Skip to main content

Posts

Showing posts with the label Part 6

4077.ಭಾಗ_6_ನಿಶಿದಿ_ಮಂಟಪದ_ಒಳಗೆ_ಪೀಠದ_ಮೇಲೆ_ನಿಶಿದಿ_ಶಾಸನ

 ನಿಶಿದಿ ಮಂಟಪದ ಒಳಗೆ ನಿಶಿದಿ ಶಾಸನವನ್ನು ಅಥವಾ ನಿಶಿದಿ ಕಲ್ಲನ್ನು ಇಡುವ ಜಾಗಕ್ಕೆ ಧಾರ್ಮಿಕ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ನಿರ್ದಿಷ್ಟವಾದ ಸ್ಥಾನವಿರುತ್ತದೆ.  ಸಾಮಾನ್ಯವಾಗಿ ಅದನ್ನು ಮಂಟಪದ ಕೇಂದ್ರಭಾಗದಲ್ಲಿ, ಮಧ್ಯದಲ್ಲಿ, ಹೆಚ್ಚಿನ ನಿಶಿದಿ ಮಂಟಪಗಳಲ್ಲಿ ನಾಲ್ಕು ಕಂಬಗಳ ಮಧ್ಯದಲ್ಲಿ ಒಂದು ಸಣ್ಣ ಪೀಠವನ್ನು ನಿರ್ಮಿಸಿ ಅದರ ಮೇಲೆ ನಿಶಿದಿ ಶಾಸನವನ್ನು ನೇರವಾಗಿ ಎಲ್ಲರಿಗೂ ಕಾಣುವಂತೆ ಮಧ್ಯಭಾಗದಲ್ಲಿ ನಿಲ್ಲಿಸಲಾಗಿರುತ್ತದೆ.    ಮಂಟಪಕ್ಕೆ ಪ್ರದಕ್ಷಿಣೆ ಹಾಕುವಾಗ ಅಥವಾ ದರ್ಶನ ಪಡೆಯುವಾಗ ಇದು ಪ್ರಮುಖ ಆಕರ್ಷಣೆಯಾಗಿರುತ್ತದೆ. ​  ಹಿಂಭಾಗದ ಗೋಡೆಗೆ ಅಂಟಿಕೊಂಡಂತೆ ​ಮಂಟಪವು ಒಂದು ಕಡೆ ಮುಚ್ಚಲ್ಪಟ್ಟಿದ್ದರೆ ಅಥವಾ ಹಿಂಭಾಗದಲ್ಲಿ ಗೋಡೆಯನ್ನು ಹೊಂದಿದ್ದರೆ ಶಾಸನ ಕಲ್ಲನ್ನು ಹಿಂಭಾಗದ ಗೋಡೆಯ ಮಧ್ಯಭಾಗದಲ್ಲಿ ಸ್ಥಾಪಿಸಿ ಅದು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖ ಮಾಡುವಂತೆ ಇಡಲಾಗುತ್ತದೆ. ​  ​ಕೆಲವು ವಿಶೇಷ ನಿಶಿದಿ ಮಂಟಪಗಳಲ್ಲಿ ಸಲ್ಲೇಖನ ವ್ರತ ಕೈಗೊಂಡ ಮುನಿಗಳ ಪಾದದ ಗುರುತುಗಳನ್ನು ಅಂದರೆ ಚರಣ ಕಮಲಗಳನ್ನ ನೆಲದ ಮೇಲೆ ಅಥವಾ ಸಣ್ಣ ಪೀಠದ ಮೇಲೆ ಕೆತ್ತಲಾಗಿರುತ್ತದೆ.    ಈ ಪಾದದ ಗುರುತುಗಳ ಹಿಂಭಾಗದಲ್ಲಿ ಅಥವಾ ಪೀಠದ ಮೇಲ್ಭಾಗದಲ್ಲಿ ನಿಶಿದಿ ಶಾಸನವನ್ನು ನಿಲ್ಲಿಸಲಾಗುತ್ತದೆ.   ​ಶಾಸನವನ್ನು ಇಡುವ ದಿಕ್ಕಿಗೂ  ಮಹತ್ವವಿದೆ,​ಜೈನ ಧರ್ಮದ ಸಂಪ್ರದಾಯದ ಪ್ರ...

