Blog number 1982.ಶ್ರೀವರಸಿದ್ದಿ ವಿನಾಯಕ ಸ್ವಾಮಿ ರಥ ರಾಜ ಬೀದಿ ಉತ್ಸವಕ್ಕೆ ತಡೆಯಾದ ರೈಲ್ವೇ ಬ್ಯಾರಿಕೇಡ್ ಮತ್ತು ಅದರ ನಿವಾರಣೆಗಾಗಿ ರಥ ಮಾರ್ಪಾಡು.
#ನಮ್ಮ_ಊರಿನ_ಜಾತ್ರೆಯ_ಝಲಕ್_ಗಳು
#ರಥ_ರಾಜ_ಬೀದಿ_ಉತ್ಸವಕ್ಕೆ_ತಡೆ_ತಂದ_ರೈಲ್ವೆ_ಬ್ಯಾರಿಕೇಡ್
#ಹದಿನೇಳು_ವರ್ಷದಿಂದ_ನಿಗದಿಪಡಿಸಿದ_ರಥ_ರಾಜ_ಬೀದಿ_ಉತ್ಸವ
#ಯಶಸ್ವಿ_18ನೇ_ವರ್ಷದ_ರಥ_ರಾಜ_ಬೀದಿ_ಉತ್ಸವಕ್ಕಾಗಿ_ರಥ_ವಿನ್ಯಾಸ_ಮಾರ್ಪಾಡು.
#ಬ್ರಾಡ್_ಗೇಜ್_ವಿದ್ಯುದೀಕರಣದಿಂದ_ರೈಲ್ವೇ_ಗೇಟ್_ನಲ್ಲಿ
#ನಿಗದಿತ_ಎತ್ತರದ_ವಾಹನಕ್ಕೆ_ಮಾತ್ರ_ಅವಕಾಶ_ನೀಡುವ_ಬ್ಯಾರಿಕೇಡ್_ಅಳವಡಿಸಿದ್ದಾರೆ.
https://youtu.be/2zBvgStBD8U?feature=shared
ಈ ವರ್ಷದ ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ಸ್ವಾಮಿ ಬ್ರಹ್ಮರಥೋತ್ಸವ ಕಳೆದ ತಿಂಗಳು (13- ಪೆಬ್ರವರಿ - 2024 ಮಂಗಳವಾರ) ಭಕ್ತಿಪೂರ್ವಕವಾಗಿ ನೆರವೇರಿತು.
ದೇವಾಲಯ ಪ್ರಾರಂಭದ ವರ್ಷದಿಂದ ದೇವಾಲಯದ ಟ್ರಸ್ಟ್ ನ ಗೌರವಾಧ್ಯಕ್ಷರಾದ #ಡಾ_ಎನ್_ಎಸ್_ವಿಶ್ವಪತಿ_ಶಾಸ್ತ್ರಿಗಳು ದೇವಾಲಯದ ಎಲ್ಲಾ ಆಚರಣೆಗಳನ್ನು ನಿಗದಿ ಮಾಡಿದ್ದಾರೆ ಅದರಂತೆ ದೇವಾಲಯದ ನಿತ್ಯಪೂಜೆ, ಪ್ರತಿ ತಿಂಗಳ ಸಂಕಷ್ಟಹರ ಚತುರ್ಥಿ, ವಾರ್ಷಿಕೋತ್ಸವ ಮತ್ತು ರಥೋತ್ಸವ ಜರುಗುತ್ತದೆ.
