Blog number 2035.ಕೊರಾನಾ ನೆನಪುಗಳ ಡೈರಿ - 12. ಲಾಕ್ ಡೌನ್ ಜನಸ್ಥಬ್ದತೆ, ನಿಶ್ಯಬ್ದಗಳು ಕಾಗೆಗಳಿಗೆ ಅಪಾಯ ಅನ್ನಿಸಿ ಕೆಲ ದಿನ ಊರುಗಳಿಂದ ದೂರವೇ ಉಳಿದಿದ್ದವು
#ಕೊರಾನ_ನೆನಪುಗಳ_ಡೈರಿ_12.
#ಜನವಸತಿ_ಪ್ರದೇಶದ_ಸಂಚಾರ_ಸ್ಥಬ್ದವಾಗಿದ್ದು_ಅವುಗಳಿಗೆ_ಅಪಾಯ_ಅನ್ನಿಸಿರಬೇಕು
#ಲಾಕ್_ಡೌನ್_ಪರಿಸರ_ಕಾಗೆಗಳನ್ನ_ಭಯಪಡಿಸಿತ್ತಾ ...
#ಲಾಕ್_ಡೌನ್_ಮರುದಿನದಿಂದ_ಕಾಗೆಗಳು_ಊರಲ್ಲಿ_ಕಾಣಿಸಿಕೊಳ್ಳಲೇ_ಇಲ್ಲ
#ಕೆಲವು_ದಿನಗಳ_ನಂತರ_ಯಥಾಸ್ಥಿತಿಗೆ
#ಇದನ್ನು_28_ಮಾರ್ಚ್_2020ರಂದು_ದಾಖಲಿಸಿದ್ದೆ
ಮೊನ್ನೆಯಿ೦ದ ಲಾಕ್ ಡೌನ್ ಆದಾ೦ಗಿ೦ದ ಶಬ್ದಮಾಲಿನ್ಯ ಕಡಿಮೆ ಆಯಿತು ಮನೆಯ ಗಡಿಯಾರದ ಮುಳ್ಳಿನ ಟಿಕ್.. ಟಿಕ್..ಶಬ್ದದ ಚಲನೆ ದಶಕದ ಮೇಲೆ ಕೇಳಿತು! ದೂರದ ಚಚಿ೯ನ ಗOಟೆ ಕೇಳುತ್ತಲೇ ಇರಲಿಲ್ಲ ಈಗ ಕೇಳುತ್ತಿದೆ
ಪರಿಸರದ ಹಕ್ಕಿಗಳ ಕಲರವ ಊರಿ೦ದ ದೂರದ ಜಮೀನಿನಲ್ಲಿ ಮಾತ್ರ ಕೇಳುವುದು ಈಗ ಮನೇಯಲ್ಲೇ ಕೇಳುವಂತಾಯಿತು.
ರಾತ್ರಿ 12 ಆದರೂ ಊರ ರಸ್ತೆ ಗಿಜಿಗಿಜಿ ಆಗಿರುತ್ತಿತ್ತು, ನಮ್ಮ ಮನೆ ನಾಲ್ಕು ರಸ್ತೆ ಸೇರುವ ಯಡೇಹಳ್ಳಿವೃತ್ತದಲ್ಲಿ ಇದೆ, NH 206 ಮತ್ತು ರಾಣಿ ಬೆನ್ನೂರು To ಬೈoದೂರು ರಾ.ಹೆದ್ದಾರಿ 766 C ಹಾಗೂ ತೀಥ೯ಹಳ್ಳಿ ಸಂಪಕ೯ ರಸ್ತೆ ಜಿಲ್ಲಾ ಮುಖ್ಯ ರಸ್ತೆ ರಾತ್ರಿ ಹಗಲು ಸಂಚರಿಸುವ ವಾಹನಗಳಿ೦ದ ತುಂಬಿರುತ್ತಿತ್ತು.
ಈಗ ಸೂಯ೯ ಅಸ್ತ ನಿದಾನ ಸಂಜೆ 7 ರ ನಂತರ, ಊರು ಮತ್ತು ರಸ್ತೆಗಳು ಬಿಕೋ ಅನ್ನುತ್ತಿದೆ, ರಾತ್ರಿ ಎಲ್ಲಾ ಸಂಚರಿಸುವವರನ್ನ ಅನುಮಾನದಿಂದ ಎಚ್ಚರಿಸುತ್ತಿದ್ದ ಸಾಕು ನಾಯಿ ಮತ್ತು ಬೀದಿ ನಾಯಿಗಳು ಯಾರದ್ದು ಸಂಚಾರ ಇಲ್ಲದ್ದು ನೋಡಿ ಊಳಿಡುವುದಕ್ಕೆ ವಿರಾಮ ಕೊಟ್ಟಿದೆ.
ಇದರ ಮಧ್ಯೆ ನನ್ನ ಗಮನಕ್ಕೆ ಬಂದದ್ದು ಇದ್ದಕ್ಕಿದ್ದ೦ತೆ ನಮ್ಮ ಊರಲ್ಲಿ ಸೂಯ೯ ಉದಯಿಸಲು ಕಾ ಕಾ ಅನ್ನುತ್ತಿದ್ದ ಕಾಗೆಗಳು ಈಗ ಕಾಣುತ್ತಿಲ್ಲ ಏಕೆ? ಮೊದಲೆಲ್ಲ ತಂಡ ಕಟ್ಟು ಕೊಂಡು ಹಾರಾಟ ಕೂಗಾಟ ಈಗ ಕೇಳಿ ಬರುತ್ತಿಲ್ಲ ಇವತ್ತು ಬಾನುವಾರ ಎಲ್ಲೊ ಒಂದು ಕಾಗೆ ಕೂಗು ಕೇಳಿತು.
ಜನರ ಸಂಚಾರ ಇದ್ದಕ್ಕಿದ್ದ೦ತೆ ಕಡಿಮೆ ಆಗಿ ಶಬ್ದ ಮಾಲಿನ್ಯ ಇಲ್ಲವಾಗಿದ್ದು ಅವುಗಳಿಗೆ ಎಚ್ಚರಿಕೆ ಗಂಟೆ ಆಗಿರಬೇಕು, ಈ ನಿಶ್ಯಬ್ದ ಅವುಗಳಿಗೆ ಅನುಮಾನ ಅನ್ನಿಸಿತಾ? ಭಯ ಆಯಿತಾ?... ಬಹುಶಃ ಪ್ರತಿಯೊಂದನ್ನು ನಂಬದೆ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಪಕ್ಷಿ ಪ್ರಾಣಿಗಳಿಗೆ ಇದ್ದಕ್ಕಿದ್ದಂತೆ ಜನವಸತಿ ಪ್ರದೇಶದಲ್ಲಿ ನಿತ್ಯದ ಸಂಚಾರ ಸ್ಥಬ್ದವಾಗಿದ್ದು ಅಪಾಯ ಎಂದು ಗುರುತಿಸಿರಬೇಕು.
ನಿಮ್ಮ ಊರಲ್ಲಿ ಕಾಗೆಗಳ ವತ೯ನೆ ಗಮನಿಸಿ ಬದಲಾಗಿದ್ದರೆ ಪ್ರತಿಕ್ರಿಯಿಸಿ.
Comments
Post a Comment