Blog number 940. ಆನಂದಪುರಂನ ಅತ್ಯುತ್ತಮ ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಗ್ಲಾಸ್ ವಿಂಡೋ -ಡೋರ್, ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳನ್ನು ಮಾಡುವ ರಾಘವೇಂದ್ರ ಆಚಾರ್ ಎಂಬ ಕಲಾವಿದ.
#ದೊಡ್ಡ_ಕೆಲಸ_ಜಾಸ್ತಿ_ಹಣಕ್ಕಾಗಿ_ಮಾತ್ರ_ಹುಡುಕಾಟ_ಮಾಡುವ_ಕೆಲ_ಕುಶಲಕರ್ಮಿಗಳು
#ಪುರಿ_ಜಗನಾಥ_ವಿಗ್ರಹಗಳಿಗೆ_ಗಾಜಿನ_ಹೊದಿಕೆ_ಮಾಡಿಸಲು_ಎಷ್ಟು_ಕಷ್ಟ_ಆಯಿತು_ನೋಡಿ
#ಕೊನೆಗೂ_ಪುರಿ_ಜಗನಾಥ_ವಿಗ್ರಹಕ್ಕೆ_ಸುಂದರ_ಪೀಠ_ಗಾಜಿನ_ಹೊದಿಕೆ_ಮಾಡಿದ_ರಾಘವೇಂದ್ರ_ಆಚಾರ್
ಒರಿಸ್ಸಾದ ಕಟಕ್ ನ ಉದ್ದಿಮೆದಾರರಾದ ಸರೋಜ್ ಸುಬುದ್ದಿ ನನ್ನ ಹೊಸ ಲಾಡ್ಜ್ ಕೆಲಸದ ಅಡಿಪಾಯ ಹಾಕುವಾಗ ಪುರಿ ಜಗನ್ನಾಥ್ ದೇವಾಲಯದ ದೇವರುಗಳಾದ ಬಲರಾಮ- ಸುಭದ್ರೆ - ಕೃಷ್ಣರ ಮೂಲ ವಿಗ್ರಹದ ಮಾದರಿ,ಬೇವಿನ ಮರದಲ್ಲಿ ಕೆತ್ತನೆ ಮಾಡಿದ ಅಲಂಕೃತ ವಿಗ್ರಹ ಶುಭ ಹಾರೈಸಿ ಕಳಿಸಿದ್ದರು.
https://arunprasadhombuja.blogspot.com/search?q=%E0%B2%AA%E0%B3%81%E0%B2%B0%E0%B2%BF
ಕಟ್ಟಡ ಕಾಮಗಾರಿ ಮುಗಿಯಲು ಕೊರಾನಾ ಲಾಕ್ ಡೌನ್ ಪ್ರಾರಂಭ ಆಗಿ ಈ ವಿಗ್ರಹ ಮರೆತು ಬಿಟ್ಟಿದ್ದೆ, ಈ ವರ್ಷ ಎರೆಡು ವರ್ಷದ ನಂತರ ಪುರಿ ಜಗನ್ನಾಥ್ ರ ರಥೋತ್ಸವ ನಡೆಯಿತು ಹತ್ತು ಲಕ್ಷ ಜನ ಸೇರಿದರು ಎನ್ನುವ ಸುದ್ದಿಗಳ ಓದಿದಾಗಲೇ ಈ ವಿಗ್ರಹ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದು ನೆನಪಾಗಿ ನನ್ನ ಆಫೀಸಿಗೆ ತಂದೆ.
ಆದರೆ ಅದನ್ನು ಹಾಗೆ ಇಡುವುದಕ್ಕಿಂತ ಗ್ಲಾಸಿನ ಕವಚ ಹಾಕಿದರೆ ಚೆಂದ ಅಂತ ಅನ್ನಿಸಿ ನಮ್ಮ ಸಂಸ್ಥೆಯಲ್ಲಿ ಹಿಂದೆ ದೊಡ್ಡ ದೊಡ್ಡ ಕೆಲಸ ಮಾಡಿ ದೊಡ್ಡ ಮೊತ್ತದ ಹಣ ಪಡೆದವರಿಗೆ ಹೇಳಿದೆ ಆದರೆ ಅವರಾರಿಗೂ ದೇವರ ವಿಗ್ರಹಕ್ಕೆ ಗಾಜಿನ ಹೊದಿಕೆ ಹಾಕುವುದು ಕ್ಷುಲ್ಲಕ ಕೆಲಸ ಅನ್ನಿಸಿದ್ದರಿಂದಲೋ ಅಥವ ಕನಿಷ್ಟ ಹಣದ ಕೆಲಸ ಅಂತಲೋ ತಪ್ಪಿಸಿಕೊಳ್ಳಲು ಪ್ರಾರಂಬಿಸಿದರು.
ಕೊನೆಗೆ ಸಿಕ್ಕಿದವರು ಈ ರಾಘವೇಂದ್ರ ಆಚಾರರು ಆನಂದಪುರ೦ನ ಹಳೆ ಸಿನಿಮಾ ಟಾಕೀಸ್ ರಸ್ತೆಯ ವೆಂಕಟರಮಣ ಆಚಾರ್ ಮಗ, ತಂದೆ ಮಗ ಇಬ್ಬರೂ ನಮ್ಮ ವರಸಿದ್ಧಿ ವಿನಾಯಕ ದೇವಸ್ಥಾನದ ರಥ ಮಾಡಿದ ರಥಶಿಲ್ಪಿಗಳು.
