#ರೋಪ್_ಸಾಹೇಬರು_ಡಾಕ್ಟರ್_ಆದ_ಕಥೆ . ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ, ಇವರ ಸಾದನೆ ಆ ಮಟ್ಟದ್ದು. ಉ.ಕ.ಜಿಲ್ಲೆಯ ಬನವಾಸಿಯ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು. ಈಗೆಲ್ಲ ಡಾಕ್ಟರೇಟ್ ಅಗ್ಗ ಆದರೆ ಅವಾಗ ಅದಕ್ಕೆ ಘನತೆ ಇತ್ತು. ರೋಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರವೂ ಇತ್ತು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ. ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ ಜಾನಕಪ್ಪನವರು ಡಾಕ್ಟರ್ ರೋಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ. ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುವಾಗ ಮುಂಬೈನ ನನ್ನ ಗೆಳೆಯ ವಿಜಯ್ ಗಡ್ಕರ್ ಅವರ ಮನೆಯ ಡೈನಿಂಗ್ ಹಾಲ್ ನಿಂದ ಬಂದಾಗ ಇಬ್ಬರಿಗೂ ಆಶ್ಚಯ೯. ಹಿಂದೆಯೇ ಬಂದ ರೋಪ್ ಸಾಹೇಬರಿಗೂ, ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮಾಡಿದ್ದ ಕಾರಣ ಅವರ ಅತಿಥಿ ಆಗಿದ್ದರು ಇದರಿಂದ ರೋಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು. ಎಕರೆ ಒ0ದರಲ್...