Blog number 2021. ಲಾಕ್ ಡೌನ್ ನ ಮೊದಲ ದಿನದ ಬೆಳಗಿನಲ್ಲಿ ನನ್ನ ವಾಕಿಂಗ್ ಪ್ರಾರಂಬಿಸಿದ್ದೆ ಇವತ್ತಿಗೆ ನಾಲ್ಕು ವರ್ಷ, ವಾಕಿಂಗ್ ಮಾಡಲು ಮಿತಿ ಏನು?
#ಕೊರಾನಾ_ನೆನಪುಗಳ_ಡೈರಿ_6
#ದೇಶದ_ಮೊದಲ_ಲಾಕ್_ಡೌನ್
#ಮೊದಲ_ದಿನದ_ಬೆಳಿಗ್ಗೆ_25_ಮಾರ್ಚ್_2020
#ಇದೇ_ದಿನ_ಬೆಳಿಗ್ಗೆ_ನನ್ನ_ವಾಕಿಂಗ್_ಪ್ರಾರಂಭಿಸಿದ್ದೆ
#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?
ನಾಲ್ಕು ವಷ೯ದ ಹಿಂದೆ ಇದೇ ದಿನ ಲಾಕ್ ಡೌನ್ ಮೊದಲ ದಿನದ ಬೆಳಿಗ್ಗೆ ವಾಕಿಂಗ್ ಶುರು ಮಾಡಿದೆ, 140 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.
ಹೇಗಿದ್ದರೂ 21 ದಿನಗಳು ಲಾಕ್ ಡೌನ್ ಆದ್ದರಿಂದ ಎಲ್ಲಾ ವ್ಯವಹಾರಗಳಿಗೆ ಹಾಗೂ ಇಡೀ ದೇಶಕ್ಕೆ ರಜಾ ಘೋಷಿಸಿ ಆಗಿತ್ತು.
21 ದಿನದ ನಂತರವೂ ಕೆಲವು ತಿಂಗಳು ಲಾಕ್ ಡೌನ್ ಮುಂದುವರಿಯುತ್ತದೆ ಎಂಬ ತಜ್ಞರ ಲೇಖನಗಳು ಬರುತ್ತಿತ್ತು ಈ ಸಂದರ್ಭವೇ ಸರಿ ಅಂತ ನನ್ನ ಮಾತು ಕೇಳದ ಕೊಬ್ಬಿದ ನನ್ನ ದೇಹ ದಂಡಿಸಿ ಪಳಗಿಸುವ ಕೆಲಸ ಸೂರ್ಯೋದಯದ ಮೊದಲೆ ಪ್ರಾರಂಬಿಸಿದೆ.
ರಸ್ತೆ ಎಲ್ಲಾ ಸ್ಥಬ್ದವಾಗಿತ್ತು ... ಹಕ್ಕಿಗಳ ಕಲರವ ಬಿಟ್ಟರೆ ಊರು ನಿರ್ಜನವಾದಂತೆ ಬಾಸವಾಗುತ್ತಿತ್ತು.
ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಈ ಮೊದಲೂ ವಾಕಿಂಗ್ ಶುರು ಮಾಡುವುದು ಪ್ರಾರಂಭದ ಆರಂಭ ಶೂರತ್ವದಲ್ಲಿ ಮೊದಲ ದಿನದಿಂದಲೇ ಹೆಚ್ಚು ನಡೆಯುವುದರಿಂದ ದೇಹ ಆಯಾಸದಿಂದ ಮತ್ತು ಅಭ್ಯಾಸ ಇಲ್ಲವಾದ್ದರಿಂದ ಮರುದಿನದಿಂದಲೇ ಅಥವ ಒಂದು ವಾರಕ್ಕೆ ವಾಕಿಂಗ್ ರದ್ದಾಗುತ್ತಿತ್ತು ಇದಕ್ಕೆ ಏನೇನೋ ಸಬೂಬು ನನಗೆ ನಾನೆ ಕೊಟ್ಟುಕೊಳ್ಳುತ್ತಿದ್ದೆ.
ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷದಂತೆ ಮಾತ್ರ ನಡೆಯಲು ಶುರು ಮಾಡುವುದು, ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.
ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುತ್ತಿದ್ದೆ.
