Skip to main content

Posts

Showing posts with the label Italian kitchen fabricator

Blog number 940. ಆನಂದಪುರಂನ ಅತ್ಯುತ್ತಮ ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಗ್ಲಾಸ್ ವಿಂಡೋ -ಡೋರ್, ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳನ್ನು ಮಾಡುವ ರಾಘವೇಂದ್ರ ಆಚಾರ್ ಎಂಬ ಕಲಾವಿದ.

#ಸಣ್ಣ_ಕೆಲಸ_ಸಣ್ಣ_ಮೊತ್ತ_ಅಂದಾಗ_ಹತ್ತಿರ_ಸುಳಿಯದವರು. #ದೊಡ್ಡ_ಕೆಲಸ_ಜಾಸ್ತಿ_ಹಣಕ್ಕಾಗಿ_ಮಾತ್ರ_ಹುಡುಕಾಟ_ಮಾಡುವ_ಕೆಲ_ಕುಶಲಕರ್ಮಿಗಳು #ಪುರಿ_ಜಗನಾಥ_ವಿಗ್ರಹಗಳಿಗೆ_ಗಾಜಿನ_ಹೊದಿಕೆ_ಮಾಡಿಸಲು_ಎಷ್ಟು_ಕಷ್ಟ_ಆಯಿತು_ನೋಡಿ #ಕೊನೆಗೂ_ಪುರಿ_ಜಗನಾಥ_ವಿಗ್ರಹಕ್ಕೆ_ಸುಂದರ_ಪೀಠ_ಗಾಜಿನ_ಹೊದಿಕೆ_ಮಾಡಿದ_ರಾಘವೇಂದ್ರ_ಆಚಾರ್   ಒರಿಸ್ಸಾದ ಕಟಕ್ ನ ಉದ್ದಿಮೆದಾರರಾದ ಸರೋಜ್ ಸುಬುದ್ದಿ ನನ್ನ ಹೊಸ ಲಾಡ್ಜ್ ಕೆಲಸದ ಅಡಿಪಾಯ ಹಾಕುವಾಗ ಪುರಿ ಜಗನ್ನಾಥ್ ದೇವಾಲಯದ ದೇವರುಗಳಾದ ಬಲರಾಮ- ಸುಭದ್ರೆ - ಕೃಷ್ಣರ ಮೂಲ ವಿಗ್ರಹದ ಮಾದರಿ,ಬೇವಿನ ಮರದಲ್ಲಿ ಕೆತ್ತನೆ ಮಾಡಿದ ಅಲಂಕೃತ ವಿಗ್ರಹ ಶುಭ ಹಾರೈಸಿ ಕಳಿಸಿದ್ದರು. https://arunprasadhombuja.blogspot.com/search?q=%E0%B2%AA%E0%B3%81%E0%B2%B0%E0%B2%BF    ಕಟ್ಟಡ ಕಾಮಗಾರಿ ಮುಗಿಯಲು ಕೊರಾನಾ ಲಾಕ್ ಡೌನ್ ಪ್ರಾರಂಭ ಆಗಿ ಈ ವಿಗ್ರಹ ಮರೆತು ಬಿಟ್ಟಿದ್ದೆ, ಈ ವರ್ಷ ಎರೆಡು ವರ್ಷದ ನಂತರ ಪುರಿ ಜಗನ್ನಾಥ್ ರ ರಥೋತ್ಸವ ನಡೆಯಿತು ಹತ್ತು ಲಕ್ಷ ಜನ ಸೇರಿದರು ಎನ್ನುವ ಸುದ್ದಿಗಳ ಓದಿದಾಗಲೇ ಈ ವಿಗ್ರಹ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದು ನೆನಪಾಗಿ ನನ್ನ ಆಫೀಸಿಗೆ ತಂದೆ.   ಆದರೆ ಅದನ್ನು ಹಾಗೆ ಇಡುವುದಕ್ಕಿಂತ ಗ್ಲಾಸಿನ ಕವಚ ಹಾಕಿದರೆ ಚೆಂದ ಅಂತ ಅನ್ನಿಸಿ ನಮ್ಮ ಸಂಸ್ಥೆಯಲ್ಲಿ ಹಿಂದೆ ದೊಡ್ಡ ದೊಡ್ಡ ಕೆಲಸ ಮಾಡಿ ದೊಡ್ಡ ಮೊತ್ತದ ಹಣ ಪಡೆದವರಿಗೆ ಹೇಳಿದೆ ...