ಈಗ ರಾಘವೇಂದ್ರ ಆಚಾರರು ಆನಂದಪುರಂನಲ್ಲಿ ಅಡೂರು ರಸ್ತೆಯಲ್ಲಿ ಸ್ವಂತ ವರ್ಕ್ ಶಾಪ್ ಮಾಡಿದ್ದಾರೆ, ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಕ್ಲಾಡಿಂಗ್, ವಿಂಡೋ, ಡೋರ್ , ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳು ಮಾಡುತ್ತಾರೆ ಇವರು ಮಂಗಳೂರಲ್ಲಿ ಮತ್ತು ಬೆಂಗಳೂರಲ್ಲಿ ಒಳ್ಳೆಯ ಕೆಲಸ ಕಲಿತು ಬಂದಿದ್ದರಿಂದ ಇವರ ಕೆಲಸ ಅಷ್ಟು ಚೆನ್ನಾಗಿದೆ ಜೊತೆಯಲ್ಲಿ ಇವರ ಕುಲ ಕಸಬು ಆದ ಮರದ ಕೆಲಸಗಳನ್ನು ಸಣ್ಣಿಂದ ತಂದೆ ಜೊತೆಗೆ ಮಾಡಿದ ಅನುಭವ ಕೂಡ ಇವರ ನಿಪುಣತೆಗೆ ಕಾರಣವಾಗಿದೆ.
ಪುರಿ ಜಗನ್ನಾಥ್ ವಿಗ್ರಹಗಳಿಗೆ ಸುಂದರ ಪೀಠ ಮಾಡಿ ಅದಕ್ಕೆ ಗಾಜಿನ ಹೊದಿಕೆ ಹಾಕಿ ನನ್ನ ಕಛೇರಿಯಲ್ಲಿ ನಿತ್ಯ ಪೂಜೆಗೆ ಅನುವು ಮಾಡಿಕೊಟ್ಟ ರಾಘವೇಂದ್ರ ಆಚಾರ್ ಕೆಲಸ ನನಗೆ ತುಂಬಾ ಇಷ್ಟವಾಯಿತು, ಮಿತಭಾಷಿ ಮತ್ತು ಇವರ ತಂದೆ ವೆಂಕಟರಮಣ ಆಚಾರರಂತೆ ಶಿಸ್ತು ಬೆಳೆಸಿಕೊಂಡಿರುವ ಈ ಯುವಕ ಮುಂದಿನ ದಿನದಲ್ಲಿ ಯಶಸ್ವಿ ಉದ್ಯಮಿ ಆಗುವುದರಲ್ಲಿ ಅನುಮಾನ ಇಲ್ಲ.
ನಮ್ಮ ದೇವಾಲಯದಲ್ಲಿ ರಥ ಮಾಡಿದ ಇವರಿಗೆ ನನ್ನ ಕಛೇರಿಯ ಪುರಿ ಜಗನ್ನಾಥ ವಿಗ್ರಹದ ಈ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದರೆ ಪುಣ್ಯದ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಅಂತ ಹಿರಿಯ ಮಿತ್ರರು ಹೇಳಿದ್ದು ನೆನಪಾಯಿತು.
ನಮ್ಮ ಊರಿನ ಈ ಯುವಕ ರಾಘವೇಂದ್ರ ಆಚಾರ್ ಗೆ ನನ್ನ ಮತ್ತು ನನ್ನ ಅಣ್ಣನ ಮನೆ ಇಟಾಲಿಯನ್ ಕಿಚನ್, ನನ್ನ ಲಾಡ್ಜ್ ನ 33 ಕಿಟಕಿಗಳು, ಮುಂದಿನ ದಿನಗಳಲ್ಲಿ ಲಾಡ್ಜ್ ಮೇಲಿನ ನಾಲ್ಕನೆ ಪ್ಲೋರ್ ನಲ್ಲಿ ಪ್ರಾರಂಬಿಸಲಿರುವ ಮಲ್ಟಿ ಕ್ಯೂಸಿನ್ ರೆಸ್ಟೋರೆಂಟ್ ಪಾರ್ಟಿಷನ್ ಗಳನ್ನು ನನ್ನ ಈ ಸಣ್ಣ ಕೆಲಸ ಸಣ್ಣ ಮೊತ್ತದಾದರೂ ಶ್ರದ್ದೆಯಿಂದ ಮಾಡಿದ ರಾಘವೇಂದ್ರ ಆಚಾರ್ ಗೆ ನೀಡಬೇಕೆಂದು ನಿರ್ದಾರ ಮಾಡಿದೆ.
ಇಟಾಲಿಯನ್ ಕಿಚನ್ ಮತ್ತಿತರ ಕೆಲಸಕ್ಕಾಗಿ ವಿಚಾರಿಸಲು
Comments
Post a Comment