Skip to main content

Posts

Showing posts with the label Refering Defence matters in public elections is not fair

Blog number 1237. ಲೋಕಸಭಾ ಚುನಾವಣೆ 2014ರಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರರ ಜೊತೆ ಯಡೂರಪ್ಪರ ಪರ ಪ್ರಚಾರ ಮಾಡಿದ ನೆನಪುಗಳು

#ನನ್ನ_ರಾಜಕೀಯ ನಿವೃತ್ತಿಯ ಕೊನೆಯ 2014ರ ಲೋಕಸಭಾ ಚುನಾವಣೆ     ಇಲ್ಲಿ ಈಗ ಪರಸ್ಪ ಕೆಸರರಾಚಾಟ ಸರಿ ಅಲ್ಲ, ಸೈನ್ಯದ ವಿಚಾರವನ್ನ ಚುನಾವಣ ಅಸ್ತ್ರವಾಗಿ ಬಳಸುವುದೂ ಸರಿಯಲ್ಲ, ಇದನ್ನೆಲ್ಲ ಎದುರಿಸಲು ನೈತಿಕ ಬೆಂಬಲ ಬೇಕಾಗಿದೆ, ಭಕ್ತರು V/S ಗುಲಾಮರು ಅಂತ ಪರಸ್ಪರ ಹೆಸರುತ್ತಾ ಸೋಷಿಯಲ್ ಮೀಡಿಯಾದ ವಚು೯ಯಲ್ ವಾರ್ ನ ಪೌರುಷಕ್ಕೆ ಯಾವುದೇ ಬೆಲೆ ಇಲ್ಲ.  ಇದನ್ನ ಇಲ್ಲಿ ಉಲ್ಲೇಖಿಸಲು ಕಾರಣ ಇದೆ, 2013 ರ ವಿದಾನಸಭಾ ಚುನಾವಣೆಯಲ್ಲಿ ನಾನು ಸಾಗರ ತಾಲ್ಲೂಕಿನ JDS ಪಾಟಿ೯ ಅಧ್ಯಕ್ಷ, ನಮ್ಮ ಅಭ್ಯಥಿ೯ 2 ಬಾರಿ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು, ಈ ಚುನಾವಣೆಯಲ್ಲಿ ಅವರು23 ಸಾವಿರ ಮತ ಪಡೆದರು, ಕಾಂಗ್ರೇಸಿನಿಂದ ಗೆದ್ದವರು ಇವರ ತಾಯಿಯ ಅಣ್ಣ ಕಾಗೋಡು ತಿಮ್ಮಪ್ಪನವರು.     ಆದರ ಮರು ವರ್ಷವೇ  ಬಂದ ಲೋಕಸಭಾ ಚುನಾವಣೆಗೆ ಬೇಳೂರು ಗೋಪಾಲಕೃಷ್ಣರು ಬಿಜೆಪಿ ಸೇರಿ ಯಡೂರಪ್ಪನವರನ್ನ ಲೋಕಸಭಾ ಸದಸ್ಯರನ್ನಾಗಿಸುವ ತೀರ್ಮಾನಕ್ಕೆ ಬ೦ದರು.    ನಾವೆಲ್ಲರೂ ಬೇಳೂರು ಗೋಪಾಲಕೃಷ್ಣರ ಜೊತೆ ಯಡೂರಪ್ಪರ ಪರ ಚುನಾವಣೆಗಾಗಿ ಬಿಜೆಪಿಗೆ ಸೇರಿದೆವು (ಅದು ನನ್ನ ರಾಜಕಾರಣದ ನಿವೃತ್ತಿ ಕೂಡ).     ಆಗ ಸಾಗರ ತಾಲ್ಲೂಕಿನ ಮತ್ತು ಹೊಸ ನಗರ ತಾಲ್ಲೂಕಿನ ಪ್ರಚಾರ ಸಭೆಯಲ್ಲಿ ಆಗಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಅಯನೂರು ಮಂಜುನಾಥ್ ರು ಮಾಡುತ್...