Skip to main content

Posts

Showing posts with the label History of Anandapuram Railway station

ಆನಂದಪುರಂ ಇತಿಹಾಸ, ಭಾಗ 63. ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ 1940 ರಲ್ಲಿ ಪ್ರಾರಂಭವಾಯಿತು.

#ಆನಂದಪುರಂ_ಇತಿಹಾಸ #ಭಾಗ_63. #ಆನ೦ದಪುರಂಗೆ_ರೈಲು_ಮಾರ್ಗ_ಶಿವಮೊಗ್ಗ_ತಾಳಗುಪ್ಪ_ಮೀಟರ್_ಗೇಜ್ #ಶಿವಮೊಗ್ಗ_ಆನಂದಪುರಂ_ರೈಲು_ಮಾರ್ಗ_ಕಾಮಗಾರಿ_1934ಕ್ಕೆ_ಮುಗಿಯಿತು. #ಮೊದಲ_ರೈಲು_1940_ನವೆಂಬರ್_9ಕ್ಕೆ_ತಾಳಗುಪ್ಪದಿಂದ_ಬೆಳಿಗ್ಗೆ_ಪ್ರಾರಂಭ_ಆಯಿತು. #ಈ_ಮಾರ್ಗದ_ಮೊದಲ_ರೈಲಿನ_ಸಂಖ್ಯೆ_SMET_SBC_EXP(20652).   ಮುಮ್ಮುಡಿ ಚಾಮರಾಜ ಒಡೆಯರು 1881 ರಿಂದ 13 ವರ್ಷದ ತಮ್ಮ ಆಳ್ವಿಕೆಯಲ್ಲಿ 164 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲಿ 315 ಮೈಲು ರೈಲು ಮಾರ್ಗ ನಿರ್ಮಿಸುತ್ತಾರೆ.     ಮಹಾರಾಣಿ ವಾಣಿವಿಲಾಸರು 23 ಲಕ್ಷದಲ್ಲಿ ಬಿರೂರು ಶಿವಮೊಗ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುತ್ತಾರೆ ಈ ರೀತಿ ಆಗಿನ ಮೈಸೂರು ಅರಸರ ಪ್ರಯತ್ನ ಮತ್ತು ಸಹಕಾರದಲ್ಲಿ ಬ್ರಿಟೀಷರು ನಿರ್ಮಿಸಿದ ರೈಲು ಮಾರ್ಗಗಳು ಆಗ ಮೈಸೂರು ಸ್ಟೇಟ್ ರೈಲ್ವೆ ಇಲಾಖೆ ಹೆಸರಲ್ಲಿ ಸದರ್ನ ರೈಲ್ವೆ ಅಂಗ ಸಂಸ್ಥೆ ಆಗಿ 1891ರಿಂದ 1951ರವರೆಗೆ ಕಾಯ೯ನಿರ್ವಹಿಸಿತ್ತು  ಈಗ ಈ ಮಾರ್ಗ ಬ್ರಾಡ್ ಗೇಜ್ ಗಳಾಗಿ ಪ್ರಯಾಣಿಕರಿಗೆ, ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ.   1899 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರಾಜರಾಗಿದ್ದಾಗ ಬೀರೂರು ಶಿವಮೊಗ್ಗ ರೈಲು ಮಾರ್ಗ ಆಗಿತ್ತಾದರೂ ಶಿವಮೊಗ್ಗದಿಂದ ಜೋಗ್ ಪಾಲ್ಸ್ ಗೆ ಸಂಪರ್ಕಿಸಲಿಕ್ಕಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಕಾಮಗಾರಿ ಪ್ರಾರಂಭ ಆಗುವುದು 1930ರಲ್...