Blog number 1988. ನಮ್ಮ ಸಂಸ್ಥೆ ಮಲ್ಲಿಕಾ ವೆಜ್ ನಲ್ಲಿ ಗಿಣ್ಣ ಲಾಂಚ್ ಮಾಡಿದ ಡಿಜಿಟಲ್ ಮಾಧ್ಯಮದ ನಂದಿನಿ ಆಕರ್ಷ್ ದಂಪತಿಗಳು
#ನಮ್ಮ_ಮಲ್ಲಿಕಾ_ವೆಜ್_ನಲ್ಲಿ
#ನಿತ್ಯ_ವಿಶೇಷ_ಗಿಣ್ಣ_ತಯಾರಾಗುತ್ತದೆ.
#ಗಿಣ್ಣ_ಪ್ಲೇಟಿಗೆ_50_ರೂಪಾಯಿ
#ಜಾಸ್ತಿ_ಪ್ರಮಾಣದಲ್ಲಿ_ಬೇಕಾದರೆ_ಒಂದು_ದಿನ_ಮೊದಲೇ_ಆರ್ಡರ್_ಮಾಡಬಹುದು
#ಗಿಣ್ಣ_ಲಾಂಚ್_ಮಾಡಿದವರು_ನಮ್ಮ_ವಿಶೇಷ_ಅತಿಥಿಗಳಾದ_ಡಿಜಿಟಲ್_ಮಾಧ್ಯಮದ
#ಶ್ರೀಮತಿನಂದಿನಿಆಕರ್ಷ್
#ಆಕರ್ಷ್_ಅವರ_ಹೆಸರಿನಂತೆ_ಆಕರ್ಷವಾಗಿ_ನಮ್ಮ_ಸಂಸ್ಥೆಗೆ_ತಯಾರಿಸಿ_ಕೊಟ್ಟ_ವಿಡಿಯೋ_ನೋಡಿ.
ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಮಲ್ಲಿಕಾ ವೆಜ್ ನಲ್ಲಿ ಗ್ರಾಹಕರಿಗೆ ವಿಶೇಷವಾದ ಸಿಹಿ ತಿನಿಸು ಗಿಣ್ಣ ನೀಡಬೇಕೆಂಬ ತೀಮಾ೯ನ ಮಾಡಿದ್ದೆ.
ಈ ತೀರ್ಮಾನಕ್ಕೆ ಒಂದು ಕಾರಣವೂ ಇದೆ ಅದೇನೆಂದರೆ ನಾನು ಗಿಣ್ಣದ ಬಗ್ಗೆ ಒಂದು ಲೇಖನ ಪೋಸ್ಟ್ ಮಾಡಿದ್ದೆ ಆ ಲೇಖನಕ್ಕೆ ವಿಜಯವಾಣಿ ಪತ್ರಿಕೆಯ ಶೃಂಗೇರಿ ಚಂದ್ರಶೇಖರ್ ಪತ್ನಿ ಸರೋಜ ಚಂಗೋಲಿ ಅವರು "ನಿಮ್ಮ ಮಲ್ಲಿಕಾ ವೆಜ್ ನಲ್ಲಿ ಈಗಾಗಲೇ ಹಲಸಿನ ಎಲೆ ಕೊಟ್ಟೆ ಕಡಬು ಪ್ರಸಿದ್ದಿ ಆಗಿದೆ ಅದರ ಜೊತೆ ಈ ವಿಶೇಷ ಖಾದ್ಯವಾದ ಗಿಣ್ಣ ಕೂಡ ಗ್ರಾಹಕರಿಗೆ ಸಿಗುವಂತಾಗಲಿ" ಎಂದು ಪ್ರತಿಕ್ರಿಯಿಸಿದ್ದರು.
ಇದು ನನಗೂ ಸೂಕ್ತ ಅನ್ನಿಸಿದ್ದರಿಂದ ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಸಿ ನಿತ್ಯ ಗ್ರಾಹಕರಿಗೆ ಗಿಣ್ಣ ಸರಬರಾಜು ಮಾಡುವ ಅಹ೯ತೆ ಗಳಿಸಿದ್ದೆ.