ರಸ್ತೆ ಮೇಲೆ ವಾಕಿಂಗ್ ಹೋದರೆ ಅಲ್ಲಿ ಸಿಗುವವರ ಜೊತೆ ಮಾತಿಗೆ ನಿಲ್ಲಬೇಕಾದ ಅನಿವಾಯ೯ತೆಯಿಂದ ವಾಕಿಂಗ್ ನಿರಂತರ ಆಗುವುದಿಲ್ಲ ಮತ್ತು ಇತ್ತೀಚಿನ ದಿನದಲ್ಲಿ ವಿಪರೀತ ವಾಹನಗಳ ಸಂಚಾರ ಮತ್ತು ವೇಗದ ಚಾಲನೆಯಿಂದ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಅಪಾಯ ಆದ್ದರಿಂದ ನಾನು ಮನೆಯ ಗೇಟಿನ ಒಳಗೆ ವಾಕಿಂಗ್ ಈಗಲೂ ಮಾಡುವುದು ಈಗ ಮನೆ ಹಿಂಬಾಗದ ನನ್ನ ವಾಕಿಂಗ್ ಟ್ರಾಕ್ 25 ಹೆಜ್ಜೆಯ ಉದ್ದದ್ದು.
ಶಿವಮೊಗ್ಗದಲ್ಲಿ ಮಾಜಿ ಶಾಸಕರಾಗಿದ್ದ ಶಿರನಾಳಿ ಚಂದ್ರಶೇಖರ್ ಈ ರೀತಿ ವಾಕಿಂಗ್ ಮಾಡುವುದು ನೋಡಿದ್ದೆ, ಪ್ರಸಿದ್ಧ ಜೈಲ್ ಬ್ರೇಕರ್ ಪ್ಯಾಪಿಲಾನ್ ತನ್ನ 7 ಅಡಿ ಉದ್ದದ ಜೈಲಿನ ಕೋಣೆಯಲ್ಲೇ ವಾಕಿಂಗ್ ಅಭ್ಯಾಸ ಶುರು ಮಾಡಿ ತನ್ನ ಪಿಟ್ ನೆಸ್ ಕಾಪಾಡಿಕೊಂಡ ಪುಸ್ತಕ ಕೂಡ ಪ್ರೇರಣೆ ನೀಡಿತ್ತು.
ಇದೆಲ್ಲ ಯಾಕೆ ವಿವರಿಸಿದೆ ಎಂದರೆ ವಾಕಿಂಗ್ ಟ್ರಾಕ್, ಪಾರ್ಕ್ ಅಥವ ಜನ ಸಂಚಾರವಿಲ್ಲದ ರಸ್ತೆ ಇತ್ಯಾದಿ ವಾಕಿಂಗ್ ಮಾಡಲು ಹುಡುಕಲು ಹೊರಟಿದ್ದರೆ ನಾನು ನಿರಂತರ ವಾಕಿಂಗ್ ಮಾಡುತ್ತಿರಲಿಲ್ಲ ಮತ್ತು ತೂಕ ಇಳಿಸಿಕೊಳ್ಳುತ್ತಿರಲಿಲ್ಲ.
ಅನೇಕರು ನನ್ನ ಅನುಭವ ಕೇಳಿ ಸಂಪಕ೯ ಮಾಡುವವರಿಗೆ ನಾನು ಹೇಳುವುದಿಷ್ಟೆ ಯಾವುದೇ ತಯಾರಿಗೆ ಹೋಗದೇ ಸರಳವಾಗಿ ದೃಡ ನಿದಾ೯ರ ಮಾಡಿ ಶುರು ಮಾಡಿಬಿಡಿ, ಟ್ರಾಕಿಂಗ್ ಸೂಟ್, ಬೂಟ್, ವಾಕಿಂಗ್ ಟ್ರಾಕ್ ಎಲ್ಲಾ ಬೇಕಾಗಿಲ್ಲ ಇದು ನನ್ನ ಸ್ವಂತ ಅನುಭವ.
ಇವತ್ತಿಗೆ ಲಾಕ್ ಡೌನ್ ಘೋಷಣೆಯ 4ನೇ ವರ್ಷ ಆಯಿತೆಂಬ ಸುದ್ದಿ ಜೊತೆ ನನ್ನ ವಾಕಿಂಗ್ ಪ್ರಾರಂಬಿಸಿದ ದಿನ ಎಂಬ ನೆನಪೂ ಆಯಿತು.
Comments
Post a Comment