಸುಪಾರಿಗೆ 5 ಸಾವಿರ ಮುಂಗಡ ಪಡೆದ ಅಂದರೆ ಅಥ೯ ಆಗುತ್ತೆ ಈ ದೂರು ದಾಖಲು ಮಾಡಿದ ಹಿನ್ನೆಲೆ.
* ಅವರು ಇಲ್ಲಿನ ಕೋಟಿ೯ಗೆ ಬಂದ ದಿನವೇ ಅವರ ನೆಚ್ಚಿನ ಗೆಳೆಯ ಬಳ್ಳಾರಿಯ ಸುರೇಶರ ತಾಯಿ ತೀರಿದ ಸುದ್ದಿ ಅವರಿಗೆ ದುಃಖ ಮತ್ತು ವಿಷಾದದ ಸುದ್ದಿ ಆಗಿತ್ತು, ಗೆಳೆಯನ ತಾಯಿ ನನಗೆ ರವಿ ಬೆಳೆಗೆರೆ ನನ್ನ ಮೊದಲ ಮಗ ಅನ್ನುತ್ತಿದ್ದರಂತೆ ಆಗ ಇವರು ತೂಕ ಹೆಚ್ಚಾಗಿ ದಪ್ಪ ಆಗಿದ್ದರು ಗೆಳೆಯನ ತಾಯಿ ಮಗ ನೀನು ತುಂಬಾ ಸೋತು ಹೋದಿಯಲ್ಲ ಅಂತ ತಾಯಿ ಮಮತೆ ತೋರುತ್ತಿದ್ದನ್ನ ನೆನಪಿಸಿ ಕಣ್ಣಿರಾದರು.
* ಡಯಾಬಿಟೀಸ್ ಬಗ್ಗೆ ಅವರ ಹಿರಿತನದ ಅನುಭವ, ಚಿಕಿತ್ಸೆ ಪರಿಣಾಮಗಳ ಬಗ್ಗೆ ಡಯಾಬಿಟೀಸ್ ಕ್ಲಬ್ ನ ಕಿರಿಯ ಸದಸ್ಯರಾದ ನಮಗೆ ಸೂಕ್ತ ಮಾಗ೯ದಶ೯ನ ನೀಡಿದರು.
* ಅಂತರ್ ಜಾತಿ ವಿವಾಹಗಳಿಗೆ ಹೆಚ್ಚು ಬೆಂಬಲ ನೀಡಬೇಕು ಅಂದರು, ಅಂತರ್ ಜಾತಿ ವಿವಾಹ ಆದ ನನ್ನ ಜೀವನದ ಬಗ್ಗೆ ತಿಳಿದು ಕೊಂಡರು.
* ನನ್ನ ಮಕ್ಕಳಿಗೆ ಸಕಾ೯ರಿ ಅಂಗನವಾಡಿಯಿಂದ ಪ್ರಾರಂಭ ಮಾಡಿದ ವಿದ್ಯಾಭ್ಯಾಸ ಸಕಾ೯ರದ ಕನ್ನಡ ಮಾಧ್ಯಮದಲ್ಲಿ ಪಿಯಸಿ ತನಕ ಓದಿಸಿದ್ದು ಕೇಳಿ ಸಂತೋಷಪಟ್ಟರು, ಸ್ವತಃ ತಾವು ಅದೇ ರೀತಿ ಓದಿ ಮುಂದೆ ಬಂದೆ ಅಂದರು.
* ನನ್ನ ಮಕ್ಕಳು ಅವರ ಅಭಿಮಾನಿಗಳು ಹಾಯ್ ಬೆಂಗಳೂರು ಓದುಗರು ಅವರಿಗೆಲ್ಲ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಜೀವನದ ಬಗ್ಗೆ ಅನೇಕ ಮಾಗ೯ದಶ೯ನ ನೀಡಿದರು.
