#ನನ್ನ_ಬ್ಲಾಗ್_ಲೇಖನಗಳ_ಸಂಖ್ಯೆ_ಇವತ್ತಿಗೆ_2000
#ಕನ್ನಡದ_ಐಎಎಸ್_ಶಿವರಾಂ_ನೆನಪು_ಭಾಗ_5_ಎರಡು_ಸಾವಿರದ_ಲೇಖನ
#ನನ್ನ_ಬರವಣಿಗೆ_ನನ್ನ_ಸೀಮಿತ_ಕ್ಷೇತ್ರ_ವ್ಯಾಪ್ತಿಗೆ_ಸೇರಿದೆ
#ಕನ್ನಡದಲ್ಲಿರುವ_ಅನೇಕ_ಬ್ಲಾಗರ್_ಗಳ_ಮಧ್ಯದಲ್ಲಿ_ನಾನು_ಬರೆಯುವ_ಬ್ಲಾಗ್
#ನನ್ನದೇ_ಕೆಲವು_ಓದುಗರ_ಸಮೂಹ_ಸೃಷ್ಟಿಗೆ_ಕಾರಣವಾಗಿದೆ.
ಬರವಣಿಗೆ ನನ್ನ ಹವ್ಯಾಸ ಅದರಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ ಇದು ನನಗೆ ಹೆಚ್ಚು ತೃಪ್ತಿ ತಂದಿದೆ.
2010 ರಿಂದ ಪೇಸ್ ಬುಕ್ ಲ್ಯಾಪ್ ಟ್ಯಾಪ್ ಮೂಲಕ ಬಳಕೆ ಪ್ರಾರಂಬಿಸಿದೆ ನಂತರ ಸ್ಮಾರ್ಟ್ ಪೋನ್ ಗಳು ಅದನ್ನು ಅಕ್ರಮಿಸಿತು.
ಪ್ರಾರಂಭದಲ್ಲಿ 500 ಲೇಖನ ದಾಖಲಿಸುವ ಗುರಿ ಹೊಂದಿದ್ದು ನಂತರ 1000 ಅನಂತರ 1500 ಇವತ್ತು 2000 ತಲುಪಿದೆ ಇದಕ್ಕೆ ಎಂಟು ವರ್ಷ ಬೇಕಾಯಿತು.
ನನ್ನ ಮಾತೃ ಭಾಷೆ ಕನ್ನಡದ ಬ್ಲಾಗ್ ನಲ್ಲಿ ನಾನು ಆಹಾರ-ಸಂದರ್ಶನ - ಹಳೆ ನೆನಪು - ವ್ಯಕ್ತಿ ವಿಶೇಷ - ನನ್ನ ಅತಿಥಿಗಳು - ನನ್ನ ಜೀವನದ ಅನುಭವ - ನನ್ನ ಅಡುಗೆ- ಸಾಹಿತ್ಯ-ರಾಜಕಾರಣ - ಇತಿಹಾಸ -ತರಕಾರಿ-ಹಣ್ಣು-ತಂಪು ಪಾನಿಯ-ರೆಸಿಪಿ ಹೀಗೆ ನನಗೆ ಸಂಬಂಧಿಸಿದ ನನ್ನ ವ್ಯಾಪ್ತಿಯ ನನ್ನ ಲೇಖನಗಳನ್ನು ದಾಖಲಿಸುತ್ತಾ ಬಂದೆ.
ಯಾರಿಗೂ ಅವಮಾನ ಮಾಡಬಾರದು, ನೋಯಿಸಬಾರದು, ಕೆಟ್ಟ ಪದ ಬಳಸಬಾರದು ಮತ್ತು ಪ್ರತಿ ಲೇಖನದಲ್ಲಿ ನೀತಿ ಪಾಠದ ಸಾರಂಶ ಇರಬೇಕು ಎಂಬುದು ನನ್ನ ಬರವಣಿಗೆಯ ಚೌಕಟ್ಟು.
ನಾನು ಬರೆದ ಎಲ್ಲಾ ಲೇಖನಗಳು ಸಾರ್ವಜನಿಕರಿಗೆ ಮುಕ್ತ ಇದನ್ನು ಯಾರೂ ಬೇಕಾದರೂ ಎಷ್ಟು ಸಾರಿ ಬೇಕಾದರೂ ಮರುಪ್ರಕಟಿಸಿಕೊಳ್ಳಲು ನನ್ನ ಅನುಮತಿ ಬೇಕಾಗಿಲ್ಲ ಅಷ್ಟೇ ಅಲ್ಲ ಮರು ಪ್ರಕಟನೆಯಲ್ಲಿ ಮೂಲ ಲೇಖಕನಾದ ನನ್ನ ಹೆಸರು ನಮೂದಿಸದಿದ್ದರೂ ಅಭ್ಯಂತರ ಇರುವುದಿಲ್ಲ.
ಈ ಲಿಂಕ್ ಕ್ಲಿಕ್ ಮಾಡಿ ನನ್ನ ಬ್ಲಾಗ್ ನ 2000 ಲೇಖನ ಓದಬಹುದು https://arunprasadhombuja.blogspot.com/2024/03/blog-number-2000-5.html
Comments
Post a Comment