ರಥ ರಾಜಬೀದಿ ಉತ್ಸವ ದೇವಾಲಯ ಇರುವ ಹೊಸನಗರ ರಸ್ತೆಯಿಂದ ಯಡೇಹಳ್ಳಿ ವೃತ್ತ ಇರುವ ರಾ.ಹೆ 69 ರವರೆಗೆ ನೆರವೇರುತ್ತದೆ ಮಾರ್ಗ ಮಧ್ಯದಲ್ಲಿ ಶಿವಮೊಗ್ಗ ತಾಳಗುಪ್ಪದ ರೈಲ್ವೆ ಬ್ರಾಡ್ ಗೇಜ್ ಮಾರ್ಗದ ಗೇಟು ಇದೆ ಈ ವರ್ಷ ಈ ಮಾರ್ಗ ವಿದ್ಯುದೀಕರಣಗೊಳಿಸಿದ್ದರಿಂದ ನಿಗದಿತ ಎತ್ತರದ ವಾಹನ ಮಾತ್ರ ಸಂಚರಿಸುವಂತೆ ಬ್ಯಾರಿಕೇಡ್ ನಿಮಿ೯ಸಿದ್ದಾರೆ.
ಇದರಲ್ಲಿ 15 ಅಡಿಗಿಂತ ಎತ್ತರದ ವಾಹನ ಸಂಚಾರ ಸಾಧ್ಯವಿಲ್ಲ ಆದರೆ ನಮ್ಮ ರಥ 21 ಅಡಿ ಎತರ ಇದೆ ಮತ್ತು ರಥದ ಕಲಶ ಎರೆಡು ಅಡಿ ಸೇರಿದರೆ 23 ಅಡಿ ಇದೆ.
ಇದರಿಂದ ನಿಗದಿಪಡಿಸಿದ ರಥ ರಾಜ ಬೀದಿ ಉತ್ಸವ ನಡೆಯುವ ಬಗ್ಗೆ ಗೊಂದಲ ಇತ್ತು ಇದನ್ನು ಸರಾಗವಾಗಿ ಬಗೆ ಹರಿಸಿ ಕೊಟ್ಟವರು ಆನಂದಪುರಂನ #ನರಸಿಂಹಾಚಾರ್ ಮತ್ತು ನಮ್ಮ ದೇವಾಲಯದ ರಥ ಶಿಲ್ಪಿ #ವೆಂಕಟ್ರಮಣ_ಆಚಾರ್,
ಸುಮಾರು ಆರು ಅಡಿ ರಥ ಎತ್ತರ ಕಡಿತ ಗೊಳಿಸಿದರೂ ರಥದ ಎರೆಡು ಅಡಿ ಎತ್ತರದ ಕಲಶ ರೈಲ್ವೆ ಬ್ಯಾರಿಕೇಡ್ ದಾಟಿಸಲು ತಡೆಯುವ ಸಮಸ್ಯೆಗೆ ನನ್ನದೊಂದು ಸಲಹೆ ಅವರಿಗೆ ಸಮಾದಾನ ಆಯಿತು ಅವರಂತೆ ರಥದ ಕಲಶ ಏರಿಸುವ ಮತ್ತು ಇಳಿಸುವ ಸುಲಭ ವ್ಯವಸ್ಥೆ ಮಾಡಿದರು.
ದೇವಾಲಯದಿಂದ ರಥ ರಾಜ ಬೀದಿ ಉತ್ಸವ ರೈಲ್ವೆ ಗೇಟ್ ಗೆ ಸಮೀಪಿಸಿದಾಗ ರಥದಲ್ಲಿರುವ ಅರ್ಚಕರು ಕಳಶ ಅಳವಡಿಸಿದ ಪೈಪ್ ಸುಲಭವಾಗಿ ಇಳಿಸಿ ರೈಲ್ವೆ ಗೇಟಿನ ಬಾರಿಕೇಡ್ ದಾಟಿದ ಮೇಲೆ ಯಥಾ ಸ್ಥಿತಿಗೆ ಏರಿಸುವಂತೆ ವ್ಯವಸ್ಥೆ ಅಳವಡಿಸಿದ್ದಾರೆ.
ಇದರಿಂದ ಈ ವಷ೯ದ ರಥೋತ್ಸವ ಸಾಂಗವಾಗಿ ನೆರವೇರಿತು, ಮುಂದಿನ ವರ್ಷಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದೆ ನಿರಾತಂಕವಾಗಿ ರಥೋತ್ಸವ ನಡೆಯಲಿದೆ.
Comments
Post a Comment