#ನಮ್ಮ_ಶಂಭೂರಾಮನ_ಹುಟ್ಟು_ಹಬ್ಬ
#ಮಾರ್ಚ್_23ಕ್ಕೆ_ಮೂರು_ವರ್ಷ_ತುಂಬಿತು
#ನನ್ನ_ನಿತ್ಯ_ವಾಕಿಂಗ್_ಸಂಗಾತಿ
#ನನ್ನ_ಸ್ಥೂಲಕಾಯ_ನಿವಾರಣೆಗೆ_ಸಹಕಾರಿ
#ನನ್ನ_ಪ್ರೀತಿಯ_ಶಂಭೂರಾಮ
https://youtu.be/dCX_rRvvjAI?feature=shared
2021 ರಲ್ಲಿ ಬೆಂಗಳೂರಿಂದ ಶಂಭೂರಾಮ ಬರುವಾಗ ಒಂದು ತಿಂಗಳ ಮಗು ಅವನ ಜನ್ಮ ದಿನಾಂಕ 23 ಮಾರ್ಚ್ 2021 ಈ ವರ್ಷದ 23 ಮಾರ್ಚ್ 2024 ಕ್ಕೆ ಅವನಿಗೆ ಪೂರ್ತಿ ಮೂರು ವರ್ಷ ತುಂಬುತ್ತದೆ.
ಆದ್ದರಿಂದ ಶಂಭೂರಾಮನ ಹುಟ್ಟು ಹಬ್ಬ ಆದರೆ ನಾವ್ಯಾರೂ ನಮ್ಮ ಮನೆಯಲ್ಲಿ ನಮ್ಮ ನಮ್ಮ ಹುಟ್ಟುಹಬ್ಬ ಆಚರಣೆಯೇ ಮಾಡದಿರುವುದರಿಂದ ಶಂಭೂರಾಮನ ಹುಟ್ಟು ಹಬ್ಬದ ಆಚರಣೆ ಕೂಡ ಇಲ್ಲ ಆದರೆ ಅವನು ಪ್ರೌಡಾವಸ್ಥೆಯ ತಲುಪುವ ಕಾಲಮಾನಗಳ ಮಾನಿಟರಿಂಗ್ ಮಾಡುವುದರಿಂದ ಅವನ ಹುಟ್ಟು ಹಬ್ಬದ ದಿನಾಂಕ ಮರೆಯುವುದಿಲ್ಲ.
ನನ್ನ ಜೀವನದಲ್ಲಿ ನನ್ನ ಮಿತಿಮೀರಿದ ನಿಯಂತ್ರಣ ತಪ್ಪಿದ ತೂಕ ಇಳಿಸುವಲ್ಲಿ ಶಂಭೂರಾಮನ ಸಹಾಯ ನಾನು ಮರೆಯಲು ಸಾಧ್ಯವೇ ಇಲ್ಲ, ನಿತ್ಯ ಬೆಳಗಿನ ವಾಕಿಂಗ್ ನಿರಂತರವಾಗಿ ನಡೆಯುವಂತೆ ಯಾವ ಕಾರಣಕ್ಕೂ ತಪ್ಪಿಸದಂತೆ ಶಂಭೂರಾಮ ನನ್ನನ್ನ ಹಾಸಿಗೆಯಿಂದ ಎಬ್ಬಿಸುತ್ತಾನೆ..
ತಮಾಷೆಗಾಗಿ ಅವನ ಮುಖ ತೊಳೆಯುವ ಕ್ರಮ ಈಗ ನಿತ್ಯದ ಅಭ್ಯಾಸ ಆಗಿದೆ, ವಾಕಿಂಗ್ ಪ್ರಾರಂಭದ ಮೊದಲು ಎಲ್ಲಾ ಗೇಟುಗಳನ್ನ ಲಾಕ್ ಮಾಡುವಾಗ ಶಂಭೂರಾಮ ತನ್ನ ನಿರ್ದಿಷ್ಟವಾದ ಎತ್ತರದ ಫೀಠದಲ್ಲಿ ಕುಳಿತು ಕೊಳ್ಳುತ್ತಾನೆ ನಿತ್ಯ ಅವನಿಗಾಗಿ ಮನೆಯಿಂದ ತರುವ ಸೌತೆಕಾಯಿ ತುಂಡುಗಳು ಒಂದೊಂದೇ ಅವನು ನೀಡುವ ಥ್ಯಾಂಕ್ಸ್ ಗೆ ಲಂಚವಾಗಿ ಪಡೆಯುತ್ತಾನೆ.
ಅವನಿಗೆ ನಂತರದ ಒಂದು ಗಂಟೆಯ ವಾಕಿಂಗ್ ಕಾಲಾವದಿಯಲ್ಲಿ ಮತ್ತು ನಂತರದ ನನ್ನ ಗಾರ್ಡನ್ ಗಿಡಗಳಿಗೆ ನೀರುಣಿಸುವ ಸಮಯ ನನಗೆ ಅವನು ಜೊತೆಯಾಗಿ ನನ್ನ ಆಯಾಸಗಳ ಮರೆಸುತ್ತಾನೆ ನಂತರ ಅವನ ಕಾಲು ತೊಳೆಸಿ ಮನೆಗೆ ಕರೆದುಕೊಂಡು ಹೋದ ಮೇಲೆ ಶಂಭೂರಾಮ ತಣ್ಣನೆಯ ಒಂದು ಲೋಟ ಹಾಲು ಕುಡಿಯುತ್ತಾನೆ, ನಾನು ಕಾಫಿ ಜೊತೆಗೆ ಹಣ್ಣು ತಿನ್ನುವಾಗ ಅದರಲ್ಲೂ ಶಂಭೂ ಪಾಲು ಕೇಳುತ್ತಾನೆ.
ನಾನು ಸಿದ್ದ ಸಮಾದಿ ಯೋಗದ ವ್ಯಾಯಾಮ, ಪ್ರಾಣಯಾಮ, ಕಪಾಲಬಾತಿ ಮತ್ತು ದ್ಯಾನ ಮುಗಿಸಿ ಏಳುವಾಗ ಶಂಭೂರಾಮ ಗಾಡ ನಿದ್ದೆಯಲ್ಲಿರುತ್ತಾನೆ.
ಹೀಗೆ ನನ್ನ ತೂಕ 140 ಕೇಜಿಯಿಂದ 107ಕ್ಕೆ ಇಳಿಸುವ ಕಷ್ಟದ ಕೆಲಸ ಸುಖಮಯಗೊಳಿಸಿದ ನನ್ನ ಹಳಿ ತಪ್ಪಿದ ಆರೋಗ್ಯ ಸರಿ ದಾರಿಗೆ ತರಲು ಕಾರಣನಾದ ಶಂಭೂರಾಮನ ನಾನು ನನ್ನ ಜೀವಮಾನದಲ್ಲಿ ಮರೆಯಲಾರೆ.
ಮೂಕ ಪ್ರಾಣಿಯ ಸ್ವಾಮಿನಿಷ್ಠೆ -ಪ್ರೀತಿಗೆ ಬೆಲೆಕಟ್ಟಲಾಗದು ಹೀಗೆ ಸಾಗಿದೆ ನನ್ನ ಮತ್ತು ಶಂಭೂರಾಮನ ಗೆಳೆತನದ ಸಾಂಗತ್ಯ.
Comments
Post a Comment