* ಅವರ ಪ್ರಾಥ೯ನ ಶಾಲೆಯಲ್ಲಿ ಡೊನೆಷನ್ ಇಲ್ಲ, ಅಡ್ಮಿಷನ್ ಪಾರಂನಲ್ಲಿ ಜಾತಿ ಕಾಲಂ ಇಲ್ಲದ ಬಗ್ಗೆ ವಿವರಿಸಿದರು.
* ದಾಂಡೆಲೀಯ ಅವರು ಖರೀದಿಸಿರುವ ಕಾಡಿನ ಮಧ್ಯದ ಮನೆ ಬಗ್ಗೆ ಹೇಳುತ್ತಾ ಅವರ ಕುಟುಂಬದವರಿಗೆ ಇದರ ಬಗ್ಗೆ ನಿರಾಸಕ್ತಿ ವಿರೋದ ಇದ್ದರೂ ಇವರಿಗೆ ಅಲ್ಲಿದ್ದರೆ 10 ವಷ೯ ಆಯುಸ್ಸು ಹೆಚ್ಚಾಗುತ್ತೆ ಅಂತ ಸಂಭ್ರಮಪಟ್ಟರು.
* ನರಸೀಪುರದ ನಾಟಿ ವೈದ್ಯರ ಬಗ್ಗೆ ಅವರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿಚಾರಿಸಿದರು.
* ಜೋಗ ಅಭಿವೃದ್ಧಿ ಯೋಜನೆಯ ದುಬೈನ ಬಿ.ಆರ್.ಶೆಟ್ಟರ ಬಗ್ಗೆ ಮಾತಾಡಿದರು.
* ಹವ್ಯಕ ಬ್ರಾಹ್ಮಣರ ಬುದ್ಧಿವಂತಿಕೆ ಸಾಮಾಜಿಕ ದೈಯ೯ದ ಬಗ್ಗೆ ಅಭಿಮಾನದ ಮಾತಾಡಿ ಈಗ ಅವರ ಮಠ ಒಂದರ ಬಗ್ಗೆ ಅದರ ಅನಾಚಾರದ ಬಗ್ಗೆ ಅವರಲ್ಲಿನ ಮೌನದ ಬಗ್ಗೆ ಬೇಸರಿಸಿದರು.
* ಕಂಬಾರರ ಕೇ೦ದ್ರದ ಅಕಾಡೆಮಿ ಸ್ಥಾನದ ಆಯ್ಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದರು, ಅವರಿಗೆ ಕೆಲ ಅನಾಡಿಗಳು ಆಪ್ತರಾಗಿದ್ದು ಹೇಗೆ ಅಂದಿದ್ದರಂತೆ ಆದಕ್ಕೆ ಕಂಬಾರರು ಹೇಳಿದ್ದು ಹೆಂಗೋ ಬ೦ದು ಸೇರಿಕೊಂಡು ಬಿಡ್ತಾರೆ ಅಂತ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು ತಿಳಿಸಿದರು.
* ಜಿಲ್ಲೆಯ ರಾಜಕಾರಣದ ಬಗ್ಗೆ ತೀಥ೯ಹಳ್ಳಿ ಕಿಮ್ಮನೆ ಬಗ್ಗೆ, ಆರಗ ಜ್ಞಾನೇ Oದ್ರರ ಬಗ್ಗೆ ಮಾತಾಡಿದರು.
* ಪ್ರತಿವಾರ ಪತ್ರಿಕೆ ಹೊರ ಬಂದಾಗಲು ಹೊಸ ಶತ್ರುಗಳು ಹುಟ್ಟು ಕೊಳ್ಳುವ ಬಗ್ಗೆ ಸ್ವಾರಸ್ಯವಾಗಿ ವಿವರಿಸಿದರು.
ಮುಂದಿನ ಬಾರಿ ಈ ಭಾಗಕ್ಕೆ ಬಂದಾಗ ಪುನಃ ಬರುವುದಾಗಿ ಶುಭ ವಿದಾಯದ ಹಾರೈಕೆಯೋOದಿಗೆ ಶೃಂಗೇಶರೊಂದಿಗೆ ಬೆಂಗಳೂರಿಗೆ ತೆರಳಿದರು.
Comments
Post a Comment