Skip to main content

Posts

Showing posts with the label you can't bare such shame

ಜಾತಿ ಆಚರಣೆಯ ಸಂಪ್ರದಾಯದ ಯಾರದೇ ಮನೆ, ಮದುವೆ, ದೇವಸ್ಥಾನಗಳ, ಮಠದ ಊಟದ ಪಂಕ್ತಿಗೆ ಶೂದ್ರರು ಯಾರೇ ಒತ್ತಾಯ ಮಾಡಿದರೂ - ತಪ್ಪು ಮಾಹಿತಿಯಿಂದ ಹೋಗಬೇಡಿ ನಂತರ ನಿಮ್ಮನ್ನು ಆ ಪಂಕ್ತಿಯಿಂದ ಎತ್ತಿ ಎಸೆದಾಗ ಆಗುವ ಅವಮಾನ ಸಹಿಸಿಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ, ಇಂತಹ ಪಂಕ್ತಿಗಳಿಗೆ ಯಾವ ಜಾತಿಯವರು ಬರಬಾರದೆಂಬ ಬೋಡು೯ ಹಾಕಬಾರದೇಕೆ ?

#ಯಾರದೇ_ಒತ್ತಾಯಕ್ಕಾಗಿ_ಶೂದ್ರರು_ಈ_ತಪ್ಪು_ಮಾಡಬೇಡಿ #ಜಾತಿ_ಆಚರಣೆಯ_ಪಂಕ್ತಿ_ಊಟಕ್ಕೆ_ಹೋಗಿ_ಕೂರಬೇಡಿ #ನಿಮ್ಮನ್ನು_ಎತ್ತಿ_ಹೊರ_ಬಿಸಾಕುತಾರೆ. #ಜಾತಿ_ಹೀನನ_ಮನೆಯ_ಜ್ಯೋತಿ_ತಾ_ಹೀನವೆ? #ಜ್ಯೋತಿ_ಯಾವ_ಜಾತಿಯಮ್_ಜಗದೀಶ್ವರಿ #ಗಾಳಿ_ನೀರು_ಬೆಳಕು_ಭೂಮಿ_ಗಗನಕ್ಕೆಲ್ಲಿ_ಜಾತಿ. #ಉಡುಪಿ_ಪಂಕ್ತಿ_ಬೇದದ_ನನ್ನ_ಅನುಭವ.   ಎರೆಡು ದಿನದ ವೇದಾಂತದ ವಿಮರ್ಷೆಗಳು ಎನ್ನುವ ರಾಜ್ಯ ಮಟ್ಟದ ವಿದ್ವಾಂಸರ ಸಮ್ಮೇಳನ ಮೈಸೂರು ವಿವಿಯ ಪ್ರೋಪೆಸರ್ ಡಾಕ್ಟರ್ ಸಿದ್ದಾಶ್ರಮರವರು ಉಡುಪಿ ಪೇಜಾವರ ಸ್ವಾಮಿಜಿಗಳ ಸಹಯೋಗದಲ್ಲಿ ಉಡುಪಿ ಕೃಷ್ಣ ದೇವಾಲಯದ ಪಕ್ಕದ ಬೃಹತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.  ಡಾ.ಸಿದ್ದಾಶ್ರಮರವರು ಮೈಸೂರು ವಿಶ್ವವಿದ್ಯಾಲಯದ 25 ನೇ ವೈಸ್ ಛಾನ್ಸ್ ಲರ್ ಆಗುತ್ತಾರೆ ಎಂಬ ಸುದ್ದಿ ಆಗ ಇತ್ತು.    ನನಗೆ ಒಂದು ದಿನವಾದರೂ ಬಂದು ಭಾಗವಹಿಸಲು ಆಮಂತ್ರಣ ನೀಡಿದ್ದರು (ಪ್ರೇಕ್ಷಕನಾಗಿ) ಆದ್ದರಿಂದ ಮತ್ತು ಅಲ್ಲಿ ಎರಡನೆ ದಿನದ ಸಮ್ಮೇಳನದ  ಅಧ್ಯಕ್ಷತೆ  ಒಪ್ಪಿ ಭಾಗವಹಿಸುತ್ತಿದ್ದ ಶರಣ ಅಂಬಿಗರ ಚೌಡಯ್ಯನವರ ಪೀಠದ ಗುರುಗಳಾದ ಶ್ರೀ ಶಾಂತ ಮುನಿ ಸ್ವಾಮಿಗಳು ( ಈಗ ಲಿಂಗೈಕ್ಯ) ಕೂಡ ಪೋನಿನಲ್ಲಿ ಆಹ್ವಾನಿಸಿದ್ದರು.   ಹಿರಿಯ ಶ್ರೀ ಶಾಂತ ಮುನಿ ಸ್ವಾಮಿಗಳು ಹುಬ್ಬಳ್ಳಿಯ ಸಿದ್ಧರೂಡ ಮಠದ ಹಿನ್ನೆಲೆಯವರು, ಶಿವಮೊಗ್ಗ ಭಾಗದಲ್ಲಿ ಕಾರ್ಯಕ್ರಮಕ್ಕೆ ಬಂದಾಗ ನಮ್ಮ ಕಲ್ಯಾಣ ಮಂಟಪದಲ್ಲಿ ವಾಸ್ತ...