Blog number 1995. ಶಿವಮೊಗ್ಗ ಲೋಕ ಸಭಾ ಚುನಾವಣೆ 2024 ರಾಜಧಾನಿಯ ಪತ್ರಕರ್ತರ ಪ್ರಶ್ನೆಗಳಿಗೆ ನನ್ನ ಗ್ರೌಂಡ್ ರಿಯಾಲಿಟಿ ಉತ್ತರ
#ಲೋಕಸಭಾ_ಚುನಾವಣೆ_ಬಂತು
#ರಾಜದಾನಿಯ_ಕೆಲ_ಪತ್ರಕರ್ತರ_ಪ್ರಶ್ನೆಗಳಿಗೆ_ನನ್ನ_ವೈಯಕ್ತಿಕ_ಉತ್ತರ
#ಶಿವಮೊಗ್ಗ_ಲೋಕಸಭಾ_ಅಭ್ಯರ್ಥಿಗಳು
#ಗ್ರೌಂಡ್_ರಿಯಾಲಿಟಿಗಳ_ಮಾಹಿತಿ_ಕೇಳುತ್ತಾರೆ
#ನನ್ನ_ಪ್ರಶ್ನೆ_ಅವರಿಗೆ_ರಾಜಕೀಯ_ಪಕ್ಷಗಳ_ಸರ್ವೆ_ಬಗ್ಗೆ.
ನಮ್ಮ ರಾಜ್ಯದ ರಾಜದಾನಿಯ ಕೆಲ ಪತ್ರಕರ್ತರು ಚುನಾವಣೆ ಬಂದಾಗೆಲ್ಲ ನಮ್ಮ ಶಿವಮೊಗ್ಗ ಜಿಲ್ಲೆಯ ಮಾಹಿತಿ ಇತ್ಯಾದಿ ಗ್ರೌಂಡ್ ರಿಯಾಲಿಟಿಗೆ ಪ್ರಶ್ನೆ ಕೇಳುವುದು ಅದಕ್ಕೆ ನನ್ನದೇ ದೃಷ್ಟಿಕೋನದಲ್ಲಿ ಉತ್ತರಿಸುವುದು.
ಅದರಂತೆ ನಿನ್ನೆಯ ಪ್ರಶ್ನೆಗಳು.....
1. ಹಾಲಿ ಸಂಸದ #ಬಿವ್ಯೆ_ರಾಘವೇಂದ್ರರ ಬಗ್ಗೆ
ನನ್ನ ಉತ್ತರ ಹೆಸರು ಕೆಡಿಸಿ ಕೊಂಡಿಲ್ಲ, ರೈಲು - ರಾಷ್ಟ್ರೀಯ ಹೆದ್ದಾರಿ- ವಿಮಾನಗಳಿಂದ ಕೆಲಸಗಾರ ಎಂದಾಗಿದೆ, ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ, ಕಳೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಭರಪೂರ ಮತಗಳಿಸಿದ ದಾಖಲೆ ಇದೆ.
ಈ ಭಾರಿ ಬಿಜೆಪಿ ಶಾಸಕರು ಪ್ರತಿನಿದಿಸುವ ಕ್ಷೇತ್ರದಲ್ಲಿ ಬಹುಮತ ಕಾಪಾಡಿಕೊಂಡು ಉಳಿದ ಕಾಂಗ್ರೇಸ್ ಪ್ರತಿನಿದಿಸುವ ಕ್ಷೇತ್ರದಲ್ಲಿ ಕೂಡ ಹೆಚ್ಚು ಮತ ಪಡೆದರೆ ಗೆಲುವು ಸಾಧ್ಯವಿದೆ.
ಪ್ರತಿ ಸ್ಪರ್ದಿಯನ್ನು ತಪ್ಪಾಗಿ ಅಂದಾಜಿಸಿದರೆ, ಕಾರ್ಯಕರ್ತರು ಅತಿ ವಿಶ್ವಾಸದಿಂದ ಕೆಲಸ ಕಡಿಮೆ ಮಾಡಿದರೆ ಪಲಿಶಾಂಶದ ಮೇಲೆ ಪರಿಣಾಮ ಬೀರಬಹುದು.
2. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರಿ, ಜಿಲ್ಲಾ ಮಂತ್ರಿ ಮದು ಬಂಗಾರಪ್ಪ ಸಹೋದರಿ, ಖ್ಯಾತ ಚಲನ ಚಿತ್ರ ನಟ ರಾಜಕುಮಾರರ ಪುತ್ರ ನಟ ಶಿವರಾಜ್ ಕುಮಾರ್ ಪತ್ನಿ #ಗೀತಾಶಿವರಾಜಕುಮಾರ್ ಬಗ್ಗೆ
ಇವರು ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ 2014ರಲ್ಲಿ ಯಡೂರಪ್ಪನವರು ಕೆಜೆಪಿ ಪಕ್ಷ ತ್ಯಜಿಸಿ ಬಿಜೆಪಿಯಿಂದ ಮೋದಿ ಅಲೆಯಲ್ಲಿ ಕೆಲವು ಲಕ್ಷ ಅಂತರದಿಂದ ಆಗಿನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ವಿರುದ್ದ ಗೆದ್ದಿದ್ದರು ಅದೇ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಮೂರನೆ ಸ್ಥಾನ ಪಡೆದಿದ್ದರು ಆಗ ಮದು ಬಂಗಾರಪ್ಪ ಯುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು,
ಮದು ಬಂಗಾರಪ್ಪ 2019 ರಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರವಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರ ವಿರುದ್ದ ಪರಾಭವಗೊಂಡಿದ್ದರು ಆಗ ಬಿಜೆಪಿ ಶಿವಮೊಗ್ಗ ಲೋಕ ಸಭಾ ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ಸೇರಿ 5 ಕ್ಷೇತ್ರಗಳಲ್ಲಿತ್ತು.
ಇವೆಲ್ಲ ಸಮೀಕ್ಷೆ ಜೊತೆಗೆ ಪ್ರತಿ ಲೋಕ ಸಭಾ ಚುನಾವಣೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಕಾಂಗ್ರೇಸ್ ಶಾಸಕರಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲೀಡ್ ಪಡೆಯುವ ಪವಾಡ ನಡೆಯುತ್ತಲೇ ಇದೆ,ಇದನ್ನೆಲ್ಲ ಡ್ಯಾಮೇಜ್ ಕಂಟ್ರೋಲ್ ಮಾಡಿದರೆ ಎಲ್ಲಾ ಕಾಂಗ್ರೆಸ್ಸಿನ ಶಾಸಕರು ಶತಾಯಗತಾಯ ಪ್ರಯತ್ನಿಸಿದರೆ, ಜೊತೆಗೆ ಕಾಂಗ್ರೇಸ್ ಪಕ್ಷದ ಕೆಳ ಹಂತದ ಕಾರ್ಯಕರ್ತರ ನೇರ ಸಂಪರ್ಕ ಗೀತಾ ಶಿವರಾಜಕುಮಾರ್ ಪಡೆದು ಅವರನ್ನು ಹುರಿದುಂಬಿಸಿದರೆ ಗೆಲುವು ಸಾಧ್ಯವಿದೆ.
ನಮ್ಮದೇ ಸರ್ಕಾರ ಇದೆ, ಜನ ಕಾಂಗ್ರೇಸ್ ನ್ನೇ ವಿಧಾನಸಭಾ ಚುನಾವಣೆಯಂತೆ ಗೆದ್ದೇ ಗೆಲ್ಲಿಸುತ್ತಾರೆ, ನಾವೇ ಗೆಲ್ಲುತ್ತೇವೆ ಎಂಬ ಒವರ್ ಕಾನ್ಪಿಡೆನ್ಸ್ ನಲ್ಲಿ ಮೈಮರೆತರೆ ಪಲಿತಾಂಶದಲ್ಲಿ ಏರು ಪೇರು ಗ್ಯಾರಂಟಿ.
#ಮೋದಿ_ಅಲೆ
ಮೋದಿ ಅಲೆ ಹಿಂದೂ ಮತದಾರರಲ್ಲಿ ಕಡಿಮೆ ಆಗಿಲ್ಲ ಅದು ಆಯೋದ್ಯಾ ರಾಮ ಮಂದಿರ ಉದ್ಘಾಟನೆ ನಂತರ ಇನ್ನೂ ಹೆಚ್ಚಾದಂತೆ ಕಂಡು ಬರುತ್ತಿದೆ.
