Skip to main content

Posts

Showing posts with the label First day of lockdown my walking commenced today completed 4 years walking

Blog number 2021. ಲಾಕ್ ಡೌನ್ ನ ಮೊದಲ ದಿನದ ಬೆಳಗಿನಲ್ಲಿ ನನ್ನ ವಾಕಿಂಗ್ ಪ್ರಾರಂಬಿಸಿದ್ದೆ ಇವತ್ತಿಗೆ ನಾಲ್ಕು ವರ್ಷ, ವಾಕಿಂಗ್ ಮಾಡಲು ಮಿತಿ ಏನು?

#ಕೊರಾನಾ_ನೆನಪುಗಳ_ಡೈರಿ_6 #ದೇಶದ_ಮೊದಲ_ಲಾಕ್_ಡೌನ್ #ಮೊದಲ_ದಿನದ_ಬೆಳಿಗ್ಗೆ_25_ಮಾರ್ಚ್_2020 #ಇದೇ_ದಿನ_ಬೆಳಿಗ್ಗೆ_ನನ್ನ_ವಾಕಿಂಗ್_ಪ್ರಾರಂಭಿಸಿದ್ದೆ #ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?   ನಾಲ್ಕು ವಷ೯ದ ಹಿಂದೆ ಇದೇ ದಿನ ಲಾಕ್ ಡೌನ್ ಮೊದಲ ದಿನದ ಬೆಳಿಗ್ಗೆ ವಾಕಿಂಗ್ ಶುರು ಮಾಡಿದೆ, 140 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.   ಹೇಗಿದ್ದರೂ 21 ದಿನಗಳು ಲಾಕ್ ಡೌನ್ ಆದ್ದರಿಂದ ಎಲ್ಲಾ ವ್ಯವಹಾರಗಳಿಗೆ ಹಾಗೂ ಇಡೀ ದೇಶಕ್ಕೆ ರಜಾ ಘೋಷಿಸಿ ಆಗಿತ್ತು.   21 ದಿನದ ನಂತರವೂ ಕೆಲವು ತಿಂಗಳು ಲಾಕ್ ಡೌನ್ ಮುಂದುವರಿಯುತ್ತದೆ ಎಂಬ ತಜ್ಞರ ಲೇಖನಗಳು ಬರುತ್ತಿತ್ತು ಈ ಸಂದರ್ಭವೇ ಸರಿ ಅಂತ ನನ್ನ ಮಾತು ಕೇಳದ ಕೊಬ್ಬಿದ ನನ್ನ ದೇಹ ದಂಡಿಸಿ ಪಳಗಿಸುವ ಕೆಲಸ ಸೂರ್ಯೋದಯದ ಮೊದಲೆ ಪ್ರಾರಂಬಿಸಿದೆ.    ರಸ್ತೆ ಎಲ್ಲಾ ಸ್ಥಬ್ದವಾಗಿತ್ತು ... ಹಕ್ಕಿಗಳ ಕಲರವ ಬಿಟ್ಟರೆ ಊರು ನಿರ್ಜನವಾದಂತೆ ಬಾಸವಾಗುತ್ತಿತ್ತು.   ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಈ ಮೊದಲೂ ವಾಕಿಂಗ್ ಶುರು ಮಾಡುವುದು ಪ್ರಾರಂಭದ ಆರಂಭ ಶೂರತ್ವದಲ್ಲಿ ಮೊದಲ ದಿನದಿಂದಲೇ ಹೆಚ್ಚು ನಡೆಯುವುದರಿಂದ ದೇಹ ಆಯಾಸದಿಂದ ಮತ್ತು ಅಭ್ಯಾಸ ಇಲ್ಲವಾದ್ದರಿಂದ ಮರುದಿನದಿಂದಲೇ ಅಥವ ಒಂದು ವಾರಕ್ಕೆ ವಾಕಿಂಗ್ ರದ್ದ...