Skip to main content

Posts

Showing posts with the label Besthara Rani Champaka

4018 ಬೆಸ್ತರ ರಾಣಿ ಚಂಪಕಾ ಕಾದಂಬರಿ

ನಾನು_ಬರೆದ_ಕಾದಂಬರಿ #ಬೆಸ್ತರರಾಣಿ_ಚಂಪಕಾ #ಡಾ_ಜನಾರ್ದನಭಟ್ಟರ_ವಿಮರ್ಶಾ_ಗ್ರಂಥ #ವಿನೂತನ_ಕಥನ_ಕಾರಣದಲ್ಲಿ. #DrJanardhanbhat #vinuthanakathanakarana #bestararanichampaka #keladihistory #Arunprasad #Rajavenkatappanayaka   ಡಾ.ಜನಾರ್ದನ ಭಟ್ ಅವರ ವಿನೂತನ ಕಥನ ಕಾರಣ ವಿಮರ್ಶಾ ಪುಸ್ತಕದಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ಪುಟಗಳಲ್ಲಿ ನಾನು ಬರೆದ ಕಾದಂಬರಿ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾದ ಉಲ್ಲೇಖ ಮಾಡಿದ್ದಾರೆ. ಡಾಕ್ಟರ್ ಬಿ ಜನಾರ್ದನ್ ಭಟ್ ಅವರು ಸಾಹಿತ್ಯ ವಿಮರ್ಶೆಯ ವಿಶೇಷ ಪುಸ್ತಕವನ್ನು ಪ್ರಕಟ ಮಾಡಿದ್ದಾರೆ, ಅದರ ಹೆಸರು ವಿನೂತನ ಕಥನ ಕಾರಣ. ಈ ಪುಸ್ತಕದ ಪುಟ 39ರಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ವಿಮರ್ಶೆಯಲ್ಲಿ ಅವರು ಈ ರೀತಿ ಉಲ್ಲೇಖ ಮಾಡಿದ್ದಾರೆ.       ಹಿಂದಿನ ಐತಿಹಾಸಿಕ ಕಾದಂಬರಿಗಳಲ್ಲಿ ಅಧ್ಯಯನದ ಕೊರತೆಯಿಂದ ಅಥವಾ ಐತಿಹಾಸಿಕ ಮಾಹಿತಿಗಳ ಲಭ್ಯತೆಯಿಂದ ಅವು "ಜನಪ್ರಿಯ ರೋಚಕ ಕಾದಂಬರಿಗಳ" ಸಮುದಾಯಕ್ಕೆ ಸೇರಿ ಹೋಗಿತ್ತು.    ಹೆಚ್ಚಿನ ಅಧ್ಯಯನದಿಂದ ಈ ಕಾಲದಲ್ಲಿ ಬರೆಯಲ್ಪಟ್ಟಿರುವ ಐತಿಹಾಸಿಕ ಕಾದಂಬರಿಗಳು ಇತಿಹಾಸದ ಹೀರೋಗಳ ಬಗೆಗೆ ಇರದೆ ಆ ಕಾಲದ ಸಮಾಜದ ಮತ್ತು ಜನಾಂಗಗಳ ವೈಶಿಷ್ಟ್ಯ ಮತ್ತು ವ್ಯಕ್ತಿತ್ವಗಳ ಚಿತ್ರಣವನ್ನು ಉದ್ದೇಶವಾಗಿ ಇರಿಸಿಕೊಂಡಿವೆ.     ಇವು...