ಸಿದ್ದ ರಾಮಯ್ಯ ಅವರ ಭಾಗ್ಯಗಳು ಕಾಂಗ್ರೇಸ್ ಸಂಪ್ರದಾಯಿಕ ಮತದಾರರನ್ನು ಹಿಡಿದು ಇಟ್ಟಿದೆ, ಅಲ್ಪಸಂಖ್ಯಾತರ ಮತ ಕಾಂಗ್ರೇಸ್ ಅಭ್ಯರ್ಥಿಗೆ ಕಳೆದ ಚುನಾವಣೆಯಂತೆ ಹರಿದು ಬರಲಿದೆ.
#ಪ್ರಬಲ_ಜಾತಿವಾರು_ಮತ
ಲಿಂಗಾಯಿತ ಮತಗಳು ಮತ್ತು ಬ್ರಾಹಣ ಮತಗಳು ಬಿಜೆಪಿಗೆ - ಈಡಿಗರ ಮತ್ತು ಅಲ್ಪಸಂಖ್ಯಾತರ ಮತಗಳು ಕಾಂಗ್ರೇಸಿಗೆ ಗ್ಯಾರಂಟಿ.
#ಪರಿಶಿಷ್ಟ_ಜಾತಿ_ಪಂಗಡದ_ಮತ
ಶಿವಮೊಗ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಮತಗಳು ಬೇರೆಲ್ಲ ಜಾತಿಗಿಂತ ಹೆಚ್ಚು ಇದೆ ಆದರೆ ಅವುಗಳು ಪ್ರಸಕ್ತ ಬಿಜೆಪಿ ಓಟ್ ಬ್ಯಾಂಕ್ ಗಳಾಗಿದೆ ಇದನ್ನು ಪುನಃ ಕಾಂಗ್ರೇಸ್ ಒಲಿಸಿಕೊಳ್ಳಲು ತಮ್ಮದೇ ಸರ್ಕಾರದಲ್ಲಿ ಜಿಲ್ಲೆಯ ಈ ಜಾತಿಗಳ ಮುಖಂಡರಿಗೆ ಸೂಕ್ತ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಲು ವಿಫಲವಾಗಿರುವುದರಿಂದ ಕಾಂಗ್ರೇಸಿಗೆ ಮತಗಳಾಗಿ ಪರಿವರ್ತನೆ ಕಷ್ಟಸಾಧ್ಯ.
#ಹಿಂದುಳಿದ_ವರ್ಗದ_ಮತಗಳು
ಈಡಿಗರೇತರ ಜಾತಿಗಳ ಮತಗಳು ನಿರ್ಣಾಯಕ ಇವು ಕಳೆದ ವಿಧಾನಸಭಾ ಕ್ಷೇತ್ರಗಳಾದ ಭದ್ರಾವತಿ-ಸೊರಬ-ಸಾಗರದಲ್ಲಿ ಕಾಂಗ್ರೇಸಿಗೆ - ಶಿಕಾರಿಪುರದಲ್ಲಿ ಬಂಡಾಯ ಅಭ್ಯರ್ಥಿಗೆ ಹರಿದು ಹೋಗಿತ್ತು ಮತ್ತು ಉಳಿದ ಕ್ಷೇತ್ರದಲ್ಲಿ ಬಿಜೆಪಿಗೆ ದೊರಕಿತ್ತು.
#ಪತ್ರಕರ್ತರಿಗೆ_ನನ್ನ_ಪ್ರಶ್ನೆ_ರಾಜಕೀಯ_ಪಕ್ಷಗಳ_ಸಮೀಕ್ಷೆ_ಹೇಗೆ?
ಇದಕ್ಕೆ ಅವರ ಉತ್ತರ ಜಾತಿ-ಹಣ- ಪ್ರಭಾವ ಮಾತ್ರ ಅಂತೆ.
* * * * * * * * *
ನಾಳೆ ನಾಡಿದ್ದು ಚುನಾವಣೆ ಘೋಷಣೆ ಆಗಲಿದೆ ಯಾರು ಶಿವಮೊಗ್ಗ ಜಿಲ್ಲೆಯ ಪ್ರತಿನಿದಿಸುತ್ತಾರೋ ಪಲಿತಾಂಶದ ತನಕ ಕಾಯಬೇಕು ನನ್ನ ಉತ್ತರ ಸರಿಯೋ ತಪ್ಪೋ ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಯಾವ ಪಕ್ಷದವರೂ ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ.
Comments
Post a Comment