Blog number 1408. ಪ್ರಸಕ್ತ ರಾಜಕಾರಣದ ಒಳಗುಟ್ಟು - ಲೋಕಸಭಾ ಚುನಾವಣೆ 2018 ಭಾಗ - 6 (14 April 2019)

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-6 ( ಕೆ.ಅರುಣ್ ಪ್ರಸಾದ್‌) ಶಿವಮೊಗ್ಗ ಪಾಲಿ೯ಮೆಂಟ್ ಕ್ಷೇತ್ರದಲ್ಲಿ ಸ್ಥಳಿಯ ಸಮಸ್ಯೆಗಳು ಗೌಣವಾಗಿದೆ!?   ಶಿವಮೊಗ್ಗ ಜಿಲ್ಲೆಯ ಅರಣ್ಯ ಅತಿಕ್ರಮ, ಜೈಲು, ರಸ್ತೆ, ಸೇತುವೆ, ರೈಲು, ವಿಮಾನ ನಿಲ್ದಾ ಣ, ಭದ್ರಾವತಿ ಪೇಪರ್ ಮಿಲ್, ಸ್ಮಾಟ್೯ ಸಿಟಿ, ಬಗರ್ ಹುಕುಂ ಹಕ್ಕು ಪತ್ರ, ರೈತನಿಗೆ ವಷ೯ಕ್ಕೆ 75 ಸಾವಿರ ಇತ್ಯಾದಿ ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯವೇ ಆಗಿಲ್ಲ.   ಬಿಜೆಪಿ ಕರಪತ್ರದಲ್ಲಿ ಅಭಿವೃದ್ಧಿಯೇ ಪ್ರಮುಖ ವಿಚಾರವಾಗಿ ಪೊಕಸ್ ಮಾಡಿದೆ, ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಅಭ್ಯಥಿ೯ ಕೂಡ ಬಗರ್ ಹುಕುಂ, ಇಂಡಿಕರಣ ತಿದ್ದುಪಡಿ ಮತ್ತು ಹಿಂದಿನ ಲೋಕ ಸಭಾ ಅಭ್ಯಥಿ೯ ಲೋಪದೋಷ ಪ್ರಮುಖ ವಿಚಾರವಾಗಿ ಎತ್ತಿಕೊಂಡಿದ್ದಾರೆ.   ಯಾವುದೇ ಜನಪ್ರತಿನಿಧಿ ಈ ಬಗ್ಗೆ ಒವಾಬ್ದಾರಿವಹಿಸುವುದು ಸರಿ ಮತ್ತು ಇದು ಮತದಾರನ ಭವಿಷ್ಯ ಕೂಡ.   ಆದರೆ ಜಿಲ್ಲೆಯಾದ್ಯ೦ತ ಮತದಾರಲ್ಲಿ ಹೆಚ್ಚಿನದಾಗಿ ಯುವ ಮತದಾರರಲ್ಲಿ ಈ ಯಾವುದೇ ಸ್ಥಳಿಯ ವಿಚಾರಗಳು ಆದ್ಯತೆಯ ವಿಷವೇ ಆಗಿಲ್ಲ ಆವರೆಲ್ಲರ ತೀಮಾ೯ನ ಮತ್ತೊಮ್ಮೆ ಮೋದಿ ಕಾರಣ ಭಾರತೀಯ ಸೈನ್ಯದ ಮೇಲೆ ನಡೆದ ಹತ್ಯಾಖಂಡ ಮತ್ತು ನಂತರದ ಘಟನಾವಳಿಗಳು ಅದರಲ್ಲೂ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆ ಆಗಿದ್ದು ಮತ್ತು ಬಿಡುಗಡೆಯ ಸುಖಾಂತ್ಯದ ಘಟನೆಗಳ ರೋಚಕ ಪ್ರತಿ ನಿಮಿಷದ ಟಿವಿ, ಸೋಷಿಯಲ್ ಮೀಡಿಯಾದ ಸಚಿತ್ರ ವರದಿಗ...