Skip to main content

Posts

Showing posts with the label Indian Desi Rice of Maharashtra

4135.ಇಂದ್ರಾಯಣಿ_ಅಕ್ಕಿ_ನಿಮಗೆ_ಗೊತ್ತಾ..

ಇಂದ್ರಾಯಣಿ_ಅಕ್ಕಿ_ನಿಮಗೆ_ಗೊತ್ತಾ..  Indrayani Rice - ಇಂದ್ರಾಯಿಣಿ ಅಕ್ಕಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ (ಮುಖ್ಯವಾಗಿ ಪುಣೆ, ಮಾವಳ್ ಪ್ರದೇಶದಲ್ಲಿ) ವ್ಯಾಪಕವಾಗಿ ಬೆಳೆಯಲಾಗುವ ಅತ್ಯಂತ ಜನಪ್ರಿಯ ಸುಗಂಧಿತ ಅಕ್ಕಿ ತಳಿ ಇದು ನಮ್ಮ ರಾಜ್ಯದ ಗಂಧ ಸಾಲೆ / ಗಮ್ ಗಾಳಿ ಅಕ್ಕಿಯ ರೀತಿಯೇ ಕೊಂಚ ಬೇರೆ ತರ ಇದೆ.  ಇಂದ್ರಾಯಣಿ ನದಿಯು #ನಾಥ_ಪಂಥದ ಸಂತ # ಜ್ಞಾನೇಶ್ವರನಾಥ್ ರ ಸಮಾಧಿ ಇರುವ ಆಳಂದಿ ಮತ್ತು #ಸಂತ_ತುಕಾರಾಮರ ಜನ್ಮಸ್ಥಳವಾದ #ದೇಹೂ ಮುಂತಾದ ಧಾರ್ಮಿಕ ಕ್ಷೇತ್ರಗಳ ಮೂಲಕ ಹರಿಯುವ ಪವಿತ್ರ ನದಿಯಾಗಿದ್ದು ಈ ಅಕ್ಕಿಗೆ ಇದೇ ಹೆಸರು ಬಂದಿರುವುದು ಈ ಅಕ್ಕಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.   ಇದು ಅಂಬೇಮೊಹರ್  ತಳಿಯಂತೆಯೇ ಅತ್ಯುತ್ತಮ ನೈಸರ್ಗಿಕ ಸುವಾಸನೆ ಹಾಗೂ ಮೃದುವಾದ ರುಚಿಯನ್ನು ಹೊಂದಿರುತ್ತದೆ. ​ ಬೇಯಿಸಿದ ನಂತರ ಈ ಅನ್ನವು ಬಹಳ ಮೃದುವಾಗುತ್ತದೆ ಮತ್ತು ಸ್ವಲ್ಪ ಜಿಗುಟಾದ (sticky) ಗುಣವನ್ನು ಪಡೆಯುತ್ತದೆ. ​ಮಧ್ಯಮ ಗಾತ್ರದ ಕಾಳುಗಳನ್ನು ಹೊಂದಿರುತ್ತದೆ,​ದಿನನಿತ್ಯದ ಸಾಂಬಾರ್-ಅನ್ನ, ರಸಂ-ಅನ್ನಕ್ಕೆ ಸೂಕ್ತ.   ​ಮೃದುವಾಗಿರುವುದರಿಂದ ಕಿಚಡಿ, ಪುಲಾವ್, ಪಾಯಸ (ಖೀರ್) ಮತ್ತು ಮೊಸರನ್ನಕ್ಕೆ ಇದು ಅತ್ಯುತ್ತಮ ಆಯ್ಕೆ.   ​ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರ ತಯಾರಿಸಲು ಇದು ಸೂಕ್ತ.  ​ಅಡುಗೆ ಮಾಡುವಾಗ ಗಮನಿಸಬೇಕಾದ ಅಂಶ ...