ಈಗ ದಿನಕ್ಕೆ ಒಂದು ಕ್ವಿಂಟಾಲ್ ಗಿಣ್ಣ ಬೇಕಾದರೂ ನಾವು ಸುಲಭವಾಗಿ ತಯಾರಿಸಿ ಕೊಡಲು ಸಿದ್ದರಿದ್ದೇವೆ ಈ ಸಂದರ್ಭದಲ್ಲಿಯೇ ನಮ್ಮ ಅತಿಥಿಗಳಾಗಿ ಬಂದವರು ಡಿಜಿಟಲ್ ಮಾಧ್ಯಮದ ಆಕರ್ಷ್ ಮತ್ತು ನಂದಿನಿ ದಂಪತಿಗಳು ಅವರು ಶಿವಮೊಗ್ಗ ಜಿಲ್ಲೆಯ ಇತಿಹಾಸದ ಬಗ್ಗೆ ಅವರ ಚಾನಲ್ ನಲ್ಲಿ ಸುದ್ದಿ ಮಾಡುವ ಉದ್ದೇಶ ಅವರದ್ದು ನಾನು ಅವರ ಚಾನಲ್ ನ ಟಾಪ್ ಫ್ಯಾನ್.
ಆದ್ದರಿಂದ ಅವರ ನನ್ನ ಪರಿಚಯದ ನೆನಪು ಚಿರಸ್ಥಾಯಿಗೊಳಿಸಲು ಅವರಿಂದಲೇ ನಮ್ಮ ಮಲ್ಲಿಕಾ ವೆಜ್ ನಲ್ಲಿ ಗಿಣ್ಣ ಲಾಂಚ್ ಮಾಡಿಸಿದ್ದೇನೆ ಅವರು ಈ ಬಗ್ಗೆ ತಮ್ಮ ಪೋಸ್ಟ್ ನಲ್ಲೂ ಬರೆದಿದ್ದಾರೆ.
ನಮ್ಮ ಮಲ್ಲಿಕಾ ವೆಜ್ ನಲ್ಲಿ ನಿತ್ಯ ಗಿಣ್ಣ ಸಿಗುತ್ತದೆ, ಒಂದು ಪ್ಲೇಟ್ ಗಿಣ್ಣ ರೂ 50 ನಿಗದಿ ಮಾಡಲಾಗಿದೆ,ದೊಡ್ಡ ಪ್ರಮಾಣದಲ್ಲಿ ಗಿಣ್ಣ ಬೇಕಾದರೆ ಒಂದು ದಿನ ಮೊದಲೇ ಆರ್ಡರ್ ಮಾಡಿದರೆ ತಯಾರಿಸಿ ಕೊಡುತ್ತೇವೆ.
ಇನ್ನೊಂದು ವಿಶೇಷ ಎಂದರೆ ಡಿಜಿಟಲ್ ಮಾಧ್ಯಮ ಸಂಸ್ಥೆಯ ಆಕರ್ಷ್ ನಮ್ಮ ಪ್ರಾಪರ್ಟಿಯ ವಿಡಿಯೋ ಡ್ರೋನ್ ಪೋಟೋಗ್ರಾಪ್ ಅವರ ಹೆಸರಿನಂತೆ ಆಕರ್ಷವಾಗಿ ಮಾಡಿದ್ದಾರೆ ಇದನ್ನು ನೋಡಿ ನನಗೇ ಆಶ್ಚರ್ಯ ಆಕಾಶದಿಂದ ನಮ್ಮ ಕಲ್ಯಾಣ ಮಂಟಪ, ಲಾಡ್ಜ್, ಕಾಟೇಜ್, ಮಲ್ಲಿಕಾ ವೆಜ್, ಚಂಪಕಾ ಪ್ಯಾರಾಡೈಸ್ ಮತ್ತು ನಮ್ಮ ಮನೆಗಳು ಹೀಗಿದೆಯಾ ಅಂತ ಮತ್ತು ನಮ್ಮ ಯಡೇಹಳ್ಳಿ ವೃತ್ತ ರಸ್ತೆಗಳು ಕೆರೆಗಳು ಇವೆಲ್ಲ ಅವರ ಕಲಾತ್ಮಕ ಪೋಟೋಗ್ರಫಿಯಲ್ಲಿ ಸುಂದರವಾಗಿ ಮೂಡಿ ಬಂದಿದೆ.
Comments
Post a Comment